Thursday, 19th September 2024

ಪಠ್ಯದಲ್ಲಿ ಬೇಕು ನಾಲ್ವಡಿ ಕೃಷ್ಣರಾಜ ಒಡೆಯರ ಕಥೆ!

ಇತಿಹಾಸ

ಮುರುಗೇಶ ಆರ್ ನಿರಾಣಿ,

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆಯಲ್ಲಿ ಕಾಲ ಕಳೆದರು. ಎಲ್ಲಕ್ಕಿಿಂತಲೂ ಭಿನ್ನವಾಗಿ ಆಡಳಿತ ನಡೆಸಿದ ಪ್ರಜಾಪ್ರಭುತ್ವ ಮಾದರಿಯಲ್ಲಿ ಸುಧಾರಣವಾದಿ ಚಿಂತನೆಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಒಬ್ಬರು.

ವಿಜಯಪುರದ ಇಬ್ರಾಾಹಿಂ ಆದಿಲ್ ಶಾಹಿ ತನ್ನ ಸಾಮ್ರಾಾಜ್ಯ ಚರಿತ್ರೆೆ ಬರೆಯ ಹೊರಟ ಚರಿತ್ರಕಾರ *ಫರಿಸ್ಥಾಾನ ಬಳಿ ‘ರಾಜನ ಭಯ ಮತ್ತು ಹೊಗಳಿತೆಗಳಿಂದ ಮುಕ್ತವಾದ ಇತಿಹಾಸ ರಚಿಸಬೇಕು’ ಎಂದು ಒಂದು ಸಾಲಿನ ತಾಕೀತು ಮಾಡಿದ್ದನಂತೆ. ಇತಿಹಾಸ ತಿರುಚುವ, ಅತಿರಂಜಿತಗೊಳಿಸುವ ಭಯ ಅರಸರಿಗೆ ಇತ್ತು ಎನ್ನುವುದನ್ನು ಈ ಉದಾಹರಣೆ ಸಾಬೀತುಪಡಿಸುತ್ತದೆ. ಮೈಸೂರು ರಾಜ್ಯವನ್ನು 18 ನೆಯ ಶತಮಾನದಲ್ಲಿ ಆಳಿದ ಟಿಪ್ಪುು ಸುಲ್ತಾಾನ ಕುರಿತ ವಿಷಯವನ್ನು ಶಾಲಾ ಪಠ್ಯಗಳಿಂದ ತೆಗೆದು ಹಾಕಬೇಕು ಎಂದು ಈಗ ವಿವಾದ ಚರ್ಚೆ ಜೋರಾಗಿ ಆರಂಭವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಮೈಸೂರು ರಾಜ್ಯವನ್ನು 1902ರಿಂದ 1945 ರವರೆಗೆ ಆಳ್ವಿಿಕೆಯ ಮಾದರಿ ಮೈಸೂರು ರೂಪಿಸಿದರು. ಅವರ ಆಳ್ವಿಿಕೆಯನ್ನು ಸ್ವತಃ ಗಾಂಧೀಜಿಯವರು ಮೆಚ್ಚಿಿದರು. ಭಾರತದ ಒಬ್ಬ ವಿವೇಕಿಯಾದ ಅರಸು ಎಂದು ಅವರನ್ನು ಗಾಂಧೀಜಿ ಕರೆದಿದ್ದರು. ಪಠ್ಯಪುಸ್ತಕಗಳಲ್ಲಿ ಕೃಷ್ಣರಾಜ ಒಡೆಯರ ಬಗ್ಗೆೆ ಸಾಂದರ್ಭಿಕವಾಗಿ ಹೆಸರು ಮಾತ್ರ ಉಲ್ಲೇಖವಾಗಿದೆ. ಅವರ ವಿಸ್ತೃತ ಜನಪರ ಕೆಲಸಗಳು ಜನಪರ ನಿಲುವುಗಳು ದಾಖಲಾಗಿಲ್ಲ. ಅವರ ಚರಿತ್ರೆೆಯನ್ನು ಪಠ್ಯಪುಸ್ತಕದಲ್ಲಿ ಓದಿ ಮಕ್ಕಳು ಸ್ಫೂರ್ತಿ ಪಡೆಯುವಂತಾಗಬೇಕು.

