ಮೂಲಸೌಕರ್ಯ ಯೋಜನೆಗಳಿಗಾಗಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಲು ಸಿದ್ಧರಿರುವ ಸಣ್ಣ ಹೂಡಿಕೆದಾರ ರಿಂದ ಸರ್ಕಾರವು ವರ್ಷಕ್ಕೆ ಎಂಟು ಪ್ರತಿಶತದಷ್ಟು ರಿಟರ್ನ್ ನೀಡಿ ಹಣವನ್ನು ಸಂಗ್ರಹಿಸಲಿದೆ ಎಂದು ಹೇಳಿ ದ್ದಾರೆ.
ಪಟ್ಟಣಗಳು ಮತ್ತು ನಗರಗಳಲ್ಲಿನ ರೈಲ್ವೆ ಕ್ರಾಸಿಂಗ್ಗಳಲ್ಲಿ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸುವ 8,000 ಕೋಟಿ ರೂ.ಗಳ ಯೋಜನೆಯೂ ನಡೆಯುತ್ತಿದೆ, ಆದರೆ ಅದನ್ನು ಬಜೆಟ್ ನಂತರ ಘೋಷಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ತಮ್ಮ ಇಲಾಖೆಯು ವಾರ್ಷಿಕ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಕೆಲಸ ಮಾಡುತ್ತದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಇದನ್ನು ಕಂಡ ವಿದೇಶಿ ಹೂಡಿಕೆದಾರರು ಭಾರತೀಯ ರಸ್ತೆ ಯೋಜನೆ ಗಳಲ್ಲಿ ಹೂಡಿಕೆ ಮಾಡಲು ಬಯಸು ತ್ತಿದ್ದಾರೆ. ಆದರೆ ಸರ್ಕಾರವು ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದೂ ಕೂಡ ಹೇಳಿದ್ದಾರೆ.
‘ನಾನು ರೈತರು, ಕೃಷಿ ಕಾರ್ಮಿಕರು, ಕಾನ್ಸ್ಟೆಬಲ್ಗಳು, ಗುಮಾಸ್ತರು ಮತ್ತು ಸರ್ಕಾರಿ ನೌಕರರಿಂದ ಹಣ ಸಂಗ್ರಹಿಸಿ ಅವರಿಗೆ ಲಾಭ ನೀಡುವೆ’ ಎಂದು ಗಡ್ಕರಿ ಹೇಳಿದ್ದಾರೆ.