Sunday, 15th December 2024

ಕಾನೂನು ತಜ್ಞರ ಸಲಹೆ ಪಡೆದು ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ಚಿಂತನೆ ನಡೆಸಿದ್ದೇನೆ: ಯರಬಳ್ಳಿ ಉಮಾಪತಿ

ಹರಪನಹಳ್ಳಿ: ತೌಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಣ್ಣಕೆಂಚಪ್ಪ ಮಾಡಿರುವ ಆರೋಪ ಸತ್ಯಕ್ಕೆ ದೂರ ವಾದದ್ದು, ರೈತರ ಪರ ದ್ವನಿ ಎತ್ತಿದ ಸಲುವಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಸತ್ಯವನ್ನು ಮರೇಮಾಚಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಯರಬಳ್ಳಿ ಉಮಾಪತಿ ತಿರುಗೇಟು ನೀಡಿದ್ದಾರೆ.

ತಾಲೂಕಿನ ತೌಡೂರು ಗ್ರಾಮದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ನುರಿತ ಕಾನೂನು ತಜ್ಞರ ಸಲಹೆ ಪಡೆದು ತೌಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಣ್ಣಕೆಂಚಪ್ಪ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ಚಿಂತನೆ ನಡೆಸಿದ್ದೇನೆ.

ರೈತರು ಹಾಗೂ ನನ್ನ ಆತ್ಮೀಯ ನರ‍್ದೇಶಕರು ಸಂಘದಲ್ಲಿ ಅಧ್ಯಕ್ಷ ಬಿ.ಸಣ್ಣ ಕೆಂಚಪ್ಪ ಮತ್ತು ಕರ‍್ಯರ‍್ಶಿ ಪರಮೇಶ್ವರಪ್ಪ ಅವರು ಮೃತ ರೈತರ ಹೆಸರಲ್ಲಿ ಹಣ ಬಿಡುಗಡೆ ಮಾಡಿ ಭ್ರಷ್ಟಾಚಾರ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ. ನೊಂದ ರೈತರಿಗೆ ನ್ಯಾಯ ಒದಗಿಸಲು ಧ್ವನಿ ಎತ್ತಿದ್ದರ ಪರಿಣಾಮವಾಗಿ ಹೀಗೆ ನನ್ನ ಮೇಲೆ ವೀನಾ ಕಾರಣ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ತನಿಖೆ ಹಂತದಲ್ಲಿರುವ ಭ್ರಷ್ಟಾಚಾರದ ಹಗರಣದ ದಿಕ್ಕು ತಪ್ಪಿಸಲು ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಐದು ಜನ ನರ‍್ದೇಶಕರು ಸಂಘದ ಎಲ್ಲಾ ಭ್ರಷ್ಟಾಚಾರ ಹಗರಣಗಳನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಗ್ರ ತನಿಖೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ ಆದರೆ ಅಧ್ಯಕ್ಷ ಸಣ್ಣ ಕೆಂಚಪ್ಪ ಅವರು ಈ ವರೆಗೂ ಯಾವುದೇ ಕ್ರಮ ಕೈಗೊಳ್ಳದೆ ತನಿಖೆಗೆ ಒತ್ತಾಯಿಸಿದ ಐದು ಜನ ನರ‍್ದೇಶಕರನ್ನು ಅರ‍್ಹಗೊ ಳಿಸಲು ಹೇಳಿರುವ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.

ಗೋದಾಮು ವಾಣಿಜ್ಯ ಮಳಿಗೆಗಳ ಕಾಮಗಾರಿಯ ನರ‍್ಮಾಣದ ವಿಚಾರದಲ್ಲಿ ಅಧ್ಯಕ್ಷರು ಹಾಗೂ ಕರ‍್ಯನರ‍್ವಾಹಕರ ಗಮನಕ್ಕೆ ತರದೆ ಕರ‍್ಯಾದೇಶ ಪಡೆಯದೆ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ ಅವರೆ ಟೆಂಡರ್ ಕರೆದಿದ್ದು, ಟೆಂಡರ್ ನಲ್ಲಿ ಕಾಮಗಾರಿ ಯಾರಿಗೆ ಆಗಿದೆ ಎಂದು ತಿಳಿದ ಸಂಗತಿ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ ಇದನ್ನೆಲ್ಲ ನೋಡಿದರೆ ತನಿಖೆಯ ಸಮಯದಲ್ಲಿ ದಿಕ್ಕು ತಪ್ಪಿಸುವ ತಂತ್ರ ಎಂದು ಸ್ಪಷ್ಟವಾಗುತ್ತದೆ ಎಂದರು.

