Saturday, 23rd November 2024

ಮತಾಂತರ ಕಾಯಿದೆ ಜಾರಿಯಾಗಲಿ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಮತಾಂತರ ನಿಷೇಧ ಕಾಯ್ದೆ ವಿಧಾನಪ ರಿಷತ್‌ನಲ್ಲಿ ಮಂಡನೆಯಾಗುವುದು ಬಾಕಿಯಿದೆ. ಮತಾಂತರ ನಿಷೇಧ ಕಾಯ್ದೆ ಮೂಲಕ ಜಾರಿಗೆ ಮತಾಂತರದ ವಾಸನೆ ಕಂಡು ಬಂದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡು, ಹಿಂದೂಗಳ ಮೇಲೆ ಮಿಷನರಿಗಳು ನಡೆಸುತ್ತಿರುವ ಗುಳ್ಳೆನರಿಯ ಆಟಗಳನ್ನು ಕೊನೆಗಾಣಿಸಬೇಕಿದೆ.

ವ್ಯಾಪಾರದ ಸೋಗಿನಲ್ಲಿ ಬಂದ ಬ್ರಿಟಿಷರು ಹಿಂದೂಗಳ ಭವ್ಯಪರಂಪರೆ ಶ್ರೀಮಂತ ಸಂಸ್ಕೃತಿ ಮತ್ತು ವೈಜ್ಞಾನಿಕತೆಯನ್ನು ಹಾಳು ಮಾಡಿ ದೇಶವನ್ನು ಗುಲಾಮಗಿರಿಗೆ ಒಳಪಡಿಸಲು ಬೆದರಿಕೆ ಮತ್ತು ಹಿಂಸೆಯ ಅಸವನ್ನು ಪ್ರಯೋಗಿಸಿದರು. ಹಾಗೆಯೇ ಅವರಿಗೆ ಒಂದು ನಾಜೂಕಿನ ತಂತ್ರವಾಗಿ ಹೊಳೆದಿದ್ದೇ ಈ ಮತಾಂತರವೆಂಬ ಅಹಿಂಸೆಯ ಅಸ್ತ್ರ, ಆಮಿಷ, ಮನಪರಿವರ್ತನೆ, ತಂತ್ರ, ಮೋಸದ ಮಾನವೀಯತೆಯ ಅಸ್ತ್ರಗಳನ್ನು ಬಳಸಿಕೊಂಡು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದರ ಮೂಲಕ ಈ ಮಣ್ಣಿನಲ್ಲಿ ಅಸ್ತಿತ್ವವೇ ಇರದಿದ್ದ ಕ್ರಿಶ್ಚಿಯನ್ ಧರ್ಮದ ಬೀಜವನ್ನು  ಬಿತ್ತಿದರು ಬ್ರಿಟಿಷರು, ಅವರು ದೇಶ ಬಿಟ್ಟು ತೊಲಗಿದರೂ ಇಲ್ಲಿನ ಗುಲಾಮಗಿರಿಯ ರಾಜಕೀಯ ಪಿತೃಪಕ್ಷಗಳು ಅದನ್ನೇ ಮುಂದುವರೆಯಲು ಬಿಟ್ಟು ಜಾಣ ಕಿವಡು-ಕುರುಡಾಗಿ ಆಡಳಿತ ನಡೆಸಿ ಮತಾಂತರ ಅಬಾಧಿತವಾಗಿ ನಡೆದುಕೊಂಡು ಬರುವಂತೆ ನೋಡಿಕೊಂಡರು.

ಅಲ್ಲದೆ ಮತಾಂತರದ ಮಹಾ ಮೇಳಕ್ಕಾಗಿಯೇ ಎನ್‌ಜಿಒಗಳು ದೇಶದೆಡೆ ತನ್ನ ಜಾಲವನ್ನು ಅಳವಡಿಸಿ ಹೊರ ದೇಶಗಳಿಂದ ಯಥೇಚ್ಛವಾಗಿ ಹಣ ಬರುವಂತೆ ವ್ಯವಸ್ಥೆ ಮಾಡಿಕೊಟ್ಟರು. ಇದರ ಕಾರ್ಯಸಾಧನೆ ಯಾವ ಮಟ್ಟಕ್ಕೆ ಯಶಸ್ವಿಕಾಣಿತೆಂದರೆ ರಾಜಕೀಯ ಪಕ್ಷದ ಅಧಿನಾಯಕಿಗೆ ಬಕೇಟು ಹಿಡಿಯಲೆಂದೇ ನಾಯಕನೊಬ್ಬ ತನ್ನೊಂದಿಗೆ ತನ್ನ ಪರಿವಾರವನ್ನು ಮತಾಂತರ ಗೊಳಿಸಿ ಒಂದು ರಾಜ್ಯದ ಮುಖ್ಯಮಂತ್ರಿಯೂ ಆಗಿಬಿಡುತ್ತಾನೆ, ಕೊನೆಗೆ ಊರೂ ರನ್ನೇ ಮತಾಂತರಗೊಳಿಸುತ್ತಾನೆ. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆಂಬ ನೀತಿಯಂತೆ ಕೊನೆಗೆ ಸಾಯಬಾರದ ಸಾವನ್ನು ಕಾಣುತ್ತಾನೆ. ಈಗ ಈತನ ಮಗ ಅದನ್ನೇ ಮುಂದವರೆಸಿಕೊಂಡು ಹೋಗುತ್ತಿದ್ದರೂ ನಮ್ಮ ದೇಶದ ಸಂವಿಧಾನ ಕಾನೂನು ನ್ಯಾಯಾಲಯದ ಕಟ್ಟಳೆಯೊಳಗೆ ಈ ಮತಾಂತರದ ಕುತಂತ್ರವನ್ನು ಎಡೆಮುರಿಕಟ್ಟಿ ತಡೆ ಯುವುದಕ್ಕೆ ಆಗುತ್ತಿಲ್ಲ.

ಒಂದಡೆ ಇಸ್ಲಾಂ ಮತಾಂಧ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕೊಲ್ಲುತ್ತಿದ್ದರೆ ಈ ಮಿಷನರಿಗಳ ಮ ತಾಂತರ ಹಿಂದೂ ಧರ್ಮವನ್ನೇ ಕೊಲ್ಲುತ್ತಿರುವುದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಒಂದು ಧರ್ಮದ ಮೇಲೆ ಮತ್ತೊಂದು ಧರ್ಮ ಆಕ್ರಮಣ ಮಾಡುವ ಇಂಥ ಸಾಮಾಜಿಕ ಅನಿಷ್ಟಗಳನ್ನು ತಡೆಯಬೇಕಾದ್ದು ದೇಶದ ಸಂವಿಧಾನ ನ್ಯಾಯಾಲಯ ಮತ್ತು ಕಾನೂನಿನ ಧರ್ಮ, ಹಾಗೆಯೇ ಅನ್ಯಧರ್ಮವನ್ನು ಪ್ರೀತಿಸಿ ಸ್ವಧರ್ಮವನ್ನು ರಕ್ಷಿಸಿಕೊಳ್ಳಬೇಕಾದ ನೈತಿಕ ಹೊಣೆ, ಹಕ್ಕು
ಎಲ್ಲಾ ಧರ್ಮಗಳಿಗೂ ಇದೆ, ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದು ಈ ಮಿಷನರಿಗಳಿಗೆ ಒಂದಷ್ಟು ಅಂಕುಶ ಹಾಕಿದೆ.

ಆದರೆ ನಮ್ಮ ರಾಜ್ಯದಲ್ಲಿ ಈ ಮತಾಂತರದ ದುಷ್ಪರಿಣಾಮ ಸಾಕ್ಷಾತ್ ಶಾಸಕನ ಮನೆಗೆ ವಕ್ಕರಿಸಿ ಶಾಸಕನ ತಾಯಿಯೇ ಮತಾಂತರಗೊಂಡು ಅಸಹಜವಾಗಿ ನಡೆದುಕೊಳ್ಳುತ್ತಿರುವುದನ್ನು ವಿಧಾನಸಭೆಯ ಹೇಳಿಕೊಂಡು ಗೋಳಿಡುವಷ್ಟು ಮಟ್ಟಕ್ಕೆ ಬಂದು ತಲುಪಿದೆ. ಇದರಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರಕಾರ ಕಳೆದ ಡಿಸೆಂಬರ್
ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ, ಹಕ್ಕು ಸಂರಕ್ಷಣಾ ವಿಧೇಯಕ-2021 ಪರಿಷ್ಕೃತ ಗೊಂಡು ಮತಾಂತರ ನಿಷೇಧ ಕಾಯ್ದೆಯಾಗಿ ಮಂಡನೆ ಮಾಡಿ ವಿಧಾನಸಭೆಯಲ್ಲಿ ಅಂಗಿಕಾರವೂ ಪಡೆದುಕೊಂಡಿದೆ.

