‘ಜೀವನ ರೆಡಿಮೇಡ್ ಅಲ್ಲ’ ಅರಿವಿನ ಉಪನ್ಯಾಸ ನೀಡಿದ ಪ್ರಾಂಶುಪಾಲ ಸಿದ್ದು ಯಾಪಲಪರವಿ
ಕ್ಲಬ್ಹೌಸ್ ಸಂವಾದ – 221
ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು
ನಾವೇಕೆ ಒತ್ತಡಕ್ಕೆ ಒಳಗಾಗುತ್ತಿದ್ದೇವೆ? ನಮ್ಮ ಪೂರ್ವಜರು ಇಷ್ಟೊಂದು ಒತ್ತಡ ಅಥವಾ ಚಿಂತೆಗೆ ಒಳಗಾಗುತ್ತಿರಲಿಲ್ಲ. ನಾವು ಮಾತ್ರ ಏಕೆ ಹೀಗೆ?
ಇದಕ್ಕೆ ಉತ್ತರ ತೀರಾ ಸರಳ. ನಮ್ಮ ಪೂರ್ವಜರ ಜೀವನ ಶೈಲಿ ತುಂಬಾ ಸರಳವಾಗಿತ್ತು. ಆದರೆ, ನಮ್ಮ ಜೀವನ ಶೈಲಿ ಹಾಗಿಲ್ಲ. ಪ್ರತಿಯೊಂದರಲ್ಲೂ ಕೊರತೆ ಕಾಣುತ್ತೇವೆ. ಇದಕ್ಕೆ ಕಾರಣ ನಮ್ಮಲ್ಲಿರುವ ಅಸಹಿಷ್ಣುತೆ. ಎಷ್ಟೇ ಇದ್ದರೂ ಇನ್ನೂ ಬೇಕು ಎಂಬ ಆಲೋಚನೆ. ಈ ಕಾರಣಕ್ಕಾಗಿಯೇ ನಾವು ಒತ್ತಡ, ಚಿಂತೆಗೆ ಒಳಗಾಗುತ್ತೇವೆ.
ವಿಶ್ವವಾಣಿ ಕ್ಲಬ್ಹೌಸ್ ಏರ್ಪಡಿಸಿದ್ದ ‘ಜೀವನ ರೆಡಿಮೇಡ್ ಅಲ್ಲ’ ಕಾರ್ಯಕ್ರಮ ದಲ್ಲಿ ಅರಿವಿನ ಉಪನ್ಯಾಸ ನೀಡಿದ ಪ್ರಾಂಶುಪಾಲ ಸಿದ್ದು ಯಾಪಲ ಪರವಿ ನಮ್ಮ ಒತ್ತಡದ ಜೀವನದ ಬಗ್ಗೆ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಏಕೆ ಇಷ್ಟು ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ನೋಡುವುದಾದರೆ, ಬೆಳಗೆ ಎದ್ದ ಮೇಲೆ ರಾತ್ರಿ ಮಲಗುವವರೆಗೆ ಹಲಾವಾರು ಚಿಂತನೆ, ಚಿಂತೆಗಳಿಗೆ ಒಳಗಾಗಿರುತ್ತೇವೆ.
ಇಂದಿನ ಕಾಲಘಟ್ಟದಲ್ಲಿ ಒಬ್ಬ ಮನುಷ್ಯಒಂದು ದಿನದಲ್ಲಿ ೬೦,೦೦೦ ಚಿಂತನೆಗಳಿಗೆ ಒಳಗಾಗುತ್ತಿದ್ದಾನೆ ಎಂದು ಸಂಶೋದನೆಗಳು ಹೇಳುತ್ತವೆ. ಆಲೋಚನಾ ಧಾವಂತ ಪ್ರಾರಂಭವಾಗಿ, ಚಿಂತನೆಯ ಪ್ರಕ್ರಿಯೆಗೆ ತಲುಪುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ನಮ್ಮ ಆಲೋಚನೆಗಳನ್ನು ಆದಷ್ಟು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಅದಕ್ಕೆ ಧ್ಯಾನ ಮಾರ್ಗ ಕೂಡ ಸಹಾಯ ಮಾಡುತ್ತದೆ. ಧ್ಯಾನ ಮಾಡುತ್ತಾ ಕೇವಲ ಉಸಿರಾಟವನ್ನು ಗಮನಿಸುವುದಲ್ಲ, ಚಿಂತನಾ ಪ್ರಕ್ರಿಯೆ ಕಮ್ಮಿ ಮಾಡಿಕೊಂಡು ಸಂಪೂರ್ಣ ಶೂನ್ಯವಾಗಿಸುವುದೇ ಧ್ಯಾನಸ್ಥ ಸ್ಥಿತಿ ಎಂದು ಬುದ್ಧ ಹೇಳುತ್ತಾನೆ.
ಹೆಚ್ಚು ಒತ್ತಡದಲ್ಲಿರುವವರು ಎಂದರೆ ಅದು ಮಧ್ಯಮ ವರ್ಗದ ಜನ. ಅವರು ಅತಿ ಶ್ರೀಮಂತರು ಮತ್ತು ಅತ್ಯಂತ ಬಡವರನ್ನು ಕಂಡು ಒತ್ತಡಕ್ಕೊಳ ಗಾಗುತ್ತಾರೆ. ಆದರೆ, ಮಧ್ಯಮ ವರ್ಗದವರಿಗಿಂತ ಶ್ರೀಮಂತರು ಮತ್ತು ಬಡವರು ಕಡಿಮೆ ಒತ್ತಡದಲ್ಲಿರುತ್ತಾರೆ. ‘ರೆಡಿಮೇಡ್’ ಜೀವನ ಬಿಟ್ಟು ನಮ್ಮ ವೈಯಕ್ತಿಕ ಸ್ವಾನುಭವದ, ನಮಗಿರುವ ಇತಿಮಿತಿತಗಳ ಮೂಲಕ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಿಕೊಂಡು ಬದುಕುವುದೇ ಸುಖೀ ಜೀವನ. ಹಾಗಂತ ನಾವು ಸಂತರಾಗಿ ಎಲ್ಲವನ್ನು ನಿರಾಕರಣೆ ಮಾಡಿ ಬದುಕಬೇಕಿಲ್ಲ. ಯಾವುದು, ಎಷ್ಟು ಲಭ್ಯವಿದೆಯೋ ಅಷ್ಟಕ್ಕೆ ಸಂತೃಪ್ತಿ ಪಟ್ಟು ನಿರ್ಲಿಪ್ತತೆಯಿಂದ ಬದುಕಬೇಕು. ಯಾವುದಕ್ಕೂ ಅನಾವಶ್ಯಕವಾಗಿ ಹೆದರಬಾರದು. ನಮ್ಮದಲ್ಲದ್ದನ್ನು ಪಡೆಯಲು ಹೆಚ್ಚು ಪ್ರಯತ್ನ ಮಾಡಬಾರದು. ಯಾವುದು ನಮ್ಮ ದೇಹ ಮತ್ತು ಮನಸ್ಸಿಗೆ ತೃಪ್ತಿ ಯನ್ನು ನೀಡುತ್ತದೆಯೋ ಅದರಲ್ಲಿ ನಿರ್ಲಿಪ್ತತೆ ಕಾಣಬೇಕು. ಈ ಮೂರು ಸೂತ್ರ ಗಳನ್ನು ಪಾಲಿಸುವು ದರಿಂದ ನಾವು ಸುಖವಾದ ಜೀವನ ಸಾಗಿಸಬಹುದು.
ಆಲೋಚನಾ ಕ್ರಮದಲ್ಲಿ ಎಲ್ಲಾ ಪ್ರಾಣಿಗಳು ಮತ್ತು ಎಲ್ಲಾ ಜೀವ ಚೈತನ್ಯಗಳ ಸಮ್ಮಿಲನದ ವಿಚಿತ್ರ ಪ್ರಾಣಿಯೇ ಮನುಷ್ಯ. ಅದನ್ನು ನಾವು ವ್ಯಕ್ತಿತ್ವ ಪ್ರಾಕಾರಗಳಲ್ಲಿ ನೋಡುತ್ತೇವೆ. ಅಧ್ಯಾತ್ಮದ ಹುಡುಕಾಟದಲ್ಲಿ ವಿವಿಧ ವ್ಯಕ್ತಿತ್ವವುಳ್ಳ ಜನರನ್ನು ಮೂರು ವಿಭಾಗಗಳಾಗಿ ಕವಿ ಹೇಳುತ್ತಾನೆ.
೧. ಹರ್ಮಿಟ್ ಸೋಲ್ಸ್ – ಮುನಿಗಳು ೨. ಸ್ಟಾರ್ ಸೋಲ್ಸ್ – ಸಾಧಕರು
೩. ಫ್ರೆಂಡ್ಲೀ ಸೋಲ್ಸ್ – ಆರಾಧಕರು
ಇದನ್ನು ಹೊರತುಪಡಿಸಿ ಬಹಳ ಶ್ರೀಮಂತರು, ಮಧ್ಯಮ
ವರ್ಗದವರು ಮತ್ತು ಬಡವರು ಇದ್ದಾರೆ.
ಹರ್ಮಿಟ್ ಸೋಲ್ (ಮುನಿಗಳು): ಇವತ್ತು ಸಾರ್ವಜನಿಕ ಬದುಕಲ್ಲಿ ಕಾಣುವ ಮಠಗಳಾಗಲಿ, ಮಠಾಧೀಶರಾಗಲಿ, ಮುನಿಗಳಾಗಲಿ ಇವರಾರೂ ನಿಜವಾದ ಮುನಿಗಳಲ್ಲ. ಹಾಗಾದರೆ ಒಬ್ಬ ಮುನಿ ಹೇಗಿರಬೇಕು? ‘ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ, ವಿಷಯದಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾ ನಂದ ನೆಲೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರ ಲಿಂಗವು
ಬೇರಿಲ್ಲ ಕಾಣಿರೊ’ ಎಂಬ ಹಾಗೆ ದೇಹದ ಮೇಲೆ ವ್ಯಾಮೋಹ ಇರದ, ಅಹಂಕಾರ ಇರದ, ಭಯ ಇರದ, ಅಪೇಕ್ಷೆಗಳು ಇರಬಾರದು.
ಅರಿಷಡ್ವರ್ಗಗಳ ಬಗ್ಗೆ ಉದಾಸೀನ ಇರಬೇಕು. ಭಾವನೆ ದಿಗಂಬರವಾಗಿರಬೇಕು. ಜ್ಞಾನದಲ್ಲಿ ಪರಾಮಾನಂದ ಪಡುತ್ತಿದ್ದರೆ ಆತನನ್ನು ಹರ್ಮಿಟ್ ಸೋಲ್ ಎಂದು ಪರಿಗಣಿಸಬೇಕು ಎಂದು೧೨ನೇ ಶತಮಾನದ ಒಬ್ಬ ಶರಣ ತಿಳಿಸುತ್ತಾನೆ. ಈ ಎಲ್ಲಾ ಲಕ್ಷಣಗಳನ್ನು ಹಿಂದೆ ಬುದ್ಧ ಮತ್ತು ಹಾವೀರನಲ್ಲಿ
ನೋಡಬಹುದಾಗಿತ್ತು. ನಮ್ಮ ಕಾಲಘಟ್ಟದಲ್ಲಿ ಪುಟ್ಟರಾಜ ಗವಾಯಿ, ಸಿದ್ದಗಂಗ ಶ್ರೀ, ಸಿದ್ದೇಶ್ವರ ಸ್ವಾಮಿಗಳು ಇದ್ದಾರೆ. ಜೈನ ಮುನಿಗಳಲ್ಲಿ ನಾವು ಹೆಚ್ಚಾಗಿ ಈ ಗುಣಗಳನ್ನು ನೋಡಬಹುದಾಗಿದೆ. ೪-೫ಲಕ್ಷ ಜನ ಹಿಮಾಲಯದಲ್ಲಿ ದಿಗಂಬರರಾಗಿ ಯಾವುದೇ ಅಪೇಕ್ಷೆ ಇಲ್ಲದೇ ಬದುಕುತ್ತಿರುವವರನ್ನು ನೋಡಿದ್ದೇವೆ. ಅನೇಕ ತಪಸ್ವಿಗಳು ಯಾವುದೇ ಸ್ವಾರ್ಥ, ಅಪೇಕ್ಷಗಳಿಲ್ಲದೆ ಲೋಕದ ಹಿತವನ್ನು ಬಯಸುತ್ತಾ ಧ್ಯಾನಸ್ಥರಾಗಿರುವ ಅನೇಕ ಉದಾಹರಣೆಗಳನ್ನೂ ನಾವು ಕಾಣಬಹುದಾಗಿದೆ.
