Saturday, 23rd November 2024

ಉಕ್ರೇನ್‌ ಬಗ್ಗುತ್ತಿಲ್ಲ; ಅಲ್ಲಿ ದೇಶದ್ರೋಹಿಗಳಿಲ್ಲ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಉಕ್ರೇನ್ ರಷ್ಯಾದ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಇದಕ್ಕೆ ಕಾರಣ ಅಲ್ಲಿನ ನಾಗರಿಕಲ್ಲಿರುವ ದೇಶಪ್ರೇಮ! ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಕದನಕ್ಕಿಳಿದು ಧೈರ್ಯ ನೀಡುತ್ತಿರುವುದು ನಿಜಕ್ಕೂ ಮಾದರಿಯೇ.

ರಷ್ಯಾ ಮತ್ತು ಉಕ್ರೇನ್ ನಡುವೆ ಅದೇನು ಒಳ ಜಗಳಗಳಿತ್ತೋ ಅದ್ಯಾವುದೂ ಹೊರ ಜಗತ್ತಿಗೆ ಬೇಕಾಗಿರಲಿಲ್ಲ. ಆದರೆ ಅವರ ನಡುವೆ ಯುದ್ಧ ಆರಂಭವಾದಾಗ ಅನಿಸಿದ್ದು ದೈತ್ಯದೇಶ ರಷ್ಯಾಗೆ ಉಕ್ರೇನ್ ಯಾವ ರೀತಿಯಿಂದಲೂ ಸಮವಲ್ಲ. ಅಸಲಿಗೆ ರಷ್ಯಾವನ್ನು ಉಕ್ರೇನ್ ಯುದ್ಧದಲ್ಲಿ ಎದುರಿಸುವುದೇ ಅವೈಜ್ಞಾನಿಕ.

ಎದುರಿಸಿದರೂ ರಷ್ಯಾ ಉಕ್ರೇನ್‌ನ್ನು ನುಂಗಿ ಹಾಕಲು ಕೇವಲ ಎರಡು ದಿನಗಳಷ್ಟೇ ಸಾಕು ಎಂಬ ಅಭಿಪ್ರಾಯ ಎಲ್ಲರಲ್ಲಿತ್ತು. ಈ ಯುದ್ಧ ದಿಂದ ಭಾರತದಲ್ಲಿ ತೈಲ ಬೆಲೆ ಹಾಗೂ ಬಿಯರ್ ಬೆಲೆ ಹೆಚ್ಚಾಗಬಹುದು ಎನ್ನುವ ತಿಳವಳಿಕೆ ಇತ್ತು. ಆದರೆ ಯುದ್ಧ, ಈಗ ಹತ್ತನೇ ದಿನಕ್ಕೆ ಕಾಲಿಟ್ಟು ರಷ್ಯಾದ ಬಲಾಢ್ಯತೆಗೆ ಉಕ್ರೇನ್ ಸವಾಲೆಸೆದು ನಿಂತಿದೆ. ಈ ಮಟ್ಟದ ತಾಕತ್ತು ಉಕ್ರೇನ್‌ಗೆ ಸಿದ್ಧಿಸಲು ಕಾರಣ ನೋಡ ಹೊರಟರೆ ಆ ಪುಟ್ಟ ದೇಶದ ನಾಗರಿಕರ ದೇಶಾಭಿಮಾನ. ಜತೆಗೆ ಆ ದೇಶದಲ್ಲಿ ದರಿದ್ರ ರಾಜಕಾರಣ ಇಲ್ಲ. ಎಲ್ಲಕ್ಕಿಂತ ಅಪಾಯಕಾರಿ ಯಾದ ಒಳಶತ್ರುಗಳು ಮತ್ತು ದೇಶದ್ರೋಹಿಗಳು ಇಲ್ಲ.

