Thursday, 12th December 2024

ಐಟಿ, ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನ

ಹೈದರಾಬಾದ್ (ತೆಲಂಗಾಣ): ಐಟಿ ಮತ್ತು ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ಸೋಮವಾರ ಹೃದಯಾ ಘಾತದಿಂದ ನಿಧನರಾದರು.

ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ವೈದ್ಯರ ಅಧಿಕೃತ ಹೇಳಿಕೆಯಲ್ಲಿ, ‘ರಾಜ್ಯ ಸಚಿವ ಗೌತಮ್ ರೆಡ್ಡಿ ಅವರಿಗೆ ಬೆಳಗ್ಗೆ ಹೃದಯಾ ಘಾತವಾಗಿದೆ. ತಕ್ಷಣವೇ ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ಅವರು ಮೃತ ಪಟ್ಟಿದ್ದಾರೆ ಎಂದು ಘೋಷಿಸಿದರು.’

ಅವರು ನೆಲ್ಲೂರು ಜಿಲ್ಲೆಯ ಆತ್ಮಕೂರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು.

ರೆಡ್ಡಿಯವರು 31 ಡಿಸೆಂಬರ್ 1976 ರಂದು ನೆಲ್ಲೂರು ಜಿಲ್ಲೆಯ ಮರ್ರಿಪಾಡು ಮಂಡಲದ ಬ್ರಾಹ್ಮಣಪಲ್ಲಿ ಗ್ರಾಮದಲ್ಲಿ ಜನಿಸಿದರು. ಅವರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಜವಳಿ ವಿಷಯದಲ್ಲಿ MSc ಮಾಡಿದರು. ಅವರು ಪತ್ನಿ ಶ್ರೀ ಕೀರ್ತಿ, ಮಗಳು ಅನನ್ಯಾ ರೆಡ್ಡಿ ಮತ್ತು ಪುತ್ರ ಅರ್ಜುನ್ ರೆಡ್ಡಿ ಅವರನ್ನು ಅಗಲಿದ್ದಾರೆ.

ಕೆಎಂಸಿ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದರು. ಅವರು ಮೊದಲು 2014 ರಲ್ಲಿ ಆತ್ಮಕೂರಿನಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ನಂತರ 2019 ರಲ್ಲಿ ಅವರು 2019 ರಲ್ಲಿ ವೈಎಸ್‌ಆರ್‌ಸಿಪಿ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸಂಪುಟದಲ್ಲಿ ಸಚಿವರಾದರು.