Thursday, 31st October 2024

ಜಗತ್ತಿನಲ್ಲಿ ಮರಳು ಖಾಲಿಯಾಗುತ್ತಿದೆ, ಎಚ್ಚರ!

ಜಾಗೃತಿ

ವಿನ್‌ಸ್‌ ಬೈಸರ್, ಅಮೆರಿಕನ್-ಕೆನಡಿಯನ್ ಪತ್ರಕರ್ತ

ನೀರನ್ನು ಬಿಟ್ಟರೆ ಇಂದು ಭೂಮಿಯ ಮೇಲೆ ಅತಿಹೆಚ್ಚು ಬಳಸುವ ವಸ್ತು ಮರಳು. ಜನರು ಪ್ರತಿ ವರ್ಷ ಒಟ್ಟು 50 ಬಿಲಿಯನ್ ಟನ್ ಮರಳು ಬಳಸುತ್ತಿಿದ್ದಾಾರೆ. ಇಷ್ಟು ಮರಳಿನಲ್ಲಿ ಇಡೀ ಬ್ರಿಿಟನ್ನನ್ನು ಮುಚ್ಚಬಹುದು!

ಕಳೆದ ಸೆಪ್ಟೆೆಂಬರ್‌ನಲ್ಲಿ ದಕ್ಷಿಣ ಆಫ್ರಿಿಕಾದ ಉದ್ಯಮಿಯೊಬ್ಬನನ್ನು ಗುಂಡಿಕ್ಕಿಿ ಹತ್ಯೆೆಗೈಯಲಾಗಿತ್ತು. ಅದರ ಹಿಂದಿನ ತಿಂಗಳು ಆಗಸ್‌ಟ್‌‌ನಲ್ಲಿ ಭಾರತದ ಹಳ್ಳಿಿಯೊಂದರಲ್ಲಿ ಇಬ್ಬರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿಿದ್ದರು. ಅದಕ್ಕೂ ಹಿಂದೆ ಜೂನ್‌ನಲ್ಲಿ ಮೆಕ್ಸಿಿಕೋದಲ್ಲಿ ಪರಿಸರ ಹೋರಾಟಗಾರನೊಬ್ಬನನ್ನು ಹತ್ಯೆೆಗೈದಿದ್ದರು. ಇವೆಲ್ಲ ಸಾವಿರಾರು ಮೈಲುಗಳ ಅಂತರದಲ್ಲಿ ನಡೆದ ಬೇರೆ ಬೇರೆ ಘಟನೆಗಳಾಗಿದ್ದರೂ ಇವುಗಳಿಗೆ ಕಾರಣ ಒಂದೇ. ಅದು 21ನೇ ಶತಮಾನದ ಅತ್ಯಂತ ಮುಖ್ಯವಾದ ವಸ್ತು ಮರಳು.

ನಿಮಗಿದು ಯಃಕಶ್ಚಿಿತ್ ಅನ್ನಿಿಸಬಹುದು. ಆದರೆ, ಮರಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಆಧುನಿಕ ನಗರಗಳನ್ನು ಇದರಿಂದಲೇ ಕಟ್ಟಿಿದ್ದಾಾರೆ. ಶಾಪಿಂಗ್ ಮಾಲ್, ಆಫೀಸ್‌ಗಳು ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಬಳಸುವ ಕಾಂಕ್ರೀಟಿಗೆ ಮರಳು ಬೇಕು. ಟಾರ್ ರಸ್ತೆೆಯಲ್ಲಿ ಆಸ್ಫಾಾಲ್‌ಟ್‌ ಜತೆ ಮರಳು ಬೆರೆಸಿರುತ್ತಾಾರೆ. ಕಿಟಕಿಯ ಗಾಜು, ಕಾರಿನ ವಿಂಡ್‌ಶೀಲ್‌ಡ್‌, ಸ್ಮಾಾರ್ಟ್‌ಫೋನಿನ ಸ್ಕ್ರೀನ್‌ಗಳನ್ನು ಕರಗಿಸಿದ ಮರಳಿನಿಂದಲೇ ತಯಾರಿಸಿರುತ್ತಾಾರೆ. ನಮ್ಮ ಫೋನ್ ಹಾಗೂ ಕಂಪ್ಯೂೂಟರಿನಲ್ಲಿರುವ ಸಿಲಿಕಾನ್ ಚಿಪ್‌ನಿಂದ ಹಿಡಿದು ಅಕ್ಷರಶಃ ಎಲ್ಲ ಎಲೆಕ್ಟ್ರಾಾನಿಕ್ ಉಪಕರಣಗಳನ್ನೂ ಮರಳಿನಿಂದಲೇ ತಯಾರು ಮಾಡಲಾಗುತ್ತದೆ.

ಹಾಗಿದ್ದರೆ ಸಮಸ್ಯೆೆಯೇನು? ನಮ್ಮ ಭೂಮಿ ಮರಳಿನಿಂದಲೇ ತುಂಬಿದೆಯಲ್ಲ? ದೊಡ್ಡ ದೊಡ್ಡ ಮರುಭೂಮಿಯಲ್ಲಿ ಹಾಗೂ ಸಮುದ್ರದ ದಡದಲ್ಲಿ ಸಾವಿರಾರು ಕಿ.ಮೀ. ಉದ್ದಕ್ಕೂ ಮರಳೇ ಇದೆಯಲ್ಲ? ಸಮಸ್ಯೆೆಯೇನೆಂದರೆ ಈ ಮರಳು ಉಪಯೋಗಕ್ಕೆೆ ಬರುವುದಿಲ್ಲ. ಮತ್ತು ನೀವು ನಂಬುತ್ತೀರೋ ಇಲ್ಲವೋ, ಉಪಯೋಗಕ್ಕೆೆ ಬರುವ ನದಿ ತೀರದ ಮರಳು ಹೆಚ್ಚುಕಮ್ಮಿಿ ಎಲ್ಲಾಾ ದೇಶದಲ್ಲೂ ಖಾಲಿಯಾಗುತ್ತಿಿದೆ. ನೀರನ್ನು ಬಿಟ್ಟರೆ ಇಂದು ಭೂಮಿಯ ಮೇಲೆ ಅತಿಹೆಚ್ಚು ಬಳಸುವ ವಸ್ತು ಮರಳು. ಜನರು ಪ್ರತಿ ವರ್ಷ ಒಟ್ಟು 50 ಬಿಲಿಯನ್ ಟನ್ ಮರಳು ಬಳಸುತ್ತಿಿದ್ದಾಾರೆ. ಇಷ್ಟು ಮರಳಿನಲ್ಲಿ ಇಡೀ ಬ್ರಿಿಟನ್ನನ್ನು ಮುಚ್ಚಬಹುದು!

ಮರುಭೂಮಿಯ ಮರಳು ನಯವಾಗಿರುವುದರಿಂದ ಅದು ಕಾಂಕ್ರೀಟ್‌ನಲ್ಲಿ ಬಳಕೆಗೆ ಬರುವುದಿಲ್ಲ. ಬಳಕೆಗೆ ಯೋಗ್ಯವಾದ ಮರಳು ಸಿಗುವುದು ನದಿ ತೀರದಲ್ಲಿ, ದೊಡ್ಡ ದೊಡ್ಡ ಸರೋವರದ ತೀರಗಳಲ್ಲಿ ಹಾಗೂ ಕೆಲ ಸಮುದ್ರದ ತೀರದಲ್ಲಿ. ಈ ಮರಳಿಗೆ ಎಷ್ಟು ಬೇಡಿಕೆಯಿದೆ ಅಂದರೆ ಪ್ರತಿ ವರ್ಷ ಜಗತ್ತಿಿನಾದ್ಯಂತ ನದಿ ತೀರಗಳು, ಸಮುದ್ರ ತೀರಗಳು, ಕೃಷಿ ಭೂಮಿಗಳು ಹಾಗೂ ಅರಣ್ಯ ಪ್ರದೇಶಗಳು ಮರಳು ಗಣಿಗಾರಿಕೆಯಿಂದ ನಲುಗುತ್ತಿಿವೆ. ಬಹುತೇಕ ದೇಶಗಳಲ್ಲಿ ಕ್ರಿಿಮಿನಲ್ ಗ್ಯಾಾಂಗ್‌ಗಳು ಹೀಗೆ ಮರಳು ತೆಗೆದು ಮಾರುವ ದಂಧೆಯಲ್ಲಿ ತೊಡಗಿಸಿಕೊಂಡಿವೆ. ಹೀಗಾಗಿ ಮರಳು ಮಾರುಕಟ್ಟೆೆ ಹೆಚ್ಚುಕಮ್ಮಿಿ ಎಲ್ಲೆೆಡೆ ಕಾಳಸಂತೆಯಾಗಿ ಪರಿಣಮಿಸಿದೆ.

‘ಇದರಲ್ಲೇನೂ ಅಚ್ಚರಿಯಿಲ್ಲ. ಏಕೆಂದರೆ ನಾವು ಯಾವ ನೈಸರ್ಗಿಕ ವಸ್ತುವನ್ನೂ ವರ್ಷಕ್ಕೆೆ 50 ಬಿಲಿಯನ್ ಟನ್‌ನಷ್ಟು ದೊಡ್ಡ ಪ್ರಮಾಣದಲ್ಲಿ ತೆಗೆದು ಬಳಸಲು ಸಾಧ್ಯವಿಲ್ಲ. ಅದರಿಂದ ಭೂಮಿಗೆ ಹಾಗೂ ಜನರಿಗೆ ಸಮಸ್ಯೆೆ ಆಗಿಯೇ ಆಗುತ್ತದೆ’ ಎಂದು ವಿಶ್ವಸಂಸ್ಥೆೆಯ ಪರಿಸರ ಸಂರಕ್ಷಣೆ ವಿಭಾಗದ (ಪಾಸ್ಕಲ್ ಪೆಡುಜಿ.)

ಮರಳು ಬೇಡಿಕೆ ಈ ಪರಿ ಹೆಚ್ಚಲು ಮುಖ್ಯ ಕಾರಣ ನಗರೀಕರಣ. ಅಭಿವೃದ್ಧಿಿಶೀಲ ದೇಶಗಳಲ್ಲಿ ಪ್ರತಿ ವರ್ಷ ಕೋಟ್ಯಂತರ ಜನರು ಹಳ್ಳಿಿ ತೊರೆದು ನಗರಗಳಿಗೆ ವಲಸೆ ಬರುತ್ತಿಿದ್ದಾಾರೆ. ಏಷ್ಯಾಾ, ಆಫ್ರಿಿಕಾ ಹಾಗೂ ದಕ್ಷಿಣ ಅಮೆರಿಕ ಖಂಡದ ಬಹುತೇಕ ಎಲ್ಲ ದೇಶಗಳಲ್ಲೂ ಮಾನವನ ಇತಿಹಾಸದ ಬೇರಾವುದೇ ಅವಧಿಗಿಂತ ವೇಗವಾಗಿ ಈಗ ನಗರಗಳು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿಿವೆ. 1950ರಿಂದ ಇಲ್ಲಿಯವರೆಗೆ ನಗರಗಳಲ್ಲಿನ ಜನಸಂಖ್ಯೆೆ ನಾಲ್ಕು ಪಟ್ಟು ಜಾಸ್ತಿಿಯಾಗಿದೆ. ಇಂದು ಜಗತ್ತಿಿನಲ್ಲಿ ಸುಮಾರು 420 ಕೋಟಿ ಜನರು ನಗರ ಪ್ರದೇಶದಲ್ಲಿ ನೆಲೆಸಿದ್ದಾಾರೆ. ಮುಂದಿನ 30 ವರ್ಷಗಳಲ್ಲಿ ಇನ್ನೂ 250 ಕೋಟಿ ಜನ ನಗರ ಪ್ರದೇಶಗಳಿಗೆ ವಲಸೆ ಹೋಗಲಿದ್ದಾಾರೆಂದು ವಿಶ್ವಸಂಸ್ಥೆೆ ಅಂದಾಜಿಸಿದೆ. ಇದು ಪ್ರತಿ ವರ್ಷ ನ್ಯೂಯಾರ್ಕ್‌ನ ಅಳತೆಯ ಎಂಟು ನಗರಗಳನ್ನು ಜಗತ್ತಿಿಗೆ ಸೇರಿಸುವುದಕ್ಕೆೆ ಸಮ.