ಮೊನ್ನೆ ಮೊನ್ನೆ ನಮ್ಮ ಹಾವೇರಿಯ ಯುವಕ ನವೀನ್ ಸತ್ತಾಗ ಅವರ ತಂದೆ ಶೇಖರಗೌಡರ್ ಮಾಧ್ಯಮದಲ್ಲಿ ಒಂದು ವಿಷಾದಕರ ಹೇಳಿಕೆ ನೀಡಿದರು. ‘ನನ್ನ ಮಗ ಅಷ್ಟೊಂದು ಅಂಕ ಗಳಿಸಿದರೂ ಭಾರತದಲ್ಲಿ ಮೆಡಿಕಲ್ ಸೀಟು ಸಿಗಲಿಲ್ಲ, ವೈದ್ಯನಾಗಬೇಕೆಂಬ ಆತನ ಕನಸಿ ಗಾಗಿ ಉಕ್ರೇನ್‌ಗೆ ಕಳುಹಿಸಬೇಕಾಯಿತು. ಅದಕ್ಕೆ ಕಾರಣ ಇಲ್ಲಿನ ಮೀಸಲು ವ್ಯವಸ್ಥೆ. ಕಡಿಮೆ ಅಂಕಗಳಿಸಿದರೂ ಮೀಸಲು ಪದ್ಧತಿ ಯಿಂದಾಗಿ ಅವಕಾಶ ಲಭಿಸುತ್ತದೆ. ಆದರೆ ನನ್ನ ಮಗನಿಗೆ ಈ ದೇಶದಲ್ಲಿ ಅವಕಾಶ ಸಿಗಲಿಲ್ಲ, ಸರಕಾರ ಈಗಲಾದರೂ ಈ ಶಿಕ್ಷಣ ಪದ್ಧತಿ ಬದಲಿಸಲಿ, ಬೇರೆ ಮಕ್ಕಳಿಗೆ ಈ ಪರಿಸ್ಥಿತಿ ಬಾರದಂತೆ ತಡೆಯಿರಿ’ ಎಂದು ನವೀನ್ ತಾಯಿಯೂ ಗೊಳಾಡಿದರು.

ಶೇಖರಗೌಡರ್ ಎನೋ ಪ್ರಜ್ಞಾವಂತರು, ವಿದ್ಯಾವಂತರು. ದೇಶದ ವ್ಯವಸ್ಥೆ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ನಮ್ಮ ದೇಶದ
ಬಹು ತೇಕ ಮುಗ್ಧರಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ಒಂದು ರೀತಿಯ ನಿರಾಸೆ ಮನೆ ಮಾಡಿತ್ತು. ‘ಕರ್ಮ, ನಮ್ಮ ದೇಶದ ಇಂಥ ಕುಲಗೆಟ್ಟ ಗುಲಾಮಗಿರಿ ರಾಜಕಾರಣಿಗಳಿಗಿಂತ ಬ್ರಿಟಿಷರ ಆಡಳಿತವಿದ್ದಿದ್ದರೇ ಎಷ್ಟೋ ಚೆನ್ನಾಗಿತ್ತು’ ಎಂದು ಬಹುತೇಕರು ತಮ್ಮ ಅಸಹಾಯಕತೆ ಹೊರಹಾಕುತ್ತಿದ್ದರು.

ಥೇಟು ಅಂಥದ್ದೇ ಅಭಿಪ್ರಾಯ ಉಕ್ರೇನ್ ಪ್ರಜೆಗಳಲ್ಲೂ ಹುಟ್ಟಿ ‘ರಷ್ಯಾಕ್ಕೆ ಸರಿಸಾಟಿ ಇಲ್ಲದೇ ಯುದ್ಧ ಸಾರಿರುವ ನಮ್ಮ ಅಯೋಗ್ಯ ಅಧ್ಯಕ್ಷನಿ ಗಿಂತ ಅಪಾರ ಸಾಮರ್ಥ್ಯವುಳ್ಳ ರಷ್ಯಾವೇ ನಮ್ಮನ್ನು ಗೆದ್ದು ಆಡಳಿತ ನಡೆಸಲಿ. ನಮಗೆ ದೇಶಕ್ಕಿಂತ ನಮ್ಮ ಬದುಕೇ ಮುಖ್ಯ’ ಎಂಬ ಅಂತಿಮ ನಿರ್ಧಾರಕ್ಕೆ ಬಂದು ಬಿಡಬಹುದೆಂಬ ಅಂದಾಜು ಎಲ್ಲ ದೇಶಗಳಿಗಿತ್ತು. ಆದರೆ ಆ ದೇಶದಲ್ಲಿ ನಮ್ಮಲ್ಲಿರುವಂಥ ಅವಕಾಶ ವಾದಿ. ಗುಲಾಮಿಗಿರಿ ಮನಃಸ್ಥಿತಿಯ ರಾಜಕಾರಣಿಗಳಿಲ್ಲ.

