ಜಾಗೃತ, ಅರೆ ಪ್ರಜ್ಞೆ ಮತ್ತು ಅರಿವಿಲ್ಲದ ಎಂಬ ಮೂರು ವಿಧದ ಮನಸ್ಸುಗಳು
ಮನಸ್ಸಿನ ನಿಯಂತ್ರಣ ಕುರಿತು ಮನಃಶಾಸಜ್ಞೆ ಎಂ. ದಿವ್ಯಾರಿಂದ ಉಪನ್ಯಾಸ
ಬೆಂಗಳೂರು: ಮನವೆಂಬುದು ಮರ್ಕಟ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಮನಸ್ಸನ್ನು ನಿಯಂತ್ರಣದಲ್ಲಿಡುವುದು ಹೇಗೆ? ಎಂಬುದು ತಿಳಿಯುವ
ಮೊದಲು, ಮನಸ್ಸಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ನಮ್ಮ ಮನಸ್ಸನ್ನು ನಾವು ಅರ್ಥ ಮಾಡಿಕೊಳ್ಳಲು ದಿನದಲ್ಲಿ ೧೦ ನಿಮಿಷವಾದರೂ ಮೀಸಲಿಡುವುದು ಮುಖ್ಯವಾಗುತ್ತದೆ. ಚಿಕ್ಕ ವಯಸ್ಸಿನಿಂದ ಮನಸ್ಸಿನ ವಿಚಾರ ತುಂಬಾ ಕುತೂಹಲವಾಗಿ ಕಾಣಿಸಿದ್ದರಿಂದ ಇದರ ಬಗ್ಗೆ ಆಸಕ್ತಿಯಿಂದ ನಾನು ತುಂಬಾ ಕಲಿಯುತ್ತಾ ಬಂದಿದ್ದೇನೆ ಎಂದು ಮನಃಶಾಸಜ್ಞೆ ಎಂ. ದಿವ್ಯಾ ತಿಳಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಮನಸ್ಸನ್ನು ನಿಯಂತ್ರಿಸುವುದು ಹೇಗೆ?’ ವಿಚಾರದ ಕುರಿತು ಅವರು ಅರಿವಿನ ಉಪನ್ಯಾಸ ನೀಡಿದ್ದು ಹೀಗೆ… ಮನಸ್ಸು ಎಂದರೆ?: ಜಾಗೃತ, ಅರೆ ಪ್ರಜ್ಞೆ ಮತ್ತು ಅರಿವಿಲ್ಲದ ಮನಸ್ಸು ಎಂದು ೩ ರೀತಿಯಾಗಿ ಮನಸ್ಸನ್ನು ವಿಭಜಿಸಲಾಗಿದೆ. ಜಾಗೃತ ಮನಸ್ಸಿಗೆ ಕೇವಲ ಶೇ.೧೦ ಮಾತ್ರ ಅರಿವಿರುತ್ತದೆ. ಆದರೆ, ಜೀವನದ ಎಲ್ಲಾ ಕ್ಷಣಗಳು ಅರೆ ಪ್ರಜ್ಞಾ ಮನಸ್ಸಿನ ಮೇಲೆ ಪ್ರಭಾವ ಬೀರಲಿದ್ದು, ಅದೇ ಜೀವನದ ಎಲ್ಲಾ ಕ್ಷಣಗಳನ್ನೂ ನಿಯಂತ್ರಿಸುತ್ತದೆ.
