Thursday, 12th December 2024

ನೀಟ್ ಎಂಡಿಎಸ್ 2022 ಪರೀಕ್ಷೆ ಮುಂದೂಡಿಕೆ

ನವದೆಹಲಿ : ಮುಂಬರುವ ಮಾರ್ಚ್ 6ರಂದು ನಡೆಸಲು ನಿರ್ಧರಿಸಲಾಗಿದ್ದ ನೀಟ್ ಎಂಡಿಎಸ್ 2022 ಪರೀಕ್ಷೆ ಯನ್ನ 4-6 ವಾರ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ತನ್ನ ಅಧಿಕೃತ ವೆಬ್ ಸೈಟ್ʼನಲ್ಲಿ ಪರಿಷ್ಕೃತ ದಿನಾಂಕವನ್ನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿದೆ. ಇಂಟರ್ನ್ ಶಿಪ್ ಕಟ್ ಆಫ್ ದಿನಾಂಕವನ್ನ ಜುಲೈ 31ಕ್ಕೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.

ವಿದ್ಯಾರ್ಥಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆ ದಿನಾಂಕ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ನೀಟ್ ಪಿಜಿ 2022ರ ಪರೀಕ್ಷೆಯ ದಿನಾಂಕ ಮುಂದೂಡುವಂತೆ ಸರ್ಕಾರವನ್ನ ಒತ್ತಾಯಿಸುತ್ತಿದ್ದರು. ಮೂಲ ವೇಳಾಪಟ್ಟಿಯ ಪ್ರಕಾರ ಪರೀಕ್ಷೆ ನಡೆದ್ರೆ, ಹೊಸ ಬ್ಯಾಚ್ ಹೊಂದಿಸುವುದು ಕಷ್ಟ ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿದ್ದರು. ಎನ್ ಬಿಇ ನೀಟ್ ಪಿಜಿ 2022 ಪರೀಕ್ಷೆಯನ್ನ 6-8ವಾರ ಮುಂದೂಡಿತ್ತು. ಈಗ ಮೇ 21 ರಂದು ನಡೆಯಲಿದೆ.

ನೀಟ್ ಎಂಡಿಎಸ್ ಅಥವಾ ಮಾಸ್ಟರ್ಸ್ ಆಫ್ ಡೆಂಟಲ್ ಸರ್ಜರಿಗಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು ಎಲ್ಲಾ ಸ್ನಾತಕೋತ್ತರ ದಂತ ಕೋರ್ಸ್ʼಗಳಿಗೆ ಪ್ರವೇಶಗಳನ್ನು ಒದಗಿಸಲು ನಡೆಸುವ ಪ್ರವೇಶ ಪರೀಕ್ಷೆಯಾಗಿದೆ. ದಂತವೈದ್ಯದಲ್ಲಿ ಪಿಜಿ ಕೋರ್ಸ್ʼಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕು. ಪರೀಕ್ಷೆಯನ್ನ ಆನ್ ಲೈನ್ ಮೋಡ್ʼನಲ್ಲಿ ಅನುವಾಗಿ ನಡೆಸಲಾಗುತ್ತದೆ. ಮೂಲ ವೇಳಾಪಟ್ಟಿಯಂತೆ ಈಗಾಗಲೇ ಅರ್ಜಿ ಪ್ರಕ್ರಿಯೆ ಪೂರ್ಣಗೊಂಡಿದೆ.