Sunday, 15th December 2024

ಮಾತಿನ ಮಲ್ಲಿ ಆರ್​​.ಜೆ. ರಚನಾ ಹೃದಯಾಘಾತದಿಂದ ನಿಧನ

ಬೆಂಗಳೂರು: ಮಾತಿನ ಮಲ್ಲಿ ಆರ್​​.ಜೆ. ರಚನಾ (39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರೆಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ರಚನಾ ಕೆಲಸ ಮಾಡಿದ್ದರು. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ರಚನಾ. ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸ ಬಿಟ್ಟು ಮನೆಯಲ್ಲೇ ಒಬ್ಬರು ಇದ್ದು, ಡಿಪ್ರೆಷನ್​, ಸ್ಟ್ರೆಸ್​ನಿಂದ ಹಾರ್ಟ್​ ಅಟ್ಯಾಕ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನೂ ಕಳೆದ ಕೆಲ ವರ್ಷಗಳಿಂದ ಎಲ್ಲರಿಂದ ರಚನಾ ದೂರ ಇದ್ದರು ಎಂದು ಹೇಳಲಾಗುತ್ತಿದೆ. ಸ್ನೇಹಿತರ ಕರೆಗೂ ಸರಿಯಾದ ಸ್ಪಂಧಿಸುತ್ತಿರಲಿಲ್ವಂತೆ.
ರೆಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುವಾಗ ಆರ್​.ಜೆ ರಚನಾ ಕಾರ್ಯಕ್ರಮ ಬಂದರೆ ಸಾಕು ಎಲ್ಲರ ಕಿವಿ ಆವರ ಮಾತಿ ನತ್ತ ಹೋಗುತ್ತಿತ್ತು. ಸದಾ ಹಸನ್ಮುಖಿಯಾಗಿದ್ದ ರಚನಾಗೆ ಹೃದಯಾಘಾತವಾಗಿರುವುದು ನಿಜಕ್ಕೂ ಆಶ್ವರ್ಯ. ತಮ್ಮ ದೇಹದ ಮೇಲೆ ರಚನಾ ಅವರಿಗೆ ತುಂಬ ಪ್ರೀತಿ. ಸೊಪ್ಪು, ಹಣ್ಣು, ತರಕಾರಿಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರಂತೆ ಆರ್​.ಜೆ ರಚನಾ. ಆದರೂ ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ.

ಸುಮಾರು 7 ವರ್ಷದ ಹಿಂದೆ ರೆಡಿಯೋ ಮಿರ್ಚಿ ಬಿಟ್ಟು ರಚನಾ ಮನೆಯಲ್ಲೇ ಇದ್ದರಂತೆ. ಕೆಲ ತಿಂಗಳುಗಳಿಂದ ಯಾರಿಗೂ ಸಿಗುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ. ದೇಹ ಎಷ್ಟೇ ಗಟ್ಟಿ ಇದ್ದರೂ, ಮನಸ್ಸಿನ ಪಾತ್ರ ಮಾತ್ರ ತುಂಬಾ ಮುಖ್ಯ ಎಂಬುದಕ್ಕೆ ಇವರೇ ಸಾಕ್ಷಿ. ಯಾವಾಗಲೂ ಫಿಟ್​ ಮತ್ತು ಡಯೆಟ್​ ಮೇಲೆ ಗಮನ ಹರಿಸುತ್ತಿದ್ದ ರಚನಾ ಅವರು ಕಳೆದ ಕೆಲ ತಿಂಗಳುಗಳಿಂದ ಡಿಪ್ರೆಷನ್​ನಲ್ಲಿದ್ದರು ಎಂದು ಹೇಳಲಾಗುತ್ತಿದೆ.