ಹೀಗಾಗಿ ಉಕ್ರೇನ್ ರಷ್ಯಾವನ್ನು ಸಮರ್ಥವಾಗಿ ಎದುರಿಸುತ್ತಿದೆ. ಇದು ಎಷ್ಟರ ಮಟ್ಟಿಗಿದೆಯೆಂದರೆ ಮುಖ ಭಂಗಕ್ಕೊಳಗಾಗಿರುವ ರಷ್ಯಾ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಈಗ ಕೊನೆಯದಾಗಿ ಅಣ್ವಸವನ್ನೂ ಪ್ರಯೋಗಿಸಬೇಕಾದ ಅನಿವಾರ್ಯಕ್ಕೆ ಬಂದಿದೆ. ಇದಕ್ಕೆಲ್ಲ ಕಾರಣ ಉಕ್ರೇನ್ ನಾಗರಿಕರಲ್ಲಿರುವ ದೇಶಾಭಿಮಾನದ ಕಿಚ್ಚು. ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಾಗರಿಕರಿಗೆ ಧೈರ್ಯ ಹೇಳುತ್ತ, ‘ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಲ್ಲೂ ಓಡಿಹೋಗುವುದಿಲ್ಲ’ ಎಂದು ಭರವಸೆ ಮೂಡಿಸಿದ್ದಾನೆ.

ಇನ್ನು ನಾಗರಿಕರೂ ಹೇಡಿಗಳಲ್ಲ. ರಷ್ಯಾ ಪಡೆಗಳು ಆಗಮಿಸುವ ರಸ್ತೆಗಳನ್ನು ಮುಚ್ಚಿ ನೇರ ಅವರನ್ನು ಎದುರಿಸುತ್ತಿದ್ದಾರೆ. ರಷ್ಯಾದ ಸೈನಿಕರಲ್ಲದೆ ಯುದ್ಧ ಟ್ಯಾಂಕ್ ಗಳು, ಯುದ್ಧ ವಾಹನಗಳ ಮೇಲೆ ಸಾಮಾನ್ಯ ನಾಗರಿಕನೂ ದಾಳಿ ಮಾಡಿ ಹಿಮ್ಮೆಟ್ಟಿಸಿರುವುದೂ ವರದಿಯಾಗಿದೆ. ಅಲ್ಲಿನ ಸ್ವಯಂ ಸೇವಕರು ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾಳೆಗೆ ತಿನ್ನಲು ಆಹಾರವೂ ಸಿಗುವುದಿಲ್ಲವೆಂದು ತಿಳಿ ದಿದ್ದರೂ ಸ್ವಯಂ ಪ್ರೇರಿತರಾಗಿ ಪೆಟ್ರೋಲ್ ಬಾಂಬುಗಳನ್ನು, ಮದ್ದುಗುಂಡುಗಳನ್ನು ತಯಾರಿಸಿ ಬೀದಿಯಲ್ಲಿ ದಂಗೆಯೆದ್ದು ಸಜ್ಜಾಗು ತ್ತಿರುವ ಅವರ ಯುದ್ಧೋನ್ಮಾದವನ್ನು ನೋಡುತ್ತಿದ್ದರೆ ಭಾರತೀಯರಾದ ನಾವುಗಳು ನಾಳೆ ನಮಗೇನಾದರು ಇಂಥ ಪರಿಸ್ಥಿತಿ
ಎದುರಾದರೆ ಹೇಗೆ ಸಜ್ಜಾಗಿ ನಿಲ್ಲಬೇಕೆಂಬುದಕ್ಕೆ ಉದಾಹರಣೆಯಾಗಿದೆ.

