Thursday, 12th December 2024

ನಾವು ಓದಬೇಕಾಗಿದ್ದು ಟಿಪ್ಪುುವಿನ ಇತಿಹಾಸವನ್ನಲ್ಲ, ಮದಕರಿ ನಾಯಕರ ವೀರ ಚರಿತ್ರೆ

ಅಭಿಮತ

ಮಾರುತೀಶ್ ಅಗ್ರಾರ, ತುಮಕೂರು 

ವೀರಾಧಿವೀರರ, ರಾಷ್ಟ್ರ ಪುರುಷರ, ಕೆಚ್ಚೆೆದೆಯ ಹೋರಾಟಗಾರರ, ದೇಶಭಕ್ತರ ಅದೆಷ್ಟೋೋ ವೀರಗಾಥೆಯನ್ನು ಈ ನೆಲ ಈಗಲೂ ತನ್ನ ಕಾಲ ಗರ್ಭದಲ್ಲಿ ಹುದುಗಿಟ್ಟುಕೊಂಡಿದೆ. ಅಂಥ ಕೆಚ್ಚೆೆದೆಯ ಹೋರಾಟಗಾರರಲ್ಲಿ ಮದಕರಿ ನಾಯಕರೂ ಕೂಡ ಒಬ್ಬರು.

ಮೆಕಾಲೆ ಶಿಕ್ಷಣ ಪದ್ಧತಿಯ ಪರಿಣಾಮವೋ ಕೆಲ ಫ್ಯಾಾಸಿಸ್‌ಟ್‌ ಇತಿಹಾಸಕಾರರ ಇಬ್ಬಗೆಯ ನೀತಿ ಪರಿಣಾಮವೋ ಏನೋ ದೇಶಕ್ಕಾಾಗಿ ಹೋರಾಡಿ ತ್ಯಾಾಗ, ಬಲಿದಾನಗೈದ ಅದೆಷ್ಟೋೋ ಮಹಾನ್ ಪುರುಷರ, ನಿಜವಾದ ಪರಿಚಯವೇ ನಮಗೆ ಸಿಗಲಿಲ್ಲ! ತಮ್ಮ ಸರ್ವಸ್ವವನ್ನೂ ರಾಷ್ಟ್ರಕ್ಕಾಾಗಿ ಮುಡುಪಾಗಿಟ್ಟ ಅನೇಕ ದೇಶಭಕ್ತ ನಾಯಕರ ಹೋರಾಟಗಳನ್ನು ನಮ್ಮ ಕೆಲ ಇತಿಹಾಸಕಾರರು ಒಳಗೊಳಗೆ ನುಂಗಿಕೊಂಡು, ಮೆಕಾಲೆ ಸೃಷ್ಟಿಿಸಿದ ಶಿಕ್ಷಣ ಪದ್ಧತಿಯನ್ನು ವೈಭವಿಕರಿಸಿದ್ದು ದುರ್ದೈವ. ಸಮಾಜಕ್ಕೆೆ ಆದರ್ಶ ಪುರುಷರಾಗಬೇಕಾಗಿದ್ದವರ ಇತಿಹಾಸವನ್ನು ಮರೆಮಾಚಿ, ಇತಿಹಾಸದಲ್ಲಿನ ಖಳನಾಯಕರನ್ನು ಸಮಾಜದ ಮುಂದೆ ಅಪ್ರತಿಮ ಹೋರಾಟಗಾರರಂತೆ ಆಡಂಬರ ಇತಿಹಾಸ ಸೃಷ್ಟಿಿಸಿದ್ದು ಸಹ ಅತ್ಯಂತ ಖೇದಕರ ಸಂಗತಿ.

ನೈಜ ಇತಿಹಾಸದ ಎನಿಸಿಕೊಂಡವರಲ್ಲಿ ಟಿಪ್ಪುು ಸುಲ್ತಾಾನ್ ಕೂಡ ಒಬ್ಬ! ಆದರೆ, ಆತನನ್ನು ಕೆಲ ಇತಿಹಾಸಕಾರರು ಆಡಂಬರ ವೀರನಂತೆ ಬಿಂಬಿಸಿದ್ದು ಮಾತ್ರ ಇತಿಹಾಸಕ್ಕೆೆ ಎಸಗಿದ ಘೋರ ಅನ್ಯಾಾಯ. ವಿಪರ್ಯಾಸವೆಂದರೆ ವೀರಾಧಿವೀರರ, ರಾಷ್ಟ್ರ ಪುರುಷರ, ಕೆಚ್ಚೆೆದೆಯ ಹೋರಾಟಗಾರರ, ದೇಶಭಕ್ತರ ಅದೆಷ್ಟೋೋ ವೀರಗಾಥೆಯನ್ನು ಈ ನೆಲ ಈಗಲೂ ತನ್ನ ಕಾಲ ಗರ್ಭದಲ್ಲಿ ಹುದುಗಿಟ್ಟುಕೊಂಡಿದೆ. ಅಂಥ ಕೆಚ್ಚೆೆದೆಯ ಹೋರಾಟಗಾರರಲ್ಲಿ ಮದಕರಿ ನಾಯಕರೂ ಕೂಡ ಒಬ್ಬರು. ತನ್ನ ನಾಡಿಗಾಗಿ, ಪ್ರಜೆಗಳಿಗಾಗಿ ವಿಶ್ವಾಾಸದ್ರೋಹಿ ನವಾಬ ಹೈದರಾಲಿ ವಿರುದ್ಧ ರಣರಂಗದಲ್ಲಿ ಕೊನೆಯವರೆಗೂ ಹೋರಾಡಿ ವೀರಮರಣವನ್ನಪ್ಪಿಿದರೂ ತನ್ನ ಪ್ರಜೆಗಳಿಂದ ‘ದುರ್ಗದ ಹುಲಿ’ ಎನಿಸಿಕೊಂಡ ಮದಕರಿ ನಾಯಕ.

ತನ್ನ ರಾಜ್ಯದ ವಿಸ್ತರಣೆಗಾಗಿ ಅಕ್ಕಪಕ್ಕದ ಸಣ್ಣಸಣ್ಣ ರಾಜರ ಮೇಲೆ ದಾಳಿ ನಡೆಸುವುದು ಹೈದರ್ ಸೇನೆ ದಾಳಿ ನಡೆಸುವ ವೇಳೆ ತನಗೆ ಎದುರಾಗುತ್ತಿಿದ್ದ ಹಳ್ಳಿಿಗಳನ್ನು ನಾಶಮಾಡಿ, ಅಲ್ಲಿನ ಜನರನ್ನು ಬರ್ಬರವಾಗಿ ಹತ್ಯೆೆಮಾಡಿ, ಹೆಣ್ಣುಮಕ್ಕಳ ಮೇಲೆ ಅತ್ಯಾಾಚಾರವೆಸಗಿ, ಅಲ್ಲಿನ ಆಸ್ತಿಿಪಾಸ್ತಿಿಯನ್ನು ಕೊಳ್ಳೆೆಹೊಡೆಯುವುದು ಹೈದರ್, ಆತನ ಸೈನ್ಯದ ಹೀನಕೃತ್ಯವಾಗಿತ್ತು. ಆಗ ಎಲ್ಲಿ ಹೋದರೂ ಹೈದರ್ ಸೇನೆಯೇ ಪರಾಕ್ರಮ ಮೆರೆಯುತ್ತಿಿತ್ತು. ಯಾಕೆಂದರೆ ಆತನ ಸೇನೆ ದಕ್ಷಿಣದಲ್ಲೇ ಅತ್ಯಂತ ಪ್ರಬಲದಿಂದ ಕೂಡಿದ ಸೈನಿಕರನ್ನೊೊಳಗೊಂಡಿತ್ತು. ಮರಾಠ, ನಿಜಾಮ, ಆಂಗ್ಲರಂಥ ಘಟಾನುಘಟಿಗಳನ್ನು ಮೆಟ್ಟಿಿನಿಂತ ಬಲಾಢ್ಯ ಸೇನೆ ಹೈದರನದ್ದಾಗಿತ್ತು. ಅಂಥ ಸಮಯದಲ್ಲಿ ಯಾರಿಗೂ ಹೆದರದೆ, ಅಳುಕದೆ, ಸೋಲದೆ ನಿರ್ಭಯವಾಗಿ ಆಡಳಿತ ನಡೆಸುತ್ತಿಿದ್ದ ರಾಜನೆಂದರೆ ಅದು ಮದಕರಿ ನಾಯಕರೊಬ್ಬರೇ. ಹರಪನಹಳ್ಳಿಿ, ರಾಯದುರ್ಗ, ಹೀಗೆ ಅನೇಕ ಕಡೆ ಗೆಲುವು ಸಾಧಿಸಿ ತನ್ನ ವರ್ಚಸ್ಸನ್ನು ವೃದ್ಧಿಿಸಿಕೊಂಡಿದ್ದ ಮದಕರಿ ನಾಯಕರು ಸಹಜವಾಗಿಯೇ ಕೋಟೆ ನಾಡಿನ ಕಣ್ಮಣಿಯಾಗಿದ್ದರು.

