Thursday, 12th December 2024

ಲವ್- ಅಫೇರ್- ದೋಖಾ ಪ್ರಕರಣಗಳ ಹೆಚ್ಚಳ ಆತಂಕ

ಅವಲೋಕನ

ಎಲ್.ಪಿ. ಕುಲಕರ್ಣಿ, ಬಾದಾಮಿ

 ಕರ್ನಾಟಕದಲ್ಲೂ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಹತ್ಯೆೆಗಳು ಗಣನೀಯ ಸಂಖ್ಯೆೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಕರ್ನಾಟಕ 7ನೇ ಸ್ಥಾಾನದಲ್ಲಿದೆ.

ಪತ್ರಿಿಕೆಯಲ್ಲಿ ಇತ್ತೀಚೆಗೆ ಒಂದು ಸುದ್ದಿ ಓದಿದೆ. ಆತ ತಾರುಣ್ಯಾಾವಸ್ಥೆೆಯಲ್ಲಿರುವ ಸ್ಪೂರದ್ರೂಪಿ ಯುವಕ. ಬಡತನದಲ್ಲಿದ್ದರೂ ತಾನು ಪ್ರೀತಿಸಿದ ಯುವತಿಯನ್ನು ಅಲ್ಲಿ ಇಲ್ಲಿ ದುಡಿದು ನರ್ಸಿಂಗ್ ಓದಿಸುತ್ತಿಿದ್ದ. ಆದರೆ ಕೆಲವು ದಿನಗಳ ನಂತರ ಇವನು ಅವಳಿಗೆ ಕರೆಮಾಡಿದಾಗ ಮೊಬೈಲ್ ಹಲವಾರು ಗಂಟೆ ಬ್ಯೂಸಿ ಬರ್ತಿತ್ತು. ಇದು ಹೀಗೆ ಮುಂದುವರೆದಿತ್ತು. ಇವಾಗ ಅವಳಿಗೆ ಇನ್ನೊೊಬ್ಬ ಲವರ್ ಸಿಕ್ಕಿಿದ್ದರಿಂದ ಈತನನ್ನು ತಿರಸ್ಕರಿಸುತ್ತಿಿದ್ದಳು. ಈ ವಿಷಯ ಅವಳ ಮೊಬೈಲ್ ಕಾಲ್ ರೆಕಾರ್ಡ್ ಪಟ್ಟಿಿಯನ್ನು ಹುಡುಕುತ್ತಿಿರುವಾಗ ಆ ಬೇರೊಬ್ಬ ಯುವಕನ ಮೊಬೈಲ್ ಸಂಖ್ಯೆೆ ಈತನಿಗೆ ಸಿಕ್ಕಿಿದೆ. ಎಷ್ಟೇ ಬಾರಿ ತಿಳುವಳಿಕೆ ಹೇಳಿದರೂ ಇವಳು ಆ ಮತ್ತೊೊಬ್ಬನ ಸಹವಾಸವನ್ನು ಬಿಟ್ಟಿಿಲ್ಲ. ಇದರಿಂದ ಮನನೊಂದ ಯುವಕ ಡೆತ್ ನೋಟ್‌ನಲ್ಲಿ ಸವಿವರವಾಗಿ ನಡೆದ ಎಲ್ಲಾ ಘಟನೆಗಳನ್ನು ಬರೆದು ಕೊನೆಯಲ್ಲಿ ಅವಳಿಗೆ ಶಿಕ್ಷೆಯಾಗಲಿ, ನನ್ನಂತೆ ಮತ್ತಾಾರಿಗೂ ಅವಳು ಮೋಸ ಮಾಡೋದು ಬೇಡ ಎಂದು ಅಂಗಲಾಚಿ ಬರೆದು ನೇಣಿಗೆ ಶರಣಾಗಿದ್ದಾನೆ.