***
ಸಿದ್ದು ಯಾಪಲಪರವಿ ಸಾಹಿತ್ಯಸೃಜನಶೀಲತೆ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಕ್ರಿಯಾಶೀಲತೆ ಹೊಂದಿರುವ ವ್ಯಕ್ತಿತ್ವ. ಸಾಹಿತ್ಯ ಒಡನಾಟ ಮತ್ತು ಅಧ್ಯಯನ ಅವರ ಕೇಂದ್ರ ಬಿಂದು. ಇಂಗ್ಲಿಷ್ ಪ್ರಾಧ್ಯಾಪಕರಾದರೂ ಕನ್ನಡದ ಪ್ರೇಮಿ. ಕವನ ಸಂಕಲನ, ಪ್ರವಾಸ ಕಥನ, ಅನುವಾದ ಮತ್ತು ವ್ಯಕ್ತಿತ್ವ ವಿಕಸನ ಲೇಖನಗಳಿಗೆಗ ಪ್ರಸಿದ್ಧರಾಗಿದ್ದಾರೆ.
-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ
***
ಸಾರ್ ಸೋಲ್ಸ್ (ಸಾಧಕರು) ಕ್ರೀಡಾಪಟುಗಳು, ಚಿತ್ರಕಲಾವಿದರು, ರಾಜಕಾರಣಿಗಳು, ಬರಹಗಾರರು, ಹಾಡುಗಾರರು ಹೀಗೆ ಲಲಿತ ಕಲೆ ಮತ್ತು ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಸರು ಮಾಡಿದವರನ್ನು ಸಾಧಕರು ಎಂದು ಪರಿಗಣಿಸಲಾಗುತ್ತದೆ. ಇವರು ಇಡೀ ಜಗತ್ತಿಗೆ ತಿಳಿದಿರುತ್ತಾರೆ. ಆದರೆ
ಜಗತ್ತಿನ ಎಲ್ಲಾ ಜನ ಅವರಿಗೆ ಗೊತ್ತಿರುವುದಿಲ್ಲ. ಆರಾಧಕರು (ಫ್ರೆಂಡ್ಲಿ ಸೋಲ್) ಈ ವರ್ಗಕ್ಕೆ ಸೇರಿದವರು ಜಗತ್ತಿನಲ್ಲಿ ಶೇ.೯೦ ಜನ ಇದ್ದಾರೆ. ಉಳಿದ
ಶೇ.೧೦ರಲ್ಲಿ ಎರಡು ವರ್ಗ ಇದ್ದಾರೆ. ಹಾಗಂತ ಈ ವರ್ಗದ ಜನರನ್ನು ಸಾಮಾನ್ಯರು ಎಂದು ಕರೆಯಲು ಸಾಧ್ಯವಿಲ್ಲ. ಅವರಲ್ಲಿ ವಿದ್ಯೆ, ಬುದ್ದಿ ಇರುತ್ತದೆ. ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುತ್ತಾರೆ.
ನಮ್ಮಲ್ಲಿ ಎಲ್ಲಾ ರೀತಿಯ ಜನರನ್ನೂ ಕಾಣುತ್ತೇವೆ. ಇದು ನಮ್ಮ ದೇಶದ ಸೌಂದರ್ಯ.
ಬುದ್ಧ ಮತ್ತು ಅವನ ಅನುಯಾಯಿಗಳು ಆರ್ಟ್ ಆಫ್ ಲಿವಿಂಗ್ ನಿಜವಾದ ಜಿಂತಕರು.
ನಮ್ಮ ಪಂಚೆಂದ್ರಿಯಗಳಿಗೆ ಆಗುವ ಅನುಭವ ಮಾತ್ರ ನಿಜವಾದ ಸುಖ
ನಿರ್ಭಯ, ನಿರಾಕರಣೆ ಮತ್ತು ನಿರ್ಲಿಪ್ತತೆ ಸುಖವಾದ ಬದುಕಿಗೆ ಮೂರು ಸೂತ್ರಗಳು