Friday, 22nd November 2024

ಮಾ.11ರಿಂದ ವಿವಾದಿತ ಸ್ಥಳದಲ್ಲಿ ಆರ್‌ಎಸ್‌ಎಸ್‌ ಸಮಾವೇಶ

ಅಹಮದಾಬಾದ್: ‘ಶ್ರೀ ನಿಷ್ಕಕಳಂಕಿ ನಾರಾಯಣತೀರ್ಥ ಧಾಮ ಪ್ರೇರಣಾತೀರ್ಥ’ದಲ್ಲಿ ಆರ್‌ಎಸ್‌ಎಸ್‌ನ ಮೂರು ದಿನಗಳ ವಾರ್ಷಿಕ ಸಮಾವೇಶ ಮಾ.11ರಿಂದ ಆರಂಭಗೊಳ್ಳಲಿದೆ. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಆದರೆ, ಈ ಸ್ಥಳದಲ್ಲಿ 14ನೇ ಶತಮಾನದ ಸೂಫಿ ಸಂತ ಇಮಾಮ್‌ ಶಾ ಬಾವಾ ಅವರ ಸಮಾಧಿ ಇದೆ. ಇದು ವಿವಾದಿತ ಸ್ಥಳ ವಾಗಿದ್ದು, ಇದರ ಮಾಲೀಕತ್ವಕ್ಕಾಗಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಕಾನೂನು ಹೋರಾಟವೂ ನಡೆಯುತ್ತಿದೆ.

ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಹೆಸರಾಗಿರುವ ಈ ಸ್ಥಳದ ಮೇಲ್ವಿಚಾರಣೆಗಾಗಿ ‘ಇಮಾಮ್‌ಶಾ ಬಾವಾ ಸಂಸ್ಥಾ ಟ್ರಸ್ಟ್‌’ ರಚಿಸ ಲಾಗಿದೆ. ಹಿಂದೂ ಅನುಯಾಯಿಗಳನ್ನು ‘ಸತ್ಪಂಧೀಯರು’ ಎಂದು ಹಾಗೂ ಮುಸ್ಲಿಂ ಅನುಯಾಯಿಗಳನ್ನು ‘ಸೈಯದ್’ ಎಂದು ಕರೆಯಲಾಗುತ್ತಿದೆ.