ಚೆನ್ನೈ: ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ಎನ್.ಆರ್. ಇಳಂಗೋವನ್ ಅವರ ಪುತ್ರ ರಾಕೇಶ್ (22) ಭೀಕರ ಕಾರು ಅಪಘಾತ ದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ಸಂಸದರ ಪುತ್ರ ಪುದುಚೇರಿಯಿಂದ ಚೆನ್ನೈಗೆ ಹೆಚ್ಚು ಪ್ರಯಾಣಿಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತದ ಸಂಭವಿಸಿದೆ. ರಾಕೇಶ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪ್ರಯಾಣಿಕ ಗಂಭೀರವಾರ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಾಕೇಶ್ ಮೃತ ದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾಜಿ ಹಿರಿಯ ವಕೀಲರಾದ ಎನ್‌ಆರ್ ಇಳಂಗೋವನ್ ಅವರು 2020 ರಲ್ಲಿ ತಮಿಳುನಾಡಿ ನಿಂದ ರಾಜ್ಯಸಭಾ ಸದಸ್ಯರಾದರು. ಇದು ಅವರ ಮೊದಲ ಅವಧಿಯಾಗಿದೆ.