ಸದ್ಯ ನಮ್ಮ ಜೀವನವನ್ನು ಆಟೋ ಪೈಲಟ್ ಮೋಡ್‌ನಲ್ಲಿ ನಡೆಸುತ್ತಿದ್ದೇವೆ. ನಮ್ಮ ಜೀವನದಲ್ಲಿ ಹಾಕಿಕೊಳ್ಳುವ ಲಿಮಿಟೇಶನ್‌ನಿಂದ ಮನಸ್ಸಿನ ಮೇಲೆ ತೊಂದ ರೆ ಹೆಚ್ಚಾಗುತ್ತದೆ. ಜೀವನದ ಭೂತಕಾಲವನ್ನು ಯೋಚಿಸುವು ದರಿಂದ ಮನಸ್ಸು ನಿಯಂತ್ರಣಕ್ಕೆ ಸಿಗುವುದಿಲ್ಲ. ಆದಷ್ಟು ವರ್ತಮಾನಕಾಲದಲ್ಲಿ ಯೋಚನೆ ಮಾಡುವುದು ಮುಖ್ಯವಾಗುತ್ತದೆ. ದಿನದ ಪ್ರತಿ ನಿಮಿಷ ಆಗದೇ ಇದ್ದರೂ, ೫ ನಿಮಿಷವಾದರೂ ಇಡೀ ದಿನವನ್ನು ಮೆಲುಕು ಹಾಕಬೇಕು. ಹಾಗೆ ಮಾಡುವಾಗ ವರ್ತಮಾನವಾಗಿ ಯೋಚಿಸುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜೀವನ ದಲ್ಲಿ ಧಾವಂತ ಸದಾ ಇರುವುದೇನೋ ಸರಿ. ಆದರೆ, ನಾವು ಅಳವಡಿಸಿಕೊಂಡಿರುವ ಅಭ್ಯಾಸದಿಂದ ನಮ್ಮ ಜೀವನ ವನ್ನು ಎಷ್ಟು ಹತೋಟಿಯಲ್ಲಿಟ್ಟಿದ್ದೇವೆ ಎಂದು ಗೊತ್ತಾಗುತ್ತದೆ.
ಮನಸ್ಸನ್ನು ನಿಯಂತ್ರಣದಲ್ಲಿಡುವುದು ಸುಲಭದ ವಿಚಾರವಲ್ಲ. ಕೆಲವು ಸಣ್ಣ ಮಾರ್ಗಗಳಿಂದ ನಿಯಂತ್ರಣದಲ್ಲಿಡಲು ಪ್ರಯತ್ನ ಮಾಡಬಹುದಾಗಿದೆ. ಯಾವುದೇ ಒಂದು ಅಭ್ಯಾಸವನ್ನು ಸತತವಾಗಿ ೨೧ ದಿನ ಮಾಡಿದರೆ ಮಾತ್ರ, ಹೊಸ ಅಭ್ಯಾಸಗಳು ಒಂದು ದಾರಿಗೆ ಬರಲು ಸಾಧ್ಯ. ಈ ಅಭ್ಯಾಸವನ್ನು ದಿನದಲ್ಲಿ ೫ ನಿಮಿಷ ಮಾಡಿದರೆ ಸಾಕು. ಆದರೆ, ಎಷ್ಟು ಹೆಚ್ಚಾಗಿ ಮಾಡುತ್ತೇವೆಯೋ ಅಷ್ಟು ಒಳ್ಳೆಯದು.
ಮನಸ್ಸಿನ ನಿಯಂತ್ರಣಕ್ಕೆ ಸುಲಭ ಮಾರ್ಗಗಳು
? ಧನಾತ್ಮಕವಾಗಿರಿ: ಮನಸ್ಸಿಗೆ ನೆಗೆಟಿವ್ ವಿಚಾರ ಹುಡುಕುವ ಚಟ. ಅದಕ್ಕಾಗಿ ನೆಗೆಟಿವ್ ಆಲೋಚನೆಗಳು ಬೇಗ ಬರುತ್ತವೆ. ಅದನ್ನು ಸ್ವಲ್ಪ ಬದಲಿಸಿ, ಸದಾ ಧನಾತ್ಮಕ ಚಿಂತನೆಯಲ್ಲಿರುವಂತೆ ಮಾಡಬೇಕು. ನಿಮ್ಮ ಬಳಿ ಇರುವುದಕ್ಕೆ ಸಂತೋಷ ಅನುಭವಿಸಿ, ಅದರ ಬಗ್ಗೆ ಹೆಚ್ಚು ಗಮನ ಹರಿಸಿ. ಇಲ್ಲದಿ
ರುವ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ.