ಅಂಥ ಪರಿಸ್ಥಿತಿಯೇನು ನಮಗೆ ಎದುರಾಗುವುದಿಲ್ಲ ಬಿಡಿ, ಆದರೆ ಹೊರಗಿನ ಶತ್ರುಗಳಿಗಿಂತ ಒಳಗಿರುವ ಶತ್ರುಗಳೇ ಹೆಚ್ಚು ಅಪಾಯಕಾರಿ. ಇಂಥವರನ್ನೇ ಬೆಂಬಲಿಸುವ ರಾಜಕಾರಣಿಗಳು ಸಂಘಟನೆಗಳು ಡೋಂಗಿಗಳು, ಹದಿನೈದು ನಿಮಿಷದ ಗಿರಾಕಿಗಳಿಂದಲೇ ನಮ್ಮ ದೇಶಕ್ಕೆ ಹೆಚ್ಚಿನ ಅಪಾಯ ವಿರುವು ದನ್ನು ಈಗಾಗಲೇ ಅರ್ಥೈಸಿಕೊಳ್ಳಲಾರಂಭಿಸಿದ್ದೇವೆ. ಅಪಾರ ದೇಶಭಕ್ತರಾಗಿರುವ ಉಕ್ರೇನಿಗರಲ್ಲಿ ಮಹಿಳೆ ಯೊಬ್ಬಳು ದಾಳಿಗೊಳಗಾದ ತನ್ನ ಮನೆಯೊಳಗೆ ಅಳುತ್ತಾ ರಾಷ್ಟ್ರಗೀತೆಯನ್ನು ಹಾಡುತ್ತಿರುವ ತುಣುಕು ಇಡೀ ಉಕ್ರೇನಿಗರ ರಾಷ್ಟ್ರಭಕ್ತಿ ಯನ್ನು ಪರಿಚಯಿಸುವಂತಿತ್ತು.

ಸಾಮಾನ್ಯವಾಗಿ ಶತ್ರು ಸೈನಿಕರು ಆಯುಧಗ ಳೊಂದಿಗೆ ಜನವಸತಿ ಪ್ರದೇಶದೊಳಗೆ ಪ್ರವೇಶಿಸಿದರೆ ಜನರು ಶರಣಾಗಿ ಅವರ
ಗುಲಾಮಗಿರಿಗೆ ಒಳಪಡುವುದೇ ಹೆಚ್ಚು. ಆದರೆ ನಮ್ಮ ಲೋಕಮಾನ್ಯ ತಿಲಕರು, ನೇತಾಜಿ, ಭಗತ್‌ಸಿಂಗ್, ಅಜಾದ್ ರಿಂದ ಪ್ರೇರಿತರಾಗಿ ದಂಗೆಯೆದ್ದ ಭಾರತೀಯರಂತೆ ಉಕ್ರೇನಿಗರು ತಿರುಗಿ ಬೀಳುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ರಷ್ಯಾದಷ್ಟು ಯುದ್ಧಶಕ್ತಿ ಸಮರೋ ಪಕರಣಗಳು ಇಲ್ಲದಿದ್ದರೂ ದೇಶಾಭಿಮಾನವೇ ಅವರಿಗೆ ಶಸ್ತ್ರವಾಗಿದೆ.