ಇನ್ನೊೊಂದು ಘಟನೆಯಲ್ಲಿ ಎರಡು ಮುದ್ದಾದ ಮಕ್ಕಳಿಗೆ ಜನ್ಮಕೊಟ್ಟು ಗೃಹಿಣಿಯಾಗಿದ್ದ ಅವಳೊಬ್ಬಳು ಪಕ್ಕದ ಮನೆಯಲ್ಲಿ ಬಾಡಿಗೆ ಇರುವ 20 ವರ್ಷದ ಯುವಕ ಪ್ರೇಮಪಾಶದಲ್ಲಿ ಬಿದ್ದು, ಗಂಡ ಮಕ್ಕಳನ್ನು ಬಿಟ್ಟು ಆತನೊಂದಿಗೆ ಓಡಿ ಹೋಗಿದ್ದಾಳೆ. ಇತ್ತೀಚೆಗೆ ಇಂತಹ ಲವ್- ಅಫೇರ್- ದೋಖಾದಂತಹ ಅಪರಾಧಗಳೇ ಹೆಚ್ಚಿಿನ ಪ್ರಮಾಣದಲ್ಲಿ ನಡೆಯುತ್ತಿಿವೆ.

ಮನುಷ್ಯ ಸಂಘ ಜೀವಿ. ಆತ ಒಬ್ಬಂಟಿಯಾಗಿ ಇರಲಾರ. ಅವನಿಗೆ ಹೆಂಡತಿ, ಗಂಡ, ಮಕ್ಕಳು, ತಂದೆ, ತಾಯಿ, ಮುಂತಾದ ಬಾಂಧವ್ಯಗಳು ಅವಶ್ಯಕವಾಗಿ ಬೇಕು. ಆ ಸಂಬಂಧಗಳ ಜತೆಗೆ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಾಾನೆ. ಜೀವನದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳು ಎದುರಾದರೂ ಅವುಗಳನ್ನು ಸವಾಲೆಂದು ತಿಳಿದು ಎದೆಗೊಟ್ಟು ಎದುರಿಸಿ ಬಾಂಧವ್ಯಗಳ ನೆಲೆಯಲ್ಲಿ ಒಂದು ಸುಂದರ ಸುಖಮಯ ಬದುಕನ್ನು ಕಟ್ಟಿಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಿಯ ಸದಾಶಯ. ಒಬ್ಬರ ತೊಂದರೆಯಲ್ಲಿ ಮತ್ತೊೊಬ್ಬರು ಭಾಗಿಯಾಗಿ, ಅವರ ಕಷ್ಟದಲ್ಲಿ ಪಾಲ್ಗೊೊಂಡು ಸಾಂತ್ವನದ ನುಡಿಗಳ ಜತೆಗೆ ಕೈಲಾದಷ್ಟು ಸಹಾಯ ಮಾಡಿ ಬದುಕಿನ ಬಂಡಿಯನ್ನು ಮುಂದಕ್ಕೆೆ ತೆಗೆದುಕೊಂಡು ಹೋಗಬೇಕು. ಇದಕ್ಕೆೆ ಪೂರಕವಾದ ವಾತಾವರಣವನ್ನು ನಮ್ಮ ಹಿರಿಯರು ನಿರ್ಮಿಸಿಕೊಟ್ಟಿಿದ್ದಾರೆ. ಅಂದರೆ, ಬದುಕು ಹಸನಾಗಲು ಅಷ್ಟೊೊಂದು ಜೀವನ ಮೌಲ್ಯಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಆದರೆ ಈಗಾಗುತ್ತಿಿರುವುದೇನು? ಹಲವರ ಏಳಿಗೆಯನ್ನು ಸಹಿಸದ, ಸಣ್ಣಪುಟ್ಟ ಸೋಲಿಗೂ ಕುಗ್ಗಿಿ ಹೋಗುವ ಕೆಲವು ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ಪೈಶಾಚಿಕವಾಗಿ ನಡೆದುಕೊಳ್ಳುತ್ತಿಿರುವುದು ಮಾತ್ರ ಎಲ್ಲರಲ್ಲೂ ಆತಂಕ ಸೃಷ್ಟಿಿಸಿದೆ.

