ಸೋಜಿಗ
ವಿನಯ್ ಖಾನ್
vinaykhan@gmail.com
ಛಲ ಬಿಡದ ಅವರು ಕಳೆದ ಅನೇಕ ವರ್ಷಗಳಿಂದ‘ಕಿಂಗ್ ಆಫ್ ಕಾಂಡೋಮ್’ ಅಂತ ಕರೆಸಿಕೊಳ್ಳುತ್ತಿದ್ದಾರೆ. ಇಂತಹ ಜನರು ನಮ್ಮ
ನಡುವೆಯೇ ಇದ್ದಾರೆ, ಯಾವುದೇ ಹೆಸರಿಗೆ, ಹಣಕ್ಕೆ ಅಪೇಕ್ಷೆ ಪಡದೆ ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕಾಂಡೋಮ್ ಅಂದ್ರೆ ಅದರಲ್ಲಿ ಎಲ್ಲ ವಿಧದ ಭಾವನೆಗಳು ವ್ಯಕ್ತವಾಗುತ್ತವೆ. ಎಷ್ಟೋ ಜನರಿಗೆ ಅದು ಥೋ ಅಸಹ್ಯ ಅಂತ ಅನಿಸುತ್ತೆ. ಇನ್ನು ಕೆಲವರಿಗೆ ಅದು ಲೈಂಗಿಕ ರೋಗಗಳಿಂದ ದೂರಮಾಡುವ, ಬೇಡದ ಗರ್ಭವನ್ನು ಗಳಿಸದ ಒಂದು ಉತ್ಪನ್ನ ಅಂತನೂ ಅಂದುಕೊಳ್ಳು ತ್ತಾರೆ.
ಅವರವರ ಮಾನಸಿಕತೆಗೆ ಬಿಟ್ಟದ್ದು. ನಮ್ಮ ದೇಶದಲ್ಲಿ ಮೆಡಿಕಲ್ ಶಾಪ್‌ಗೆ ಹೋಗಿ ಕಾಂಡೋಮ್ ತರುವುದಕ್ಕೆ ಸಂಕೋಚ, ನಾಚಿಕೆ ಪಟ್ಟುಕೊಳ್ಳುವವರೂ ಇದ್ದಾರೆ. ಇವೆಲ್ಲ ಕಾಮನ್ ಬಿಡಿ, ಆದರೆ ಇಲ್ಲಿ ಕೆಲವರು ಹಲವು ವರ್ಷಗಳಿಂದ ಕಾಂಡೋಮ್‌ನ ಪ್ರಚಾರ ಮಾಡುತ್ತ, ಅದರ ಬಗ್ಗೆ ಜನರಲ್ಲಿ ತಿಳಿವಳಿಕೆ ಹೇಳುತ್ತ, ಸಮಾಜದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದವರಿದ್ದಾರೆ. ಇವರು ಕಾಂಡೋಮ್ ಕಂಪನಿ ವೋನರ್‌ಗಳಲ್ಲ, ಅದರ ಜಾಹೀರಾತಿನಲ್ಲಿ ಬರುವ ಮಾಡೆಲ್ ಗಳಲ್ಲ, ಬೀದಿ ಕಾಮಣ್ಣರಂತೂ ಅಲ್ಲವೇ ಅಲ್ಲ. ಇವರುಗಳು ಸಮಾಜದಲ್ಲಿ ಲೈಂಗಿಕ ಕ್ರಿಯೆಗಳಿಂದಾಗುತ್ತಿರುವ ರೋಗಗಳು, ಅನಗತ್ಯ ಗರ್ಭಧಾರಣೆ, ಅನಿಯಂತ್ರಿತ ಜನಸ್ಫೋಟಕ್ಕೆ ತಮ್ಮದೇ ಆದ ರೀತಿಯಲ್ಲಿ ಜನರಲ್ಲಿ ತಿಳಿವಳಿಕೆಯನ್ನು ಮೂಡಿಸಿ ದವರು.
