Saturday, 23rd November 2024

ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್: ಯುಪಿ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಗೆಲುವಿಗಾಗಿ ಭಾರತೀಯ ಜನತಾ ಪಕ್ಷ ಮಂಗಳವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಲಕ್ನೋದ ಗೋಮತಿ ನಗರದಲ್ಲಿರುವ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗೃಹ ಸಚಿವ ಅಮಿತ್ ಶಾ, ಯುಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಿಎಂ ಯೋಗಿ, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಪಕ್ಷದ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಲಾಯಿತು.

ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಹಾಗೂ ವರ್ಕಿಂಗ್ ಮಹಿಳೆಯರಿಗೆ ಸ್ಕೂಟಿ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್
5 ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ನೀರಾವರಿ ಯೋಜನೆ
ಸರ್ದಾರ್ ಪಟೇಲ್ ಅಗ್ರಿ-ಇನ್ಫ್ರಾಸ್ಟ್ರಕ್ಚರ್ ಮಿಷನ್ – 25 ಸಾವಿರ ಕೋಟಿ ವೆಚ್ಚದಲ್ಲಿ ಆಲೂಗಡ್ಡೆ, ಟೊಮೆಟೊ, ಈರುಳ್ಳಿಯಂತಹ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು 1 ಸಾವಿರ ಕೋಟಿ
ಪ್ರತಿ ವಿಧವೆ ಮತ್ತು ನಿರ್ಗತಿಕ ಮಹಿಳೆಗೆ ತಿಂಗಳಿಗೆ 1500 ರೂಪಾಯಿ ಪಿಂಚಣಿ
ಕಬ್ಬು ರೈತರಿಗೆ 14 ದಿನಗಳಲ್ಲಿ ಪಾವತಿ, ವಿಳಂಬವಾದರೆ ಬಡ್ಡಿ
6 ಮೆಗಾ ಫುಡ್ ಪಾರ್ಕ್- ನಿಶಾದ್ರಾಜ್ ಬೋಟ್ ಸಬ್ಸಿಡಿ ಯೋಜನೆ
ಮಿಷನ್ ಪಿಂಕ್ ಟಾಯ್ಲೆಟ್‌ಗೆ 1000 ಕೋಟಿ ರೂ.

ಪಕ್ಷವು ಈ ಪ್ರಣಾಳಿಕೆಗೆ ಲೋಕ ಕಲ್ಯಾಣ ಸಂಕಲ್ಪ ಪತ್ರ ಎಂದು ಹೆಸರಿಸಿದೆ. ಬಿಜೆಪಿ ಕಾರ್ಯಕರ್ತರು ಹಳ್ಳಿ ಹಳ್ಳಿ, ನಗರದಿಂದ ನಗರಕ್ಕೆ ತಿರುಗಾಡಿ ಜನರ ನಡುವೆ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ಶಾ, ಐದು ವರ್ಷಗಳ ಹಿಂದಿನ ದೃಶ್ಯ ನೆನಪಿಸಿಕೊಂಡು 2017 ರಲ್ಲಿ, ನಾವು ಸಾರ್ವಜನಿಕರ ಮುಂದೆ ಉತ್ತರ ಪ್ರದೇಶ ಅಭಿವೃದ್ಧಿಗಾಗಿ ಸಂಕಲ್ಪ ಪತ್ರ ದಾಖಲೆ ಇರಿಸಿದ್ದೇವು. 2014ರ ಚುನಾವಣೆಯಲ್ಲಿ 80ರಲ್ಲಿ 73 ಸ್ಥಾನ ನೀಡುವ ಮೂಲಕ ಜನತೆ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು. ಪ್ರಣಾಳಿಕೆ ಬದಲು ಸಂಕಲ್ಪ ಪತ್ರ ಎಂದು ಹೆಸರಿಟ್ಟಿದ್ದೆವು ಎಂದು ಹೇಳಿದರು.

ನಾವು ಹೇಳಿದ್ದನ್ನು ಮಾಡುತ್ತೇವೆ ಎಂಬುದು ಬಿಜೆಪಿಯ ಸಂಸ್ಕೃತಿ. ವಿದ್ಯಾರ್ಥಿನಿಯರಿಗೆ ಸ್ಕೂಟಿ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. ಅಲ್ಲದೆ, ಉಜ್ವಲ ಯೋಜನೆಯಡಿ ಪ್ರತಿ ವರ್ಷ ಮೂರು ಉಚಿತ ಸಿಲಿಂಡರ್‌ಗಳನ್ನು ನೀಡಲಾಗುವುದು. ಸಣ್ಣ ರೈತರಿಗೆ ಡಬಲ್ ಕಿಸಾನ್ ಸಮ್ಮಾನ್ ನಿಧಿಯನ್ನು ನೀಡಲಾಗುವುದು ಎಂದು ತಿಳಿಸಿದರು.