ದೇಶದಲ್ಲಿ ವಿವಿಧ ವ್ಯಾಾಜ್ಯ, ದ್ವೇಷ ಮತ್ತು ಪ್ರೀತಿಗೆ ಸಂಬಂಧಿಸಿದ ಅನೈತಿಕ ಸಂಬಂಧವೂ ಸೇರಿದಂತಹ ಕಾರಣಗಳಿಗೆ ನಡೆಯುವ ಕೊಲೆಗಳ ಸಂಖ್ಯೆೆಯಲ್ಲಿ ಏರಿಕೆಯಾಗುತ್ತಿಿದೆ. ಕೊಲೆಗಳ ಹಿಂದಿನ ಪ್ರಚೋದನೆಯಲ್ಲಿ ಈ ಮೂರೂ ಕಾರಣಗಳು ಕ್ರಮವಾಗಿ ಮೊದಲ ಮೂರು ಸ್ಥಾಾನ ಪಡೆದಿವೆ. ರಾಷ್ಟ್ರೀಯ ಆಪರಾಧ ದಾಖಲೆಗಳ ಬ್ಯೂರೊ ಬಿಡುಗಡೆ ಮಾಡಿರುವ, ‘ಭಾರತದಲ್ಲಿ ಅಪರಾಧ-2017’ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದೆ. 2017ರಲ್ಲಿ ಭೂ, ಹಣಕಾಸು ಸಂಬಂಧಿ ವ್ಯಾಾಜ್ಯಗಳ ಕಾರಣಕ್ಕೆೆ 7,898 ಕೊಲೆಗಳು ನಡೆದಿವೆ. 2015ಕ್ಕೆೆ ಹೋಲಿಸಿದರೆ ಇಂತಹ ಹತ್ಯೆೆಗಳ ಸಂಖ್ಯೆೆ 2017ರಲ್ಲಿ ಶೇ.55ರಷ್ಟು ಏರಿಕೆಯಾಗಿದೆ.

2017ರಲ್ಲಿ ದ್ವೇಷದ ಕಾರಣಕ್ಕೆೆ 4,660 ಕೊಲೆಗಳು ನಡೆದಿವೆ. 2015ಕ್ಕೆೆ ಹೋಲಿಸಿದರೆ ಇಂತಹ ಹತ್ಯೆೆಗಳ ಸಂಖ್ಯೆೆ 2017ರಲ್ಲಿ ಶೇ.1ರಷ್ಟು ಇಳಿಕೆ ಕಂಡಿದೆ. 2017ರಲ್ಲಿ ಪ್ರೀತಿ ಮತ್ತು ಅನೈತಿಕ ಸಂಬಂಧಗಳ ಕಾರಣಕ್ಕೆೆ ದೇಶದಾದ್ಯಂತ 3,128 ಕೊಲೆಗಳು ನಡೆದಿವೆ. 2015ಕ್ಕೆೆ ಹೋಲಿಸಿದರೆ ಇಂತಹ ಹತ್ಯೆೆಗಳ ಸಂಖ್ಯೆೆ 2017ರಲ್ಲಿ ಶೇ 5.8ರಷ್ಟು ಏರಿಕೆಯಾಗಿದ್ದು ಮಾತ್ರ ಕಳವಳ ಮೂಡಿಸಿದೆ. 2000ಕ್ಕೆೆ ಹೋಲಿಸಿದರೆ, 2017ರಲ್ಲಿ ಇಂತಹ ಹತ್ಯೆೆಗಳ ಸಂಖ್ಯೆೆಯಲ್ಲಿ ಶೇ.16.5ರಷ್ಟು ಏರಿಕೆಯಾಗಿದೆ. 2000ಕ್ಕೆೆ ಹೋಲಿಸಿದರೆ 2017ರಲ್ಲಿ ಕೊಲೆಗಳ ಪ್ರಮಾಣದಲ್ಲಿ ಶೇ 23.5 ರಷ್ಟು ಇಳಿಕೆಯಾಗಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊ(ಎನ್‌ಸಿಆರ್‌ಬಿ) ವರದಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೊಲೆಗಳು ನಡೆಯುತ್ತಿಿವೆ. ಈ ಪಟ್ಟಿಿಯಲ್ಲಿ ನಮ್ಮ ಕರ್ನಾಟಕ 7ನೇ ಸ್ಥಾಾನದಲ್ಲಿದೆ. ಎನ್‌ಸಿಆರ್‌ಬಿಯು ಕೊಲೆಗೆ ವಿವರಿಸಿರುವ ಕಾರಣಗಳು ಮಾತ್ರ ಎಲ್ಲರಲ್ಲೂ ಆತಂಕ ಹುಟ್ಟಿಿಸಿವೆ. ಆಸ್ತಿಿ ಕಲಹ, ವೈಯಕ್ತಿಿಕ ದ್ವೇಷ, ಪ್ರೀತಿ, ಪ್ರೇಮ ವಿಚಾರಗಳಿಗಾಗಿ ಕೊಲೆಗಳು ನಡೆಯುತ್ತಿಿವೆ. 2001ರಿಂದ 2017ರವರೆಗೆ ವೈಯಕ್ತಿಿಕ ದ್ವೇಷದ ಕೊಲೆಗಳ ಸಂಖ್ಯೆೆ ಶೇ.4.3 , ಆಸ್ತಿಿ ಕಲಹ ಸಂಬಂಧಿ ಹತ್ಯೆೆಗಳು ಶೇ.12 ಇಳಿಕೆಯಾಗಿವೆ. ಮತ್ತೊೊಂದೆಡೆ ಪ್ರೀತಿ-ಪ್ರೇಮಕ್ಕಾಾಗಿ ನಡೆದ ಕೊಲೆಗಳ ಸಂಖ್ಯೆೆ ಶೇ.28ಕ್ಕೆೆ ಏರಿಕೆಯಾಗಿದೆ. ಈ ವೈಯಕ್ತಿಿಕ ದ್ವೇಷಕ್ಕೆೆ 67,774 ಹಾಗೂ ಆಸ್ತಿಿ ಕಲಹಕ್ಕೆೆ 51,554 ಕೊಲೆಗಳು ನಡೆದಿವೆ. ಈ ರೀತಿ ಅಪರಾಧ ಪ್ರಮಾಣಗಳು ಹೆಚ್ಚುತ್ತಿಿರುವ ಮತ್ತು ಚಿಕ್ಕಪುಟ್ಟ ಕಾರಣಗಳಿಗೆ ಕೊಲೆ ಮಾಡುವ ಮಟ್ಟಕ್ಕೆೆ ಹೋಗುತ್ತಿಿರುವ ಮನುಷ್ಯನ ವಿಕೃತ ಮನಸ್ಸಿಿಗೆ ಈ ಅಂಕಿ ಸಂಖ್ಯೆೆಗಳೇ ಸಾಕ್ಷಿ. ಕಾನೂನಾತ್ಮಕವಾಗಿ ಎಷ್ಟೆೆ ಬಿಗಿ ಶಿಕ್ಷೆಗಳನ್ನು ತಂದರೂ ಕೂಡ ಅಪರಾಧಗಳು, ಕುಕೃತ್ಯಗಳು ಮಾತ್ರ ನಿಲ್ಲುತ್ತಿಿಲ್ಲ.

2015ಕ್ಕೆೆ ಹೋಲಿಸಿದರೆ 2017ರಲ್ಲಿ ಮಹಿಳೆಯರ ಮೇಲೆ ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸಲಾದ ಅಪರಾಧ ಕೃತ್ಯಗಳ ಸಂಖ್ಯೆೆಯಲ್ಲಿ ಶೇ.9ರಷ್ಟು ಏರಿಕೆಯಾಗಿದೆ. 2015ರಲ್ಲಿ ದಾಖಲಾದ ಪ್ರಕರಣಗಳು 3.29ಲಕ್ಷ, 2016ರಲ್ಲಿ 3.38 ಲಕ್ಷ ಹಾಗೂ 2017ರಲ್ಲಿ ಈ ಸಂಖ್ಯೆೆ 3.59 ಲಕ್ಷ. ದೇಶದಲ್ಲಿ 2017ರಲ್ಲಿ ಮಹಿಳೆಯ ಮೇಲಿನ ಅತ್ಯಾಾಚಾರದ ಪ್ರಕರಣಗಳ ಸಂಖ್ಯೆೆ 33,658. ಅದರಲ್ಲಿ 23,437 ಪ್ರಕರಣಗಳು ಅತ್ಯಾಾಚಾರ ಸಂತ್ರಸ್ತೆೆಯರು ಮಹಿಳೆಯರಾಗಿದ್ದರೆ, 10,221 ಅತ್ಯಾಾಚಾರ ಸಂತ್ರಸ್ತರು ಬಾಲಕಿಯರು!
ಆಗಾಧವಾಗಿ ಬೆಳೆಯುತ್ತಿಿರುವ ಆಧುನಿಕ ತಂತ್ರಜ್ಞಾನವು ಜಗತ್ತನ್ನು ನಮ್ಮ ಅಂಗೈಯಲ್ಲೇ ಇಳಿಸಿಬಿಟ್ಟಿಿದೆ. ಇತ್ತೀಚೆಗೆ ಹಗಲು ರಾತ್ರಿಿಯನ್ನದೇ ನಿರಂತರವಾಗಿ ಬಳಸುತ್ತಿಿರುವ ವಾಟ್ಸಾಾಪ್, ಫೇಸ್ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಸೈಬರ್ ಕ್ರೈಂ ದರವನ್ನು ಹೆಚ್ಚಿಿಸಿದೆ. ಅದರಲ್ಲಿ ಗಂಡು-ಹೆಣ್ಣುಗಳ ಪ್ರೀತಿ-ಪ್ರೇಮ, ಸಲುಗೆ, ಲೈಂಗಿಕ ತೃಷೆ ತೀರಿಸಿಕೊಂಡು ದೌರ್ಜನ್ಯ ನಡೆಸುವುದು, ಅಕ್ರಮ ಸಂಬಂಧದಂತಹ ಸಮಾಜ ಘಾತುಕ ಚಟುವಟಿಕೆಗೆ ಎಡೆಮಾಡಿಕೊಟ್ಟಿಿದೆ.