ಸ್ವಾಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆ, ಲೋಲುಪತೆಯಲ್ಲಿ ಕಾಲ ಕಳೆದರು. ಎಲ್ಲಕ್ಕಿಿಂತಲೂ ಭಿನ್ನವಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸುಧಾರಣವಾದಿ ಚಿಂತನೆಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರ ರಾಜ್ಯವನ್ನು ಜನಪರವಾಗಿ ಆಳಿ ‘ರಾಜರ್ಷಿ’ ಎಂಬ ಗೌರವಕ್ಕೆೆ ಪಾತ್ರರಾದರು. ಅವರು ಕೃಷಿ, ಕೈಗಾರಿಕೆ, ಶಿಕ್ಷಣ, ನೀರಾವರಿ, ಆರೋಗ್ಯ, ಸಾರಿಗೆ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಬಹುದೊಡ್ಡ ಕ್ರಾಾಂತಿಯನ್ನೇ ಮಾಡಿದರು. ಅಸ್ಪಶ್ಯತೆ ನಿವಾರಣೆ, ದೇವದಾಸಿ ಪದ್ಧತಿ ನಿಷೇಧ, ಬಾಲ್ಯವಿವಾಹ ನಿಷೇಧ ಹೀಗೆ ಹಲವಾರು ಪ್ರಗತಿಪರ ಕಾನೂನು ಜಾರಿಯಲ್ಲಿ ತಂದರು. ಅವರು ಒಬ್ಬ ಚುನಾಯಿತ ಪ್ರತಿನಿಧಿಯ ಹಾಗೆ ಜನರ ಹತ್ತಿಿರ ಹೋಗಿ ಅವರ ಆಶೋತ್ತರಗಳಿಗೆ ಸ್ಪಂದಿಸಿದ್ದು ಅವರ ಸರಳ ಸಜ್ಜನಿಕೆೆ ತೋರಿಸುತ್ತದೆ. ಅವರು ಗತಿಸಿ 80 ವರ್ಷ ಕಳೆದರೂ ಅವರ ಬಗ್ಗೆೆ ಅಪಾರವಾದ ಅಭಿಮಾನ ಉಕ್ಕುತ್ತಿಿದೆ. ಈಗಲೂ ಮೈಸೂರು ಭಾಗದ ಮನೆಗಳಲ್ಲಿ ನಾಲ್ವಡಿ ಕೃಷ್ಣರಾಜರ ಭಾವಚಿತ್ರ ರಾರಾಜಿಸುತ್ತಿವೆ.

ನಾಲ್ವಡಿ ಕೃಷ್ಣರಾಜ ಒಡೆಯರು ಯದುವಂಶದ 24ನೇ ಮಹಾರಾಜರು. ಅವರು ಜನಿಸಿದ್ದು 1884 ಜೂನ 4 ರಂದು. ತಂದೆ ಚಾಮರಾಜೇಂದ್ರ ಒಡೆಯರು ಅವರ ಸಣ್ಣ ವಯಸ್ಸಿಿನಲ್ಲಿಯೇ ನಿಧನರಾದರು. ಆಗ ನಾಲ್ವಡಿ ಕೃಷ್ಣರಾಜರಿಗೆ ಕೇವಲ 10 ವರ್ಷ ವಯಸ್ಸು. ತಾಯಿ ರಾಜಮಾತೆ ವಾಣಿವಿಲಾಸ ಸನ್ನಿಿಧಾನ ಅವರು ನಾಲ್ವಡಿಯವರಿಗೆ ಉತ್ತಮ ಶಿಕ್ಷಣ ಹಾಗೂ ಮಾರ್ಗದರ್ಶನದ ವ್ಯವಸ್ಥೆೆ ಮಾಡಿದರು. ಒಬ್ಬ ದಕ್ಷ ನಾಯಕನನ್ನಾಾಗಿ ರೂಪಿಸಿದರು.