ಅವರ ಹೆಸರು ಮಿಚೈ ವಿರವೇಡಿಯಾ, ಇವರು ಮೂಲತಃ ಅರ್ಥಶಾಸ್ತ್ರಜ್ಞ, ಆದರೆ ಇವರು ಮಾಡುತ್ತಿರುವ ಕೆಲಸ ಜನರಲ್ಲಿ ಕುಟುಂಬ ಯೋಜನೆ (family planning) ಬಗ್ಗೆ ತಿಳಿವಳಿಕೆ ಕೊಡುವುದು. 40-45 ವರ್ಷಗಳ ಹಿಂದೆ ಥಾಯ್ಲೆಂಡ್ ತುಂಬಾ ಬಡ ರಾಷ್ಟ್ರ, ಬಹಳ ಜನರ ಹತ್ತಿರ ಕೆಲಸ ಇರಲಿಲ್ಲ. ಒಪ್ಪೊತ್ತು ಊಟಕ್ಕೂ ನೀಗದಿರುವಂತಹ ಬಡತನ. ಹಾಗೆ 1975ರ ಸರ್ವೇಯಂತೆ ಪ್ರತಿ ಕುಟುಂಬಕ್ಕೂ ಸರಸರಿ 7 ಜನ ಮಕ್ಕಳು, ಜನನ ಪ್ರಮಾಣವು ಶೇ.3.3. ಆ ಸಮಯದಲ್ಲಿ ಮಿಚೈ ಅವರಿಗೆ ಯೋಚನೆ ಬರುತ್ತೆ, ‘ಇದು ಹೀಗೆ ಮುಂದುವರಿ ದರೆ ದೇಶದ ಆರ್ಥಿಕತೆ ಹೇಗೆ.
ಹೇಗಾದರೂ ಮಾಡಿ ಜನನ ಪ್ರಮಾಣವನ್ನು ತಡೆಯಬೇಕು’ ಅಂತ. ಆ ಸಮಯದಲ್ಲಿ ಅವರಿಗೆ ಬಂದ ಹಲವಾರು ಯೋಚನೆಗಳಲ್ಲಿ ಅವರಿಗೆ ಸರಿ ಎನಿಸಿದ್ದು ಹೆಣ್ಣು ಮಕ್ಕಳಲ್ಲಿ ಫ್ಯಾಮಿಲಿ ಪ್ಲಾನಿಂಗ್‌ನ ಬಗ್ಗೆ ಜಾಗೃತಿ ಮೂಡಿಸುವುದು. ಆದರೆ ಅದು ಸುಲಭವಾದ ಕೆಲಸವೇನು ಅಲ್ಲ. ಏಕೆಂದರೆ ಜನರು ಆ ವಿಷಯಗಳನ್ನು ನಂಬುತ್ತಿರಲಿಲ್ಲ. ನಮ್ಮಲ್ಲೂ ಹಾಗೆ ಹಿರಿಯರು ಹೇಳುತ್ತಿರುತ್ತಾರಲ್ವ-ಮನೆತುಂಬಾ ಮಕ್ಕಳಿರ ಬೇಕು, ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸುತ್ತಾನೆಯೇ ಅಂತ. ಅಲ್ಲಿಯೂ ಹಾಗೆಯೇ ಫ್ಯಾಮಿಲಿ ಪ್ಲ್ಯಾನಿಂಗ್‌ನ ಐಡಿಯಾವನ್ನು ತೆರೆ ದಿಟ್ಟಾಗ, ಗರ್ಭ ನಿರೋಧಕ ಮಾತ್ರೆಗಳನ್ನು ಬಳಸಿ ಎಂದಾಗ ಅವರು ಸಹ ತಾತ್ಸಾರನ್ನೇ ತೋರಿಸುತ್ತಾರೆ.
ಕೆಲವು ಜನ ಡಾಕ್ಟರ್‌ಗಳಿಂದ ಹೇಳಿಸಿದಾಗ ಮಾತ್ರ ಬಳಸುತ್ತೇವೆ ಅಂತ ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಥಾಯ್ಲೆಂಡ್‌ನಲ್ಲಿ ಡಾಕ್ಟರ್ ಗಳ ಕೊರತೆ ಜಾಸ್ತಿಯಿತ್ತು. ಆಗ ಅವರು ನರ್ಸ್‌ಗಳ ಸಹಾಯ ಪಡೆದು ಜಾಗೃತಿ ಮೂಡಿಸುವುದಕ್ಕೆ ಶ್ರಮ ಪಟ್ಟಾಗ ಅವರು ತಲುಪಿದ್ದು ಶೇ.20ರಷ್ಟು ಥಾಯ್ಲೆಂಡ್‌ನ ಜನರನ್ನು. ಆಗ ಛಲ ಬಿಡದ ಅವರು ಧರ್ಮಗುರುಗಳ ಸಹಾಯವನ್ನೂ ಬೇಡುತ್ತಾರೆ. ಆಗ ಥಾಯ್ಲೆಂಡ್‌ನಲ್ಲಿ ಬೌದ್ಧ, ಕ್ಯಾಥೋಲಿಕ್ ಕ್ರಿಶ್ಚಿನ್‌ನ್ನರ ಸಂಖ್ಯೆ ಜಾಸ್ತಿ ಇದ್ದಿದ್ದರಿಂದ ಅವರು ಬೌದ್ಧ ಸನ್ಯಾಸಿಗಳಿಂದ ಗರ್ಭನಿರೋಧಕ ಮಾತ್ರೆಗಳ ಮೇಲೆ, ಕಾಂಡೋಮ್‌ಗಳ ಮೇಲೆ ಪವಿತ್ರ ಜಲವನ್ನು ಸಿಂಪಡಿಸಿ ಅದಕ್ಕೆ ಒಳ್ಳೆಯ ಪ್ರಚಾರವನ್ನು ಕೊಟ್ಟಾಗ ಜನರಲ್ಲಿ ಬೇರೆಯೇ ಭಾವನೆ ಮೂಡು ತ್ತದೆ.
ಅದನ್ನು ಧರ್ಮಗುರುಗಳ ಆಶೀರ್ವಾದಿಂದ ಬಂದ ಪ್ರಸಾದವೆಂದೂ, ಅದನ್ನು ಸೇವಿಸಿದಾಗ ಅದರಿಂದ ಯಾವುದೇ ಅಡ್ಡ ಪರಿಣಾಮ ಬೀರಲಿಕ್ಕಿಲ್ಲ ಎಂದು ಮಹಿಳೆಯರು ಅವುಗಳನ್ನು ಸೇವಿಸಲು ಶುರುಮಾಡುತ್ತಾರೆ. ಮತ್ತೆ ಮುಂದಿನ ಹೆಜ್ಜೆಯಾಗಿ ಮಿಚೈ ಅವರು ಶಾಲಾ
ಮಕ್ಕಳಿಗೂ ಲೈಂಗಿಕ ಜ್ಞಾನವನ್ನು ನೀಡಬೇಕೆಂದು ಶಾಲಾ ಕಾಲೇಜುಗಳಲ್ಲಿ ಹೊಸ ಹೊಸ ಚಟುವಟಿಕೆಯ ಮೂಲಕ ಕಾಂಟ್ರಾ ಸೆಪ್ಟೀವ್ ಗಳ ಬಗ್ಗೆ ಜ್ಞಾನವನ್ನು ನೀಡುತ್ತಾ ಬಂದಾಗ ಪವಾಡದ ರೀತಿಯಲ್ಲಿ ಈಗ ಥಾಯ್ಲೆಂಡ್‌ನ ಜನನ ಪ್ರಮಾಣ ಶೇ.0.3ರಷ್ಟು ಇಳಿದಿದೆ.
