Thursday, 21st November 2024

ಹೆಸರು ಘಟ್ಟದಲ್ಲಿ ಉಪ್ಪಿ ಹೊಸ ಚಿತ್ರ

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ನಟ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಇಷ್ಟು ದಿನ ಪ್ರಜಾಕೀಯ ಅಂತ ರಾಜಕಾರಣದ ಬಗ್ಗೆನೇ ಹೆಚ್ಚು ಮಾತನಾಡುತ್ತಿದ್ದ ಉಪೇಂದ್ರ ಮತ್ತೆ ನಿರ್ದೇಶನದ ಮಾತಾಡಿರುವುದು ಅವರ ಅಭಿಮಾನಿಗಳಿಗೆ ಸಂತಸದ ವಿಷಯ.

ಹೋಮ್ ಮಿನಿಸ್ಟರ್ ಎಂಬ ತಮ್ಮ ಸಿನಿಮಾ ಬಿಡುಗಡೆಯ ಹೊತ್ತ ರಾಜಕಾರಣ ಬಿಟ್ಟು ಮತ್ತೆ ನಿರ್ದೇಶನದತ್ತ ಉಪೇಂದ್ರ ಅವರ ಕಣ್ಣು ತಿರುಗಿದೆ. ಈಗಾಗಲೇ ಅವರು ಬಿಡುಗಡೆ ಮಾಡಿರುವ ಪೋಸ್ಟರ್ ಸಾಕಷ್ಟು ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಉಪೇಂದ್ರ ಅವರ ಸಿನಿಮಾ ಅಂದ್ರೆ ಅದು ಪೋಸ್ಟರ್ ಮತ್ತು ಟೈಟಲ್ ಹಂತದಲ್ಲಿ ಕುತೂಹಲ ಹುಟ್ಟಿಸುತ್ತದೆ. ಈ ಹೊಸ ಚಿತ್ರ ಕೂಡ ಅದಕ್ಕೆ ಹೊರತಾಗಿಲ್ಲ.

ಎಂದಿನಂತೆ ಈ ಚಿತ್ರದ ಟೈಟಲ್ ಕೂಡಾ ವಿಭಿನ್ನವಾಗಿದೆ. ಮತ್ತು ಅದು ಏನು ಅಂತ ಇನ್ನೂ ಯಾರಿಗೂ ಹೇಳೋಕೆ ಆಗುತ್ತಿಲ್ಲ ಅನ್ನೋದು ವಿಶೇಷ ಅಲ್ಲ, ಉಪ್ಪಿ ಚಿತ್ರಗಳ ಕಾಮನ್ ವಿಷ್ಯ. ಹಾಗೆ ನೋಡಿದರೆ ಉಪೇಂದ್ರ ಅವರ ಸಿನಿಮಾ ಮತ್ತು ಅವರ ಟೈಟಲ್ ಗಳಿಗೆ ಅವರಿ ಗಿಂತ ಜಾಸ್ತಿ ಅರ್ಥಗಳನ್ನು ಅವರ ಅಭಿಮಾನಿಗಳೇ ಹೇಳುತ್ತಾರೆ. ಉಪೇಂದ್ರ ಹಾಗೆಂದುಕೊಂಡು ಕೆಲಸ ಮಾಡಿರುತ್ತಾರೋ ಇಲ್ಲವೋ ಆದರೆ ಅಭಿಮಾನಿ ಗಳು ಮಾತ್ರ ಅದರಲ್ಲಿ ಇಲ್ಲದೇ ಇರುವ ಅರ್ಥಗಳನ್ನೂ ಹುಡುಕಿಬಿಡುತ್ತಾರೆ. ಈಗಲೂ ಅದೇ ಆಗುತ್ತಿದೆ. ಒಟ್ಟಿನಲ್ಲಿ ರಾಜಕಾರಣದಲ್ಲಿ ಮೋದಿ ಅವರು ಮಾಡದೇ ಇರುವ ಕೆಲಸ ಗಳಿಗೂ ಅವರ ಅಭಿಮಾನಿಗಳು ಕ್ರೆಡಿಟ್ ಕೊಡುವ ಹಾಗೆ ಉಪೇಂದ್ರ ಅವರ ಸಿನಿಮಾ ಗಳಿಗೂ ಅವರ ಅಭಿಮಾನಿಗಳು ತಮ್ಮದೇ ಆದ ಹೊಸ ಭಾಷ್ಯವನ್ನಂತೂ ಬರೆಯುತ್ತಿದ್ದಾರೆ.

ಲೂಸ್ ಟಾಕ್
ರಾಹುಲ್ ಗಾಂಧಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, 5 ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಏನ್ ಹೇಳ್ತೀರಾ?
-ದೇಶದ ಜನ ಈ ಥರ ಆದೇಶ ಕೊಟ್ಟಮೇಲೆ ಏನ್ ಮಾಡೋಕಾಗುತ್ತೆ.
-ಲಿತಾಂಶವನ್ನ ಸ್ವೀಕರಿಸಲೇಬೇಕು.
-ಲಿತಾಂಶದ ಜೊತೆಗೆ ಹಂಗೇ ರಾಜಕೀಯ ಸನ್ಯಾಸನೂ ಸ್ವೀಕರಿಸಿ ಅಂತ ಜನ
ಹೇಳ್ತಾ ಇದ್ದಾರೆ ಅನ್ಸುತ್ತೆ.

-ಸನ್ಯಾಸಿಗಳೇ ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದಾರಂತೆ. ನಾವ್ಯಾಕೆ ಸನ್ಯಾಸತ್ವ ತಗೊಬೇಕು? ಇದಕ್ಕೆ ಸರಿಯಾದ ಉತ್ತರ ಕೊಡ್ತೀವಿ ನೋಡ್ತಾ ಇರಿ.

ಆದ್ರೂ ದೇಶದಲ್ಲಿ ಕಾಂಗ್ರೆಸ್‌ನ ಪ್ರೋಗ್ರೆಸ್ ತುಂಬಾ ಚೆನ್ನಾಗಿದೆ ಅಲ್ವಾ?
-ಏನು, ದೇಶದಲ್ಲಿ ಕಾಂಗ್ರೆಸ್ ಫುಲ್ ಡಲ್ ಆಗಿದೆ ಅಂತ ಕಿಂಡಲ್ ಮಾಡ್ತಾ ಇದ್ದೀರಾ?
ಅಯ್ಯೋ, ಇ, ಕಾಲ್ಪನಿಕ ಸಂದರ್ಶನ ಅಲ್ವಾ, ಅದಕ್ಕೇ ಕಾಲ್ಪನಿಕ ವಿಷಯದ ಬಗ್ಗೆ ಕೇಳ್ತಾ ಇದ್ದೀನಿ ಅಷ್ಟೇ..
-ಮತ್ತೆ ಕಿಂಡಲ್ಲು, ಇರ್ಲಿ, ಇರ್ಲಿ,
ಸದ್ಯಕ್ಕೆ ಕಾಂಗ್ರೆಸ್ ಕ್ರ್ಯಾಷ್ ಆಗಿದೆ. ದೇವೇಗೌಡ್ರ ಹತ್ರ ಕ್ರ್ಯಾಷ್ ಕೋರ್ಸ್ ತಗೊಂಡು, ಫೀನಿಕ್ಸ್ ಥರ ಎದ್ದು ಬರ್ತೀವಿ ನೋಡ್ತಾ ಇರಿ.
ಆಯ್ತು, ಆದ್ರೆ, ಉತ್ತರಪ್ರದೇಶದಲ್ಲಿ ಅಷ್ಟೊಂದು ನೀವು ಹೀನಾಯವಾಗಿ ಸೋಲೋಕೆ ಕಾರಣ ಏನು ?
-ಅಯ್ಯೋ, ಉತ್ತರ ಪ್ರದೇಶದಲ್ಲಿ ಗೆದ್ರೆ ಉತ್ತರ ಕುಮಾರ ಅಂತ ಆಡ್ಕೊತಾರೆ. ಅದಕ್ಕೆ ನಾವೇ ಬೇಕಂತ ಸೋತ್ವಿ.