ನಾಲ್ವಡಿ ಅವರು ಅಧಿಕಾರ ವಹಿಸಿಕೊಂಡು ಮೊಟ್ಟ ಮೊದಲಿಗೆ ಪ್ರಜಾಪ್ರತಿನಿಧಿ ಸಭೆ ಸಶಕ್ತಗೊಳಿಸುವುದಕ್ಕೆೆ ಅವಕಾಶ ನೀಡಿದರು. ಇಂಗ್ಲಿಿಷ್‌ನಲ್ಲಿ ದಾಖಲಿಸಲಾಗುತ್ತಿಿದ್ದ ಸಭೆಯ ಕಲಾಪ ವಿವರಗಳನ್ನು ಕನ್ನಡದಲ್ಲಿ ದಾಖಲಿಸಲು ತೀರ್ಮಾನ ಮಾಡಿದರು. ಇದರಿಂದ ಸರಕಾರ ಜನರ ಹತ್ತಿಿರಕ್ಕೆೆ ಹೋಗಲು ಬಹಳ ನೆರವಾಯಿತು. ಸದಸ್ಯರ ಆಯ್ಕೆೆಯಲ್ಲಿ ಮಹಿಳೆಯರಿಗೂ ಮತದಾನದ ಹಕ್ಕು ನೀಡಲಾಯಿತು. ಬ್ರಿಿಟಿಷ್ ಪಾರ್ಲಿಮೆಂಟ್ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು 1925ರಲ್ಲಿ, ಆದರೆ, ಮೈಸೂರ ಸಂಸ್ಥಾಾನ 1923ರಲ್ಲಿಯೇ ಮಹಿಳೆಯರಿಗೆ ಮತದಾನ ಹಕ್ಕು ನೀಡಿ ಪ್ರಕಟಣೆ ಹೊರಡಿಸಿದೆ.

ಅಭಿವೃದ್ಧಿಿಯ ರೂವಾರಿ ಎನಿಸಿದ ನಾಲ್ವಡಿ ಅವರು ಶಿಕ್ಷಣ ಪ್ರಸಾರಕ್ಕೆೆ ಪ್ರಥಮ ಆಧ್ಯತೆ ನೀಡಿದ್ದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಿ 7ನೇ ವಯಸ್ಸಿಿನಿಂದ 11ನೇ ವಯಸ್ಸಿಿನವರೆಗೆ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಾಯಗೊಳಿಸಿದರು. ವಯಸ್ಕರ ಶಿಕ್ಷಣ ಪ್ರಕ್ರಿಿಯೆ ಆರಂಭಿಸಿ 1912ರಲ್ಲಿ 7000 ರಾತ್ರಿಿ ಶಾಲೆಗಳನ್ನು ತೆರೆಯಲಾಯಿತು. ಹಿಂದುಳಿದವರಿಗೆ, ದಲಿತರಿಗೆ ಶಾಲಾ ಪ್ರವೇಶಕ್ಕೆೆ ಮುಕ್ತ ಅವಕಾಶ ಕಲ್ಪಿಿಸಲಾಯಿತು. ಅವರಿಗೆ ಸಹಾಯ ಮಾಡುವುದಕ್ಕೆೆ ಸರಳ ವಿದ್ಯಾಾರ್ಥಿ ವೇತನ ಯೋಜನೆ ಜಾರಿ ಮಾಡಲಾಯಿತು. ದಲಿತ ಮಕ್ಕಳು ಆತ್ಮವಿಶ್ವಾಾಸದಿಂದ ಶಾಲೆಗೆ ಹೋಗಬೇಕು ಪಕ್ಷಪಾತ-ಭೇದ ಮಾಡಬಾರದು. ದಲಿತ ಮಕ್ಕಳಲ್ಲಿ ಕೀಳರಿಮೆ ಬೆಳೆಯದಂತೆ ಜಾಗೃತಿ ವಹಿಸಬೇಕೆಂದು ಅವರು ಕಟ್ಟಪಣೆ ಮಾಡಿದ್ದರು. ಕಾಶಿಯಲ್ಲಿ ಹಿಂದೂ ವಿಶ್ವವಿದ್ಯಾಾಲಯ ಆರಂಭಿಸಲು ಮದನ್ ಮೋಹನ ಮಾಳವೀಯ ಅವರಿಗೆ ನಾಲ್ವಡಿ ಅವರು ಅಪಾರ ಸಹಾಯ ಮಾಡಿದರು. ನಾಲ್ವಡಿ ಅವರೇ ಹಿಂದೂ ವಿವಿಯ ಪ್ರಥಮ ಚಾನ್ಸಲರ್ ಎಂಬುದು ಗಮನಾರ್ಹ ಸಂಗತಿ.
ತಾಂತ್ರಿಕ ಶಿಕ್ಷಣಕ್ಕಾಾಗಿ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್ ಆಫ್ ಸೈನ್‌ಸ್‌ ಸಂಸ್ಥೆೆ ಆರಂಭಿಸಿದ್ದು ಒಂದು ದೊಡ್ಡ ಮೈಲುಗಲ್ಲು. 1916ರಲ್ಲಿ ಮೈಸೂರ ವಿಶ್ವವಿದ್ಯಾಾಲಯ ಆರಂಭಿಸಲಾಯಿತು. ಇದರಿಂದ ರಾಜ್ಯದ ವ್ಯಾಾಪ್ತಿಿಯಲ್ಲಿ ಉನ್ನತ ಶಿಕ್ಷಣದ ಹೆಬ್ಬಾಾಗಿಲು ತೆರೆದಂತಾಯಿತು.

ಕೈಗಾರಿಕಾ ಕ್ರಾಾಂತಿಗೆ ಮುನ್ನುಡಿ ಬರೆದದ್ದು ರಾಜ್ಯದ ಆರ್ಥಿಕ ಅಭಿವೃದ್ಧಿಿಗೆ ಮತ್ತು ಉದ್ಯೋೋಗ ಸೃಷ್ಟಿಿಗೆ ಬಹಳ ಪೂರಕವಾಯಿತು. ಬೆಂಗಳೂರಿನಲ್ಲಿ ವಿಮಾನ ಕಾರ್ಖಾನೆ, ರೈಲ್ವೆೆ ಕಂಪನಿ ಆರಂಭ, ಭದ್ರಾಾವತಿಯಲ್ಲಿ ಕಬ್ಬಿಿಣ ಮತ್ತು ಉಕ್ಕು ಕಾರ್ಖಾನೆ, ಹತ್ತಿಿ ಗಿರಣಿ ಸಾಬೂನು ಕಾರ್ಖಾನೆ, ಗಂಧದ ಕಾರ್ಖಾನೆ, ಮೈಸೂರು ಸಿಮೆಂಟ್, ಸಕ್ಕರೆ ಕಾರ್ಖಾನೆ, ಮೆಟಲ್ ಫ್ಯಾಾಕ್ಟರಿ ಪಿಂಗಾಣಿ ಮತ್ತು ಗಾಜಿನ ಕಾರ್ಖಾನೆ, ಒಟ್ಟು 167 ಕೈಗಾರಿಕೆಗಳನ್ನು ಅರಸರು ಆರಂಭಿಸಿದ್ದು ಒಂದು ದೊಡ್ಡ ದಾಖಲೆ. ಕುಶಲ ಕಾರ್ಮಿಕರನ್ನು ಒದಗಿಸಲು ಐಟಿಐಗಳನ್ನು ಆರಂಭಿಸಲಾಯಿತು. ನಾಲ್ವಡಿ ಅವರ ಆಳ್ವಿಿಕೆಯ ಕಾಲವನ್ನು ಮೈಸೂರು ಸಂಸ್ಥಾಾನದ ಕೈಗಾರಿಕಾ ಅಭಿವೃದ್ಧಿಿಯ ‘ಸುವರ್ಣಯುಗ’ವೆಂದು ಗುರುತಿಸಲಾಗಿದೆ.

ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ‘ಪ್ರಜೆಗಳೇ ಪ್ರಭುಗಳು. ಎಲ್ಲರೂ ಸಮಾನರು, ಮೇಲು ಕೀಳು ಎಂಬ ಭಾವನೆ ಇರಕೂಡದು ರಾಜ್ಯದ ಎಲ್ಲ ಜಾತಿ-ಪಂಗಡದವರು ಮುಖ್ಯವಾಹಿನಿಗೆ ಬರಬೇಕು ಮತ್ತು ರಾಜನ ಭಯ ಮತ್ತು ಹೊಗಲಿಕೆಯಿಂದ ಮುಕ್ತವಾದ ಕಲಾಪಗಳು ನಡೆಯಬೇಕು ಎಂದು ಹೇಳುತ್ತಿದ್ದರು. ಹರಿಜನೋಧ್ಧಾಾರವನ್ನು ಗಾಂಧೀಜಿ ಮತ್ತು ಕಾಂಗ್ರೆೆಸ್ ಪಕ್ಷ ಆರಂಭ ಮಾಡುವ ಮೊದಲೇ ಕೃಷ್ಣರಾಜರು ಹರಿಜನ ಅಭಿವೃದ್ಧಿಗೆ ಕ್ರಮಕೈಕೊಂಡದ್ದು ಗಮನಾರ್ಹ ಸಂಗತಿ. ಮೈಸೂರು, ಚಿಕ್ಕಮಂಗಳೂರು ಮತ್ತು ತುಮಕೂರಲ್ಲಿ ಹರಿಜನ ವಸತಿ ಶಾಲೆಗಳನ್ನು ಆರಂಭಿಸಿದರು. ಅರಮನೆಯಲ್ಲಿ ನಡೆಯುತ್ತಿಿದ್ದ ದರ್ಬಾರಿಗೆ ಹರಿಜನರು ಮತ್ತು ಬುಡಕಟ್ಟು ಜನರು ಬರಲು ಅವಕಾಶ ಕಲ್ಪಿಿಸಿಕೊಟ್ಟರು. ಹರಿಜನ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರಿಗೆ ಪ್ರೋೋತ್ಸಾಾಹ ಧನ ನೀಡುವ ಯೋಜನೆ ಜಾರಿಗೆ ತಂದರು. ಹಿಂದುಳಿದ ಜನರ ಸಮಸ್ಯೆೆಗಳನ್ನು ಪರಿಶೀಲಿಸಲು ನ್ಯಾಾಯಮೂರ್ತಿ ಲೆಸ್ಲಿಿ ಮಿಲ್ಲರ್ ಆಯೋಗ ನೇಮಿಸಿದರು. ಆಯೋಗದ ವರದಿ ಹಿಂದುಳಿದ ಅಭಿವೃದ್ಧಿಿಗೆ ಬಹಳ ಪೂರಕವಾಗಿ ಕೆಲಸ ಮಾಡಿತು. ಈ ವರದಿಯ ಉಲ್ಲೇಖಗಳನ್ನು ಈಗಲೂ ಅನೇಕ ಸಮಿತಿಗಳು ಮಾರ್ಗ ಸೂತ್ರವಾಗಿ ಬಳಸುತ್ತಿಿವೆ.

ನಾಲ್ವಡಿ ಅವರಲ್ಲಿ ದಿವಾನರಾಗಿದ್ದ ಅಧಿಕಾರಿಯೊಬ್ಬರು 6 ಜನ ತಾಲೂಕು ಅಧಿಕಾರಿಗಳನ್ನು ಆಯ್ಕೆೆ ಮಾಡಿ ಆ ಹೆಸರುಗಳ ವರದಿಯನ್ನು ರಾಜರಿಗೆ ಸಲ್ಲಿಸಿದರು. ಈ ಹೆಸರುಗಳು ಮೇಲ್ವರ್ಗದ ಒಂದೇ ಜಾತಿಗೆ ಸೇರಿದ್ದವು. ಇದು ಅರಸರಿಗೆ ಒಪ್ಪಿಿಯಾಗಲಿಲ್ಲ. ಕೆಳವರ್ಗಕ್ಕೆೆ ಸೇರಿದ ಅರ್ಹ 3 ಹೆಸರುಗಳನ್ನು ಸೇರಿಸಲು ಸಲಹೆ ಮಾಡಿದರು. ಆದರೆ, ಇದು ದಿವಾನ್‌ರಿಗೆ ಇಷ್ಟವಾಗಲಿಲ್ಲ. ಅವರು ಪುನಃ ಅವೇ 6 ಹೆಸರುಗಳನ್ನು ಶಿಫಾರಸು ಮಾಡಿ ಅರಸರಿಗೆ ವರದಿ ಸಲ್ಲಿಸಿದರು. ಅರಸರು ಈ ಶಿಪಾರಸಿನಲ್ಲಿ 3 ಹೆಸರು ಮಾತ್ರ ಒಪ್ಪಿಿ. ಬೇರೆ ಮೂರು ಹೆಸರುಗಳನ್ನು ಸ್ವತಃ ಸೇರಿಸಿದರು. ಆದರೆ, ಇದು ಅಪಮಾನ ಎಂದು ಭಾವಿಸಿ ದಿವಾನರು ರಾಜೀನಾಮೆ ನೀಡಿದರು. ಅರಸರು ಈ ರಾಜೀನಾಮೆಯನ್ನು ಮನಸ್ಸಿಿಲ್ಲದ ಮನಸ್ಸಿಿನಿಂದ ಸ್ವೀಕರಿಸಿದರು. ತುಂಬ ಖ್ಯಾಾತಿ ಹೊಂದಿದ್ದ ದಕ್ಷರೂ, ಪ್ರಾಾಮಾಣಿಕರೂ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರೇ ಆ ದಿವಾನರಾಗಿದ್ದರು ಎಂಬುದು ವಿಶೇಷ ಸಂಗತಿ. ಅರಸರು ಹಿಂದುಳಿದವರನ್ನು ಮೇಲೆತ್ತಲು ಎಂಥ ದಿಟ್ಟ ನಿರ್ಧಾರ ತೆಗೆದು ಕೊಳ್ಳುತ್ತಿದ್ದರು ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ. ತಳಸಮುದಾಯದೊಂದಿಗೆ ಬಸವಣ್ಣ ಹಾಗೇ ದಿಟ್ಟತನದಿಂದ ಬೆರೆತು ನಿಜಕ್ಕೂ ಒಂದು ಅಪೂರ್ವ ಸಂಗತಿ.

ನಾಲ್ವಡಿ ಅವರ ಕನ್ನಂಬಾಡಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಆ ಕಾಲದ ಒಂದು ಬೃಹತ್ ಯೋಜನೆ. ಕನ್ನಂಬಾಡಿ ನಿರ್ಮಾಣದಿಂದ ಮೈಸೂರು ಭಾಗದ 38% ಭೂಮಿ ನೀರಾವರಿ ಸೌಲಭ್ಯ ಪಡೆಯಿತು. ಕೆರೆಗಳ ಅಭಿವೃದ್ಧಿಿಗೆ ಅವರು ವಿಶೇಷ ಯೋಜನೆ ರೂಪಿಸಿ 7000 ಕೆರೆಗಳ ನಿರ್ಮಾಣ ಮಾಡಿದರು. ಇದೇ ಸಮಯದಲ್ಲಿ ಮಾರಿಕಣಿವೆ ಜಲಾಶಯ ನಿರ್ಮಿಸಲಾಯಿತು. ನೀರಾವರಿ ಅಭಿವೃದ್ಧಿಿ ನಿಧಿ ಸ್ಥಾಾಪಿಸಿ ಬರ ಪರಿಹಾರಕ್ಕೆೆ ಮಾರ್ಗ ಸೂತ್ರ ರಚಿಸಲಾಯಿತು.