ಆವತ್ತಿಗೆ ಇವತ್ತಿಗೆ ಥಾಯ್ಲೆಂಡ್‌ನ ಚಹರೆಯೇ ಬದಲಾಗಿದೆ. ಮಿಚೈ ಅವರು ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಜನರು ಅವರನ್ನು ‘ಮಿಸ್ಟರ್ ಕಾಂಡಮ್’, ‘ಕಾಂಡಮ್ ಕಿಂಗ್’ ಅಂತನೂ ಸಂಬೋಧಿಸುವುದುಂಟು. ಇದೆಲ್ಲ ಮಾಡುತ್ತ ಮಿಚೈ
ಥಾಯ್ಲೆಂಡ್‌ನ ಕೇಂದ್ರಿಯ ಮಂತ್ರಿಯೂ ಆದರು. ಅದೇನೆ ಇರಲಿ ಅವರ ಜನರ ಬಗೆಗಿನ ಕಾಳಜಿಗೆ ಅವರು ಕೈಗೊಂಡ ಕೈಂಕರ್ಯವೂ ಇಡೀ ಪ್ರಪಂಚವೇ ಮೆಚ್ಚುವಂತದ್ದು. 23 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಎಚ್‌ಐವಿ ಸಾಂಕ್ರಾಮಿಕವೂ ಬಹಳ ಜನರನ್ನು ಬಲಿ ತಗೊಳ್ಳು ತ್ತಿರುತ್ತದೆ.
ಹಾಗೆ ಒಬ್ಬ ವ್ಯಕ್ತಿಯನ್ನೂ ಅದು ಬಲಿ ತೆಗೆದುಕೊಂಡಿತು. ಆಗ ಆ ವ್ಯಕ್ತಿಯ ಸ್ನೇಹಿತನಿಗೆ ತುಂಬಾ ನೋವಾಗುತ್ತದೆ. ಬರೀ ನನ್ನ ಸ್ನೇಹಿತನ ಗತಿ ಹೀಗಾದರೆ ಇನ್ನೆಷ್ಟು ಜನರು ಎಚ್ ಐವಿಯಿಂದ ಪ್ರಾಣ ಬಿಡುತ್ತಿದ್ದಾರೆ. ಅವರನ್ನು ಜಾಗೃತ ಗೊಳಿಸಬೇಕು, ಇಡೀ ದೇಶವನ್ನು ಎಚ್‌ಐವಿ ಮುಕ್ತ ಮಾಡಬೇಕಂತ ನಿರ್ಧರಿಸಿ ಸ್ವಯಂ ಪ್ರೇರಿತವಾಗಿ ಜನರಿಗೆ ಉಚಿತವಾಗಿ ಕಾಂಡೋಮ್‌ಗಳನ್ನು ಹಂಚಲು ಶುರು
ಮಾಡುತ್ತಾರೆ. ಅವರ ಹೆಸರು ಸ್ಟಾನ್ಲೀ ನಗಾರ (stanley ngara) ಅವರ ಕೆಲಸ ದಿನವಿಡೀ ಜನರಲ್ಲಿ ಲೈಂಗಿಕ ರೋಗಗಳ ಬಗ್ಗೆ ಮಾಹಿತಿ ಈಡುವುದು, ಅದನ್ನು ತಡೆಯುವುದು ಹೇಗೆ ಅಂತ ತಿಳಿ ಹೇಳುವುದು.