ಇಷ್ಟೆೆಲ್ಲ ಜನರಿಗೆ ಮನೆ ಕಟ್ಟುವುದಕ್ಕೆೆ ಹಾಗೂ ರಸ್ತೆೆಗಳನ್ನು ಒದಗಿಸುವುದಕ್ಕೆೆ ಅಪಾರ ಮರಳು ಬೇಕು. 2000ರಿಂದ ಈಚೆಗೆ ಭಾರತದಲ್ಲಿ ಪ್ರತಿ ವರ್ಷ ಬಳಕೆಯಾಗುವ ಮರಳಿನ ಪ್ರಮಾಣ ಮೂರು ಪಟ್ಟು ಹೆಚ್ಚಾಾಗಿದೆ. ಅಮೆರಿಕವು 20ನೇ ಶತಮಾನದಲ್ಲಿ ಒಟ್ಟಾಾರೆ ಬಳಸಿದ್ದಕ್ಕಿಿಂತ ಹೆಚ್ಚು ಮರಳನ್ನು ಚೀನಾ ಇದೊಂದೇ ದಶಕದಲ್ಲಿ ಬಳಸಿದೆ. ಅಗಾಧ ಗಾತ್ರದ ಮರಳುಗಾಡಿನ ಪಕ್ಕದಲ್ಲೇ ಇರುವ ದುಬೈಗೆ ನಿರ್ಮಾಣ ಕಾಮಗಾರಿಗಳಿಗೆ ಬೇಕಾದ ಮರಳನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆಸ್ಟ್ರೇಲಿಯನ್ನರು ಅರಬ್ಬರಿಗೆ ಮರಳು ಮಾರಿ ದುಡ್ಡು ಮಾಡುತ್ತಿಿದ್ದಾಾರೆ. ಅರಬ್ ರಾಷ್ಟ್ರಗಳಲ್ಲಿ ಕೇವಲ ಕಟ್ಟಡಗಳನ್ನು ಕಟ್ಟುವುದಕ್ಕೆೆ ಮಾತ್ರ ಮರಳು ಬಳಸುತ್ತಿಿಲ್ಲ, ಅವರು ಮರಳು ಬಳಸಿ ಹೊಸತಾಗಿ ನೆಲವನ್ನೇ ಸೃಷ್ಟಿಿಸುತ್ತಿಿದ್ದಾಾರೆ. ಕ್ಯಾಾಲಿಫೋರ್ನಿಯಾದಿಂದ ಹಿಡಿದು ಹಾಂಗ್‌ಕಾಂಗ್‌ವರೆಗೆ ನಾನಾ ಕರಾವಳಿಯಲ್ಲಿ ಸಮುದ್ರದೊಳಗಿನಿಂದ ದೊಡ್ಡ ದೊಡ್ಡ ಹಡಗುಗಳಲ್ಲಿ ಮರಳು ತೆಗೆದು ತಂದು ತೀರದಲ್ಲಿ ಸುರಿಯುವ ಮೂಲಕ ಮೊದಲು ನೀರಿದ್ದ ಸ್ಥಳದಲ್ಲಿ ಈಗ ಭೂಮಿಯನ್ನು ನಿರ್ಮಿಸಲಾಗುತ್ತಿಿದೆ. ದುಬೈನಲ್ಲಿರುವ ತಾಳೆ ಮರದ ಆಕಾರದ ಪಾಮ್ ಐಲ್ಯಾಾಂಡ್‌ಗಳನ್ನು ನಿರ್ಮಿಸಿದ್ದು ಹೀಗೆ ಕೃತಕವಾಗಿಯೇ. ನೈಜೀರಿಯಾದ ಅತಿದೊಡ್ಡ ನಗರ ಲಾಗೋಸ್ ತನ್ನ ಅಟ್ಲಾಾಂಟಿಕ್ ಸಮುದ್ರದ ತೀರದಲ್ಲಿ 2400 ಎಕರೆಯಷ್ಟು ಜಾಗ ಸೃಷ್ಟಿಿಸಿಕೊಂಡಿದೆ. ಜಗತ್ತಿಿನಲ್ಲೇ ನಾಲ್ಕನೇ ಅತಿಹೆಚ್ಚು ಭೂಭಾಗ ಹೊಂದಿರುವ ಚೀನಾ ಕೂಡ ತನ್ನ ಕರಾವಳಿಯಲ್ಲಿ ನೂರಾರು ಮೈಲು ಉದ್ದದ ಕೃತಕ ದ್ವೀಪಗಳನ್ನು ಸೃಷ್ಟಿಿಸಿ ರೆಸಾರ್ಟ್ ನಿರ್ಮಿಸಿದೆ.

ಸಮುದ್ರವನ್ನು ಡ್ರೆೆಜ್ ಮಾಡಿ ಮರಳು ತೆಗೆಯುವುದರಿಂದ ಕೆನ್ಯಾಾ, ಪರ್ಶಿಯನ್ ಗಲ್‌ಫ್‌ ಹಾಗೂ ಫ್ಲೋೋರಿಡಾದಲ್ಲಿ ಹವಳದ ದಂಡೆಗಳು ನಾಶವಾಗಿವೆ. ಸಮುದ್ರದಲ್ಲಿರುವ ಜೀವ ವೈವಿಧ್ಯಕ್ಕೆೆ ಹೊಡೆತ ಬಿದ್ದಿದೆ. ಮಲೇಷ್ಯಾಾ ಹಾಗೂ ಕಾಂಬೋಡಿಯಾದ ಮೀನುಗಾರರು ಡ್ರೆೆಜಿಂಗ್‌ನಿಂದಾಗಿ ತಮಗೆ ಮೀನು ಸಿಗುತ್ತಿಿಲ್ಲ ಎನ್ನುತ್ತಿಿದ್ದಾಾರೆ. ಚೀನಾದಲ್ಲಿ ಕೃತಕ ಭೂಮಿಯ ಸೃಷ್ಟಿಿಯಿಂದ ಕರಾವಳಿಯ ಜೌಗುಪ್ರದೇಶ ನಾಶವಾಗಿ, ಮೀನು ಹಾಗೂ ಇತರ ಜೀವಿಗಳ ಬದುಕು ಸಂಕಷ್ಟಕ್ಕೆೆ ಸಿಲುಕಿದೆ. ಜಲ ಮಾಲಿನ್ಯವೂ ಹೆಚ್ಚಿಿದೆ.