ರಾಜ್ಯ ರ‍್ಕಾರಕ್ಕೆ ಕಳೆದ ಆರು ರ‍್ಷಗಳಿಂದ ರೈತರ ಮೇಲೆ ನಡೆದಿರುವ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆಯನ್ನು ಮಾಡಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಲು ದೂರು ಸಲ್ಲಿಸಿದ್ದು ಈ ವರೆಗೂ ಕ್ರಮ ತೆಗೆದು ಕೊಂಡಿಲ್ಲ ಹಾಗಾಗಿ ಮುಂಬರುವ ದಿನಗಳಲ್ಲಿ ಚಳುವಳಿ ನಡೆಸುವ ಕುರಿತು ಪರ‍್ವಭಾವಿ ಸಭೆ ಮಾಡಿದ್ದೇವು ಇದಕ್ಕೆ ಕೆಲ ಸಂಘಟನೆಗಳು ಬೆಂಬಲಿಸಿದ್ದರಿಂದ ಅಧ್ಯಕ್ಷ ಸಣ್ಣ ಕೆಂಚಪ್ಪ ಅವರು ವಿಚಲಿತ ರಾಗಿ ತನಿಖೆಯ ದಿಕ್ಕು ತಪ್ಪಿಸಲು ಆಧಾರ ರಹಿತ ಆರೋಪ ಮಾಡಿದ್ದಾರೆ ಇದರಲ್ಲಿ ಯಾವುದೇ ಹುರುಳಿಲ್ಲ ನಿಗಧಿಯಾದಂತೆ ಚಳುವಳಿ ಮಾಡಲಾಗುವುದು ಎಂದು ಉಮಾಪತಿ ಅವರು ತಿಳಿಸಿದರು.

ರೈತರು ತಮ್ಮ ಖಾತೆ ಪುಸ್ತಕಗಳನ್ನು ಪ್ರರ‍್ಶಿಸಿ ಅಧ್ಯಕ್ಷರು ಹಾಗೂ ಕರ‍್ಯರ‍್ಶಿಗಳು ಜೊತೆಗೂಡಿ ನಮ್ಮ ಖಾತೆಗೆ ಹಣ ಜಮ ಮಾಡಿಕೊಂಡು ಬಿಡಿಸಿಕೊಂಡಿದ್ದಾರೆ ನಮ್ಮ ಕೈಗೆ ಹಣ ಬಂದಿಲ್ಲ ಕೇಳಿದರೆ ಇಂದು ನಾಳೆ ಎನ್ನುತ್ತಿದ್ದು ಕರ‍್ಯರ‍್ಶಿ ಪರಮೇಶ್ವರಪ್ಪ ಆರು ತಿಂಗಳಿಂದ ಇತ್ತಾ ಮುಖ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಘದ ಉಪಾಧ್ಯಕ್ಷೆ ತಿರುಕಮ್ಮ ನರ‍್ದೇಶಕರುಗಳಾದ ಬಿ.ಹಾಲಪ್ಪ, ರಾಜಪ್ಪ, ಹೆಚ್.ಶ್ರೀಪತಿ, ಮಾಜಿ ಜಿ.ಪಂ ಸದಸ್ಯ ಎಸ್.ರೇವಣಸಿದ್ದಪ್ಪ, ಕ್ಯಾರಕಟ್ಟಿ ಕೊಟ್ರಗೌಡ್ರು ಬಿ.ಪಂಪಾಪತಿ, ಬಿ.ಸಿದ್ದಪ್ಪ, ಎ.ಮಲ್ಲಿಕರ‍್ಜುನಯ್ಯ, ತಿಪ್ಪಣ್ಣ, ಎ.ಕೆ ರಾಮಪ್ಪ, ಎಂ.ನಿಂಗಪ್ಪ ಗೀತಮ್ಮ, ಚಂದ್ರಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು