ಸ್ವೀಟ್ ಸೆಲ್ಫಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಸೇಲ್ಸ್ಫೋರ್ಸ್ ಎಂಟ್ಗಾಗಿ ಕ್ಯಾಮ್ಕಾರ್ಡ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೈವರ್, ಒನ್ಮಿಯೊಜಿ ಚೆಸ್, ಒನ್ಮಿಯೊಜಿ ಚೆಸ್, ಆನ್ಮಿಯೊಜಿ ಅರೆನಾ , ಡ್ಯುಯಲ್ ಸ್ಪೇಸ್ ಲೈಟ್ ಆಗಿವೆ. ಅಪ್ಲಿಕೇಶನ್ಗಳು ಹೆಚ್ಚಾಗಿ 2020ರಿಂದ ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಅಪ್ಲಿಕೇಶನ್ಗಳ ಮರುನಾಮಕರಣಗೊಂಡ ಅವತಾರ ಗಳಾಗಿವೆ ಎಂಬುದನ್ನು ಗಮನಿಸಬೇಕು.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತನ್ನ ಇತ್ತೀಚಿನ ಆದೇಶದಲ್ಲಿ, ಈ ಅಪ್ಲಿಕೇಶನ್ಗಳು ಭಾರತೀಯರ ಸೂಕ್ಷ್ಮ ಡೇಟಾವನ್ನು ಚೀನಾದಂತಹ ವಿದೇಶಗಳಲ್ಲಿನ ಸರ್ವರ್ಗಳಿಗೆ ವರ್ಗಾಯಿಸುತ್ತಿವೆ ಎಂದು ಹೇಳಿದೆ.
ಜನಪ್ರಿಯ ಅಪ್ಲಿಕೇಶನ್ಗಳು ಸೇರಿದಂತೆ ಮೊದಲ ಸುತ್ತಿನಲ್ಲಿ ಸುಮಾರು 59 ಅಪ್ಲಿಕೇಶನ್ಗಳೊಂದಿಗೆ ಪ್ರಾರಂಭವಾಗುವ ಒಟ್ಟು 224 ಚೀನೀ ಅಪ್ಲಿಕೇಶನ್ಗಳನ್ನು ಸರ್ಕಾರ ನಿಷೇಧಿಸಿದೆ.