ಭೋಪಾಲ್: ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ರಾಜ್ಯದ ಪೊಲೀಸರಿಗೆ ರಜೆ ನೀಡಲಾಗು ವುದು ಎಂದು ಮಧ್ಯ ಪ್ರದೇಶ ಸರಕಾರ ಸೋಮವಾರ ಘೋಷಿ ಸಿದೆ.
ಮಾಹಿತಿ ನೀಡಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಸುಧೀರ್ ಸಕ್ಸೇನಾ ಅವರಿಗೆ ಪೊಲೀಸ ರಿಗೆ ರಜೆ ನಿಡುವ ಕುರಿತು ಸೂಚನೆಗಳನ್ನು ನೀಡ ಲಾಗಿದೆ ಎಂದರು. ಚಲನಚಿತ್ರಕ್ಕೆ ರಾಜ್ಯದಲ್ಲಿ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದರು.
90ರ ದಶಕದಲ್ಲಿ ಕಾಶ್ಮೀರಿ ಹಿಂದುಗಳು ಅನುಭವಿಸಿದ ಯಾತನೆ, ನೋವುಗಳ ಮನ ತಟ್ಟುವ ಚಿತ್ರಣ’ ಎಂದು ದಿ ಕಾಶ್ಮೀರ್ ಫೈಲ್ಸ್ ಅನ್ನು ವರ್ಣಿಸಿದ್ದರಲ್ಲದೆ ಚಿತ್ರವನ್ನು ಗರಿಷ್ಠ ಜನರು ವೀಕ್ಷಿಸಬೇಕೆಂಬ ಕಾರಣಕ್ಕೆ ಸರಕಾರ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದರು.
ವಿವೇಕ್ ಅಗ್ನಿಹೋತ್ರಿ ಅವರು ರಚಿಸಿ ನಿರ್ದೇಶಿಸಿರುವ ಹಾಗೂ ಝೀ ಸ್ಟುಡಿಯೋಸ್ ನಿರ್ಮಾಣದ ಚಲನಚಿತ್ರದಲ್ಲಿ ಪಾಕ್ ಮೂಲದ ಉಗ್ರರಿಂದ ನಿರಂತರ ಹತ್ಯೆ ನಡೆಯು ತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಕಾಶ್ಮೀರಿ ಹಿಂದುಗಳು ರಾಜ್ಯ ಬಿಟ್ಟು ವಲಸೆ ಹೋಗುವ ಚಿತ್ರಣವಿದೆ.
ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಷಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.