ನವದೆಹಲಿ: ಸಿಧು ಕಳೆದ 14 ವರ್ಷಗಳಿಂದ ಪಂಜಾಬ್ಗೆ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಕ್ಕೆ ಮಾದರಿ ರಾಜಕಾರಣಿಯಾಗಿದ್ದಾರೆ. ನನ್ನ ತಂದೆಗೂ ಹಾಗೂ ಪಂಜಾಬ್ನಲ್ಲಿರುವ ಇತರೆ ಯಾವುದೇ ರಾಜಕಾರಣಿಗಳಿಗೂ ಹೋಲಿಕೆಯೇ ಇಲ್ಲ. ತಮ್ಮ ತಂದೆ ಚುನಾವಣೆಯಲ್ಲಿ ಗೆಲ್ಲುವ ತನಕ ತಾವು ಮದುವೆಯಾಗುವುದಿಲ್ಲ ಎಂದು ನವಜೋತ್ ಸಿಂಗ್ ಸಿಧು ಪುತ್ರಿ ರಬಿಯಾ ಸಿಧು ಪಣತೊಟ್ಟಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪುತ್ರಿ ರಬಿಯಾ ಸಿಧು ಅಮೃತಸರ(ಪೂರ್ವ) ಕ್ಷೇತ್ರದಲ್ಲಿ ತಮ್ಮ ತಂದೆಯ ಪರ ಪ್ರಚಾರ ನಡೆಸಿ ದರು.
ಪ್ರಚಾರದ ವೇಳೆಯಲ್ಲಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ರಾಬಿಯಾ, ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹಾಗೂ ಹಾಲಿ ಸಿಎಂ ಚರಂಜೀತ್ ಸಿಂಗ್ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಿ ತಾವು ಹೇಳಿಕೊಂಡಂತೆ ನಿಜವಾಗಿಯೂ ಬಡವರಾ ಎಂಬ ಸಂದೇಹ ವ್ಯಕ್ತಪಡಿಸಿದ ರಾಬಿಯಾ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಮೊದಲು ಅವರ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿ. ನಿಮಗೆ 133 ಕೋಟಿಗೂ ಅಧಿಕ ಹಣ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದರು. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಚನ್ನಿಯನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಿ ತಮ್ಮ ತಂದೆ ನವಜೋತ್ ಸಿಂಗ್ ಸಿಧುವನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಹುಶಃ ಹೈಕಮಾಂಡ್ಗೆ ಯಾರೋ ಒತ್ತಡ ಹೇರಿರಬಹುದು. ಆದರೆ ನೀವು ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲದವರೆಗೆ ಹಿಡಿದಿಡಲು ಸಾಧ್ಯವಿಲ್ಲ. ಅಪ್ರಮಾಣಿಕ ವ್ಯಕ್ತಿಯು ಕ್ರಮೇಣವಾಗಿ ದೂರ ಸರಿಯಲೇಬೇಕು ಎಂದು ಹೇಳಿದರು.