Sunday, 15th December 2024

ಸರಕಾರದ ಅನುಮತಿ ಇದ್ದರಷ್ಟೇ ಶಾರದಾ, ಗಣೇಶ್, ಹಿಜಾಬ್

ಸಕಾಲಿಕ

ಜಿತೇಂದ್ರ ಕುಂದೇಶ್ವರ

ಪಾಪ ಎಳೆಯ ಯುವತಿಯರಿಗೆ ಈಗ ಪರೀಕ್ಷೆಗೆ ಬರೆಯಲು ಏಕಾಗ್ರತೆ ಕೂಡ ಬರುತ್ತಿಲ್ಲವಂತೆ. ಮುಗ್ಧ ಹುಡುಗಿಯರ ಬ್ರೈನ್ ವಾಶ್ ಮಾಡಿ ಹಿಜಾಬ್ ಹಾಕಿಕೊಳ್ಳು ವಂತೆ ಮಾಡಿರುವುದು ಅಲ್ಲಿಯ ಮುಸ್ಲಿಂ ವಿದ್ಯಾರ್ಥಿ ಸಂಘಟನೆ ಮತ್ತು ಅದರ ಮಾತೃ ಸಂಘಟನೆಗಳು ಎಂಬುದು ಬಯಲಾಗಿದೆ.

ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಎಲ್ಲಿಯೂ ಸಮವಸದ ಕುರಿತು ಹೇಳಿಲ್ಲ ಎಂಬ ವಾದ ಕೇಳಿ ಬರುತ್ತಿದೆ. ಆದರೆ ಇದೇ ಕಾಯಿದೆಯ ಸೆ.೧೪೫ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಽಸಿದಂತೆ ಯಾವುದೇ ಆದೇಶಗಳನ್ನು ಮಾಡುವ ಅಧಿಕಾರ ಸರಕಾರಕ್ಕೆ ಇದೆ ಎಂದು ಹೇಳಿದೆ. ತರಗತಿ ಒಳಗೆ ಹಿಜಾಬ್ ಹಾಕಬೇಕೇ ಬೇಡವೇ ಎನ್ನುವ
ಪ್ರಶ್ನೆಗೂ ಸಂವಿಧಾನದಲ್ಲಿ ಈಗಾಗಲೇ ಉತ್ತರ ಇದೆ.

ಧರ್ಮ ಮತ್ತು ಧರ್ಮದ ಆಚರಣೆಗಳು ಎರಡೂ ಬೇರೆ. ಭಾರತದಲ್ಲಿ ಅವರವರ ಧರ್ಮವನ್ನು ಪಾಲಿಸುವ ಕುರಿತು ಯಾವುದೇ ತಕರಾರು ಇಲ್ಲ. ಧರ್ಮದ ಆಚರಣೆಗಳನ್ನು ಎಲ್ಲಿ ಮಾಡಬೇಕು; ಎಲ್ಲಿ ಮಾಡಬಾರದು ಎನ್ನುವುದೇ ಮುಖ್ಯ ವಿಚಾರ. ತಮ್ಮ ಧರ್ಮ ಪಾಲಿಸಬೇಕು ಎಂದಿದ್ದರೆ ಅದಕ್ಕೊಂದು ಕ್ಷೇತ್ರ ಇರುತ್ತದೆ. ಅವರವರವ ಮನೆಯಲ್ಲಿ ದೇವಸ್ಥಾನ, ಮಸೀದಿ, ದರ್ಗಾ, ಮಂದಿರ, ಮದರಸಗಳಲ್ಲಿ ಮಾಡಬಹುದು.

ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾಡುವಂತಿಲ್ಲ. ಆಗ ಮೊದಲಿಗೆ ತೂರಿ ಬರುವ ಪ್ರಶ್ನೆ- ಶಾಲೆಗಳಲ್ಲಿ, ಮೈದಾನ ಗಳಲ್ಲಿ ಗಣಪತಿಯನ್ನು ಕೂರಿಸುತ್ತಾರೆ, ಶಾರದಾ ಪೂಜೆ ಮಾಡುತ್ತಾರಲ್ಲಾ? ಇಂಥ ಪ್ರಶ್ನೆ ಮೂಡುವುದು ಸಹಜ. ಇದಕ್ಕೂ ಉತ್ತರ ಇದೆ. ಗಣೇಶನನ್ನು ಕೂರಿಸುವುದು, ಶಾರದೆ ಪೂಜೆ ಮಾಡುವುದಕ್ಕೂ ಸರಕಾರದ ಅನುಮತಿ ಸಬೇಕು.

