Thursday, 12th December 2024

ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣ: ಪ್ರಫುಲ್ ಸಿಂಗ್ ದಾಖಲೆ

ನವದೆಹಲಿ : ಮೆಟ್ರೋ ರೈಲು ಕಾರ್ಪೊರೇಷನ್ ಉದ್ಯೋಗಿ ಪ್ರಫುಲ್ ಸಿಂಗ್ 16 ಗಂಟೆ 2 ನಿಮಿಷಗಳಲ್ಲಿ ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

16 ಗಂಟೆ 2 ನಿಮಿಷಗಳಲ್ಲಿ 348 ಕಿಲೋಮೀಟರ್ ದೂರ ಒಳಗೊಂಡಿರುವ ರಾಷ್ಟ್ರ ರಾಜಧಾನಿಯ ಎಲ್ಲಾ ಮೆಟ್ರೋ ನಿಲ್ದಾಣ ಗಳನ್ನು ಕ್ರಮಿಸುವ ಮೂಲಕ ಸಿಂಗ್ ಈ ಸಾಧನೆ ಮಾಡಿದ್ದಾರೆ.

2017 ರಲ್ಲಿ, ಅಧಮ್ ಫಿಶರ್ ಎಂಬವರು ಮ್ಯಾಡ್ರಿಡ್ ಮೆಟ್ರೋ ಅಡಿಯಲ್ಲಿ ಎಲ್ಲಾ ನಿಲ್ದಾಣಗಳಿಗೆ 12 ಗಂಟೆಗಳು, 15 ನಿಮಿಷಗಳು ಮತ್ತು 48 ಸೆಕೆಂಡುಗಳಲ್ಲಿ ಪ್ರಯಾಣಿಸುವ ಮೂಲಕ ವೇಗವಾಗಿ ಪಯಾಣಿಸಿದ ದಾಖಲೆ ಹೊಂದಿದ್ದರು.

2019 ರಲ್ಲಿ, ಎಲ್ಲಾ ರೋಟರ್‌ಡ್ಯಾಮ್ ಮೆಟ್ರೋ ನಿಲ್ದಾಣಗಳಿಗೆ 4 ಗಂಟೆ, 2 ನಿಮಿಷಗಳು ಮತ್ತು 10 ಸೆಕೆಂಡುಗಳಲ್ಲಿ ಪ್ರಯಾಣಿಸಿ ವೇಗದ ಸಮಯ ದಾಖಲಿಸಿದ್ದರು. ಮೆಟ್ರೋ ಸುರಂಗಮಾರ್ಗ ವ್ಯವಸ್ಥೆಯಲ್ಲಿ ಮೋಹ ಹೊಂದಿರುವ ಫಿಶರ್, ಪ್ಯಾರಿಸ್ ಮೆಟ್ರೋ ಮತ್ತು ನ್ಯೂಯಾರ್ಕ್ ಸಬ್‌ವೇಯಲ್ಲಿ ಎಲ್ಲಾ ನಿಲ್ದಾಣಗಳಿಗೆ ವೇಗವಾಗಿ ಪ್ರಯಾಣಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ.