ಪಂಜಾಬ್: ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಡ ಸಿಎಂ ಚರಂಜಿತ್ ಸಿಂಗ್ ಚನ್ನಿಯವರ ಕಾಂಗ್ರೆಸ್ ಪಕ್ಷ ಭಾರೀ ಸೋಲು ಕಂಡಿದೆ.
ಈ ಹಿನ್ನಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ರಾಜ್ಯಪಾಲರ ಭೇಟಿಗೂ ಸಮಯ ಕೋರಿದ್ದಾರೆ.
ಗುರುವಾರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಪಂಚಾಬ್ ನಲ್ಲಿ ಕೈ ಪಕ್ಷವನ್ನು ಪೊರಕೆ ಗುಡಿಸಿ ಹಾಕಿದೆ. ಸಿಎಂ, ಮೂವರು ಮಾಜಿ ಸಿಎಂ ಗಳಿಗೆ ಪಂಜಾಬ್’ನಲ್ಲಿ ಭಾರೀ ಮುಖಭಂಗ ಉಂಟಾಗಿದೆ.
ಚನ್ಕೌರ್ ಸಾಹಿಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಸಿಎಂ ಚರಣಜಿತ್ ಸಿಂಗ್ ಚನ್ನಿ ಹಿನ್ನಡೆ ಕಂಡಿದ್ದಾರೆ. ಹೀಗಾಗಿ ಪಂಜಾಬ್ ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಭೇಟಿಯಾಗ ಲಿರುವ ಸಿಎಂ ಚನ್ನಿ, ಮಧ್ಯಾಹ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಪಂಜಾಬ್ ನಲ್ಲಿ ಎಎಪಿ ಭರ್ಜರಿ ಗೆಲುವನ್ನು ಸಾಧಿಸುವತ್ತ ಸಾಗುತ್ತಿದೆ.