Saturday, 23rd November 2024

ಉಕ್ರೇನ್‌ನ ಅರೆಸೈನಿಕ ಪಡೆಯಲ್ಲಿ ತಮಿಳುನಾಡಿನ ವಿದ್ಯಾರ್ಥಿ

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ.

ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರನ್ನು ವಿಚಾರಿಸಿದ್ದು, ಈ ವೇಳೆ ಸಾಯಿನಿಕೇಶ್ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರೂ 2 ಬಾರಿ ತಿರಸ್ಕರಿಸಲಾಗಿತ್ತು. 2018 ರಲ್ಲಿ, ಖಾರ್ಕಿವ್‌ನಲ್ಲಿ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಸಾಯಿನಿಕೇಶ್ ಉಕ್ರೇನ್‌ಗೆ ತೆರಳಿದ್ದರು. ಜುಲೈ 2022 ರೊಳಗೆ ಕೋರ್ಸ್ ಅನ್ನು ಪೂರ್ಣಗೊಳಿಸಬೇಕಿತ್ತು.

ಉಕ್ರೇನ್‌ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ, ಅವರ ಕುಟುಂಬವು ರಾಯಭಾರ ಕಚೇರಿಯ ಸಹಾಯ ಕೋರಿದ ನಂತರ, ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿರುವುದಾಗಿ ಸಾಯಿನಿಕೇಶ್ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾಯಿನಿಕೇಶ್ ಪೋಷಕರು ಆತ ಮಿಲಿಟರಿ ಮತ್ತು ಸಶಸ್ತ್ರ ತರಬೇತಿಯ ಬಗ್ಗೆ ಉತ್ಸಾಹವನ್ನು ಹೊಂದಿದ್ದ ಎಂಬ ಅಂಶಗಳನ್ನು ಗುಪ್ತಚರ ದಳಗಳಿಗೆ ತಿಳಿಸಿದ್ದರು. ಭಾರತೀಯ ಮಿಲಿಟರಿ ಮತ್ತು ಅಧಿಕಾರಿಗಳ ಛಾಯಾಚಿತ್ರಗಳಿಂದ ತುಂಬಿದ ತನ್ನ ಕೊಠಡಿ ಯನ್ನು ಕೂಡ ತೋರಿಸಿದ್ದರು.

ವಿದೇಶಾಂಗ ಇಲಾಖೆಯ ಮೂಲಗಳ ಪ್ರಕಾರ 21 ವರ್ಷದ ತಮಿಳುನಾಡು ಯುವಕ ಸಾಯಿನಿಕೇಶ್ ಸ್ವಯಂಸೇವಕರನ್ನು ಒಳ ಗೊಂಡ ಜಾರ್ಜಿಯನ್ ನ್ಯಾಷನಲ್ ಲೀಜನ್ ಅರೆಸೇನಾ ಘಟಕದಲ್ಲಿ ಉಕ್ರೇನ್ ಪರ ರಷ್ಯಾ ವಿರುದ್ಧ ಹೋರಾಡುತ್ತಿದ್ದಾನೆ ಎನ್ನ ಲಾಗಿದೆ.