Sunday, 15th December 2024

ಪ್ರೀತಿಯ ನಿವೇದನೆ; ಸೋತವನು ಜಗತ್ತನ್ನೇ ಗೆಲ್ತಾನೆ !

ಪರಿಶ್ರಮ

ಪ್ರದೀಪ್ ಈಶ್ವರ‍್

parishramamd@gmail.com

ಪ್ರೀತಿ ಎಂದರೆ ಏನು? ಕಾಡುವ ಒಂಟಿ ತನಕ್ಕೆ ಉತ್ತರವಾ? ಕ್ಲಾಸಿನ ಮೂಲೆಯಿಂದ ಮೂಡಿ ಬಂದ ಮುಗುಳ್ನಗೆಯನ್ನ ಮುಂದುವರಿಸುವ ಪ್ರಯತ್ನವಾ? ಮೊಬೈಲ್ ಇನ್ ಬಾಕ್ಸ್ ತುಂಬಿಸಿಕೊಳ್ಳುವ ತವಕವಾ? ಕಾಲೇಜಿನ ಮೊದಲ ದಿನಗಳಲ್ಲಿ ಕೇಳಿಬಂದ ಅವಳ ಹೆಜ್ಜೆಗಳ ಶಬ್ದವನ್ನ ಜೀವನವಿಡೀ ಕೇಳಬೇಕೆಂಬ ಶಪಥವಾ? ಓದಲಾಗದ ಸನ್ನಿವೇಶದಲ್ಲಿ ನಾವೇ ಹುಡುಕಿಕೊಳ್ಳುವ ಆಲ್ಟರ್ ನೇಟೀವಾ?

ಪ್ರೀತಿಯಲ್ಲಿ ಸೋತವರೇ ತಪ್ಪದೆ ಓದಿ, ಬಹಳಷ್ಟು ಹುಡುಗರು, ಹುಡುಗಿಯರು ಪ್ರೀತಿಯಲ್ಲಿ ಸೋತುಬಿಡುತ್ತಾರೆ. ದಿಕ್ಕು ತೋಚದೆ ಕಂಗಾಲಾಗಿ ಬಿಡುತ್ತಾರೆ. ಜೀವನ ಮುಗಿದು ಹೋಯ್ತು ಅನ್ನೋ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅವನಿಲ್ಲ ಅಂದರೆ ಬದುಕಬಹುದಾ ಎನ್ನುವ ಯಕ್ಷ ಪ್ರಶ್ನೆ ಮನಸ್ಸಿಗೆ ಹಾಕಿಕೊಂಡು ಬಿಡ್ತಾರೆ. ಅವಳಿಲ್ಲ ಅಂದರೆ ನನ್ನ ಕೈಯಲ್ಲಿ ಆಗೋದೇ ಇಲ್ಲ ಎನ್ನುವ ದೊಡ್ಡ ಗೊಂದಲಕ್ಕೆ ಬಿದ್ದುಬಿಡುತ್ತಾರೆ.

ಪ್ರೀತಿಯಲ್ಲಿ ಸೋತಾಗ ಹುಡುಗಿಯ ಮನಃಸ್ಥಿತಿ ತುಂಬ ವಿಚಿತ್ರವಾಗಿರುತ್ತೆ. ತುಂಬಾ ಡಿಪ್ರೆಸ್ ಆಗಿಬಿಡುತ್ತಾಳೆ. ಓದುವ ವಿಚಾರದಲ್ಲಿ ಏಕಾಗ್ರತೆ ಕಳೆದುಕೊಂಡು ಬಿಡುತ್ತಾಳೆ. ಯಾವಾಗ ನೋಡಿದರೂ ಮೂಡ್ ಅಪ್‌ಸೆಟ್ ತರಹನೇ ಕಾಣಿಸುತ್ತಿರುತ್ತಾಳೆ. ಮನಸ್ಸಿನಲ್ಲಿ ಗೊಂದಲ, ಅವನಿಲ್ಲದಿರೋ ಭವಿಷ್ಯ ಹೇಗೆ, ಅವನಿಲ್ಲದಿರೋ ಬದುಕು ಹೇಗೆ, ಅವನಿಲ್ಲದಿದ್ದರೆ ನಡೆಯುವುದು ಹೇಗೆ, ನನಗೆ ಕಷ್ಟ ಅಂದ್ರೆ ನೋಡುವವರು ಯಾರು, ನನ್ನ ಕಣ್ಣೀರನ್ನ ಒರೆಸುವವರು ಯಾರು… ಎಬಿತ್ಯಾದಿ ಪ್ರಶ್ನೆಗಳು ಹುಡುಗಿಯನ್ನ ಒಂದಷ್ಟು ದಿನಗಳವರೆಗೆ ಕಾಡುತ್ತವೆ. ಆದರೂ ಸಮಯ ನಡೆಸುತ್ತಲೇ ಇರುತ್ತೆ.

ಇನ್ನ ಹುಡುಗನ ವಿಚಾರಕ್ಕೆ ಬಂದ್ರೆ ಅವಳಿಲ್ಲ ಅಂದ್ರೆ ಹೇಗೆ ಬದುಕಬೇಕು, ಅಂತ ಶಾಲೆಗೋ – ಕಾಲೇಜಿಗೋ ರಜಾ ಹಾಕ್ತಾನೆ. ಕೆಲಸಕ್ಕೆ ಲೀವ್ ಇಡುತ್ತಾನೆ.
ಒಂಟಿತನದಿಂದ ನರಳುತ್ತಾನೆ. ‘ಅವಳು ಬೇಕು ಮಗ, ಇಲ್ಲ ಅಂದರೆ ಬದುಕಕ್ಕೇ ಆಗಲ್ಲ’ ಅಂತಾನೆ. ಒಂದಷ್ಟು ದಿನ ಕೊರಗುತ್ತಾನೆ. ಹಳೇ ಸ್ನೇಹಿತರನೆಲ್ಲ ಹುಡುಕಿಕೊಂಡು ಸುತ್ತಾಡಲು ಹೋಗ್ತಾನೆ, ಬಾಧೆ ಹೇಳಿಕೊಳ್ಳುತ್ತಾನೆ. ಆದರೂ ಉತ್ತರ ಸಿಗಲ್ಲ.

ಒಂದಷ್ಟು ದಿನ ಹೀಗೆ ನಡೆದೇ ಹೋಗುತ್ತೆ. ಖಿನ್ನತೆಯಿಂದ ಆಚೆ ಬರಲು ಆಗದೆ ತುಂಬಾ ಜನ ಹುಡುಗಿಯರು ಕೊರಗುತ್ತಲೇ ಇರುತ್ತಾರೆ. ತುಂಬಾ ಜನ ಹುಡುಗರೂ ನರಳುತ್ತಾನೆ ಇರ್ತಾರೆ. ಕಾಲ ಮುಂದೆ ನಡೆಯುತ್ತಲೇ ಇರುತ್ತದೆ. ಯುವಕ, ಯುವತಿಯರೇ ಪ್ರೀತಿ ಅನ್ನೋದು ಪರಿಶುದ್ಧವಾದ ಸಂಗತಿ. ಅದಕ್ಕೆ ಬೆಲೆ ಕಟ್ಟಲು ಆಗದು. ಸಾಹಿತ್ಯ ಪ್ರಪಂಚದಲ್ಲಿ ಅದನ್ನು ವಿವರಿಸಲು ಪದಗಳು ಸಾಕಾಗಲ್ಲ. ಯಾವ ಮೇಧಾವಿ ಕೈಯಲ್ಲೂ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆಗಿಲ್ಲ.

ಯಾಕೆಂದರೆ ಪ್ರೀತಿಯ ತೀವ್ರತೆ, ಸೆಳೆತ ನಮ್ಮೆಲ್ಲರ ಕಲ್ಪನೆಗೂ ಮೀರಿದ್ದು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಡುತ್ತೆ. ಯಾರನ್ನೂ ಬಿಡಲ್ಲ, ಬಿಡೋದೂ ಇಲ್ಲ; ಬಿಟ್ಟೂ ಇಲ್ಲ. ಪ್ರೀತಿಯ ಯುವಕರಿಗೆ ನನ್ನದು ಒಂದು ಪ್ರಶ್ನೆ, ‘ನೀವು ಒಂದು ಹುಡುಗಿಯನ್ನ ಪ್ರೀತಿಸುತ್ತೀರಾ ಅಂದ್ರೆ ಆ ಹುಡುಗೀನ ಇಷ್ಟ ಪಡುತ್ತೀರ ಅಂತ. ನೀವು ಆ ಹುಡುಗಿಯನ್ನು ಪ್ರೀತಿಸೋದು ನಿಜವಾಗಲೂ ಆ ಹುಡುಗಿ ಚೆನ್ನಾಗಿರಲಿ ಅಂತ. ಹಾಗಿದ್ದ ಮೇಲೆ ಯಾರ ಜತೆಯಿದ್ದರೂ ಚೆನ್ನಾಗಿರಲಿ ಅಂತ ಬಯಸ ಬೇಕಲ್ಲವೇ? ಹುಡುಗಿಯರೇ, ನೀವು ಒಬ್ಬ ಹುಡುಗನನ್ನ ಪ್ರೀತಿಸುತ್ತೀರಾ ಅಂದ್ರೆ ಅವನು ಚೆನ್ನಾಗಿರಲಿ ಅಂತ ಬಯಸೋದು. ಅವನು ಚೆನ್ನಾಗಿರಲಿ ಅನ್ನೋದೇ ನಿಮ್ಮ ಉದ್ದೇಶ ಆದ್ರೆ ಯಾರ ಜತೆ ಇದ್ದರೂ ಚೆನ್ನಾಗಿರಲಿ ಅಂತ ಬಯಸಬಾರದೇಕೆ?’ ಪ್ರೀತಿಯಲ್ಲಿ ಸೋತಾಗ, ಕೈ ಹಿಡಿಯಬೇಕಾದವನು ಕೈ ಕೊಟ್ಟಾಗ ಹೆದರಬಾರದು.

ಕಣ್ಣೀರು ಹಾಕೋದನ್ನು ನಿಲ್ಲಿಸಬೇಕು. ನಿಮ್ಮ ಪ್ರೀತಿ ಪರಿಶುದ್ಧತೆಯಿಂದಲೇ ಕೂಡಿದ್ದರೆ ಖಂಡಿತವಾಗಲೂ ಆ ನಿಮ್ಮ ಪ್ರೀತಿಯಲ್ಲಿ ಬಂದ ನೋವಿನಿಂದಲೂ ಆಚೆ ಬರ್ತೀರ. ಇವತ್ತಲ್ಲ ನಾಳೆ ಒಂದು ಅದ್ಭುತವಾದ ಘಳಿಗೆಗೆ ಮುನ್ನುಡಿ ಬರೆಯುತ್ತೀರ. ಯಾವತ್ತೋ ಒಂದು ದಿನ ನೀವು ಇಷ್ಟ ಪಟ್ಟ ಹುಡುಗಿ, ಇಷ್ಟ ಪಟ್ಟ ಹುಡುಗ ನಿಮಗೆ ಸಿಕ್ಕಿದಾಗ ಅವನು ಚೆನ್ನಾಗಿದ್ದಾನೆ, ಅವಳು ಚೆನ್ನಾಗಿದ್ದಾಳೆ ಎಂಬ ಅದ್ಭುತವಾದ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡಿದಾಗ ನಿಮ್ಮ ಪರಿಶುದ್ಧವಾದ ಪ್ರೀತಿಗೆ ಬೆಲೆ ಇರುತ್ತೆ.

ಮೊದಲ ಪ್ರೀತಿಯ ಮೇಲೆ ನನಗೆ ನಂಬಿಕೆ ಜಾಸ್ತಿ. ಏಕೆಂದರೆ ನನ್ನ ಮೊದಲ ಪ್ರೀತಿ ನನ್ನ ಅಮ್ಮ. ಅಮ್ಮನನ್ನು ನಾನೂ ಇಂದಿಗೂ ಪ್ರೀತಿಸುತ್ತಿದ್ದೇನೆ. ನೀನು ಯಾರ
ನ್ನಾದರೂ ಪ್ರೀತಿ ಮಾಡುತ್ತಿದ್ದೀಯ ಎಂಬ ಪ್ರಶ್ನೆ ವಯಸ್ಸಿನ ಹುಡುಗ ಅಥವಾ ಹುಡುಗಿಯನ್ನು ಕೇಳಿದರೇ ‘ಇಲ್ಲಪ್ಪಾ ನಾನು ಪ್ರೀತಿಯಲ್ಲಿ ಬಿದ್ದಿಲ್ಲ’ ಎನ್ನುವ ಉತ್ತರ
ಕೊಡುತ್ತಾರೆ. ಪ್ರೀತಿ ಮಾಡುವುದು ಎಂದರೆ ಹುಡುಗ, ಹುಡುಗಿ ಮಧ್ಯೆ ಅಥವಾ ಹುಡುಗಿ, ಹುಡುಗನ ಮಧ್ಯೆ ಇರುವುದು ಮಾತ್ರವಲ್ಲ. ಜನ್ಮಕೊಟ್ಟ ಅಮ್ಮನನ್ನ
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೀವಲ್ಲ ಅದೂ ಪ್ರೀತಿನೇ. ಕೊನೆಯ ಉಸಿರಿರುವವರೆಗೂ ಅಪ್ಪನನ್ನ ಇಷ್ಟ ಪಡುತ್ತೀವಲ್ಲವೇ? ಅದೂ ಪ್ರೀತಿನೇ. ಪ್ರೀತಿ ಎಂದರೆ ಏನು? ಕಾಡುವ ಒಂಟಿ ತನಕ್ಕೆ ಉತ್ತರವಾ? ಕ್ಲಾಸಿನ ಮೂಲೆಯಿಂದ ಮೂಡಿ ಬಂದ ಮುಗುಳ್ನಗೆಯನ್ನ ಮುಂದುವರಿಸುವ ಪ್ರಯತ್ನವಾ? ಮೊಬೈಲ್ ಇನ್ ಬಾಕ್ಸ್ ತುಂಬಿಸಿಕೊಳ್ಳುವ ತವಕವಾ? ಕಾಲೇಜಿನ ಮೊದಲ ದಿನಗಳಲ್ಲಿ ಕೇಳಿಬಂದ ಅವಳ ಹೆಜ್ಜೆಗಳ ಶಬ್ದವನ್ನ ಜೀವನವಿಡೀ ಕೇಳಬೇಕೆಂಬ ಶಪಥವಾ? ಓದಲಾಗದ
ಸನ್ನಿವೇಶದಲ್ಲಿ ನಾವೇ ಹುಡುಕಿಕೊಳ್ಳುವ ಆಲ್ಟರ್ ನೇಟೀವಾ? ಅಮ್ಮ ಬೈದರು ಅಂತ, ಸುಮ್ ಸುಮ್ನೆ ಏನೋ ಅಂತಾರೆ ಅಂತ ಮನೆಯ ಕಂಪ್ಲೇಂಟ್ ಬಾಕ್ಸನ್ನ
ಬಿಚ್ಚಿಟ್ಟು ನಮ್ಮ ಇಗೋವನ್ನು ತೃಪ್ತಿಪಡಿಸಿಕೊಳ್ಳುವ ಪ್ರಯತ್ನವಾ ? ವಾಟ್ ಉZಠ್ಝಿqs ಲವ್ ಮೀನ್.