ಈಗ ಬಿಡುಗಡೆಗೊಂಡಿರುವ ವರದಿಯ ಪ್ರಕಾರ ಈ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಕೊಲೆ ಅಪರಾಧಗಳೆ ಹೆಚ್ಚಾಾಗುತ್ತಿಿವೆ. ಇಂತಹ ಕೊಲೆಗಳ ಟಾಪ್ ಪಟ್ಟಿಿಯಲ್ಲಿರುವ ಕೆಲವು ರಾಜ್ಯಗಳನ್ನು ಗಮನಿಸಿದಾಗ ಇಂತಹ ಕೊಲೆ ಅಪರಾಧಗಳ ಸಾಲಿನಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾಾನದಲ್ಲಿದೆ. ಆದರೂ 18 ವರ್ಷಗಳಲ್ಲಿ ಇಂತಹ ಹತ್ಯೆೆಗಳ ಸಂಖ್ಯೆೆಯಲ್ಲಿ ಭಾರಿ ಏರಿಳಿತವಾಗಿದೆ. 2015ರಲ್ಲಿ ಅತ್ಯಂತ ಹೆಚ್ಚು ಹತ್ಯೆೆಗಳು ನಡೆದಿವೆ. 2017ರಲ್ಲಿ ಸ್ವಲ್ಪ ಇಳಿಕೆಯಾಗಿದೆ. ಅಂಕಿ ಸಂಖ್ಯೆೆಗಳನ್ನು ವಿಶ್ಲೇಷಿಸಲಾಗಿ ; 2000ನೇ ಸಾಲಿನಲ್ಲಿ 390, 2005ರಲ್ಲಿ 397, 2010ರಲ್ಲಿ 282, 2015ರಲ್ಲಿ 573 ಮತ್ತು 2017ರಲ್ಲಿ 499 ಪ್ರಕರಣಗಳು ಪ್ರೀತಿ ಸಂಬಂಧವಾಗಿ ನಡೆದ ಹತ್ಯೆೆ ಪ್ರಕರಣಗಳಾಗಿದ್ದು, ಇವು ಉತ್ತರ ಪ್ರದೇಶದಲ್ಲಿ ನಡೆದಿವೆ.

ಅವಿಭಜಿತ ಆಂಧ್ರಪ್ರದೇಶದಲ್ಲೂ ಕೂಡ ಈ ಸ್ವರೂಪದ ಹತ್ಯೆೆಗಳ ಸಂಖ್ಯೆೆಯಲ್ಲಿ ಏರಿಳಿತ ಕಂಡು ಬಂದಿದೆ. 2005ರಲ್ಲಿ ಇಂತಹ ಹತ್ಯೆೆಗಳು ಗರಿಷ್ಠ ಸಂಖ್ಯೆೆಯಲ್ಲಿ ನಡೆದಿವೆ. ಆದರೆ, ಆನಂತರದ ವರ್ಷಗಳಲ್ಲಿ ಪ್ರೀತಿ ಸಂಬಂಧದ ಹತ್ಯೆೆಗಳ ಸಂಖ್ಯೆೆ ಇಳಿಕೆಯಾಗಿದೆ. ಆದರೂ, ರಾಜ್ಯದಲ್ಲಿ ನಡೆದ ಹತ್ಯೆೆಗಳಲ್ಲಿ ಅತಿ ಹೆಚ್ಚಿಿನ ಹತ್ಯೆೆಗಳು ಈ ಕಾರಣಕ್ಕೇ ನಡೆದಿವೆ.

