Friday, 22nd November 2024

ಸಿಬಿಐ ತನಿಖೆ ಒಪ್ಪಿಗೆ ಹಿಂಪಡೆದ ಮೇಘಾಲಯ

ನವದೆಹಲಿ: ಮೇಘಾಲಯ ರಾಜ್ಯವು ಸಿಬಿಐಗೆ ಒಪ್ಪಿಗೆಯನ್ನು ಹಿಂಪಡೆದಿದ್ದು, ಈ ಹೆಜ್ಜೆ ಇಟ್ಟಿರುವ ಒಂಬತ್ತನೇ ರಾಜ್ಯ ಎನಿಸಿಕೊಂಡಿದೆ.

ಮಿಝೋರಾಂ ಹೊರತುಪಡಿಸಿ, ಸಿಬಿಐಗೆ ಒಪ್ಪಿಗೆಯನ್ನು ಹಿಂತೆಗೆದುಕೊಂಡ ಎಲ್ಲಾ ರಾಜ್ಯಗಳು ವಿರೋಧ ಪಕ್ಷಗಳ ಆಳ್ವಿಕೆಯಲ್ಲಿವೆ.

ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಬಿಜೆಪಿಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿದ್ದರೂ ಈ ಕ್ರಮ ಕೈಗೊಂಡಿದೆ.

ಇದಕ್ಕೂ ಮೊದಲು ಮಿಝೋರಾಂ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಹಾಗೂ ಕೇರಳ ರಾಜ್ಯಗಳು ಕೇಂದ್ರ ತನಿಖಾ ಸಂಸ್ಥೆಗೆ ಒಪ್ಪಿಗೆಯನ್ನು ಹಿಂಪಡೆದಿದ್ದವು. ಒಪ್ಪಿಗೆ ಹಿಂಪಡೆಯುವುದರಿಂದ ರಾಜ್ಯ ಸರಕಾರದ ಅನುಮತಿಯಿಲ್ಲದೆ ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡಲು ಸಿಬಿಐಗೆ ಸಾಧ್ಯವಾಗುವುದಿಲ್ಲ.

2015 ರಲ್ಲಿ ಸಿಬಿಐಗೆ ಒಪ್ಪಿಗೆಯನ್ನು ಹಿಂಪಡೆದ ಮೊದಲ ರಾಜ್ಯ ಮಿಝೋರಾಂ.