ಅವರು ಕೀನ್ಯಾದ ರಾಜನ ತರಹ ಬಟ್ಟೆಬರೆಗಳನ್ನು ಹಾಕಿಕೊಂಡು ರೋಡಲ್ಲಿ, ಶಾಲೆಗಳಲ್ಲಿ, ಸ್ಲಮ್‌ಗಳಲ್ಲಿ ಜನರಿಗೆ ರೋಗಮುಕ್ತ ಲೈಂಗಿಕ ಜೀವನವನ್ನು ಹೇಗೆ ನಡೆಸುವುದು ಅಂತ ಹೇಳಿಕೊಡುವುದು. ಇದರಿಂದ ಅವರಿಗೇನು ಲಾಭವಿಲ್ಲ ಆದರೆ ಇದು ಅವರ ಮನಸ್ಸಿಗೆ ಮುದ ನೀಡುವ, ಅವರ ಮೆಚ್ಚಿನ ಕೆಲಸವಂತೆ, ಈ ಕೆಲಸದಕ್ಕಾಗಿ ಅವರ ಜತೆ ಹಲವಾರು ಜನರು, ಸೆಲೆಬ್ರಿಟಿಗಳು, ಎನ್‌ಜಿಓಗಳು ಸಾಥ್
ನೀಡುತ್ತಿವೆ. ಇವರು ಸಹ ಮಿಚೈ ರೀತಿಯಲ್ಲೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ, ಲೈಂಗಿಕ ಕಾರ್ಯಕರ್ತೆಯರಿಗೂ ಲೈಂಗಿಕ ಸುರಕ್ಷತೆಯ ಬಗ್ಗೆ ಪಾಠವನ್ನು ಮಾಡುತ್ತಿರುತ್ತಾರೆ.
ಹಾಗಂತ ಕೀನ್ಯಾದಲ್ಲಿ ಕಾಂಡೋಮ್ ಬಳಸಿ ಅಂತ ರೋಡ್‌ಅಲ್ಲಿ ಹೇಳಿದಾಗ ಜನರು ಅವರ ಮಾತನ್ನು ಕೇಳಿ ನಕ್ಕಿದುಂಟು. ನಾನೇಕೆ ಕಾಂಡೋಮ್ ಬಳಸಲಿ? ಅಂತ ಕೇಳಿದ್ದುಂಟು. ಛಲ ಬಿಡದ ಅವರು ಕಳೆದ ಅನೇಕ ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡು ‘ಕಿಂಗ್ ಆಫ್ ಕಾಂಡೋಮ್’ ಅಂತ ಕರೆಸಿ ಕೊಳ್ಳುತ್ತಿದ್ದಾರೆ. ಇಂತಹ ಜನರು ನಮ್ಮ ನಡುವೆಯೇ ಇದ್ದಾರೆ, ಯಾವುದೇ ಹೆಸರಿಗೆ, ಹಣಕ್ಕೆ ಅಪೇಕ್ಷೆ ಪಡದೆ ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಭಾರತವೇನು ಈ ಎರಡು ದೇಶಗಳಿಗಿಂತ ಕಡಿಮೆಯೇನಲ್ಲ, ಭಾರತದಲ್ಲೂ ಲೈಂಗಿಕ ರೋಗಗಳಿಗೆ ತುತ್ತಾಗಿ ಪ್ರಾಣವನ್ನು ಕಳೆದು ಕೊಂಡವರಿದ್ದಾರೆ. ಹಾಗೆಯೇ ಭಾರತದಲ್ಲಿ ಶೇ.೧೭.೧೬೩ ಜನನ ಪ್ರಮಾಣವಿದೆ. ನಮ್ಮಲ್ಲಿ ಹೆಚ್ಚು ಕಡಿಮೆ 140 ಕೋಟಿ ಜನಸಂಖ್ಯೆ ಯಿದೆ. ಕೆಲವು ಸರ್ವೇಗಳ ಪ್ರಕಾರ ಇನ್ನೂ ಕೆಲವೇ ವರ್ಷದಲ್ಲಿ ಭಾರತ ಚೀನಾವನ್ನೂ ಹಿಂದಿಕ್ಕಿ ವಿಶ್ವದ ಅತ್ಯಧಿಕ ಜನಸಂಖ್ಯೆಯಿರುವ ರಾಷ್ಟ್ರ!. ಹಾಗೆಯೇ ನಮ್ಮ ದೇಶದಲ್ಲಿ ತುಂಬಾ ಬಡವರು, ಒಂದೊತ್ತು ಊಟಕ್ಕೂ ಗತಿಯಿರದವರೂ ಇದ್ದಾರೆ. ಯಾವ ದೇಶವೂ ಅತಿಯಾದ ಜನಸಂಖ್ಯೆ, ಜನ ದಟ್ಟನೆಯಿಂದ ಅಭಿವೃದ್ಧಿ ಕಾಣದು.
ನಮ್ಮ ದೇಶಕ್ಕೆ ದೊಡ್ಡ ಹೊರೆಯೇ ಜನಸಂಖ್ಯೆ. ಹಲವು ವರ್ಷಗಳಿಂದ ಸರಕಾರ ಜನಸಂಖ್ಯೆ ನಿಯಂತ್ರಸಲು ಹಲವು ಯೋಜನೆಗಳನ್ನೂ
ತರುತ್ತಿದೆ. ಅದು ‘ಆರತಿಗೊಂದು, ಕೀರ್ತಿಗೊಂದು’ ಇರಬಹುದು. ‘ಹೆಣ್ಣೆಯಾಗಲಿ ಗಂಡಾಯಾಗಲಿ ಒಂದೇ ಇದ್ದರೆ ಸಾಕು’ ಅನ್ನುವ ಘೋಷವಾಕ್ಯದಿಂದ ಜನರಲ್ಲಿ ಜಾಗೃತಿ ಯನ್ನು ತಂದರು. ಇಂದಿರಾ ಗಾಂಧಿ ಕಾಲದಲ್ಲಂತೂ ಪುರುಷರನ್ನು ಹುಡುಕಿ ಹುಡುಕಿ ವ್ಯಾಸೋಕ್ಟಮಿ ಮಾಡಲಾಗುತ್ತಿತ್ತು. ಇವೆಲ್ಲವೂ ಒಳ್ಳೆಯ ನಿರ್ಧಾರಗಳಾದರೂ ಇನ್ನು ದೇಶದ ಜನಸಂಖ್ಯೆ ಕುಗಿಲ್ಲ!
ಚೀನಾವು ಅಧಿಕ ಜನಸಂಖ್ಯೆಯನ್ನು ಹೊಂದಿದಾಗ ಅಲ್ಲಿಯ ಜನರ ಮೇಲೆ ಬಲವಂತವಾಗಿ one child policy ಯನ್ನು ಹೇರಿದರು. ಈಗ ಚೀನಾದಲ್ಲಿ ಜನಸಂಖ್ಯೆ ಕುಗ್ಗುತ್ತಿದೆ. ಇರುವವರೂ ವಯಸ್ಸಾದವರೆ!. ಅದಕ್ಕಾಗಿ ಮತ್ತೆ ಚೀನಾ ಮೂರು ಮಕ್ಕಳನ್ನು ಹೆರುವ ಪಾಲಿಸಿ ಯನ್ನೂ ತಂದಿದ್ದಾರೆ.
ಹಾಗೇ ವಿಶ್ವ ಸಂಸ್ಥೆಯ ಪ್ರಕಾರ 2030ಕ್ಕೆ ಈ ಪ್ರಪಂಚದ ಜನಸಂಖ್ಯೆ ೮.೫ ಬಿಲಿಯನ್ ಆಗುತ್ತದೆ. ನಮಗೆಲ್ಲ ಗೊತ್ತಿರುವ ಹಾಗೆ ಜನ ಸಂಖ್ಯೆ ಹೆಚ್ಚಾದಂತೆಲ್ಲ ಮಾಲಿನ್ಯ, ಅಪೌಷ್ಠಿಕತೆ, ಜನ ದಟ್ಟನೆ, ಆಹಾರ ಕೊರತೆ, ದುಬಾರಿ ಜೀವನ, ಜೀವಿತಾವಧಿಯಲ್ಲಿ ಇಳಿಕೆ, ಸಾಂಕ್ರಾಮಿಕ ರೋಗ, ಇನ್ನು ಹಲವು ತೊಂದರೆಗಳಿಗೆ ಮನುಷ್ಯ ತುತ್ತಾಗುವುದು ಗ್ಯಾರಂಟಿ