2000ರಲ್ಲಿ 335 ಪ್ರಕರಣಗಳು, 2005ರಲ್ಲಿ 416, 2010ರಲ್ಲಿ 375, 2015ರಲ್ಲಿ 340 ಮತ್ತು 2017ರಲ್ಲಿ 310 ಪ್ರೀತಿ ಸಂಬಂಧಿಸಿದ ಹತ್ಯೆೆ ಪ್ರಕರಣಗಳು ನಡೆದಿವೆ. ಇನ್ನು ಬಿಹಾರದಲ್ಲಿ , 2005 ಮತ್ತು 2010ರಲ್ಲಿ ಇಂತಹ ಹತ್ಯೆೆಗಳ ಸಂಖ್ಯೆೆ ಇಳಿಕೆಯಾಗಿದೆ. ಆದರೆ, 2015ರ ನಂತರ ಏರಿಕೆಯಾಗಿದೆ. 2017ರಲ್ಲಿ ಇಂತಹ ಅತಿ ಹೆಚ್ಚಿಿನ ಹತ್ಯೆೆಗಳು ನಡೆದಿವೆ. ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಬಿಹಾರ 2ನೇ ಸ್ಥಾಾನದಲ್ಲಿದೆ. 2000ರಲ್ಲಿ 313, 2005ರಲ್ಲಿ 118, 2010ರಲ್ಲಿ 287, 2015ರಲ್ಲಿ 265, 2017ರಲ್ಲಿ 418 ಈ ಪ್ರೀತಿಗೆ ಸಂಬಂಧಿಸಿದ ಹತ್ಯೆೆಗಳಾಗಿವೆ.

ಪ್ರೇಮಕ್ಕೆೆ ಸಂಬಂಧಿಸಿದ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಮಹಾರಾಷ್ಟ್ರ ಮೂರನೇ ಸ್ಥಾಾನದಲ್ಲಿದೆ. ಇಲ್ಲಿ 2000ರಲ್ಲಿ 341, 2005ರಲ್ಲಿ 269, 2010ರಲ್ಲಿ 236, 2015ರಲ್ಲಿ 277 ಮತ್ತು 2017ರಲ್ಲಿ 345 ಪ್ರಕರಣಗಳು ಪ್ರೀತಿ ಸಂಬಂಧಿ ಹತ್ಯೆೆ ಪ್ರಕರಣಗಳಾಗಿವೆ.

ಕರ್ನಾಟಕದಲ್ಲೂ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಹತ್ಯೆೆಗಳು ಗಣನೀಯ ಸಂಖ್ಯೆೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಕರ್ನಾಟಕ 7 ನೇ ಸ್ಥಾಾನದಲ್ಲಿದೆ. ಗಮನಿಸಿದರೆ 2000ರಲ್ಲಿ 169, 2005ರಲ್ಲಿ 114, 2010ರಲ್ಲಿ 99, 2015ರಲ್ಲಿ 103 ಮತ್ತು 2017ರಲ್ಲಿ 167 ಪ್ರಕರಣಗಳು ಪ್ರೀತಿ ಸಂಬಂಧಿ ಹತ್ಯೆೆ ಪ್ರಕರಣಗಳಾಗಿವೆ. ನಮ್ಮ ರಾಜ್ಯದಲ್ಲಿ 2017ರಲ್ಲಿ ಒಟ್ಟು 1,384 ಕೊಲೆಗಳು ನಡೆದಿದ್ದರೆ ಅದರಲ್ಲಿ ಶೇ.12 ಈ ಪ್ರೀತಿ ಸಂಬಂಧಿ ಹತ್ಯೆೆಗಳು.

ಇನ್ನು ದೇಶದಲ್ಲಿ ನಡೆದ ಕೊಲೆಗೆ ಪ್ರಮುಖ ಕಾರಣಗಳ ಅಂಕಿ ಸಂಖ್ಯೆೆಗಳ ವಿಶ್ಲೇಷಣೆಯನ್ನು ಗಮನಿಸುವುದಾದರೆ, ಸಾಮಾನ್ಯ ವ್ಯಾಾಜ್ಯ ಕ್ಕೆೆ ಸಂಬಂಧಿಸಿದಂತೆ 2000ರಲ್ಲಿ 3,546, 2005ರಲ್ಲಿ 2,810, 2010ರಲ್ಲಿ 3,060, 2015ರಲ್ಲಿ 3,540 ಮತ್ತು 2017ರಲ್ಲಿ 7,898 ಪ್ರಕರಣಗಳು. ದ್ವೇಷಕ್ಕೆೆ ಸಂಬಂಧಿಸಿದಂತೆ 2000ರಲ್ಲಿ 5,412, 2005ರಲ್ಲಿ 3,878, 2010ರಲ್ಲಿ 3,269, 2015ರಲ್ಲಿ 4,624 ಮತ್ತು 2017ರಲ್ಲಿ 4,660 ಪ್ರಕರಣಗಳು ದಾಖಲಾಗಿವೆ.