ಸ್ಥಳೀಯ ಪೊಲೀಸ್ ಠಾಣೆ, ಸ್ಥಳಿಯಾಡಳಿತದಿಂದ ಅನುಮತಿ ಪತ್ರ ಪಡೆಯಬೇಕಾಗುತ್ತದೆ. ಹಕ್ಕುಗಳಿಗಿಂತಲೂ ಮುಖ್ಯವಾಗಿರುವಂತಹುದು ಸಂವಿಧಾನದ ಪ್ರಿಯಾಂಬಲ. ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನೂ ಸಮಾನ. ಸಂವಿಧಾನ ಪುಸ್ತಕದಲ್ಲಿ ಇರೂವುದೇನೋ ನಿಜ. ಆದರೆ ಪಾಲನೆ ಮಾತ್ರ ಆಗುತ್ತಿಲ್ಲ. ತಾಜಾ ಉದಾಹರಣೆ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಒಂದು ಕೋಣೆಯನ್ನು ಮಸೀದಿಯನ್ನಾಗಿ ಮಾಡಿದ್ದಾರೆ. ಇದು ಸಾರ್ವಜನಿಕ ಸ್ಥಳ. ಇಲ್ಲಿ ಸರಕಾರದಿಂದ ಅನುಮತಿ ಪಡೆದಿಲ್ಲ.

ಜತೆಗೆ ಇಲ್ಲಿ ಚರ್ಚ್ ಇಲ್ಲ, ದೇವಸ್ಥಾನ, ಬಸದಿ ಯಾವುದೂ ಇಲ್ಲ. ಸಮಾನತೆ ಪಾಲಿಸುವುದಿದ್ದರೆ ಎಲ್ಲವೂ ಇರಬೇಕಿತ್ತು. ಧ್ವನಿವರ್ಧಕದ ಶಬ್ದ ಮಾಲಿನ್ಯ ಕುರಿತು ಅನೇಕ ಹೈಕೋರ್ಟ್ ಗಳು ಆದೇಶ ಹೊರಡಿಸಿದೆ. ಆದರೆ ಎಲ್ಲೂ ಧ್ವನಿವರ್ಧಕ ತೆಗೆದಿಲ್ಲ. ಅಂದರೆ ಕಾನೂನಿಗಿಂತ ಧರ್ಮ ಮುಖ್ಯವೇ ? ಮಲಪ್ಪುರಂ ಜಿಯಲ್ಲಿ ಶುಕ್ರವಾರ ಶಾಲೆ- ಕಾಲೇಜು ಗಳಿಗೆ ರಜೆ ನೀಡಲಾಗುತ್ತದೆ. ಇಡೀ ಭಾರತದಲ್ಲಿ ಶಾಲೆ ಕಾಲೇಜುಗಳಿಗೆ ವಾರದ ರಜೆ ಇರುವುದು ಭಾನುವಾರ. ಮಂಗಳೂರಿನ ಶಾಲೆಯಲ್ಲೂ ಶುಕ್ರವಾರದ ದಿನ ನಮಾಜು ಸಮಯದಲ್ಲಿ ಶಾಲೆ ಮುಚ್ಚುತ್ತಾರೆ.

ಹಿಂದುಗಳು ಸಹಿಷ್ಣುಗಳು ಎಷ್ಟೆಂದರೆ ಕ್ರೈಸ್ತ ಶಾಲೆಗಳಲ್ಲಿ ಬೆಳಗ್ಗೆ ಏಸುವಿನ ಕುರಿತ ಪ್ರಾರ್ಥನೆ ಹಾಡುತ್ತಾರೆ. ಖುಷಿಯಿಂದ ಪ್ರಾರ್ಥಿಸುತ್ತಾರೆ, ಅಡ್ಡ ಬೀಳು ಎಂದರೆ ಬೀಳುತ್ತಾರೆ. ಈ ಕುರಿತು ಯಾರೊಬ್ಬ ಹಿಂದುವೂ ಮಾತನಾಡಿಲ್ಲ. ಹಿಂದೂ ಶಾಲೆಗಳಲ್ಲಿಯೇ ಬಳೆ, ಹೂ ಮುಡಿಯಬಾರದು ಎಂದು ಕಡ್ಡಾಯ ಮಾಡಿದರೂ ಹಿಂದುಗಳು ತುಟಿಪಿಟಿಕ್ ಎನ್ನಲಿಲ್ಲ. ಇತ್ತೀಚೆಗೆ ಬೆಂಗಳೂರು ನಗರದ ಕೆಂಪೇಗೌಡ ರೈಲು ನಿಲ್ದಾಣದ ಕೂಲಿ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಅಕ್ರಮವಾಗಿ ಮಸೀದಿಯಾಗಿ ಪರಿವರ್ತನೆ ಮಾಡಿದರು.