ಕನ್ನಡ ಜನರ ಭಾಷೆ, ನೆಲದ ಭಾಷೆ, ಎಲ್ಲ ವ್ಯವಹಾರ ಕನ್ನಡದಲ್ಲಿ ನಡೆಯಬೇಕು ದಾಖಲೆಗಳು ಕನ್ನಡದಲ್ಲಿ ಲಭ್ಯವಾಗಬೇಕು ಎಂದು ಕಟ್ಟು ನಿಟ್ಟಿನ ನಿಯಮ ಜಾರಿಗೆ ತಂದರು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಾಪಿಸಿದರು. ಅದು ಇಂದು ಕನ್ನಡಿಗರ ಶಕ್ತಿಿ ಕೇಂದ್ರವಾಗಿ ಬೆಳೆದಿದೆ. ಅರಸರ ಸಂಸ್ಕೃತಿಕ ಮನಸ್ಸು ಮೆಚ್ಚುವಂಥದ್ದು ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಶಾಲೆಗಳನ್ನು ಆರಂಭಿಸಿದರು. ಕಲಾವಿದರಿಗೆ ಆಶ್ರಯ ನೀಡಿದರು. ಅಶಕ್ತ ಕಲಾವಿದರ ಪೋಷಣೆ ನೆರವು ನಿಧಿ ಆರಂಭಿಸಿದರು. ನಾಲ್ವಡಿ ಅವರು ಅನೇಕ ವಾದ್ಯಗಳನ್ನು ಸ್ವಂತ ನುಡಿಸುತ್ತಿಿದ್ದರು. ಕಲಾವಿದರೊಂದಿಗೆ ಒಂದಾಗಿ ಬೆರೆಯುತ್ತಿಿದ್ದರು. ಅನೇಕ ಹಾಡುಗಳನ್ನು, ಗೀತೆಗಳನ್ನು ತಾವೇ ಆಯ್ಕೆೆ ಮಾಡಿ ಕಲಾವಿದರಿಗೆ ಹಾಡಲು ಸೂಚಿಸುತ್ತಿಿದ್ದರು. ನಾಲ್ವಡಿ ಕೃಷ್ಣ ರಾಜರ ಕಾಲದಲ್ಲಿ ಮೈಸೂರು ದರ್ಬಾರು ಕರ್ನಾಟಕ ಹಿಂದೂಸ್ಥಾಾನಿ ಮತ್ತು ಪಾಶ್ಚಾಾತ್ಯ ಸಂಗೀತದ ತಿವೇಣಿ ಸಂಗಮವಾಗಿತ್ತು ಎಂದು ಭಾರತಕ್ಕೆೆ ಹಿಂದೆ ಭೆಟ್ಟಿ ನೀಡಿದ್ದ ಫ್ರಾಾನ್‌ಸ್‌ ಚಕ್ರವರ್ತಿ ಅಭಿಪ್ರಾಾಯ ದಾಖಲಿಸಿದ್ದಾಾರೆ.

ಸ್ವಂತದ ಆಭರಣ ನೀಡಿದ ಅರಸು ದಂಪತಿ ಸಹಕಾರದಿಂದ ಕಾವೇರಿ ನದಿಗೆ ಕನ್ನಂಬಾಡಿ ಆಣೆಕಟ್ಟೆೆ ಕಟ್ಟಲು ನಾಲ್ವಡಿ ಅವರ ದೃಢ ನಿರ್ಧಾರ ಮಾಡಿದರು. 124 ಅಡಿ ನೀರು ಶೇಖರಿಸಬಹುದಾದ ಈ ಕಟ್ಟೆೆಗೆ ಆಗ 2.75 ಕೋಟಿ ವೆಚ್ಚ ತಗಲುವ ಅಂದಾಜು ಮಾಡಲಾಯಿತು. ರಾಜ್ಯದ ವಾರ್ಷಿಕ ಒಟ್ಟು ಆದಾಯ ಆಗ 2.32 ಇತ್ತು. ಎಲ್ಲ ಆದಾಯವನ್ನು ಕಟ್ಟೆೆ ಕಟ್ಟುವುದಕ್ಕೆೆ ಬಳಸುವುದು ಸಾಧ್ಯವಿರಲಿಲ್ಲ ಹಣದ ಕೊರತೆ ನೀಗಲು ಮಹಾರಾಜರು ಹಾಗೂ ರಾಜ ಮಾತೆ ತಮ್ಮ ಖಾಸಗಿ ಭಂಡಾರದಲ್ಲಿದ್ದ ನಾಲ್ಕು ಭಾರಿ ಮೂಟೆಗಳಲ್ಲಿದ್ದ ವಜ್ರ ವೈಡೂರ್ಯಗಳ ಆಭರಣಗಳು ಮತ್ತು ಬೆಳ್ಳಿ ರುಪಾಯಿಗಳನ್ನು ಮುಂಬೈಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಎಲ್ಲ ಹಣವನ್ನು ಕನ್ನಂಬಾಡಿ ಕಟ್ಟೆೆ ನಿರ್ಮಾಣಕ್ಕೆ ಬಳಸಿದರು.

