Thursday, 19th September 2024

ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಸದಸ್ಯರು…

ಬೇ ಓವಲ್:‌ ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ನ ಭಾನುವಾರ ಇಂದು ನಡೆದ ನಾಲ್ಕನೇ ಪಂದ್ಯಾಟ ದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿತು.

ಇದೀಗ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮಹ್ರೂಫ್‌ ರ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಸದಸ್ಯರು ಕಾಲಕಳೆಯುತ್ತಿರುವುದು ಹಾಗೂ ಸೆಲ್ಫೀ ಕ್ಲಿಕ್ಕಿಸುತ್ತಿರುವ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಈ ಫೋಟೊವನ್ನು ʼಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್‌ ಸ್ಫೂರ್ತಿಯ ಕುರಿತು ಮೊದಲ ಪಾಠ ಕಲಿಯುತ್ತಿರುವ ಪುಟ್ಟ ಫಾತಿಮಾ” ಎಂದು ಟ್ವೀಟ್‌ ಮಾಡಿದೆ. ಪ್ರಮುಖ ಆಟಗಾರ್ತಿ ಏಕ್ತಾ ಬಿಶ್ತ್‌ ಪೆವಿಲಿಯನ್‌ ನಲ್ಲಿ ಮಗುವಿನೊಂದಿಗೆ ಆಟವಾಡುವುದು ಹಾಗೂ ಇನ್ನಿತರ ಆಟಗಾ ರ್ತಿಯರು ಮಗುವಿನೊಂದಿಗೆ ಸಮಯ ಕಳೆಯುತ್ತಿರುವ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿವೆ.