Thursday, 12th December 2024

ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡ ಹಾರ್ಪಿಕ್‌

• ಹೊಸ ಫಾರ್ಮುಲಾ 20% ದಪ್ಪವಾಗಿದ್ದು, ಸ್ವಚ್ಛಗೊಳಿಸುವುದು ಹೆಚ್ಚು ಸುಲಭ ಮತ್ತು ದಕ್ಷವಾಗಿದೆ
• ಎಐ ಎನ್‌ಕ್ರಿಪ್ಟ್ ಮಾಡಿದ ಕ್ಯೂಆರ್ ಕೋಡ್‌ ತಂತ್ರಜ್ಞಾನವನ್ನು ಆರಂಭಿಸುವ ಮೊದಲ ಟಾಯ್ಲೆಟ್ ಕ್ಲೀನಿಂಗ್‌ ಬ್ರ‍್ಯಾಂಡ್‌ ಹಾರ್ಪಿಕ್‌

ನವದೆಹಲಿ: ಲ್ಯಾವೆಟರಿ ಕೇರ್ ವಿಭಾಗದಲ್ಲಿ ಪ್ರಮುಖ ಬ್ರ‍್ಯಾಂಡ್ ಆಗಿರುವ ಹಾರ್ಪಿಕ್‌, ತನ್ನ ಮೂಲ ಬಣ್ಣ ನೀಲಿಯನ್ನು ಬದಲಿ ಸಿದ್ದು, ಈ ಬಣ್ಣ ಇನ್ನಷ್ಟು ದಪ್ಪ ಮತ್ತು ಉತ್ತಮವಾಗಿ ಕಾಣಿಸಿಕೊಳ್ಳಲಿದೆ. ಹೊಸ ಹರ‍್ಪಿಕ್ ಸಮಾನವಾಗಿ ದಪ್ಪನೆಯ ಕೋಟಿಂಗ್ ಅನ್ನು ಟಾಯ್ಲೆಟ್ ಬೌಲ್‌ಗೆ ಒದಗಿಸುತ್ತದೆ ಮತ್ತು ಟಾಯ್ಲೆಟ್ ಬೌಲ್ ಸ್ವಚ್ಛಗೊಳಿಸುವುದು ಇನ್ನಷ್ಟು ದಕ್ಷವಾಗಿರಲಿದೆ.

ರೆಕಿಟ್ ಇಂಡಿಯಾ ತನ್ನ ಮೊದಲ ಆರ‍್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿದ ಎನ್‌ಕ್ರಿಪ್ಷನ್ ಟೆಕ್ನಾಲಜಿ ಬಳಸಿಕೊಂಡು ಹೊಚ್ಚ ಹೊಸ ಹಾರ್ಪಿಕ್‌ ಬಿಡುಗಡೆ ಮಾಡಿದೆ.

ಮರ‍್ಕೆಟ್‌ನಲ್ಲಿರುವ ಇತರ ನೀಲಿ ಬಾಟಲ್‌ಗಳಿಗಿಂತ ಇದು ಹೆಚ್ಚು ವಿಭಿನ್ನವಾಗಿ ಕಾಣಿಸಿ ಕೊಳ್ಳಲಿದೆ. ಆಯ್ದ ಹಾರ್ಪಿಕ್‌ ಪ್ಯಾಕ್‌ಗಳ ಪ್ಯಾಕೇಜಿಂಗ್‌ಗೆ ಈ ಹೊಸ ಸರ‍್ಪಡೆಯೊಂದಿಗೆ, ಉತ್ಪನ್ನದ ಉತ್ಪಾದನೆ ಮತ್ತು ಮೂಲ ವನ್ನು ವೈಯಕ್ತಿಕವಾಗಿ ಪರಿಶೀಲಿಸಲು ಎನ್‌ಕ್ರಿಪ್ಟ್‌ ಮಾಡಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಗ್ರಾಹಕರಿಗೆ ಸಾಧ್ಯವಾಗುತ್ತದೆ.

ಈ ಬಗ್ಗೆ ಮಾತನಾಡಿದ ರೆಕಿಟ್‌ ಕಂಪನಿಯ ದಕ್ಷಿಣ ಏಷ್ಯಾ ನರ‍್ಮಲ್ಯ ವಿಭಾಗದ ಪ್ರಾದೇಶಿಕ ಮರ‍್ಕೆಟಿಂಗ್ ನರ‍್ದೇಶಕ ಸೌರಭ್‌ ಜೈನ್‌ “ಕಳೆದ ೧೦೦ ವರ್ಷಗಳಿಂದಲೂ ಸುಸ್ಥಿರ ಸಂಪ್ರ ದಾಯವನ್ನು ಹೊಂದಿರುವ ಹಾರ್ಪಿಕ್‌, ಹೆಚ್ಚುತ್ತಿರುವ ಗ್ರಾಹಕರ ಅಗತ್ಯವನ್ನು ಪೂರೈ ಸುವ ಹೊಸ ಸೊಲ್ಯೂಶನ್‌ಗಳನ್ನು ತರುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರರ‍್ಶಿಸು ತ್ತಿದೆ. ಹೊಸ ಹಾರ್ಪಿಕ್ ಫಾರ್ಮು ಲೇಶನ್  ಹಿಂದಿಗಿಂತ ೨೦% ಹೆಚ್ಚು ಚಲನಶೀಲ ವಾಗಿದೆ ಮತ್ತು ಗ್ರಾಹಕರು ಟಾಯ್ಲೆಟ್‌ ಬೌಲ್‌ಗೆ ಇದನ್ನು ಸುಲಭವಾಗಿ ಹರಡ ಬಹುದು ಅಥವಾ ಕೋಟ್ ಮಾಡಬಹುದು.

ಇದರಿಂದ ಸ್ವಚ್ಛ, ರೋಗಾಣು ರಹಿತ ಮತ್ತು ಹೊಳೆಯುವ ಶೌಚಾಲಯವು ಸಿದ್ಧವಾಗುತ್ತದೆ. ನಮ್ಮ ಪ್ಯಾಕ್‌ಗಳ ಮೇಲೆ ಎಐ ಎನ್‌ಕ್ರಿಒಪ್ಟ್‌ ಮಾಡಿದ ಕ್ಯೂಆರ್ ಕೋಡ್ ಟೆಕ್ನಾಲಜಿಯನ್ನು ತಂದಿರುವ ಭಾರತದಲ್ಲಿನ ಮೊದಲ ಬ್ರ‍್ಯಾಂಡ್‌ ನಮ್ಮದಾಗಿದೆ. ಇದು ಉತ್ಪನ್ನ ಅಸಲಿಯತ್ತನ್ನು ಪರಿಶೀಲಿಸಲು ಗ್ರಾಹಕರಿಗೆ ಸಾಧ್ಯವಾಗುತ್ತದೆ ಮತ್ತು ತಮ್ಮ ಟಾಯ್ಲೆಟ್‌ಗಳನ್ನು ಸ್ವಚ್ಛ ಮತ್ತು ಶುದ್ಧ ವಾಗಿಟ್ಟುಕೊಳ್ಳುವ ಸಲಹೆ ಮತ್ತು ವಿಧಾನಗಳನ್ನು ಒದಗಿಸುವ ಮೂಲಕ ಉತ್ತಮ ತೊಡಗಿಸಿಕೊಳ್ಳುವಿಕೆಯನ್ನು ನೀಡುತ್ತದೆ.”

ರೆಕಿಟ್‌ ದಕ್ಷಿಣ ಏಷ್ಯಾ ನರ‍್ಮಲ್ಯ ವಿಭಾಗದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನರ‍್ದೇಶಕ ಡಾ. ಸ್ಕಂದ್ ಸಕ್ಸೇನಾ ಹೇಳುವಂತೆ “ಪರ‍್ವನರ‍್ಧರಿತ ಗಡಿಗಳನ್ನು ಮೀರಿ, ಹರ‍್ಪಿಕ್ ಅನ್ನು ಅದ್ಭುತ ಮತ್ತು ಆದ್ಯತೆಯ ಬ್ರ‍್ಯಾಂಡ್ ಆಗಿಸುವುದು ನಮ್ಮ ಜವಾಬ್ದಾರಿ.

