ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.
ಇದೀಗ 10 ಗ್ರಾಂ ಚಿನ್ನದ ಬೆಲೆಯಲ್ಲಿ ಏಕಾಏಕಿ ಏರಿಕೆಯಾಗಿದ್ದು, 1,400 ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ವರ್ಷದಲ್ಲೇ ಅತ್ಯಧಿಕ ಏರಿಕೆಯಾಗಿದೆ. ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನ 1,400ರೂಪಾಯಿ ಹೆಚ್ಚಳ ಕಂಡಿದ್ದು, 51,750 ಗರಿಷ್ಠ ಮಟ್ಟ ದಾಖಲಿಸಿದೆ.