? ಧ್ಯಾನ: ಮನಸ್ಸನ್ನು ಹತೋಟಿಯಲ್ಲಿಡಲು ಧ್ಯಾನ ಉತ್ತಮ ಮಾರ್ಗವಾಗಿದೆ. ಧ್ಯಾನಕ್ಕೆ ಕುಳಿತಾ ಗಲೆಲ್ಲ ನಮ್ಮ ಉಸಿರಾಟದ ಕಡೆ ಗಮನಹರಿಸುವುದು ಮುಖ್ಯವಾಗುತ್ತದೆ. ಧ್ಯಾನಕ್ಕೆ ಕುಳಿತಾಗ ಮೊದಲು ಅನೇಕ ಭಾವನೆಗಳು,ಆಲೋಚನೆಗಳು ನಮ್ಮೆದುರು ಬರುತ್ತವೆ. ಯಾವುದೇ ಅಭ್ಯಾಸ ಮಾಡುತ್ತಾ
ಆಲೋಚನೆಗಳನ್ನು ನಿಯಂತ್ರಿಸಬಹುದಾಗಿದೆ. ವಿಚಲಿತರಾಗದೇ, ಸಮಚಿತ್ತದಲ್ಲಿ ಮಾಡುವ ಯಾವುದೇ ಕೆಲಸಗಳೂ ಧ್ಯಾನವೇ ಆಗಿರುತ್ತದೆ. ಎಷ್ಟು ಸಮಯ ಧ್ಯಾನ ಮಾಡುತ್ತೇವೆಯೋ ಅಷ್ಟೇ ಏಕಾಗ್ರತೆಯನ್ನು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
? ನಡೆ: ಕೇವಲ ಮನಸ್ಸಲ್ಲದೆ, ನಮ್ಮ ದೇಹಕ್ಕೂ ಮೆಮೋರಿ ಇರುತ್ತದೆ. ಜೀವನದ ಕೆಲವು ಕ್ಷಣಗಳು ದೇಹಾದ ಅಂಗಾಂಗಗಳ ಮೇಲೂ ಪರಿಣಾಮ ಬೀರಿರುತ್ತದೆ. ದೇಹದ ಪ್ರತಿ ಯೊಂದು ನರನಾಡಿಗಳಿಗೂ ಎಮೋಶನ್ ಇರುತ್ತದೆ. ವಾಕಿಂಗ್, ರನ್ನಿಂಗ್ ಯಾವುದಾದರೊಂದು ಚಟುವಟಿಕೆ ಅಭ್ಯಾಸ ಮಾಡುವುದರಿಂದ ದೇಹದ ಮೇಲೆ ಬೀರಿರುವ ನಕಾರಾತ್ಮಕ ಆಲೋಚನೆಗಳನ್ನು ಹೊರಹಾಕಬಹುದಾಗಿದೆ.
? ಗ್ರೌಂಡಿಂಗ್:ಮನುಷ್ಯನ ದೇಹವೂ ಎಲೆಕ್ಟ್ರಿಕ್ ಚಾರ್ಜ್‌ನಿಂದ ಕೂಡಿದೆ. ತಲೆ ಪಾಸಿಟಿವ್ ಚಾರ್ಜ್ ಹೊಂದಿದ್ದರೆ, ಪಾದ ನೆಗೆಟಿವ್ ಚಾರ್ಜ್ ಹೊಂದಿರು ತ್ತದೆ. ಬೇರೆ ವ್ಯಕ್ತಿಗಳ ಆಲೋಚನೆಯೊಂದಿಗೆ ನಮ್ಮ ಆಲೋಚನೆ ವಿಲೀನವಾದಾಗ ವಿಚಲಿತರಾಗಿ ಗೊಂದಲಕ್ಕೊಳಗಾಗುತ್ತೇವೆ. ಇದನ್ನು ನಾವು ಹೊರಹಾಕುವ ಮೂಲಕ ನಮ್ಮ ಮನಸ್ಸನ್ನು ಗ್ರೌಂಡಿಂಗ್ ಮಾಡಿಕೊಳ್ಳಬೇಕು. ಪ್ರಕೃತಿಗೆ ಹತ್ತಿರವಾಗುವುದು, ಪ್ರಾಣಾಯಾಮ ಮಾಡುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದಾಗಿದೆ.
? ರಚನೆ:ಪಾಸಿಟಿವ್ ಆಗಿ ಮಾತು (ಪಾಸಿಟಿವ್ ಸ್ಟೇಟ್ ಮೆಂಟ್) ಆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸವಾಲು ಇರುವ ಜಾಗದಲ್ಲಿ ನಿಮ್ಮ ಮನಸ್ಸಿ ನಲ್ಲಿರುವುದನ್ನು ಹೇಳಿಕೊಳ್ಳಿ. ನಾನು ಇರುವ ಹಾಗೇ, ನನ್ನನ್ನು ನಾನು ಪ್ರೀತಿಸುತ್ತೇನೆ; ಹಾಗೇ ಒಪ್ಪಿಕೊಳ್ಳುತ್ತೇನೆ ಎಂದು ನಿಮಗೆ ನೀವೇ ಹೇಳಿ ಕೊಳ್ಳಬೇಕು.
? ಮಿರರ್ ವರ್ಕ್:ಕನ್ನಡಿ ಮುಂದೆ ನಿಮ್ಮ ಭಾವನೆಗಳನ್ನು ನಿಮಗೆ ನೀವೇ ಹೇಳಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಈ ಎಲ್ಲಾ ಸುಲಭ ಉಪಾಯಗಳನ್ನು ಮನೆಯಲ್ಲೇ ಅಭ್ಯಾಸ ಮಾಡಬಹುದಾಗಿದೆ. ಬೆಳಗ್ಗೆ ಎದ್ದ ತಕ್ಷಣ ಅಥವಾ ಮಲಗುವ ಮುಂಚೆ ಮೈಂಡ್ ರಿಲೇಟೆಡ್ ಟೆಕ್ನಿಕ್ ಮಾಡಿದರೆ ಒಳ್ಳೆಯದು. ಮನಸ್ಸನ್ನು ಹತೋಟಿಯಲ್ಲಿಡುವುದು ಕಷ್ಟ, ಆದರೆ ಸಮಚಿತ್ತ ಕಾಪಾಡಿಕೊಳ್ಳುವುದರಿಂದ ಸಾಧ್ಯವಾಗುತ್ತದೆ. ಕಷ್ಟ ಸುಖ ಬರುತ್ತದೆ, ಆದರೆ ಸಮಚಿತ್ತದಿಂದ ಇರುವ ಮೂಲಕ ನಮ್ಮ ಜೀವನವನ್ನು ಹತೋಟಿಯಲ್ಲಿಡಬಹುದಾಗಿದೆ ಎಂದು ದಿವ್ಯಾ ತಿಳಿಸಿದರು.
***
ನಾವು ನಮ್ಮ ಯೋಚನೆಗಳಿಗೆ ಸ್ವಲ್ಪ ಸಮಯ ಕೊಡಬೇಕು.
ನಾವು ಹೇಗೆ ನಮ್ಮ ಜೀವನವನ್ನು ವಿಶ್ಯುವಲ್ ಮಾಡಿಕೊಳ್ಳುತ್ತೇವೆಯೋ, ಹಾಗೆ ಜೀವನ ರೂಪುಗೊಳ್ಳುತ್ತದೆ.
ಪ್ರಾಣಾಯಾಮ ಮಾಡುವಾಗ ಮೂಗಿನಿಂದ ಗಾಳಿಯನ್ನು ಒಳ ತೆಗೆದುಕೊಂಡು, ಬಾಯಿಯಿಂದ ಜೋರಾಗಿ ಹೊರಹಾಕಬೇಕು. ಈ ರೀತಿ ೧೩ ಬಾರಿ
ಆಳವಾದ ಉಸಿರಾಟ ಮಾಡಬೇಕು.