ಇದು ಸಾರ್ವಜನಿಕ ಸ್ಥಳ. ಒಂದು ಧರ್ಮದಲ್ಲಿ ಹೇಳಿದ ಆಚರಣೆಗಳನ್ನು ಸಾರ್ವಜನಿಕ ಕ್ಷೇತ್ರಗಳಲ್ಲಿ ಒತ್ತಾಯ ಪೂರ್ವಕವಾಗಿ ಹೇರುವ ಪ್ರಯತ್ನ ಇದು. ಒಂದು ವೇಳೆ ಸರಕಾರ ಇದಕ್ಕೆ ಅನುಮತಿಸಿದರೆ ಅದು ಸಕ್ರಮವಾಗುತ್ತದೆ. ಕೇವಲ ಒಂದೇ ಸಮುದಾಯದವರು ಅತಿಕ್ರಮಿಸುತ್ತಾ ಹೋದರೆ ಇದು ಕೇವಲ ಓಲೈಕೆ ಯಾಗುತ್ತದೆ. ಮೂಲ ಭಾರತ ಹಿಂದು- ಮುಸ್ಲಿಂ ಆಧಾರದಲ್ಲಿ ವಿಭಜನೆಯಾಯಿತು. ಮುಸ್ಲಿಮರಿಗೆ ಪಾಕಿಸ್ತಾನ- ಬಾಂಗ್ಲಾದೇಶ ಸಿಕ್ಕಿದೆ. ಹಿಂದುಗಳಿಗೆ ಸಿಕ್ಕಿದ ಶೇಷ ಭಾರತದಲ್ಲಿ ಎಲ್ಲರೂ ಇರಬಹುದು ಎಂಬ ಉದಾತ್ತ(?!) ಧ್ಯೇಯದಿಂದ ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡಲಾಯಿತು. ಆದರೆ ತೋಟದಲ್ಲಿ ಕೆಲವೇ ಕೆಲವು ಹೂ ಗಿಡಗಳಿಗೆ ನೀರು ಗೊಬ್ಬರ ಸಿಕ್ಕುತ್ತಿದೆ.

ಇಲ್ಲಿಯ ಮುಸ್ಲಿಮರು, ಕ್ರೈಸ್ತರು ಭಾರತದಲ್ಲಿ ಹಿಂದುಗಳಷ್ಟೇ ಸಮಾನತೆ, ಸಮಾನ ಹಕ್ಕಿನಿಂದ ಬದುಕಲೇ ಬೇಕು. ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎನ್ನುವುದು ಮೂರ್ಖತನದ ಮಾತು. ಇದಕ್ಕಾಗಿಯೇ ನಮಗೆ ಸಮಾನ ನಾಗರಿಕ ಸಂಹಿತೆ ಬೇಕು, ಶಾಲೆಯಲ್ಲಿ ಸಮಾನವಸ ಸಂಹಿತೆ ಬೇಕು. ಹಿಂದೆ ಶಾಲೆಗೆ ಹೋಗುವಾಗ (೨-೩ದಶಕದ ಹಿಂದೆ) ಬೆಳಗ್ಗೆ ಪ್ರಾರ್ಥನೆ ಮೈಸೂರು ಸಂಸ್ಥಾನದ ರಾಷ್ಟ್ರಗೀತೆ ‘ತಾಯಿ ಶಾರದೆ ಲೋಕ ಪೂಜಿತೆ…’ ಹಾಡಲಾಗುತ್ತಿತ್ತು. ಮುಸ್ಲಿಂ ಮಕ್ಕಳು ಶಾಲೆಗೆ ಬರುವುದರಿಂದ ಅವರ ಭಾವನೆಗೆ ನೋವಾಗುತ್ತದೆ ಎಂಬ ಕಾರಣಕ್ಕೆ ಈ ಪ್ರಾರ್ಥನೆ ನಿಲ್ಲಿಸಲಾಯಿತು.