ಹೈದರಾಲಿಯ ಮಾತುಗಳು ತಮಗೆ ಒಪ್ಪಿಿಗೆಯಾಗದಿದ್ದಾಗ ಎದುರುಗಡೆ ಯಾರೇ ಇದ್ದರೂ, ಸ್ವತಃ ಹೈದರಾಲಿಯೇ ಇದ್ದರೂ ಅದನ್ನು ಕಡ್ಡಿಿಮುರಿದಂತೆ ಖಂಡಿಸಿ ತಮ್ಮ ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದರು. ಅದೆಷ್ಟೋೋ ಬಾರಿ ಸ್ವತಃ ಹೈದರಾಲಿಯೇ ಮದಕರಿ ನಾಯಕರು ಹಾಕಿದ ಗುಟುರಿಗೆ ಒಂದುಕ್ಷಣ ದಂಗಾಗಿ ಈತನಿಗೆ ಅದೆಷ್ಟು ಧಿಮಾಕು ಎಂದು ಮನದಲ್ಲೇ ಅಂದಿಕೊಂಡದ್ದು ಇದೆ. ವೈರಿ ಯಾರೇ ಆಗಿರಲಿ, ಅವರದ್ದು ಎಷ್ಟೇ ದೊಡ್ಡ ಸೈನ್ಯವಿರಲಿ ಅಂಥವರ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರುತ್ತಿಿರಲಿಲ್ಲ. ಅವರದ್ದೇನಿದ್ದರೂ ನ್ಯಾಾಯ-ನಿಷ್ಠೆೆ- ಧರ್ಮಪಾಲನೆಯೇ ಮೂಲಮಂತ್ರ. ಎಷ್ಟೇ ಆದರೂ ದುರ್ಗದ ನಾಯಕರದ್ದು ನ್ಯಾಾಯ, ಧರ್ಮಕ್ಕಾಾಗಿ,ನಾಡು-ನುಡಿಗಾಗಿ ಹೋರಾಡಿದ ಪರಂಪರೆ. ಹಾಗಾಗಿ ಧರ್ಮಪಾಲನೆ, ನ್ಯಾಾಯ-ನೀತಿ ಎಂಬುದು ಸಹಜವಾಗಿಯೇ ಮದಕರಿ ನಾಯಕರಿಗೂ ಒಲಿದಿತ್ತು.

ಒಟ್ಟಿನಲ್ಲಿ ಮದಕರಿ ನಾಯಕರ ಅವಧಿಯಲ್ಲಿ ದುರ್ಗವೆಂದರೆ ಗಂಡುಮೆಟ್ಟಿದ ನಾಡು ಎಂದೇ ಹೆಸರಾಗಿತ್ತು. ಆ ಸಮಯದಲ್ಲಿ ಹೈದರನ ಕಣ್ಣು ದುರ್ಗದ ಮೇಲೆ ಬಿತ್ತು. ಇದನ್ನರಿತ ನಾಯಕರು ಹೈದರಾಲಿ ನಮ್ಮ ಕೋಟೆಯನ್ನು ವಶಪಡಿಸಿಕೊಳ್ಳುವುದಕ್ಕೆೆ ಇದೇನು ಆತನಿದ್ದ ಅರಮನೆಯಲ್ಲ, ಇದು ‘ಕಸ್ತೂರಿ ರಂಗಪ್ಪ ನಾಯಕರು ಆಳಿದ ಏಳುಸುತ್ತಿನ ಕೋಟೆ’ ಎಂದು ಅಬ್ಬರಿಸಿದ್ದರು ಮದಕರಿ ನಾಯಕರು. ದುರ್ಗದ ಮೇಲಿನ ಯುದ್ಧದಲ್ಲಿ ಹೈದರಾಲಿಯ ಸೇನೆ ಮೊದಮೊದಲು ನಾಯಕರು ಹೆಣೆದ ಬಲೆಗೆ ಬಿದ್ದು ಒದ್ದಾಡ ತೊಡಗಿದರು. ಹೈದರನ ಸೈನ್ಯ ಎಷ್ಟೇ ಬಲಾಢ್ಯ ಎನಿಸಿದರೂ ದುರ್ಗದ ಸೈನ್ಯದ ಪರಾಕ್ರಮದ ಮುಂದೆ ಹೈದರಾಲಿಯ ಯಾವ ಕಾರ್ಯಗಳು ಫಲ ನೀಡದ ಹೈದರಾಲಿಯನ್ನು ಚಿಂತೆ ಗೀಡುಮಾಡಿತ್ತು. ಹೈದರಾಲಿ ಕೋಟೆಯನ್ನು ಮುತ್ತಿಿಗೆ ಹಾಕಲು ತರಹೇವಾರಿ ಪ್ರಯತ್ನಗಳನ್ನು ಮಾಡಿದರು. ದುರ್ಗದ ಕೋಟೆಯ ಒಂದು ಕಲ್ಲನ್ನು ಅಲ್ಲಾಡಿಸುವುದು ಸಹ ಆತನ ಸೈನ್ಯದಿಂದ ಆಗುವುದಿಲ್ಲ. ಹೈದರನ ಸಿಡಿಮದ್ದು, ಫಿರಂಗಿ ಯಾವುದಕ್ಕೂ ದುರ್ಗದ ಕೋಟೆ ಎದೆಗುಂದಲಿಲ್ಲ. ಅಷ್ಟೊೊಂದು ಗಟ್ಟಿಿಮುಟ್ಟಾಾದ ಕೋಟೆಯಾಗಿತ್ತು ದುರ್ಗದ ಮದಕರಿ ನಾಯಕರ ಕೋಟೆ. ಒಂದು ದಿನ ಮದಕರಿ ನಾಯಕರು ಹೊರ ಸಂಚಾರ ಹೊರಟಾಗ ಅದನ್ನರಿತ ಹೈದರಾಲಿ ತನ್ನ ಮಗ ಟಿಪ್ಪುು ಸುಲ್ತಾಾನನಿಗೆ ಒಂದು ಅವಕಾಶ ಕೊಡುತ್ತಾಾನೆ. ನಿನ್ನಲ್ಲಿ ಶಕ್ತಿಿಯಿದ್ದರೆ, ತಾಕತ್ತಿಿದ್ದರೆ ಈಗ ಮದಕರಿ ನಾಯಕ ಕೋಟೆಯಿಂದ ಹೊರಗಡೆ ಬಂದಿದ್ದಾನೆ.