ಹೀಗೆ ಒಂದು ಪುಟ್ಟ ದೇಶ ಪಕ್ಕದ ದೈತ್ಯ ದೇಶದೊಂದಿಗೆ ವೈರತ್ವ ಕಟ್ಟಿಕೊಂಡು ಯುದ್ಧಕ್ಕೆ ನಿಲ್ಲುವಷ್ಟು ಧೈರ್ಯ ತುಂಬಿಕೊಂಡು ನಿಂತ ಉಕ್ರೇನ್ ಅಧ್ಯಕ್ಷನ ಬಗ್ಗೆ ಒಂದಷ್ಟು ಹೇಳಲೇಬೇಕು. ಕೇವಲ 44 ವಯಸ್ಸಿನ ವೊಲೊಡಿಮಿರ್ ಪಕ್ಕಾ ಮೋಜಿನ ಮನುಷ್ಯ. ನಟ, ನೃತ್ಯಗಾರ, ಕಾಮಿಡಿಯನ್ ಆಗಿದ್ದ ಝೆಲೆನ್ಸ್ಕಿ ಸ್ವತಂತ್ರವಾಗಿ ಸ್ಪರ್ಧಿಸಿ ಉಕ್ರೇನ್ ಅಧ್ಯಕ್ಷನಾದಾಗ ಒಬ್ಬ ಜೋಕರ್ ದೇಶ ಆಳುತ್ತಾನೆಯೇ
ಎಂದು ಮೂದಲಿಸಲಾಗಿತ್ತು. ಅದರಂತೆ ರಷ್ಯಾದ ಮೇಲೆ ಯುದ್ಧ ಸಾರಿರುವುದನ್ನು ನೋಡಿ ತನ್ನ ದೇಶವನ್ನು ಎಡವಟ್ಟಿಗೆ ತಂದು ನಿಲ್ಲಿಸಿzನೆ ಎಂಬ ಚರ್ಚೆಗಳು ಆರಂಭಗೊಂಡಿತ್ತು. ಆದರೆ ದೇಶಭಕ್ತ ನಾಗರಿಕರನ್ನು ಕಟ್ಟಿಕೊಂಡು ಯುದ್ಧ ಎದುರಿಸುತ್ತಿರುವುದನ್ನು ನೋಡಿದರೆ ಆತನನ್ನು ಪ್ರಶಂಸಿಸಬೇಕು.

ಇನ್ನು ನಮ್ಮಲ್ಲಿನ ಕೆಲ ರಾಜಕಾರಣಿಗಳ ದುರ್ಬುದ್ದಿಗಳನ್ನು ಗಮನಿಸಿ. ಶಿವಮೊಗ್ಗದಲ್ಲಿ ದೇಶಭಕ್ತನೊಬ್ಬನನ್ನು ಪಾಪಿಗಳು ಕತ್ತರಿಸಿ ಹಾಕಿದರೆ ಮೃತನ ಮನೆಗೆ ತೆರಳಿ ಒಂದು ಸಾಂತ್ವನ ಹೇಳದ ಕೆಲವರು, ಉಕ್ರೇನ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಮರಣ ಹೊಂದಿದ ತಕ್ಷಣವೇ ಕೇಂದ್ರ ಸರಕಾರದ ಬಗ್ಗೆ ರಾಜತಾಂತ್ರಿಕತೆಯ ಬಗ್ಗೆ ಖಾಲಿ ಡಬ್ಬ ಬಾರಿಸುತ್ತಿದ್ದಾರೆ. ನೋಡಿ ಈಗ ಜರ್ಮನಿ, ಅಮೇರಿಕಾ, ಫ್ರಾನ್ಸ್, ಚೀನಾ, ಇಂಗ್ಲೆಂಡ್‌ನಂಥ ದೇಶಗಳೇ ತಮ್ಮ ನಾಗರಿಕರನ್ನು ಉಕ್ರೇನ್‌ನಿಂದ ವಾಪಸ್ಸು ತರಲು ಅಸಡ್ಡೆ ತೋರು ತ್ತಿದೆ. ಆದರೆ ನಮ್ಮ ಭಾರತವು ಉಕ್ರೇನ್ ಸುತ್ತಲೂ ಖುದ್ದು ಕೇಂದ್ರಮಂತ್ರಿಗಳನ್ನು ಉನ್ನತ ಅಧಿಕಾರಿಗಳನ್ನು ನಿಯೋಜಿಸಿ ಈಗಾಗಲೇ ನಾಲ್ಕು ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಕರೆತಂದಿದೆ.

ಆದರೆ ಇಲ್ಲಿನ ವಿರೋಧ ರಾಜಕಾರಣಿಗಳಿಗೆ ಮಾತ್ರ ಇದೆಲ್ಲದರ ಪರಿಜ್ಞಾನವಿಲ್ಲ. ಇಂಥ ಬೆಳವಣೆಗೆಗಳಿಂದ ನಾವುಗಳು ಕಲಿಯಬೇಕಾದ
ಪಾಠಗಳು ಎಚ್ಚೆತ್ತುಕೊಳ್ಳಬೇಕಾದ ವಿಷಯಗಳು ಸಾಕಷ್ಟಿದೆ. ಪಾಕಿಸ್ತಾನ ಬಾಂಗ್ಲಾದೇಶ ಚೀನಾದಂಥ ಅಪಾಯಕಾರಿ ಮಗ್ಗಲು ಮುಳ್ಳು ಗಳೇ ನಮ್ಮ ಸುತ್ತಮುತ್ತಲಿವೆ. ಇವರುಗಳು ತಿರುಗಿ ಬೀಳುವುದು ಅಷ್ಟು ಸುಲಭವಲ್ಲವಾದರೂ, ಒಂದೊಮ್ಮೆ ತಿರುಗಿಬಿದ್ದರೆ ಆ ಸಮಯ ದಲ್ಲಿ ಅವರನ್ನು ಬೆಂಬಲಿಸಿ ನಿಲ್ಲುವ ಅವರಿಗಿಂತ ಅಪಾಯಕಾರಿಯಾದ ಶತ್ರುಗಳು ದೇಶದೊಳಗಿದ್ದಾರೆ.

ದೇಶದಲ್ಲಿನ ಪ್ರವಾಹ ಸುನಾಮಿ ಭೂಕಂಪವಾದರೂ ಯೋಧರಂತೆ ಕಾರ್ಯಾ ನಿರ್ವಹಿಸುವ ದೇಶರಕ್ಷಣೆಯ ಧ್ಯೇಯವುಳ್ಳ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಪೈಶಾಚಿಕ ತಾಲಿಬಾನಿಗಳಿಗೆ ಹೋಲಿಸುವ ಬುದ್ದಿಹೀನರು ನಮ್ಮಲ್ಲಿ ಇರುವುದು ಅಪಾಯಕಾರಿ. ಹಾಗೆಯೇ ದೇಶವನ್ನು ತುಕಡೇ ಮಾಡುತ್ತೇನೆಂದು, ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರನ್ನು ಬೆಂಬಲಿಸುವ ಸಂಖ್ಯೆ ದೇಶದಲ್ಲಿ ಹೆಚ್ಚಿದೆ.
ಕೇವಲ ನಾಲ್ಕುವರೆ ಕೋಟಿ ಜನಸಂಖ್ಯೆಯ ಉಕ್ರೇನ್‌ಗೆ ಈ ಮಟ್ಟದ ಧೈರ್ಯ ಸ್ವಾಭಿಮಾನ ಇರಬೇಕಾದರೆ ಪಂಚಭೂತದಷ್ಟೇ ಸನಾತನ ವಾದ ಹಿಂದೂ ಧರ್ಮದ ಮೇಲೆ ನಿರಂತರ ದಂಡೆತ್ತಿ ದಾಳಿಮಾಡಿದರೂ ಎಲ್ಲವನ್ನೂ ಎದುರಿಸಿ ಸಹಿಸಿಕೊಂಡು ಧರ್ಮಾಕ್ರಮಣ ಮಾಡಿದ ಎರಡೂ ಮತಾಂಧ ಧರ್ಮಗಳಿಗೆ ನೆಲೆಯನ್ನು ಬೆಳೆಯನ್ನೂ ನೀಡಿದ್ದಲ್ಲದೇ ನಮ್ಮ ಭೂಮಿಯನ್ನು ಹರಿದು ಎರಡು ದೇಶಗಳನ್ನು ಸೃಷ್ಠಿಸ ಲಾಗಿದೆ.