ರ‍್ಧಿತ ಗ್ರಾಹಕ ಅನುಭವವನ್ನು ಒದಗಿಸುವ ಸುಧಾರಿತ ಉತ್ಪನ್ನ ಫರ‍್ಮ್ಯುಲೇಶನ್‌ಗಳಿಗೆ ಇರುವ ಅಗತ್ಯವನ್ನೂ ನಾವು ಈ ಮೂಲಕ ಪೂರೈಸುತ್ತಿದ್ದೇವೆ. ಹರ‍್ಪಿಕ್‌ನ ಹೊಸ ದಪ್ಪನೆಯ ಫರ‍್ಮ್ಯುಲೇಶನ್‌ನಿಂದಾಗಿ ಉತ್ಪನ್ನ ಹೆಚ್ಚು ದಕ್ಷವಾಗಿ ಕಲೆಯನ್ನು ತೊಳೆಯು ತ್ತದೆ. ದ್ರಾವಣವು ಟಾಯ್ಲೆಟ್‌ಗೆ ಹೆಚ್ಚು ಕಾಲದವರೆಗೆ ಅಂಟಿಕೊಂಡಿರುತ್ತದೆ. ಇದರಿಂದ ಹೆಚ್ಚು ದಕ್ಷವಾಗಿ ಸ್ವಚ್ಛವಾಗುತ್ತದೆ. ಈ ಸುಧಾರಣೆಯಿಂದ ಗ್ರಾಹಕರಿಗೆ ಹೆಚ್ಚು ಉತ್ಪನ್ನ ಮೌಲ್ಯವನ್ನು ಒದಗಿಸುತ್ತದೆ.”

ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿದ ನಂತ್ರ ಗ್ರಾಹಕರನ್ನು ಹಾರ್ಪಿಕ್‌ ಬಾಟಲ್ ಚಿತ್ರವನ್ನು ಹಂಚಿಕೊಳ್ಳುವಂತೆ ಕೇಳುವ ಪುಟಕ್ಕೆ ಮರುನರ‍್ದೇಶಿಸಲಾಗುತ್ತದೆ. ಇದರ ನಂತರ, ಸ್ಕ್ರೀನ್‌ ಮೇಲೆ ಪರಿಶೀಲಿಸಿದ ಟಿಕ್‌ ಫ್ಲಾಶ್ ಆಗುತ್ತದೆ. ಇದು ಪ್ಯಾಕ್‌ನ ಅಸಲಿಯತ್ತನ್ನು ಖಚಿತಪಡಿಸುತ್ತದೆ. ಹೊಸ ದಪ್ಪನೆಯ ಹರ‍್ಪಿಟ್‌ ಟಾಯ್ಲೆಟ್ ಕ್ಲೀನರ್‌ ೨೦೦ ಮಿ.ಲೀ, ೫೦೦ ಮಿ.ಲೀ ಮತ್ತು ೧ ಲೀ. ಪ್ಯಾಕ್‌ಗಳಲ್ಲಿ ಲಭ್ಯವಿದೆ.

ರೂ. ೪೦, ರೂ. ೯೩ ಮತ್ತು ರೂ. ೧೯೫ ರಲ್ಲಿ ಲಭ್ಯವಿದೆ. ಕ್ಯೂಆರ್‌ ಕೋಡ್ ಸಕ್ರಿಯಗೊಳಿಸಿದ ಆಯ್ದ ಪ್ಯಾಕ್‌ಗಳು ಈಗ ಆಫ್‌ ಲೈನ್‌ ಮತ್ತು ಆನ್‌ಲೈನ್‌ ಸ್ಟೋರ್‌ಗಳಲ್ಲಿ ಭಾರತದ ಎಲ್ಲ ಮರ‍್ಕೆಟ್‌ಗಳಲ್ಲಿ ಲಭ್ಯವಿದೆ.