ಟಿಪ್ಪುುವಿನ ಅದೃಷ್ಟ ಅಂದು ಚೆನ್ನಾಾಗಿತ್ತು ಅನ್ನಿಿಸುತ್ತೆೆ. ಯಾಕೆಂದರೆ ಆ ದಿನ ಟಿಪ್ಪುು ಸುಲ್ತಾಾನ್ ಮದಕರಿ ನಾಯಕರನ್ನು ಕೊಲ್ಲಲು ಹೋಗಿ ತಾನೇ ಮದಕರಿ ನಾಯಕನ ಕಠಾರಿಯ ಹೊಡೆತಕ್ಕೆೆ ಬಲಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಿಸಿಕೊಂಡು ತನ್ನ ಪ್ರಾಾಣ ಉಳಿಸಿಕೊಂಡಿದ್ದ! ಇಲ್ಲದಿದ್ದರೆ ಅಂದೇ ‘ಟಿಪ್ಪುುವಿನ ಹಣೆಬರಹ ಮುಗಿದ ಅಧ್ಯಾಾಯವಾಗುತ್ತಿಿತ್ತು. ಅಂದು ಮದಕರಿ ನಾಯಕರ ಗುರಿ ತಪ್ಪದಿದ್ದರೆ ಇಂದು ಟಿಪ್ಪುು ಸುಲ್ತಾಾನ್ ಹೆಸರು ಇಷ್ಟೊೊಂದು ದೊಡ್ಡ ಸದ್ದು ಮಾಡುತ್ತಿಿರಲಿಲ್ಲ. ಇತಿಹಾಸದಲ್ಲೂ ಆತನ ಹೆಸರಿರುತ್ತಿಿರಲಿಲ್ಲ! ಸಾವಿನ ದವಡೆಯಿಂದ ತಪ್ಪಿಿಸಿಕೊಂಡು ಬಂದ ಮಗನನ್ನು ನೋಡಿ ಹೈದರಾಲಿ ನಾಚಿಕೆಯಿಂದ ತಲೆತಗ್ಗಿಿಸಿ ಮದಕರಿಯನ್ನು ನೇರವಾಗಿ ಗೆಲ್ಲಲು ನಮ್ಮಿಿಂದ ಅಸಾಧ್ಯ! ದುರ್ಗವನ್ನು ಗೆಲ್ಲಬೇಕಾದರೆ ಕುಟಿಲ ಮಾರ್ಗದಿಂದ ಮಾತ್ರ ಸಾಧ್ಯ ಎಂದು ಭಾವಿಸಿದ ಹೈದರಾಲಿ ಅದಕ್ಕೆೆಂದೇ ಹೊಸ ತಂತ್ರ ಹೆಣೆದ. ಆತನ ತಂತ್ರ ದುರ್ಗದ ಮುಸ್ಲಿಿಮರನ್ನು ಮದಕರಿ ನಾಯಕರ ಮೇಲೆ ಎತ್ತಿಕಟ್ಟಿ ದುರ್ಗವನ್ನು ಗೆಲ್ಲುವುದಾಗಿತ್ತು. ದುರ್ಗದ ಮುಸ್ಲಿಮರು ಹೈದರಾಲಿಯ ಮಾತಿಗೆ ಮರುಳಾಗಿ ನಾಯಕರ ವಿರುದ್ಧ ಸೆಟೆದು ನಿಂತರು.

ಈ ವಿಚಾರ ಮದಕರಿ ನಾಯಕರ ಗಮನಕ್ಕೆೆ ಬಂದು ನಾಯಕರು ದುರ್ಗದ ಎಲ್ಲಾ ಸಮುದಾಯದ ಮುಖಂಡರನ್ನು ಕರೆದು ಸಭೆ ನಡೆಸಿ ಹೇಳಿದರು ‘ನಾವೆಲ್ಲರೂ ಒಂದಾಗಿ ಶತ್ರುವನ್ನು ಎದುರಿಸಬೇಕಾದ ಸಮಯದಲ್ಲಿ ಯಾರೋ ಮತಿಗೇಡಿಗಳು ನಮ್ಮ ನಮ್ಮಲ್ಲಿ ಹಿಂದೂ-ಮುಸ್ಲಿಿಂ ಎಂಬ ಭೇದಭಾವನೆಯನ್ನು ಹರಡುತ್ತಿದ್ದಾರೆ. ಈ ವಿಷಯ ನಿಮ್ಮಗಳ ಕಿವಿಗೂ ಬಿದ್ದಿರಬೇಕು. ನಾವು ಪೂಜಿಸುವ ನಮ್ಮ ಮನೆದೇವರ ಸಾಕ್ಷಿಯಾಗಿ ಹೇಳುತ್ತೇವೆ. ನಮ್ಮಲ್ಲಿ ಎಂದೂ ಆ ರೀತಿಯ ‘ಮತಾಂಧತೆಯ ಬುದ್ಧಿ ಬಂದಿಲ್ಲ’. ಆ ತರಹದ ಭೇದದ ಮಾತುಗಳು ನಮ್ಮೆೆದಿಯಲ್ಲಿ ಮೂಡಿದಾಗ ನಮ್ಮ ನಾಲಗೆಯನ್ನು ಕತ್ತರಿಸಿ ನಿಮ್ಮ ಪಾದದ ಮುಂದಿಡುತ್ತೇವೆ. ಈ ಮಾತಿಗೆ ನಾವು ತಪ್ಪುುವುದಿಲ್ಲ ಎಂದು ನೆರೆದಿದ್ದವರ ಮುಂದೆ ವಾಗ್ದಾಾನಗೈದರು. ಯಾರಿಂದಲೂ, ಯಾವ ಸೈನ್ಯದಿಂದಲೂ ಸೋಲಿಸಲಾಗದ ಈ ದುರ್ಗವನ್ನು ಯಾರೋ ದುರುಳರು ಕುತಂತ್ರದಿಂದ ಒಡೆಯಲು ನೋಡುತ್ತಿದ್ದಾರೆ. ಇದಕ್ಕೆೆ ದುರ್ಗದ ಜನರು ಮರುಳಾಗಬಾರದು.

ಆದ್ದರಿಂದ ನಿಮ್ಮ ಬಳಿ ನಾನು ಕೇಳುವುದಿಷ್ಟೇ, ನೀವು ಹಿಂದೂಗಳೋ, ಮುಸ್ಲಿಿಮರೋ ಅಥವಾ ಇನ್ಯಾಾವುದೇ ಮತದವರಾಗಿದ್ದರೂ ನೀವೆಲ್ಲಾ ಜಾತಿ-ಮತ-ಭೇದವಿಲ್ಲದೆ ಬದುಕಿರುವ ಈ ದುರ್ಗದ ಮಕ್ಕಳು ನೀವು. ಹಾಗಾಗಿ ನಮ್ಮ ನಮ್ಮಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿರುವವರ ಬಗ್ಗೆೆ ನಿಮಗೆ ಅನುಮಾನ ಬಂದರೂ ಸಹ ಅವರ ತಲೆಯನ್ನು ಕತ್ತರಿಸಿ ತಂದು ನಮಗೆ ಒಪ್ಪಿಿಸುವಿರಾ? ಎಂದು ನೆರೆದಿದ್ದವರ ಮುಂದೆ ಸವಾಲು ಹಾಕಿ ಒಗ್ಗಟ್ಟಿನ ಕಿಚ್ಚು ಹೊತ್ತಿಸಿದರು ಮದಕರಿ ನಾಯಕರು. ಸಭೆಯಲ್ಲಿದ್ದ ಎಲ್ಲಾ ಧರ್ಮದವರೂ ನಾಯಕರ ಮಾತಿಗೆ ಜೈಜೈ ಎಂದು ಕೂಗುತ್ತಾಾ ಸಭೆಯಿಂದ ಹೊರಬಂದರು. ನಾಯಕರಾಡಿದ ಮಾತುಗಳು ಎಲ್ಲಾ ಧರ್ಮದ ಜನರ ಮನಗೆದ್ದಿದ್ದವು. ಇಂತಹ ಕಾರಣದಿಂದಾಗಿಯೇ ಮದಕರಿ ನಾಯಕರು ತನ್ನ ಪ್ರಜೆಗಳಿಂದ ‘ಧಣಿ’ಎಂದು ಕರೆಸಿಕೊಂಡಿದ್ದು. ಮುಂದೆ ಕಾಳಗದಲ್ಲಿ ದುರ್ಗದ ಜನ ‘ಹಿಂದೂ ಮುಸ್ಲಿಿಂ ಏಕ್ ಹೈ, ಹೈದರ್ ಸಬ್ ಕೊ ದುಷ್ಮನ್ ಹೈ’ಎಂದು ರಣಘೋಷ ಮೊಳಗಿಸಿದರು. ಈ ರಣಘೋಷ ಒಂದು ಕ್ಷಣ ಹೈದರನ ಬುಡವನ್ನೇ ಅಲುಗಾಡಿಸಿತು. ಆದರೆ, ನವಾಬ ಹೈದರಾಲಿಯ ನರಿ ಆಟದ ಮುಂದೆ ಮದಕರಿ ನಾಯಕರ ಧರ್ಮಪಾಲನೆಯ ಹೋರಾಟ ಫಲಪ್ರದವಾಗಲಿಲ್ಲ. ನಾಯಕರ ದೇಹವು ದುರ್ಗದ ಮಣ್ಣಲ್ಲಿ ಒಂದಾಯಿತು.

ನಾಡಿನ ಜನರನ್ನು ತಮ್ಮ ಮನೆಯ ಮಕ್ಕಳಂತೆ ಕಂಡು ಪ್ರಜಾನಾಯಕರೆನಿಸಿಕೊಂಡ ಮದಕರಿ ನಾಯಕರ ಚರಿತ್ರೆೆಯನ್ನು ಇತಿಹಾಸದ ಪುಟಗಳಲ್ಲಿ ಹಾಗೂ ನಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿ ಕಾಣಬೇಕಿದೆ ಹೊರತು, ಮತಾಂಧನಾಗಿದ್ದ ಟಿಪ್ಪುು ಸುಲ್ತಾಾನನ ಇತಿಹಾಸವನ್ನಲ್ಲ.