ಆದರೆ ಅಂದು ವಿಧಾನ ಪರಿಷತ್‌ನಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಜನವರಿಯಲ್ಲಿ ವಿಶೇಷ ಅಧಿವೇಶನವನ್ನು ಏರ್ಪಡಿಸಿ ಮೇಲ್ಮನೆಯಲ್ಲಿ ಅಂಗೀಕಾರ ಪಡೆದು ಕೂಡಲೇ ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಆನುಷ್ಠಾನಗೊಳಿಸುವುದಾಗಿ  ಮುಖ್ಯಮಂತ್ರಿ ಗಳು ಭರವಸೆ ನೀಡಿದ್ದರು. ಅಷ್ಟರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನ ಐದು ವಿದ್ಯಾರ್ಥಿನಿಯರ ಪೂರ್ವ ನಿಯೋಜಿತ ಹಿಜಾಬ್ ಪ್ರಕರಣ ಮುನ್ನಲೆಗೆ ಬಂದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿತು. ಇದರ ಕಥೆ ಇನ್ನೇನು ನ್ಯಾಯಾಲಯದಲ್ಲಿ ಮುಕ್ತಾಯವಾಗಿ ಅಂತಿಮ ತೀರ್ಪು ಪಡೆಯುತ್ತದೆಂದು ಕಾಯುತ್ತಿದ್ದಾಗಲೇ ಶಿವಮೊಗ್ಗದದಲ್ಲಿ ರಾಷ್ಟ್ರಭಕ್ತ ಯುವಕ ಹರ್ಷನ ಬರ್ಬರ ಹತ್ಯೆಯಾಗಿ ವಿಚಾರವು ಇಡೀ ನಾಡನ್ನು ಆವರಿಸಿ, ನಂತರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭಗೊಂಡು ಮತಾಂತರ ಹಿಜಾಬ್ ಹರ್ಷನ ವಿಷಯವೆಲ್ಲ ಕೊಚ್ಚಿಹೋಗಿ ಆ ಪರೇಷನ್ ಗಂಗಾವರೆಗೆ ಬಂದು ನಿಂತಿತು, ಇದೀಗ ಐದು ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಇಡೀ ದೇಶ ರಾಜಕೀಯ ಬೆಳವಣಿಗೆಗಳಲ್ಲಿ ಗಮನ ಸೆಳೆಯುತ್ತಿದೆ. ಆಗಲಿ, ಸಮಾಜದಲ್ಲಿ ಒಂದೊಂದು ವಿಚಾರಗಳು ಒಂದೊಂದು ವಿಚಾರಗಳನ್ನು ನುಂಗಿ ಹಾಕಿ ಜನರ ಗಮನವನ್ನು ಬದಲಿಸುತ್ತಾ ಬೆಳವಣಿಗೆಗಳು ಬದಲಾವಣೆಗಳು ನಡೆಯುತ್ತಲೇ ಇರುತ್ತದೆ.

ಈಗ ದೇಶದ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆದರೆ ಹಿಂದೂಗಳ ಭಾವನೆಗಳಿಗೆ ಕೊಳ್ಳಿ ಇಡುತ್ತಾ, ಅಗತ್ಯಕ್ಕಿಂತ ಲೂ ಅಸಹ್ಯವಾಗಿ ಅಲ್ಪಸಂಖ್ಯಾತರನ್ನು ತಮ್ಮ ಸ್ವಾರ್ಥಕ್ಕಾಗಿ ಓಲೈಸುತ್ತಾ ಹಿಂದೂಗಳ ವಿರೋಽ ಎಂಬಂಥ
ಸಂದೇಶಗಳನ್ನೇ ನೀಡುತ್ತಾ ಬಂದ ಕಾಂಗ್ರೆಸ್ ಪಕ್ಷವು ಕಥಂ, ಬಾಯ್ಬಾಯ, ಟಾಟಾ, ಗಾಡ್ಬಾಯ, ಗಯಾ ಎಂದು ಸೋತು ಕುಳಿತಿದೆ, ಆದರೆ ರಾಷ್ಟ್ರೀಯತೆ ಮತ್ತು ಬಹುಸಂಖ್ಯಾತರ ಪರವಾಗಿ ನಿಲ್ಲುವ ಬಿಜೆಪಿ ಪಕ್ಷವು ತನ್ನ ಸೈದ್ಧಾಂತಿಕತೆ ಮತ್ತು ಸಂವಿಧಾನಿಕ ನೆಲೆಗಟ್ಟಿನಲ್ಲಿ ಸಮಾನತೆಯ ಹಾದಿಯಲ್ಲಿ ಸಮಾಜಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡುತ್ತಿದೆ. ಅದರೊಂದಿಗೆ ಸಮಾಜಗೇಡಿ ರೂಢಿಗಳನ್ನು ಧರ್ಮ ಕಂಟಕ ಪಿಡುಗುಗಳನ್ನು ಮಟ್ಟ ಹಾಕಿ ಸಮಾಜವನ್ನು ಆರೋಗ್ಯಕರವಾಗಿಡುವ
ಕಾರ್ಯಾ ಮಾಡುತ್ತಿರುವುದು ಸುಳ್ಳಲ್ಲ.

ಆದ್ದರಿಂದಲೇ ಇಂದು ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿಯನ್ನು ಜನ ನಂಬುತ್ತಿದ್ದಾರೆ, ದೇಶಕ್ಕೆ ಮತ್ತು ಸಮಾಜಕ್ಕೆ ಬೇಕಾದ ಕಾರ್ಯಗಳನ್ನು ಮಾಡಿಯೇ ತೀರುತ್ತದೆಂಬ ವಿಶ್ವಾಸದಿಂದ ಮತ ಚಲಾಯಿಸುತ್ತಿದ್ದಾರೆ. ನೀತಿಗೆಟ್ಟ ಪಕ್ಷಗಳ ವೋಟ್ ಬ್ಯಾಂಕ್ ಹೊಲಸು ನೀತಿಯಿಂದಾಗಿ ಮತ್ತು ಅದಕ್ಕಾಗಿ ಯಾವುದರ ಮೇಲಾದರೂ ನಾಲಿಗೆ ಸವರಲು ಸಿದ್ಧರಾಗಿರುವ
ಪುಢಾರಿಗಳ ಮಲತಾಯಿ ಧೋರಣೆಯಿಂದಾಗಿ ಜನ ರೋಸಿ ಹೋಗಿ ದೇಶದೆಡೆ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ. ತಮ್ಮ ಸ್ವಂತ ದುಡಿಮೆಯ ಹಣ ವನ್ನು ಖರ್ಚು ಮಾಡಿ ಪಕ್ಷದ ಪರವಾಗಿ ಪ್ರಚಾರ ಮಾಡುವ ಕೋಟ್ಯಾಂತರ ಕಾರ್ಯಕರ್ತರು ದೇಶ
ದಲ್ಲಿ ಜಾಗೃತರಾಗುತ್ತಿದ್ದಾರೆ.