ನೆಟ್ ಪಿಕ್ಸ್ 
ಗರ್ಲ್ ಫ್ರೆಂಡ್ ಜೊತೆ ಖೇಮು ಜಾಲಿ ಟ್ರಿಪ್ ಹೋಗಬೇಕು ಅಂತ ಡಿಸೈಡ್ ಆಯ್ತು. ಆದ್ರೆ ಹೆಂಡತಿಗೆ ಏನು ಸುಳ್ಳು ಹೇಳೋದು ಅಂತ ಯೋಚನೆ ಮಾಡಿದ. ಸರಿ, ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬ್ಯುಸಿನೆಸ್ ಟೂರ್ ಇದೆ ಅಂತ ಹೆಂಡತಿ ಖೇಮುಶ್ರೀಗೆ ಸುಳ್ಳು ಹೇಳಿದ. ಬೆಳಿಗ್ಗೆ ಬೇಗನೇ ಹೋಗಬೇಕು ನನ್ನ ಎಲ್ಲಾ ಲಗೇಜ್ ಅನ್ನು ಈಗ್ಲೇ ಪ್ಯಾಕ್ ಮಾಡು.

ಬೆಳಗ್ಗೆ ಲೇಟ್ ಆಗುತ್ತೆ ಅಂತ ಹೇಳಿದ. ಆಫೀಸ್ ಬ್ರೀಫ್ ಕೇಸ್‌ನಲ್ಲಿ ಈ ಎಲ್ಲಾ ಫೈಲ್‌ಗಳನ್ನೂ, ಡಾಕ್ಯುಮೆಂಟ್ ಅನ್ನು ಇಡು. ನನ್ನ ಪರ್ಸನಲ್ ಸಾಮಾನುಗಳನ್ನು ಇನ್ನೊಂದು ಸೂಟ್ ಕೇಸ್ ನಲ್ಲಿ ಇಡು. ಅಂದಹಾಗೆ ನನ್ನ ಆ ಬ್ಲೂ ಕಲರ್ ಸಿಲ್ಕ್ ಪೈಜಾಮ ಇಡೋದನ್ನು ಮರೀಬೇಡ ಅಂತ ಹೆಂಡತಿಗೆ ಹೇಳಿ ಬಾತ್ ರೂಮ್‌ಗೆ ಹೋದ ಖೇಮು. ಸರಿ ಖೇಮುಶ್ರೀ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೆಳಗ್ಗೆ ಬೇಗ ಎದ್ದವನೇ ಖೇಮು ಟೂರ್‌ಗೆ ಹೊರಟ. ಆ ಮೂರು ದಿನದಲ್ಲಿ ಖೇಮುಶ್ರೀ ಖೇಮುಗೆ ಹಲವಾರು ಬಾರಿ ಕಾಲ್ ಮಾಡಿದಳು.

ಆದರೆ ಖೇಮು ಕಾಲ್ ರಿಸೀವ್ ಮಾಡಲಿಲ್ಲ ನಾನು ಮೀಟಿಂಗ್‌ನಲ್ಲಿ ಇದ್ದೇನೆ. ಬ್ಯುಸಿ ಅಂತ ಮೆಸೇಜ್ ಮಾಡುತ್ತಿದ್ದ. ಸರಿ ಮೂರು ದಿನ ಕಳೆಯಿತು. ಖೇಮು ವಾಪಸ್ ಬಂದ. ಏನು ಬ್ಯುಸಿನೆಸ್ ಟೂರ್‌ನಲ್ಲಿ ತುಂಬಾ ಬ್ಯುಸಿಯಾಗಿದ್ರಿ ಅನ್ಸುತ್ತೆ. ತುಂಬಾ ಸುಸ್ತಾಗಿದ್ದೀರ ಅಂದಳು ಖೇಮುಶ್ರೀ. ಅಯ್ಯೋ, ಅದ್ಯಾಕ್ ಕೇಳ್ತೀಯ ಸಿಕ್ಕಾಪಟ್ಟೆ ಕೆಲಸ ಅಂದ ಖೇಮು, ಅದ್ಸರಿ ನನ್ನ ಬ್ಲೂ ಕಲರ್ ಸಿಲ್ಕ ಪೈಜಾಮ ಪ್ಯಾಕ್ ಮಾಡು ಅಂತ ಹೇಳಿz ಅಲ್ವಾ, ಅದನ್ನ ನೀನು ಮರೆತೇಬಿಟ್ಟಿದ್ದೀಯ ಅಂದ. ಅದಕ್ಕೆ ಖೇಮು ಹೇಳಿದಳು ಮರೆತಿರಲಿಲ್ಲ, ನಿಮ್ಮ ಪರ್ಸನಲ್ ಬ್ಯಾಗ್
ನಲ್ಲಿ ಜಾಗ ಇರಲಿಲ್ಲ ಅದಕ್ಕೇ, ಅದನ್ನ ಆಫೀಸ್ ಬ್ರೀಫ್ ಕೇಸ್ ನಲ್ಲಿ ಇಟ್ಟಿದ್ದೆ’