ಪ್ರೀತಿಗೆ ತುಂಬಾ ಪಾವಿತ್ರ್ಯ ಇದೆ ಮನುಷ್ಯ ಎಷ್ಟೇ ಬೆಳೆದರೂ ಪ್ರೀತಿ ಇಲ್ಲದಿದ್ದರೆ ಅವನ ಬದುಕು ಜೀರೋ ಇದ್ದಂತೆ. ಪ್ರೀತಿಗೆ ಒಂದು ವಯಸ್ಸು, ಒಂದು ಸಂದರ್ಭ
ಎಂದು ಇರುತ್ತದೆ. ಸೆಮಿಸ್ಟರ್ ಪರೀಕ್ಷೆಗಳಂತೆ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡನ್ನ ಬದಲಿಸುವ ಸನ್ನಿವೇಶದಲ್ಲಿ ಈ ಜನರೇಷನ್ ನಡೀತಾ ಇದೆ. ವಯಸ್ಸಿಗೆ ಬಂದ ಹುಡುಗನಿಗೆ ಗರ್ಲ್ ಫ್ರೆಂಡ್ ಅನ್ನೋದು ನೆಸಸಿಟಿ. ಪ್ರಾಯಕ್ಕೆ ಬಂದ ಹುಡುಗಿಗೆ ಬಾಯ್ ಫ್ರೆಂಡ್ ಇಲ್ಲದಿದ್ದರೆ ಲೈಫ್ ನಲ್ಲಿ ಥ್ರಿಲ್ ಇರುವುದಿಲ್ಲ ಎಂಬ -ಷನ್ ಆಗಿಬಿಟ್ಟಿದೆ.