ದೇಶವನ್ನು ಬಲಿಷ್ಠಗೊಳಸಿ: ಹೆಮ್ಮೆ ಪಡುವಂತೆ ಮಾಡುವ ಸ್ವಾಭಿಮಾನಿಗಳು ಭಕ್ತ ಎಂಬ ಬಿರುದಿನೊಂದಿಗೆ ಆಂ ದೋಲನಕ್ಕೆ
ಇಳಿಯುತ್ತಿದ್ದಾರೆ. ಆದರಂತೆ ಭಾರತ ಸರಕಾರವೂ ಕೂಡ ಸೈನಿಕ ರೈತ ತಲಕ್ ಕಾಶ್ಮೀರ ಆಯೋಧ್ಯ ವಾರಣಾಸಿ ಇನ್ನೂ ಅನೇಕ ಪ್ರಜಾಪ್ರಭುತ್ವದ ಪೂರಕವಾಗಿ ಕಾರ್ಯಗಳನ್ನು ಮಾಡಿ ತೋರಿಸುತ್ತಿದೆ. ಮೊನ್ನೆ ಉಕ್ರೇನ್‌ನಿಂದ ಬರಿಯ ಭಾರತೀಯ
ವಿದ್ಯಾರ್ಥಿಗಳು ಮಾತ್ರ ಸುರಕ್ಷಿತವಾಗಿ ಬರಲಿಲ್ಲ. ಭಾರತದ ಹೆಸರನ್ನು ಹೇಳಿಕೊಂಡು ಪಾಪಿ ಪಾಕಿಸ್ತಾನವಲ್ಲದೇ ಇತರೆ ರಾಷ್ಟ್ರಗಳ ನಾಗರಿಕರೂ ಉಕ್ರೇನಿ ನಿಂದ ಸುರಕ್ಷಿತವಾಗಿ ತಮ್ಮ ದೇಶ ಸೇರಿಕೊಂಡಿದ್ದಾರೆ ಎನ್ನುವ ವಿಷಯದ ಮೂಲಕ
ಭಾರತೀಯರು ಮೋದಿಯವರು ಹದಿನೈದು ಲಕ್ಷಗಳನ್ನು ನಮ್ಮ ಖಾತೆಗೆ ಹಾಕಿದ್ದಾರೆ ಎಂದು ಸಂಭ್ರಮಿಸುತ್ತಿದ್ದರೆ, ಪಿತೃಪಕ್ಷಗಳ ಗುಲಾಮರು ಮಾತ್ರ ಇನ್ನು ತಮ್ಮ ಆಕೌಂಟಿಗೆ ಮೋದಿ ಹದಿನೈದು ಲಕ್ಷ ಹಾಕಿಲ್ಲ ಎಂದು ಜೋಕರ್‌ಗಳಂತೆ ವರ್ತಿಸುತ್ತಿದ್ದಾರೆ.

ಅಂತೆಯೇ, ನಮ್ಮ ನಾಡಿನ ಬಿಜೆಪಿ ಸರಕಾರವೂ ಸಹ ಇಂಥ ದೇಶಭಕ್ತ ನಾಗರಿಕರ ಋಣದಲ್ಲಿರುವುದನ್ನು ಮರೆಯಬಾರದು. ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮೊನ್ನೆಯಷ್ಟೇ ಸಮತೋಲನವಾದ ಉತ್ತಮ ಬಜೆಟ್‌ನ್ನು ಮಂಡಿಸಿ ತಮ್ಮ ಪ ದವಿಗಿರುವ ಘನತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಾಜದ ಆಗುಹೋಗುಗಳ ಬಗ್ಗೆ ಸಾಮಾಜಿಕ ಬದ್ಧತೆಗಳ ಬಗ್ಗೆ ಪ್ರಜ್ಞಾಪೂರ್ವಕ ಆಸಕ್ತಿ, ಚುರುಕಾದ ದೃಷ್ಟಿಕೋನ, ಸೂಕ್ಷ್ಮ ಗ್ರಹಿಕೆ, ಸಾಮಾಜಿಕ ಚಿಂತನೆ, ಕಾರ್ಯಾಸಕ್ತಿಯ ಮನಸುಳ್ಳ ಬೊಮ್ಮಾಯಿಯವರು ರಾಜ್ಯವನ್ನು ಕಳಂಕ ರಹಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಇಂಥ ಮುಖ್ಯಮಂತ್ರಿಗಳಿಗೆ ಸಾಮಾಜಿಕ ನ್ಯಾಯದ ಪರಿಜ್ಞಾನಕ್ಕೂ ಕೊರತೆಯಿಲ್ಲ. ಹೀಗಾಗಿಯೇ ಅವರು ಮತಾಂತರ ನಿಷೇಧ ಕಾಯ್ದೆ ಮತ್ತು ದೇವಾಲಯಗಳ ಸ್ವಾಯತ್ತತೆ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮಗಳನ್ನು ಕೈಗೊಂಡು ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಮತಾಂತರ ನಿಷೇಧ ಕಾಯ್ದೆಯ ಅನುಷ್ಠಾನಕ್ಕೆ ವಿಧಾನ ಪರಿಷತ್‌ನಲ್ಲಿ ಮಂಡನೆ
ಯಾಗಿ ಅಂಗೀಕಾರ ಆಗಬೇಕಾದ ಕೆಲಸ ಇನ್ನು ಬಾಕಿ ಉಳಿದಿದೆ.

ಆದ್ದರಿಂದ ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸದರಿ ಕಾಯ್ದೆಯನ್ನು ಮೇಲ್ಮನೆಯಲ್ಲಿ ಮಂಡಿಸಿ ಸಂವಿಧಾನಾತ್ಮಕ  ವಾಗಿ ಅಂಗೀಕಾರ ಪಡೆದು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕೆಲಸ ಆಗಲೇ ಬೇಕಿದೆ, ಈ ಕುಲಗೆಟ್ಟ ಮತಾಂತರ ಪಿಡುಗು ಸಮಾ ಜದಲ್ಲಿ ಅಸಹಜ, ಆನೈತಿಕ ಮತ್ತು ಆಪಾಯಕಾರಿ ಬೆಳವಣಿಗೆಗಳಿಗೆ ಅವಕಾಶ ಮಾಡಿಕೊಡುತ್ತಿದೆ. ಮತಾಂತರ ಕೃತ್ಯವನ್ನು ಅಷ್ಟು ಸುಲಭ ವಾಗಿ ಅಪರಾಧದ ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ. ಇದನ್ನು ಒಂದು ಜೂಜಿನಂತೆ ವೇಶ್ಯ ವಾಟಿಕೆಯಂತೆ ವಂಚನೆ ದರೊಡೆಯಂತೆ ಏಕಾಏಕಿ ಕಾನೂನಿನ ಮುಷ್ಠಿಯೊಳಗೆ ಬಂಧಿಸಲು ಕ್ಲಿಷ್ಟಕರವಾಗಿದೆ.

ಮತಾಂತರದ ವಿರುದ್ಧ ಠಾಣೆಗೆ ದೂರು ನೀಡಲು ಹೋದರೆ ಅದಕ್ಕೆ ಸಾಕ್ಷಿ ಇದೆಯಾ? ನಿನ್ನನ್ನೇ ಮತಾಂತರ ಮಾಡಲು
ಬಂದಿದ್ದರಾ? ಎಂದು ಪ್ರಶ್ನಿಸಿ ಗದರಿಸಲಾಗುತ್ತದೆ. ಇದರಿಂದ ಕಂಗೆಟ್ಟು ಇಲ್ಲದ ಉಸಾಬರಿ ನಮಗ್ಯಾಕೆ ಎಂದು ವಾಪಸ್ಸು ಬರುವುದೇ ಹೆಚ್ಚು, ಅಲ್ಲದೆ ಮತಾಂತರವನ್ನು ತಡೆಯಲು ಹೋದವರನ್ನು ಕೋಮುವಾದಿ ಗಳು, ಮುಗ್ಧ ಕ್ರಿಶ್ಚಿಯನ್ನರ ಮೇಲೆ
ಗಾಳಿ ಮಾಡುತ್ತಿzರೆ ಎಂದು ಮತ್ತದೇ ಡೋಂಗಿಗಳು ಎದೆ ಬಡಿದುಕೊಳ್ಳುವುದು ಮುಂದುವರೆಯುತ್ತದಷ್ಟೆ.

ಇಂಥವರ ಮಲತಾಯಿ ಧೋರಣೆ ಮತ್ತು ಆಸಮಾನತೆಯಲ್ಲಿ ಸಾಕಷ್ಟು ನೊಂದಿರುವ ಹಿಂದೂಗಳ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಅವರ ಮೇಲೆ ನಡೆಯುತ್ತಿರುವ ಎಲ್ಲಾ ರೀತಿಯ ಕೆಡುಕುಗಳನ್ನು ನಿವಾರಿಸಿ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಸಿಬೇಕಿದೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಮತಾಂತರದ ಲಕ್ಷಣಗಳು ಕಂಡು ಬಂದ ಕೂಡಲೇ ದೂರು ನೀಡುವ ಧೈರ್ಯವನ್ನು ಸಾರ್ವಜನಿಕರಲ್ಲಿ ತುಂಬಿ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ವಿಶೇಷ ಅಧಿಕಾರ ನೀಡಬೇಕಿದೆ.

ಇಲ್ಲದಿದ್ದರೆ ಹಿಂದೂಗಳ ಮೇಲೆ ಮಿಷನರಿಗಳು ನಡೆಸುತ್ತಿರುವ ಗುಳ್ಳೆನರಿಯ ಆಟಗಳು ಕಂಡರೂ ಕಾಣದಂತೆ ಮುಂದುವರೆ
ಯುತ್ತಲೇ ಹೋಗುತ್ತದೆ. ಈ ಪುರುಷಾರ್ಥಕ್ಕಾಗಿ ಬಿಜೆಪಿಗೆ ವೋಟು ಹಾಕಬೇಕಾ?