ಜಗತ್ತಿಿನಲ್ಲೇ ಅತಿಹೆಚ್ಚು ಕೃತಕ ಭೂಮಿಯನ್ನು ಸೃಷ್ಟಿಿಸುತ್ತಿಿರುವುದು ಸಿಂಗಾಪುರ. ಕಳೆದ 40 ವರ್ಷದಲ್ಲಿ 130 ಚಕಿಮೀ ಹೊಸ ಭೂಮಿಯನ್ನು ಈ ದೇಶ ಸೃಷ್ಟಿಿಸಿದೆ. ಅದಕ್ಕೆೆ ಬಳಸಲಾದ ಅಷ್ಟೂ ಮರಳನ್ನು ಆಮದು ಮಾಡಿಕೊಂಡಿದೆ. ಸಿಂಗಾಪುರಕ್ಕೆೆ ಮರಳು ರಫ್ತುು ಮಾಡಿದ ದೇಶಗಳಿಗೆ ಇದರಿಂದ ಎಷ್ಟು ಹಾನಿಯಾಗಿದೆ ಅಂದರೆ, ಅಕ್ಕಪಕ್ಕದ ಇಂಡೋನೇಷ್ಯಾಾ, ಮಲೇಷ್ಯಾಾ, ವಿಯೆಟ್ನಾಾಂ ಹಾಗೂ ಕಾಂಬೋಡಿಯಾಗಳು ಸಿಂಗಾಪುರಕ್ಕೆೆ ಮರಳು ರಫ್ತುು ಮಾಡುವುದನ್ನೇ ನಿರ್ಬಂಧಿಸಿವೆ. ಡಚ್ ಸಂಶೋಧನಾ ಸಂಸ್ಥೆೆಯೊಂದರ ಪ್ರಕಾರ 1985ರಿಂದ ಈಚೆಗೆ ಜಗತ್ತಿಿನ ಬೇರೆ ಬೇರೆ ದೇಶಗಳು ತಮ್ಮ ಕರಾವಳಿಯಲ್ಲಿ 13,563 ಚಕಿಮೀ ಕೃತಕ ಭೂಮಿಯನ್ನು ಸೃಷ್ಟಿಿಸಿವೆ. ಇದು ಜಮೈಕಾ ದೇಶದ ಗಾತ್ರಕ್ಕೆೆ ಸಮ. ಈ ಭೂಮಿ ನಿರ್ಮಾಣವಾಗಿರುವುದು ಅಗಾಧ ಪ್ರಮಾಣದ ಮರಳಿನಿಂದ.