ಈಗ ಹಿಜಾಬ್ ಹಾಕಿಕೊಂಡು ಬರುವುದರಿಂದ ಬಹುಸಂಖ್ಯಾತರ ಭಾವನೆಗಳಿಗೆ ನೋವು ಆಗುವುದಿಲ್ಲವೇ? ಎಳೆಯ ವಯಸ್ಸಿನ ಮುಗ್ಧ ಮಕ್ಕಳಲ್ಲಿ ನಾವು ಸಮಾನತೆ ಬೆಳೆಸಬೇಕೇ ವಿನಃ, ಅವ ಹಿಂದು, ಮುಸ್ಲಿಂ, ಕ್ರೈಸ್ತ, ಬಡವ- ಬಲ್ಲಿದ, ಮೇಲು-ಕೀಳು ಎಂಬ ವ್ಯತ್ಯಾಸ ಮೂಡಕೂಡದು. ಸಮವಸ್ತ್ರ ವಿವಾದ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಒತ್ತಡ ತರುವ ತಂತ್ರ ಮಾಡುತ್ತಿದೆ. ಭಾರತದ ಮೂಲೆಯಲ್ಲಿರುವ ಉಡುಪಿಯ ಕಾಲೇಜಿನ ತರಗತಿ ಒಳಗೆ ಹಿಜಾಬಿಗೆ ತಡೆ ಮಾಡಿದಾಗ ಭಾರತದ ಟಿವಿ ಚಾನೆಲ್ಗಳಲ್ಲಿ ಬರುವುದಕ್ಕಿಂತ ಮೊದಲು ಪಾಕ್ ಟೀವಿ, ಅಲ್ಜಜಿರಾ ವಿದೇಶಿ ವಾಹಿನಿಗಳಲ್ಲಿ ಬಂತು. ವಿಪರ್ಯಾಸ ಎಂದರೆ ಪಾಕಿಸ್ತಾನ ಸರಕಾರ ಭಾರತದ ರಾಯಭಾರಿಗೆ ನೋಟಿಸ್ ಮಾಡಿ, ಈ ಬಗ್ಗೆ ವಿವರಣೆ ಕೇಳಿದೆ.

ಸೊಕ್ಕು ನೋಡಿ. ಭಾರತದ ಆಂತರಿಕ ವಿಚಾರಗಳನ್ನು ರಾಜತಾಂತ್ರಿಕ ಮಟ್ಟದಲ್ಲಿ ಪ್ರಶ್ನಿಸಲು ಪಾಕಿಸ್ತಾನ ಯಾರು ? ಇದೇ ಪಾಕಿಸ್ತಾನ, ಬಾಂಗ್ಲಾದಲ್ಲಿ ಹಿಂದುಗಳ ದೇವಸ್ಥಾನವನ್ನು ಕೆಡವಿದಾಗ, ಹಿಂದುಗಳನ್ನು ಬರ್ಭರವಾಗಿ ಕೊಲೆ ಮಾಡಿದಾಗ, ಹಿಂದೂ ಯುವತಿಯರನ್ನು ಮನೆಯಿಂದಲೇ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದಾಗ ಭಾರತ ಸರಕಾರ ಆ ದೇಶಗಳ ರಾಯಭಾರಿಗಳಿಗೆ ನೋಟಿಸ್ ನೀಡಿಲ್ಲ. ಬಾಂಗ್ಲಾದಲ್ಲಿ ಮತ್ತು ಪಾಕಿಸ್ತಾನದಲ್ಲಿ ಹಿಂದುಗಳ ಹತ್ಯೆಯಾ ದಾಗ ಅಲ್‌ಜಜಿರಾ ಟೀವಿ ಏಕೆ ಪ್ರಸಾರ ಮಾಡಿಲ್ಲ? ಸೌದಿ ಅರೇಬಿಯಾದಲ್ಲಿ ಇರುವ ಹಿಂದೂ ಹೆಣ್ಣು ಮಕ್ಕಳು ಕೂಡ ಬುರ್ಕಾ ಧರಿಸಬೇಕು. ಅಲ್ಲಿರುವ ಹಿಂದು ಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡದವರು ಭಾರತದ ಕುರಿತು ಮಾತನಾಡುವ ನೈತಿಕ ಅರ್ಹತೆ ಇದೆಯೇ? ಒಂದು ಕಾಲದಲ್ಲಿ ಬುರ್ಕಾ ವಿರೋಧಿಸಿದ್ದ ಮಲಾಲ, ಕೊಲ್ಲಿ ರಾಷ್ಟ್ರದ ಅಲ್‌ಜುಬೇರ್, ಪಾಕ್ ವಿದೇಶಾಂಗ ಸಚಿವ ಈ ವಿದೇಶಿಯರು ಒಬ್ಬೊಬ್ಬರಾಗಿ ಭಾರತದ ವಿರುದ್ಧ ಬೊಗಳುತ್ತಿದ್ದಾರೆ. ಈ ಮೂವರು ಮೂರ್ಖರ ದೇಶಗಳಲ್ಲಿ ಎಲ್ಲ ಧರ್ಮದವರ ಮೇಲೆ ಬಲವಂತವಾಗಿ ಮುಸ್ಲಿಂ ಆಚರಣೆಗಳನ್ನು ಹೇರಲಾಗಿದೆ.

ಜುಬೇನರ್ ಸ್ವಂತ ದೇಶದಲ್ಲಿ ಎರಡು ಕೋಟಿ ಭಾರತೀಯರು ಕೆಲಸ ಮಾಡ್ತಾ ಇzರಂತೆ. ಭಾರತದಲ್ಲಿ ಅವನ ಸಹೋದರಿಯರಿಗೆ ಹಿಜಾಬ್ ಹಾಕಲು ಬಿಡದಿದ್ದರೆ
ಅನಿವಾಸಿ ಭಾರತೀಯರಿಗೆ ಸಮಸ್ಯೆ ಉಂಟು ಮಾಡುತ್ತೇನೆ ಎಂದು ಧಮಕಿ ಹಾಕುತ್ತಾನೆ. ನಿಜ ತಿಳಿಯಿರಿ, ಭಾರತದಲ್ಲಿ ಹಿಜಾಬ, ಬುರ್ಕಾ, ಪೇಟ, ಬಿಕಿನಿ ಎಲ್ಲವನ್ನು ಹಾಕಲು ಅವಕಾಶ ಇದೆ. ಹಾಗಂತ ಶಾಲೆಗಳಲ್ಲಿ, ಕೆಲವು ಮಸೀದಿ, ಮಂದಿರಗಳಲ್ಲಿ ಸಮವಸ್ತ್ರ ಮತ್ತು ವಸ್ತ್ರಸಂಹಿತೆಗಳಿವೆ. ಅಲ್ಲಿ ಮಾತ್ರ ನಿಯಮ ಪಾಲಿಸಿ. ಇದಕ್ಕೆ ಪೂರಕವಾಗಿ ಭಾರತದ ನಾಯಕಿಯರೇ ಹೇಳಿಕೆ ಕೊಡ್ತಾರೆ. ಬಿಕಿನಿ ಹಾಕಬಹುದು, ಹಿಜಾಬ್ ಹಾಕಬಹುದು, ಬೇಕಾದ ಬಟ್ಟೆ ತೊಡಬಹುದು ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡ್ತಾರೆ.