ಪ್ರೀತಿ-ಪ್ರೇಮದ ಮೋಹಕ್ಕೆೆ ಸಿಲುಕಿ ನಡೆದ ಕೊಲೆ ಪ್ರಕರಣಗಳ ಸಂಖ್ಯೆೆ 2000ರಲ್ಲಿ 2,612, 2005ರಲ್ಲಿ 2,371, 2010ರಲ್ಲಿ 2,365, 2015ರಲ್ಲಿ 2,947 ಮತ್ತು 2017ರಲ್ಲಿ 3,128 ಪ್ರಕರಣಗಳು. ಮರ್ಯಾದೆಗೇಡು ಹತ್ಯೆೆಗಳನ್ನು ಗಮನಿಸುವುದಾದರೆ, 2016ರಲ್ಲಿ 71 ಮತ್ತು 2017ರಲ್ಲಿ 92 ಪ್ರಕರಣಗಳು ಕಂಡು ಬಂದಿವೆ. ಈ ಎರಡು ವರ್ಷಗಳಲ್ಲಿ ಮರ್ಯಾದೆಗೇಡು ಹತ್ಯೆೆಯು ಪ್ರತಿಶತ 22.83 ಏರಿಕೆಯಾಗಿದೆ.

ಒಟ್ಟಾಾರೆ ಕೊಲೆಗಳ ಪ್ರಮಾಣದಲ್ಲಿ ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಮೊದಲ ಐದು ಸ್ಥಾಾನಗಳನ್ನು ಅಲಂಕರಿಸಿದರೆ ಕರ್ನಾಟಕ 7ನೇ ಸ್ಥಾಾನ ಹಾಗೂ ಕೇರಳ ಕೊನೆಯ ಸ್ಥಾಾನದಲ್ಲಿದೆ. ಈ ರೀತಿ ಸಮಾಜದಲ್ಲಿ ಆಗುತ್ತಿಿರುವ ಮಾನವ ಕೊಲೆಗಳಿಗೆ ಮೌಲ್ಯಗಳ ನಾಶ ಹಾಗೂ ಸಂಸ್ಕಾಾರದ ಕೊರತೆ ಎದ್ದು ಕಾಣುತ್ತಿಿದೆ. ‘ನಾನು, ನನ್ನ ಪರಿವಾರ ಮಾತ್ರ ಚೆನ್ನಾಾಗಿರಬೇಕು’ ಎನ್ನುವ ಅತಿಯಾದ ಸ್ವಾಾರ್ಥ ಮನೋಭಾವ, ಎದುರಾದ ಸಮಸ್ಯೆೆಗಳಿಗೆ ಸುಲಭದ ದಾರಿಯಿದ್ದರೂ, ಅತಿರೇಕಕ್ಕೆೆ ಮುಂದಾಗುವ ಅವಿವೇಕ, ಮತ್ತೊೊಬ್ಬರಿಗೆ ಕೇಡು ಮಾಡಿ ಸೇಡು ತೀರಿಸಿಕೊಳ್ಳಬಹುದೆಂಬ ಹುಚ್ಚು ಭ್ರಮೆ ಸೇರಿ ಹಲವು ಕಾರಣಗಳು ಇದರಲ್ಲಿ ಸೇರಿವೆ. ಒಂದು ಉದಾಹರಣೆ ಗಮನಿಸುವುದಾದರೆ; ದಂಡುಪಾಳ್ಯ ಚಲನಚಿತ್ರಗಳ ಸರಣಿಯನ್ನೇ ನೋಡುತ್ತಾಾ ಬಂದಿದ್ದೇವೆ. ಒಂದು ಸರಣಿಯ ಚಲನಚಿತ್ರದಲ್ಲಿನ ಆ ಸನ್ನಿಿವೇಶ ನಮ್ಮನ್ನು