ಜಗತ್ತಿಿನಾದ್ಯಂತ ಕಾಂಕ್ರೀಟ್ ತಯಾರಿಸಲು ಹಾಗೂ ಇನ್ನಿಿತರ ಔದ್ಯೋೋಗಿಕ ಉದ್ದೇಶಗಳಿಗಾಗಿ ಮರಳು ಗಣಿಗಾರಿಕೆ ನಡೆಸುತ್ತಿಿರುವುದು ಇನ್ನೂ ಹೆಚ್ಚಿಿನ ಹಾನಿ ಉಂಟುಮಾಡುತ್ತಿಿದೆ. ಇದಕ್ಕೆೆ ಬೇಕಾದ ಮರಳನ್ನು ನದಿಯಿಂದ ತೆಗೆಯಲಾಗುತ್ತದೆ. ಸಕ್ಷನ್ ಪಂಪ್ ಅಥವಾ ಬಕೆಟ್ ಬಳಸಿ ನದಿಯಿಂದ ಮರಳು ತೆಗೆಯುವುದು ಸುಲಭ. ಆದರೆ, ಅದರಿಂದ ಪರಿಸರಕ್ಕೆೆ ಆಗುವ ಹಾನಿ ಊಹಿಸಲಸದಳ. ಅದು ನದಿಯ ಆಳದಲ್ಲಿರುವ ಜೀವಿಗಳ ಬದುಕಿಗೆ ಕಂಟಕ ತರುತ್ತದೆ. ಮರಳು ತೆಗೆದಾಗ ನೀರು ಮಲಿನವಾಗಿ ಮೀನುಗಳಿಗೆ ಉಸಿರುಗಟ್ಟುತ್ತದೆ. ನದಿಯ ಆಳಕ್ಕೆೆ ಸೂರ್ಯನ ಬೆಳಕು ಹೋಗದೆ ಅಲ್ಲಿನ ಸಸ್ಯ ಸಂಪತ್ತು ಬದುಕುಳಿಯುವುದು ಕಷ್ಟವಾಗುತ್ತದೆ. ಇಂದು ನದಿ ತೀರದ ಮರಳು ಗಣಿಗಾರಿಕೆಯಿಂದ ವಿಯೆಟ್ನಾಾಂನ ಮೆಕಾಂಗ್ ಪ್ರದೇಶವೇ ನಿಧಾನವಾಗಿ ವಿನಾಶದ ಅಂಚಿಗೆ ತಲುಪಿದೆ. ಇಲ್ಲಿ 20 ದಶಲಕ್ಷ ಜನ ಬದುಕುತ್ತಿಿದ್ದಾಾರೆ. ದೇಶದ ಅರ್ಧಕ್ಕರ್ಧ ಆಹಾರ ಇಲ್ಲೇ ಉತ್ಪಾಾದನೆಯಾಗುತ್ತದೆ. ಹವಾಮಾನ ಬದಲಾವಣೆಯಿಂದಲೂ ಮೆಕಾಂಗ್ ಪ್ರದೇಶ ಪ್ರತಿ ದಿನ ಒಂದೂವರೆ ಫುಟ್‌ಬಾಲ್ ಮೈದಾನದಷ್ಟು ಗಾತ್ರದ ಭೂಮಿಯನ್ನು ಕಳೆದುಕೊಳ್ಳುತ್ತಿಿದೆ. ಮೆಕಾಂಗ್ ನದಿಯ ಅಕ್ಕಪಕ್ಕದಲ್ಲಿರುವ ಬೆಟ್ಟಗುಡ್ಡಗಳಿಂದಾಗಿ ಈ ಪ್ರದೇಶ ಹಲವಾರು ಶತಮಾನಗಳಿಂದ ಸಮೃದ್ಧ ತಾಣವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ನಡೆಯುತ್ತಿಿರುವ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಮೆಕಾಂಗ್ ನದಿಯ ಪಾತ್ರದಿಂದ ಮರಳು ತೆಗೆದು ತೆಗೆದು ನದಿಯೇ ಬರಿದಾಗುತ್ತಿಿದೆ. 2011ರಲ್ಲೊೊಂದೇ ಇಲ್ಲಿಂದ 50 ಮಿಲಿಯನ್ ಟನ್ ಮರಳು ತೆಗೆಯಲಾಗಿದೆ. ಇಷ್ಟು ಮರಳಿನಲ್ಲಿ ಇಡೀ ಡೆನ್ವೆೆರ್ ನಗರವನ್ನು ಎರಡು ಇಂಚು ತುಂಬಬಹುದು! ಇದರ ಮಧ್ಯೆೆ ಮೆಕಾಂಗ್ ನದಿಗೆ ಐದು ದೊಡ್ಡ ಡ್ಯಾಾಂ ಕಟ್ಟಲಾಗಿದೆ. ಚೀನಾ, ಲಾವೋಸ್ ಹಾಗೂ ಕಾಂಬೋಡಿಯಾದಲ್ಲಿ ಇನ್ನೂ 12 ಡ್ಯಾಾಂ ನಿರ್ಮಿಸುತ್ತಿಿದ್ದಾಾರೆ. ಈ ಡ್ಯಾಾಂಗಳು ನದಿಯ ತೀರಕ್ಕೆೆ ಮರಳು ಹೋಗಿ ಶೇಖರವಾಗುವುದನ್ನು ತಪ್ಪಿಿಸುತ್ತವೆ. ಇದೇ ವೇಗದಲ್ಲಿ ಹೋದರೆ ಈ ಶತಮಾನದ ಕೊನೆಗೆ ಅರ್ಧಕ್ಕರ್ಧ ಮೆಕಾಂಗ್ ನದಿ ಪಾತ್ರದ ಪ್ರದೇಶಗಳು ನಾಶವಾಗುತ್ತವೆ ಎಂದು ಡಬ್ಲ್ಯೂ ಡಬ್ಲ್ಯೂಎಫ್ ಎಚ್ಚರಿಸಿದೆ. ಮೆಕಾಂಗ್ ನದಿಯಲ್ಲಿ ನಡೆಯುತ್ತಿಿರುವ ಡ್ರೆೆಜಿಂಗ್‌ನಿಂದಾಗಿ ಕಾಂಬೋಡಿಯಾ ಮತ್ತು ಲಾವೋಸ್‌ನಲ್ಲಿ ನದಿಯ ತೀರಗಳೇ ಕುಸಿಯುತ್ತಿಿರುವುದರಿಂದ ಗದ್ದೆೆ ಮತ್ತು ಮನೆಗಳು ನಾಶವಾಗುತ್ತಿಿವೆ.

ಮರಳು ಗಣಿಗಾರಿಕೆಯಿಂದಾಗಿ ಎಷ್ಟೋೋ ನದಿಗಳಲ್ಲಿ ಸೇತುವೆಗಳ ತಳಪಾಯವೇ ಅಪಾಯಕ್ಕೆೆ ಸಿಲುಕಿವೆ. 2000ರಲ್ಲಿ ತೈವಾನ್‌ನಲ್ಲಿ, ನಂತರ ಪೋರ್ಚುಗಲ್‌ನಲ್ಲಿ ಹೀಗೆ ಸೇತುವೆಗಳು ಕುಸಿದಿದ್ದವು. ಪೋರ್ಚುಗಲ್‌ನಲ್ಲಿ ಸೇತುವೆ ಕುಸಿದಾಗ ಬಸ್‌ನಲ್ಲಿದ್ದ 70 ಜನರು ಸಾವನ್ನಪ್ಪಿಿದ್ದಾಾರೆ.
ಗಾಜು, ಸೋಲಾರ್ ಪ್ಯಾಾನಲ್ ಹಾಗೂ ಕಂಪ್ಯೂೂಟರ್ ಚಿಪ್‌ಗಳನ್ನು ತಯಾರಿಸಲು ಬೇಕಾದ ಉತ್ತಮ ಗುಣಮಟ್ಟದ ಸಿಲಿಕಾ ಮರಳಿಗೆ ಬೇಡಿಕೆ ವಿಪರೀತ ಹೆಚ್ಚುತ್ತಿಿದೆ. ಇದರ ಪರಿಣಾಮವಾಗಿ ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಕಾಡು ನಾಶವಾಗುತ್ತಿಿದೆ. ಈ ಮರಳು ತೆಗೆಯಲು ಕ್ರಿಿಮಿನಲ್ ಗ್ಯಾಾಂಗ್‌ಗಳ ನಡುವೆ ಎಷ್ಟು ಪೈಪೋಟಿಯಿದೆ ಅಂದರೆ, ಇದಕ್ಕಾಾಗಿಯೇ ಗ್ಯಾಾಂಗ್‌ವಾರ್ ಹಾಗೂ ಕೊಲೆಗಳು ನಡೆಯುತ್ತಿಿವೆ. ದಕ್ಷಿಣ ಅಮೆರಿಕ ಹಾಗೂ ಆಫ್ರಿಿಕಾದಲ್ಲಿ ಮಕ್ಕಳನ್ನು ಈ ಉದ್ದಿಮೆಯಲ್ಲಿ ಜೀತದಾಳುಗಳನ್ನಾಾಗಿ ಬಳಸಿಕೊಳ್ಳುತ್ತಿಿದ್ದಾಾರೆ. ಬೇರೆ ಬೇರೆ ಕ್ಷೇತ್ರದಲ್ಲಿ ಕ್ರಿಿಮಿನಲ್‌ಗಳು ಭ್ರಷ್ಟ ಪೊಲೀಸರಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟು ಪಾರಾಗುತ್ತಿಿರುವಂತೆ ಇಲ್ಲೂ ಪಾರಾಗುತ್ತಿಿದ್ದಾಾರೆ. ಅಗತ್ಯ ಬಿದ್ದಾಾಗ ಹಲ್ಲೆೆ, ಕೊಲೆಗಳನ್ನೂ ಮಾಡುತ್ತಿಿದ್ದಾಾರೆ.

ದಕ್ಷಿಣ ಮೆಕ್ಸಿಿಕೋದ ನದಿಯೊಂದರಲ್ಲಿ ನಡೆಯುತ್ತಿಿದ್ದ ಅಕ್ರಮ ಮರಳು ಗಣಿಗಾರಿಕೆಯನ್ನು ವಿರೋಧಿಸಿದ ಪರಿಸರ ಹೋರಾಟಗಾರ ಜೋಸ್ ಲೂಯಿಸ್ ಅಲ್ವರೆಜ್ ಫ್ರೋೋರ್ಸ್‌ನನ್ನು ಈ ವರ್ಷ ಜೂನ್‌ನಲ್ಲಿ ಹತ್ಯೆೆ ಮಾಡಲಾಗಿತ್ತು. ಎರಡು ತಿಂಗಳ ನಂತರ ಭಾರತದ ರಾಜಸ್ಥಾಾನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿಿದ್ದ ಟ್ರಾಾಕ್ಟರ್ ತಡೆಯಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಆಗ ನಡೆದ ಚಕಮಕಿಯಲ್ಲಿ ಇಬ್ಬರು ಕಳ್ಳಸಾಗಣೆದಾರರು ಸಾವನ್ನಪ್ಪಿಿ, ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಿಕಾದಲ್ಲಿ ಮರಳು ಗಣಿಗಾರಿಕೆ ಗ್ಯಾಾಂಗ್‌ಗಳ ನಡುವೆ ಗುಂಡಿನ ಕಾಳಗ ನಡೆದಿತ್ತು. ಇವೆಲ್ಲ ಇತ್ತೀಚಿನ ಉದಾಹರಣೆಗಳಷ್ಟೆೆ. ಕೆನ್ಯಾಾ, ಜಾಂಬಿಯಾ, ಇಂಡೋನೇಷ್ಯಾಾ ಹಾಗೂ ಭಾರತದಲ್ಲಿ ಕೆಲ ವರ್ಷಗಳಿಂದ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಹಿಂಸಾಚಾರಗಳು ಹೆಚ್ಚಾಾಗುತ್ತಿಿವೆ. ಭಾರತದಲ್ಲಿ ಇದನ್ನು ಮರಳು ಮಾಫಿಯಾ ಎಂದು ಕರೆಯುತ್ತಾಾರೆ. 81 ವರ್ಷದ ಒಬ್ಬ ಶಿಕ್ಷಕ, 22 ವರ್ಷದ ಹೋರಾಟಗಾರ, ಇನ್ನೊೊಬ್ಬ ಪತ್ರಕರ್ತ, ಕನಿಷ್ಠ ಮೂರ್ನಾಾಲ್ಕು ಪೊಲೀಸರು ಈ ಮರಳು ಮಾಫಿಯಾಕ್ಕೆೆ ಬಲಿಯಾಗಿದ್ದಾಾರೆ.

