Thursday, 12th December 2024

ಕೌಟುಂಬಿಕ ದೌರ್ಜನ್ಯ: ಲಿಯಾಂಡರ್ ಪೇಸ್ ತಪ್ಪಿತಸ್ಥ

ಮುಂಬೈ: ನಟಿ ರಿಯಾ ಪಿಳ್ಳೈ ಅವರು ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ತಪ್ಪಿತಸ್ಥ ಎಂದು ತೀರ್ಪು ಹೊರಬಿದ್ದಿದೆ.

ತಮಗೆ ಹಂಚಿಕೆಯಾಗಿರುವ ನಿವಾಸವನ್ನು ತೊರೆಯಲು ರಿಯಾ ನಿರ್ಧರಿಸಿದರೆ ಅವರಿಗೆ ಮಾಸಿಕ ನಿರ್ವಹಣೆಗಾಗಿ 1 ಲಕ್ಷ ರೂಪಾಯಿ ಹಾಗೂ ಮಾಸಿಕ ಬಾಡಿಗೆಗಾಗಿ 50,000 ರೂ.ಗಳನ್ನು ಪಾವತಿಸು ವಂತೆ ನ್ಯಾಯಾಲಯವು ಲಿಯಾಂಡರ್ ಅವರಿಗೆ ಸೂಚಿಸಿದೆ.

2014ರಲ್ಲಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆಯಡಿ ಪರಿಹಾರ ಮತ್ತು ರಕ್ಷಣೆ ಕೋರಿ ರಿಯಾ ಪಿಳ್ಳೈ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಎಂಟು ವರ್ಷಗಳ ಕಾಲ ಪೇಸ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು.

ಪೇಸ್ ಅವರು ತಮ್ಮ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ರಿಯಾ ಆರೋಪಿಸಿದ್ದರು.