ಮೊದಲೆಲ್ಲ ಪ್ರೀತಿ ಎನ್ನುವುದು ಸೆಟಲ್ ಆದ ಮೇಲೆ ಸ್ಟಾರ್ಟ್ ಆಗುತ್ತಿತ್ತು. ಆದರೆ ಈಗ ಶಟಲ್ ಆಡುವ ವಯಸ್ಸಿಗೆ ಸ್ಟಾರ್ಟ್ ಆಗುತ್ತಿದೆ. ಮೊದಲೆಲ್ಲ ಪ್ರೀತಿಸಿದ ಹುಡುಗನನ್ನ ಅಥವಾ ಇಷ್ಟಪಟ್ಟ ಹುಡುಗಿಯನ್ನು ಮೆಚ್ಚಿಸಲು ವರ್ಷಗಳೇ ಹಿಡಿಯುತ್ತಿತ್ತು. ಆದರೆ ಇವತ್ತು ದುನಿಯಾ ಬದಲಾಗಿದೆ. ಟ್ರೆಂಡ್ ಚೇಂಜ್ ಆಗಿದೆ, ಟೆಕ್ಸ್ಟ್ ಬುಕ್‌ಗಿಂತ ಫೇಸ್‌ಬುಕ್ಕೆ ತುಂಬಾ ಹತ್ತಿರವಾಗಿದೆ. ಇಳಿ ಸಂಜೆಯಲ್ಲಿ ‘ಹಾಯ್ !’ ಎಂದು ಬರುವ ಮೆಸೇಜ್ ಬದುಕಿಗೆ ‘ಬಾಯ್!’ ಹೇಳುವ ಮಟ್ಟಕ್ಕೆ ಸಾಗಿ
ಬಿಟ್ಟಿದೆ. ಮಾತು ಕೇಳದ ಮನಸ್ಸು, ಬುದ್ಧಿಮಾತಿಗೆ ಕಿವಿ ಕೊಡದ ಮನಸ್ಥಿತಿ, ಯಾರು ಏನಾದರೂ ಹೇಳಲಿ ಅವನಿಲ್ಲ ಎಂದರೆ ಬದುಕಲು ಸಾಧ್ಯವಿಲ್ಲ, ಅವಳಿಲ್ಲ
ಎಂದರೆ ಇರೋದಕ್ಕೇ ಆಗಲ್ಲ ಎನ್ನುವಂತಹ ತೀರ್ಮಾನಗಳು ನಮ್ಮ ಯುವಕರನ್ನ ರೂಲ್ ಮಾಡುತ್ತಿವೆ.

ಪ್ರೀತಿಯಲ್ಲಿ ಬಿzಗ ಕೇವಲ ಎಮೋಷನ್ಸ್ ಮಾತ್ರ ಕಾಣುತ್ತವೆ. ಮದುವೆಯಾದ ಮೇಲೆ ಮನೆಯಲ್ಲಿ ನಡೆಯುವ ರೆವಲ್ಯೂಷನ್ಸ್ ಬಗ್ಗೆ ಯಾರೂ ಯೋಚಿಸುವುದಿಲ್ಲ. ಏಕೆಂದರೆ ಅಗರಬತ್ತಿ ವಾಸನೆ ಚೆನ್ನಾಗಿಯೇ ಇರುತ್ತೆ. ಹಾಗೆಂದು ಅಗರಬತ್ತಿ ಕಂಪನಿಯಲ್ಲಿ ಕೆಲಸ ಸಿಕ್ಕಾಗ ವಾಸನೆ ಸಹಿಸಿಕೊಳ್ಳುವುದು ಕಷ್ಟ. ಪರಿಶುದ್ಧ
ಪ್ರೀತಿಯನ್ನ, ತಂದೆ ತಾಯಿಗೆ ನೋವು ಕೊಡದ ಪ್ರೀತಿಯನ್ನ, ಮನೆಯ ಮಾನ ಮರ್ಯಾದೆಯನ್ನ, ಬೀದಿಗೆ ತರದ ಪ್ರೀತಿಯನ್ನ, ಸಂಸಾರದ ಪ್ರತಿಷ್ಠೆಯನ್ನ
ಸೇಲ್‌ಗಿಡದ ಪ್ರೀತಿಯನ್ನ, ಪ್ರೀತಿ ಎಷ್ಟು ಮುಖ್ಯವೋ ಭವಿಷ್ಯವೂ ಅಷ್ಟೇ ಮುಖ್ಯ ಎನ್ನುವ ಪ್ರೀತಿಯನ್ನ ನಾನು ಯಾವಾಗಲು ಗೌರವಿಸುತ್ತೇನೆ. ಆಕರ್ಷಣೆಯ ಪ್ರೀತಿ
ಸೋಲಲಿ, ನೈಜ ಪ್ರೀತಿ ಗೆಲ್ಲಲಿ. ಇದಕ್ಕೂ ಮುನ್ನ ನಿಮ್ಮ ಬದುಕು ಸುಂದರವಾಗಿ ರೂಪುಗೊಳ್ಳಲಿ ಎಂಬ ಆಶಯ ನನ್ನದು. ಲೈಟಾಗಿ ಲವ್ ಆದರೂ ಬ್ರೈಟಾಗಿ ಲೈ-
ಹಾಳಾಗುತ್ತೆ. ಇದು ಲೇಟಾಗಿ ಗೊತ್ತಾದರೆ, ನೀಟಾಗಿ ಓದಬೇಕು ಎನ್ನಿಸುತ್ತದೆ. ಆದರೂ ಅವಳು ಸ್ವೀಟಾಗೆ ನೆನಪಾಗುತ್ತಾಳೆ.