ಯಾರ ಮಕ್ಕಳನ್ನು ಬಿಕಿನಿಯಲ್ಲಿ ಶಾಲೆಗೆ ಕಳುಹಿಸುತ್ತಾರೆ? ಬಡವರು ಮಕ್ಕಳು ತರಗತಿ ಒಳಗೂ ಬುರ್ಕಾದೊಳಗೆ ಇರಬೇಕು ಎಂಬ ಸಂದೇಶವೋ? ಮಾಜಿ
ಪ್ರಧಾನಿ ಇಂದಿರಾ ಗಾಂಧಿ ಅವರೇ ಭಾರತದಲ್ಲಿ ಸಮವಸ್ತ್ರ ಜಾರಿಗೆ ತಂದದ್ದು. ಉಡುಪಿ ಹೆಣ್ಮಕ್ಕಳ ಪಿಯು ಕಾಲೇಜಿನ ತರಗತಿಗಳಲ್ಲಿ ಈ ಹಿಂದೆ ಹಿಜಾಬ್ ಇದ್ದಿರಲೇ ಇಲ್ಲ.ಈಗ ಅದೇ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಈ ಅನಾಹುತದಿಂದ ಜೀವಕ್ಕೆ ಜೀವ ಕೊಡುವ ಗೆಳತಿಯರು ವಿರೋಧಿಗಳಾಗಿ ಮಾರ್ಪಟ್ಟ ಕುರಿತು ನೋವು ಪಡುತ್ತಿದ್ದಾರೆ. ಪಾಪ ಎಳೆಯ ಯುವತಿಯರಿಗೆ ಈಗ ಪರೀಕ್ಷೆಗೆ ಬರೆಯಲು ಏಕಾಗ್ರತೆ ಕೂಡ ಬರುತ್ತಿಲ್ಲವಂತೆ. ಮುಗ್ಧ ಹುಡುಗಿಯರ ಬ್ರೈನ್ ವಾಶ್ ಮಾಡಿ ಹಿಜಾಬ್ ಹಾಕಿಕೊಳ್ಳುವಂತೆ ಮಾಡಿರುವುದು ಅಲ್ಲಿಯ ಮುಸ್ಲಿಂ ವಿದ್ಯಾರ್ಥಿ ಸಂಘಟನೆ ಮತ್ತು ಅದರ ಮಾತೃ ಸಂಘಟನೆಗಳು ಎಂಬುದು ಬಯಲಾಗಿದೆ.

ಅತ್ಯಾಚಾರ ಖಂಡಿಸಿ ಅಕ್ಟೋಬರ್‌ನಲ್ಲಿ ಮಣಿಪಾಲದಲ್ಲಿ ಇದೇ ಹೆಮ್ಮಕ್ಕಳ ಸರಕಾರಿ ಪಿಯು ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ಆಯೋಜಿಸಿತ್ತು. ಇದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇದು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಆರ್‌ಎಸ್‌ಎಸ್ ನ ವಿದ್ಯಾರ್ಥಿ ಸಂಘಟನೆಯಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಭಾಗವಹಿಸಿರುವುದು ಮೂಲಭೂತವಾದಿ ಸಂಘಟನೆಗಳ ಕಣ್ಣು ಕೆಂಪಗಾ ಗಿಸಿತ್ತು. ಇವರನ್ನೆಲ್ಲ ಹುಡುಕಿ ಅವರ ಹೆತ್ತವರನ್ನು ಕರೆಸಿ ಹಲವು ಬಾರಿ ಗುಪ್ತ ಸಭೆಗಳನ್ನು ನಡೆಸಲಾಯಿತು.

ಇದೊಂದು ಸಿಬಿಐ ತನಿಖೆ ಮಾಡ ಬೇಕಾದ ವಿಚಾರವಲ್ಲವೇ ? ರಾಷ್ಟ್ರೀಯ ತನಿಖಾ ಸಂಸ್ಥೆಯೂ (ಎನ್‌ಐಎ) ಸಂದರ್ಶನ ಮಾಡಬಹುದಾದ ಪ್ರಕರಣ ಇದು. ಉಡುಪಿಯವರು ದಾಳಗಳಾಗಿರಬಹುದು. ಅವರನ್ನು ಬಳಸಿಕೊಂಡ ಶಕ್ತಿಗಳು ವಿದೇಶಿಯರೋ ಅಥವಾ ದೇಶೀಯ ಮತಾಂಧ ಶಕ್ತಿಗಳೋ ಎನ್ನುವುದು ದೇಶಕ್ಕೆ ಗೊತ್ತಾಗಬೇಕಾಗಿದೆ. ‘ಅ ಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ 5 ಲಕ್ಷ ಘೋಷಣೆ ಮಾಡಿದ ಮತ್ತು 1 ಲಕ್ಷ ನೀಡಿದ ಸಂಘಟನೆ ವಿರುದ್ಧ ಕೋಮು ಪ್ರಚೋದನೆ ಆರೋಪದಲ್ಲಿ ಪ್ರಕರಣ ದಾಖಲಿಸಬೇಕು.