ಕೃಷ್ಣರಾಜ ಒಡೆಯರ ಅವರು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಹಿಂದುಳಿದ ಜನರ ಅಭಿವೃದ್ಧಿಿಗೆ ಒಂದು ಆಯೋಗ ರಚಿಸಿದ್ದು ಚರಿತ್ರೆೆಯ ಒಂದು ಮಹತ್ವದ ಮೈಲುಗಲ್ಲು. ಅವಕಾಶ ವಂಚಿತರನ್ನು ಹಿಂದುಳಿದವರನ್ನು ಪಂಚಮರನ್ನು ಆಡಳಿತದ ಮುಖ್ಯ ಧಾರೆಗೆ ತರಲು ಅವರಿಗೆ ರಿಯಾಯಿತಿ, ಮೀಸಲು ಎಷ್ಟು ನೀಡಬೇಕು ಎಂದು ಅಧ್ಯಯನ ವರದಿ ನೀಡಲು ಆಗ ರಾಜ್ಯದ ಮುಖ್ಯನ್ಯಾಾಯಮೂರ್ತಿ ಲೆಸ್ಲಿಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಅಗಸ್‌ಟ್‌ 1918ರಲ್ಲಿ ಒಂದು ಆಯೋಗವನ್ನು ರಚಿಸಿದರು. ಈ ಆಯೋಗ 1919ರಲ್ಲಿ ಹಿಂದುಳಿದವರಿಗಾಗಿ ಮೀಸಲು ಎಂಬ ವರದಿಯನ್ನು ನೀಡಿದೆ. ವರದಿಯಲ್ಲಿ 7 ವರ್ಷಗಳ ಅವಧಿಯಲ್ಲಿ ಶೇ.50 ರಷ್ಟು ಹುದ್ದೆೆಗಳನ್ನು ಹಿಂದುಳಿದ ಸಮುದಾಯಕ್ಕೆೆ ನೀಡಬೇಕೆಂದು ಹೇಳಲಾಗಿದೆ. ಅರಸರು ಈ ವರದಿಯನ್ನು ಒಪ್ಪಿಿ 1919ರಲ್ಲಿಯೇ ಅಂದರೇ ಈಗ ಸರಿಯಾಗಿ 100 ವರ್ಷಗಳ ಹಿಂದೆ ಜಾರಿಗೆ ತಂದರು. ಇದು ಐತಿಹಾಸಿಕ ಮೈಲುಗಲ್ಲು. ಕನ್ನಡಿಗರು ಹೆಮ್ಮೆೆ ಪಡುವ ಸಂಗತಿ. ಮಕ್ಕಳ ಪಠ್ಯದಲ್ಲಿ ಕೃಷ್ಣರಾಜ ಒಡೆಯರ ಚರಿತ್ರೆೆಯನ್ನು ಹೆಮ್ಮೆೆಯಿಂದ ಸೇರಿಸುವುದು ಶಿಕ್ಷಣ ರಂಗದಲ್ಲಿದ್ದವರ ಎಲ್ಲರ ಜವಾಬ್ದಾಾರಿಯಾಗಿದೆ.

Leave a Reply

Your email address will not be published. Required fields are marked *