ಈಗಲೂ ನಮ್ಮೊಳಗಿನ ಅಪಾಯಕಾರಿ ಕೊಳಕು ಮಂಡಲಗಳಿಗೆ ಹಾಲೆರೆದು ಅವುಗಳನ್ನು ಅಂಡಿನ ಮೇಲಿನ ಕುರದಂತೆ ಸಹಿಸಿಕೊಂಡು ಬಂದಿರುವ ನೂರಾನಲವತ್ತು ಕೋಟಿಯಷ್ಟಿರುವ ಭಾರತೀಯರಾದ ನಮಗೆಷ್ಟು ಇರಬೇಕು ಹೇಳಿ?. ಯುಕ್ರೇ ನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಬ್ಬ ಜೋಕರ್ ಕಲಾವಿದನಾಗಿ ಬಂದು ರಾಜಕಾರಣಿಯಾದರೂ ಇಂದು ಇಡೀ ವಿಶ್ವ ಆತನ ದಿಟ್ಟತನಕ್ಕೆ ದಂಗಾಗಿದೆ. ಆದರೆ ನಮ್ಮ ದೇಶದಲ್ಲಿ ವಂಶಪರಂಪರೆಯ ರಾಜಕಾರಣಿಯಾದರೂ ಸಾರ್ವಜನಿಕವಾಗಿ ದೊಡ್ಡ ಜೋಕರ್ ಆಗಿರುವವರು ಈ ದೇಶವನ್ನು ಆಳುತ್ತೇನೆಂದು ಅಲೆಯುತ್ತಿದ್ದಾರೆ. ಇಂಥವರ ಕೈಗೇನಾದರೂ ಅಧಿಕಾರ ನೀಡಿದರೇ ದೇಶದ ಪರಿಸ್ಥಿತಿ ಏನಾಗಬಹುದು ನೀವೇ ಊಹಿಸಿಕೊಳ್ಳಿ.

ಆದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ನಮಗೆ ಸಂವಿಧಾನ ಮತದಾನವೆಂಬ ಅತ್ಯಮೂಲ್ಯವಾದ ದಿವ್ಯಾಸ್ತ್ರ ನೀಡಿದೆ. ಅದನ್ನು ಆಮಿಷ ಗಳಿಗೆ, ಜಾತಿ ಪ್ರೀತಿಗಾಗಿ, ಗುಲಾಮಗಿರಿಗೆ ಬಳಸದೆ ದೇಶವನ್ನು ಬಲಹೀನಗೊಳಸದೆ, ಬಲಿಷ್ಠಗೊಳಿಸುವ, ಸನಾತನ ಪರಂಪರೆಯ ನ್ನು ದೇಶದ ಗೌರವ ಘನತೆ ಸಾರ್ವಭೌಮತೆ ಸಂವಿಧಾನವನ್ನು ಕಾಪಾಡುವ ಯೋಗ್ಯ ವ್ಯಕ್ತಿಗೆ ಮತದಾನ ಮಾಡಬೇಕಾದ ಗುರುತರ ಹೊಣೆಗಾರಿಕೆ ಪ್ರತಿ ನಾಗರಿಕರನ ಮೇಲಿದೆ. ಸಧ್ಯಕ್ಕೆ ನಮ್ಮ ರಾಜಕಾರಣಿಗಳು ಮೃತ ನವೀನ್ ತಂದೆತಾಯಿಗಳು ಹೇಳಿದ ಮಾತನ್ನು ಕೇಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಎಲ್ಲದಕ್ಕೂ ಜಾತಿ ಮೀಸಲಾತಿ ಎಂಬುದನ್ನು ಬಿಟ್ಟು ಸಮರ್ಥರಿಗೆ ಯೋಗ್ಯರಿಗೆ ಅವಕಾಶ ಮಾಡಿಕೊಡುವ ಪ್ರಯತ್ನಕ್ಕೆ ಕೈಹಾಕಬೇಕಿದೆ.