ಹಣದುಬ್ಬರ ಏರಿಕೆ ಮತ್ತು ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ 2017ರಲ್ಲಿ ದೆಹಲಿ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 5,000 ರೂ.ಗಳಿಂದ 9,678 ರೂ.ಗಳಿಗೆ ಮತ್ತು ಅಂಗನವಾಡಿ ಸಹಾಯಕಿಯರ ವೇತನವನ್ನು 2,500 ರೂ.ಗಳಿಂದ 4,839 ರೂ.ಗಳಿಗೆ ಹೆಚ್ಚಿಸಿತ್ತು.
ದೆಹಲಿ ಸರ್ಕಾರ ಮಾಡಿದ ಘೋಷಣೆಗಳನ್ನು ತಾವು ಒಪ್ಪುವುದಿಲ್ಲ ಮತ್ತು ಅವರ ಮುಷ್ಕರ ಮುಂದು ವರಿಯುತ್ತದೆ ಎಂದು ದೆಹಲಿ ರಾಜ್ಯ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸಂಘ ಹೇಳಿದೆ. ಈವರೆಗೆ ಅಂಗನವಾಡಿ ಕಾರ್ಯಕರ್ತರಿಗೆ 9,678 ರೂ.ಗಳನ್ನು ಗೌರವಧನವಾಗಿ ಹಾಗೂ 200 ರೂ.ಗಳನ್ನು ಮೊಬೈಲ್ ಫೋನ್ ಬಳಕೆ ವೆಚ್ಚಕ್ಕಾಗಿ ಸಂವಹನ ಭತ್ಯೆಯಾಗಿ ನೀಡಲಾಗುತ್ತಿದೆ.
ಸರ್ಕಾರ ಈಗ ಅಂಗನವಾಡಿ ಕಾರ್ಯಕರ್ತರ ಗೌರವ ಧನವನ್ನು 11,220 ರೂ.ಗೆ ಹೆಚ್ಚಿಸಿದೆ ಮತ್ತು ಸಾರಿಗೆ ಮತ್ತು ಸಂವಹನ ಭತ್ಯೆಯನ್ನು1,500 ರೂ. ಗಳಿಗೆ ಹೆಚ್ಚಿಸಿದೆ.