ಕಾಡುತ್ತದೆ. ಪೊಲೀಸ್ ಇನ್‌ಸ್‌‌ಪೆಕ್ಟರ್ ಒಬ್ಬರು ದಂಡುಪಾಳ್ಯ ಗ್ಯಾಾಂಗ್‌ನ ಒಬ್ಬನನ್ನು ಥರ್ಡ್ ಗ್ರೇಡ್ ಟ್ರೀಟ್ಮೆೆಂಟ್ ಕೊಡುತ್ತಾಾ ಒದ್ದು ವಿಚಾರಿಸುತ್ತಿಿರುತ್ತಾಾರೆ. ಕೇವಲ ಹತ್ತು ಇಪ್ಪತ್ತು ರುಪಾಯಿಗಳಿಗೆ ಕೊಲೆ ಮಾಡ್ತಿಿರಲ್ಲಾ ನಿಮಗೆ ಹಣದ, ಮನುಷ್ಯರ ಜೀವದ ಬೆಲೆನೇ ಗೊತ್ತಿಿಲ್ವ. ಅದಿರಲಿ ನೀವು ಕೊಲೆ ಮಾಡಿದ ಪ್ರಕರಣಗಳಲ್ಲಿ ಕತ್ತನ್ನು ಕೊಯ್ದು ಕೊಲೆ ಮಾಡಿದ ಘಟನೆಗಳೇ ಹೆಚ್ಚಿಿರುತ್ತವಲ್ಲ ಏಕೆ? ಎಂದು ಕೇಳುತ್ತಾಾನೆ.’ ಅದಕ್ಕವನು ‘ಇಲ್ಲಾ ಸಾಮಿ, ವ್ಯಕ್ತಿಿಯ ಕತ್ತು ಸೀಳುವಾಗ ಆ ಶ್, ಶ್,ಶ್,ಶ್.. ಎಂಬ ಶಬ್ದ ಬರುತ್ತಲ್ಲ ಅದು ಕೆಳೋಕೆ ಬಹಳ ಇಷ್ಟ ಆಗುತ್ತೆೆ’ ಎನ್ನುತ್ತಾಾನೆ. ಇಂತಹ ಮನುಷ್ಯ ರೂಪದ ರಾಕ್ಷಸರೂ ಸಹ ಇದ್ದಾರೆ ಎಂಬುದಕ್ಕೆೆ ಈಗ ವರದಿಯಲ್ಲಿ ಬಿಡುಗಡೆ ಮಾಡಿದ ಅಂಕಿಅಂಶಗಳೇ ಸಾಕ್ಷಿ.

ಆ ಕ್ಷಣದ ಕೋಪದ ಕೈಗೆ ಬುದ್ಧಿಿ ಕೊಟ್ಟು ವಿವೇಕ ಮರೆತು ಕೊಲೆ ಅಥವಾ ಇನ್ನಿಿತರ ಅಪರಾಧ ಮಾಡುವವರು ಆ ಬಳಿಕ ಜೀವನಪೂರ್ತಿ ಜೈಲಿನಲ್ಲೇ ಕಾಲಕಳೆಯಬೇಕಾಗುತ್ತದೆ. ಆಗ ತಾವು ಮಾಡಿದ ಅಪರಾಧದ ಕುರಿತು ಎಷ್ಟೇ ಪ್ರಾಾಯಶ್ಚಿಿತ ಪಟ್ಟರೂ ಯಾವುದೇ ಪ್ರಯೋಜನವಿಲ್ಲ. ಸದ್ಯ, ಇಂಥ ಪೈಶಾಚಿಕ ಮನೋವೃತ್ತಿಿಗೆ ಕಡಿವಾಣ ಹಾಕಬೇಕಿದೆ. ಇದು ಕೇವಲ ಸರಕಾರದ್ದೋ ಅಥವಾ ಕಾನೂನು-ಸುವ್ಯವಸ್ಥೆೆಯನ್ನು ಕಾಪಾಡುವ ಪೊಲೀಸ್ ಇಲಾಖೆಯದ್ದೋ ಹೊಣೆಯಲ್ಲ. ಸಾಮಾಜಿಕ ಸ್ವಾಾಸ್ಥ್ಯ ರಕ್ಷಣೆ ನಮ್ಮೆೆಲ್ಲರ ಹೊಣೆ.