ವಿದ್ಯಾರ್ಥಿನಿಯ ತಪ್ಪಲ್ಲ ಅವರನ್ನು ಬಳಸಿಕೊಳ್ಳುವವರ ವಿರುದ್ಧ ಭಾರತ ಒಂದಾಗಿ ಹೋರಾಟಬೇಕಾಗಿದೆ. ಶಾಲೆ ಒಳಗೆ ಬುರ್ಕಾ ಬೇಡ, ಜೈ ಶ್ರೀರಾಮ, ಅ ಹು ಅಕ್ಬರ್ ಘೋಷಣೆಗಳೂ ಬೇಡ. ತ್ರಿವಳಿ ತಲಾಕ್ ನಿಷೇಧ ಮಾಡಿದ್ದರಿಂದ ಮುಸ್ಲಿಂ ಮಹಿಳೆಯರಿಗೆ ಒಳ್ಳೆಯದಾಗಿದೆ. ಇದು ಮತವಾಗಿ ಪರಿವರ್ತನೆ
ಆಗಬಾರ ದೆನ್ನುವ ರಾಜಕೀಯ ಷಡ್ಯಂತ್ರಕ್ಕಾಗಿ ಹಿಜಾಬನ್ನು ಬಳಸಲಾಗಿದೆ. ಪಾಕಿಸ್ತಾನ ರಾಷ್ಟ್ರಪಿತ ಎಂದು ಕರೆಸಿಕೊಂಡಿರುವ ಮಹಮ್ಮದ್ ಆಲಿ ಜಿನ್ನಾ ಅಲ್ಲಿನ ಶಾಲೆಗೆ ಹೋಗಿ ಗ್ರೂಪ್ ಫೋಟೊ ತೆಗೆಸಿಕೊಂಡ ಭಾವಚಿತ್ರ ಸಾಮಾಜಿಕ ಒಂದು ಹೆಣ್ಣು ಮಕ್ಕಳು ಹಿಜಾಬ್ ಧರಿಸಿಲ್ಲ. ಇದೇ ಪಾಕಿಸ್ತಾನ ಭಾರತದ ಹಿಜಾಬ್ ಕುರಿತು ಮಾತನಾಡುತ್ತಿದೆ.

ರಾಜಕೀಯವಾಗಿ ವಿಶ್ಲೇಷಿಸುವುದಾದರೆ ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೈವಾಡ ನಡೆಸಲು ಸಾಧ್ಯವೇ ಇಲ್ಲ. ಬಿಜೆಪಿ ಈ ಆಟವನ್ನು ಆರಂಭದಲ್ಲಿ ನಿರ್ಲಕ್ಷ್ಯ
ಮಾಡಿರಬಹುದು ಅಥವಾ ಮಜಾ ತಗೊಂಡಿರಬಹುದು. ಕಾಂಗ್ರೆಸ್ ಆರಂಭದಲ್ಲಿ ಎನ್‌ಎಸ್‌ಯುಐ ಮೂಲಕ ಬೆಂಬಲಿಸಲು ಹೋದರೂ ಷಡ್ಯಂತ್ರದ ವಾಸನೆ ಬಂದು ಹಿಜಾಬ್ ಕುರಿತು ಯಾರೂ ಮಾತನಾಡಬೇಡಿ ಎಂಬ ಸಂದೇಶ ಕೂಡ ರವಾನಿಸಿತ್ತು.

ಹಾಗಾದರೆ ಇದರಿಂದ ಯಾರಿಗೆ ಲಾಭ? ಇದರ ಹಿಂದೆ ಯಾರಿದ್ದಾರೆ ಸರಕಾರ ತನಿಖೆ ನಡೆಸಲಿ. ಒಂದು ವೇಳೆ ಸರಕಾರ ರಾಜಕೀಯ ಗೊಳಿಸಬಹುದು ಎಂಬ ಸಂಶಯ ಬಂದರೆ, ಕೇಂದ್ರದ ಸಿಬಿಐ ಈ ಕುರಿತು ತನಿಖೆ ನಡೆಸಲಿ, ಇನ್ಯಾವುದೋ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಲಿ. ನಿಜವಾದ ಷಡ್ಯಂತ್ರ ಯಾರು ಮಾಡಿದ್ದಾರೆ ಎಂಬುದು ಹೊರ ಬೀಳಲೇ ಬೇಕು.