ಲೈನ್ ಮ್ಯಾನ್

ಉಪೇಂದ್ರ ಫಿಲಾಸಫಿ
-ಸಿನಿಮಾಗೆ ಹೆಸರಿಡೋದು ಮುಖ್ಯ ಅಲ್ಲ, ನೋಡಿದೋರು ‘ಹೆಸರಿಡೋ ಥರ’ ಸಿನಿಮಾ ಮಾಡಬಾರದು ಅಷ್ಟೆ
ಉ ‘ ’ಂದ್ರ ನಿರ್ದೇಶನದ ಹೊಸ ಚಿತ್ರ ಯಾವ ‘ಹಂತ’ದಲ್ಲಿದೆ ?
-ಹೆಸರು ‘ಘಟ್ಟ’ದಲ್ಲಿದೆ
ಆತ್ಮೀಯ ಸ್ನೇಹಿತನನ್ನು ಕೊಲೆ ಮಾಡಿದವನು
-ಕ್ಲೋಸ್ ಫ್ರೆಂಡ್
ತಮ್ಮ ಸಿಡಿ ಬಿಡುಗಡೆ ಮಾಡಿದವರ ಮೇಲಿನ ಕೋಪ
-ಅಸಿಡಿಟಿ
ಶಿವ ಅರ್ಧನಾರೀಶ್ವರ ಅನ್ನೋದನ್ನ ಹೇಳೋದು ಹೇಗೆ?
-SHE
ಯಾರ ಮುಡಿ ಸೇರುತ್ತೆ ಅನ್ನೋದು ಗೊತ್ತಿಲ್ಲದ ಪುಷ್ಪ
-Whoವು 
ಇಂಗ್ಲಿಷ್‌ಗೂ ಕನ್ನಡಕ್ಕೂ ಅಂಥ ವ್ಯತ್ಯಾಸ ಏನಿಲ್ಲ
-ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ಗಳು ಇರುತ್ತವೆ
ದೇವಸ್ಥಾನದಲ್ಲಿ ತಾಯಿತ ಕಟ್ಟೋನು
-ಯಂತ್ರಮಾನವ
ಅಂಡು ಮುಚ್ಕೊಂಡಿರು ಅಂತ ಯಾರಿಗಾದ್ರೂ ಬೈದ ಮೇಲೆ ನನ್ನ ಮಾತನ್ನ ವಾಪಸ್ ತಗೋತೀನಿ ಅಂತ ಹೇಳೋದು
-’Undo’
ಧೂಮಪಾನ ವಿರೋಧಿ ಸ್ಲೋಗನ್
-ಮಾಸ್ – ಸ್ವಲ್ಪ ದಿನ ಹೊಗೆ ಬಿಟ್ಟ, ಆಮೇಲೆ ಹೋಗೇ ಬಿಟ್ಟ
-ಕ್ಲಾಸ್ – ಸಿಗರೇಟನ್ನು ‘ಆರಿಸಿ’, ಆರೋಗ್ಯವನ್ನು ‘ಆರಿಸಿ’
ವಾತಾವರಣ ‘ಚೇಂಜ’ ಆದ್ರೆ ಏನಾಗುತ್ತೆ?
-‘ದುಡ್ಡಿನ’ ಮಳೆ ಸುರಿಯುತ್ತೆ