ಇನ್ನೊೊಂದೆಡೆ, ಮರಳು ಗಣಿಗಾರಿಕೆಯಿಂದ ಆಗುತ್ತಿಿರುವ ಹಾನಿಯ ಬಗ್ಗೆೆ ಜಾಗೃತಿಯೂ ಹೆಚ್ಚುತ್ತಿಿದೆ. ಕಾಂಕ್ರೀಟ್‌ನಲ್ಲಿ ಮರಳಿನ ಬದಲು ಹಾರುಬೂದಿ, ಪ್ಲಾಾಸ್ಟಿಿಕ್ ತ್ಯಾಾಜ್ಯ, ಎಣ್ಣೆೆ ಬೀಜಗಳ ಕವಚದ ಪುಡಿ, ಭತ್ತದ ಹೊಟ್ಟು ಹೀಗೆ ಬೇರೆ ಬೇರೆ ವಸ್ತುಗಳನ್ನು ಬೆರೆಸುವ ಬಗ್ಗೆೆ ವಿಜ್ಞಾಾನಿಗಳು ಸಂಶೋಧನೆ ನಡೆಸುತ್ತಿಿದ್ದಾಾರೆ. ಇನ್ನು ಕೆಲ ವಿಜ್ಞಾಾನಿಗಳು ಕಡಿಮೆ ಮರಳು ಬೆರೆಸಿ ಕಾಂಕ್ರೀಟ್ ತಯಾರಿಸುವ ವಿಧಾನವನ್ನೂ, ಹಳೆಯ ಕಟ್ಟಡಗಳನ್ನು ಕೆಡವಿದಾಗ ಸಿಗುವ ಕಾಂಕ್ರೀಟ್‌ನ ಮರುಬಳಕೆಯ ವಿಧಾನವನ್ನೂ ಶೋಧಿಸುತ್ತಿಿದ್ದಾಾರೆ. ಪಶ್ಚಿಿಮದ ಅನೇಕ ದೇಶಗಳಲ್ಲಿ ಈಗ ನದಿ ತೀರದಲ್ಲಿ ಮರಳು ತೆಗೆಯುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಆದರೆ, ಇನ್ನಿಿತರ ದೇಶಗಳಲ್ಲಿ ಇದು ಜಾರಿಗೆ ಬರುವುದು ಸುಲಭವಿಲ್ಲ. ಜಗತ್ತಿಿನಾದ್ಯಂತ ನಗರಗಳನ್ನು ನಿರ್ಮಿಸಲು ಬಳಸುತ್ತಿಿರುವ ವಿನ್ಯಾಾಸವೇ ಬದಲಾದರೆ ಏನಾದರೂ ಪ್ರಯೋಜನವಾದೀತು.

ಮರಳು ಗಣಿಗಾರಿಕೆಯಿಂದ ಉಂಟಾಗುತ್ತಿಿರುವ ಹಾನಿ ತಡೆಯಲು ಏನಾದರೂ ಮಾಡಲೇಬೇಕೆಂದು ವಿಶ್ವಸಂಸ್ಥೆೆ ಹಾಗೂ ವಿಶ್ವ ವಾಣಿಜ್ಯ ಸಂಸ್ಥೆೆಯ ಮೇಲೆ ಕೆಲ ವರ್ಷಗಳಿಂದ ಜಗತ್ತಿಿನ ಬೇರೆ ಬೇರೆ ದೇಶಗಳ ವಿಜ್ಞಾಾನಿಗಳು ಒತ್ತಡ ಹೇರುತ್ತಿಿದ್ದಾಾರೆ. ಇಷ್ಟಾಾದರೂ ಸದ್ಯ ನಿಖರವಾಗಿ ಪ್ರತಿ ವರ್ಷ ಜಗತ್ತಿಿನಲ್ಲಿ ಎಲ್ಲೆೆಲ್ಲಿ, ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಮರಳು ತೆಗೆಯುತ್ತಿಿದ್ದಾಾರೆ ಎಂಬುದು ಯಾರಿಗೂ ಗೊತ್ತಿಿಲ್ಲ. ಏಕೆಂದರೆ ಮರಳು ಗಣಿಗಾರಿಕೆ ಹೆಚ್ಚಾಾಗಿ ನಡೆಯುವುದೇ ಅಕ್ರಮವಾಗಿ. ‘ನಮಗೆ ಗೊತ್ತಿಿರುವುದು ಇಷ್ಟೆೆ. ಜನಸಂಖ್ಯೆೆ ಹೆಚ್ಚಿಿದಷ್ಟೂ ನಮಗೆ ಹೆಚ್ಚೆೆಚ್ಚು ಮರಳು ಬೇಕು’ ಎನ್ನುತ್ತಾಾರೆ ಕೊಲೊರಾಡೋ ವಿಶ್ವವಿದ್ಯಾಾಲಯದ ಕರಾವಳಿ ಭೂಗೋಳಶಾಸ್ತ್ರಜ್ಞ ಮೆಟೆ ಬೆಂಡಿಕ್ಸನ್.