Saturday, 23rd November 2024

ವ್ಯವಸ್ಥೆ ವಿರುದ್ಧದ ಆಕ್ರೋಶವೇ ಚಿತ್ರದ ಗೆಲುವಿಗೆ ಕಾರಣ

ದೇಶಾದ್ಯಂತ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಭರ್ಜರಿ ಪ್ರದರ್ಶನ ಕುರಿತು ರೋಹಿತ್ ಚಕ್ರತೀರ್ಥ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ – ೨೩೯

ಬೆಂಗಳೂರು: ಕಾಶ್ಮೀರದಲ್ಲಿ ಹಿಂದೂ ಪಂಡಿತರ ಮೇಲೆ ನಡೆದ ಕ್ರೂರತೆಯನ್ನು ಹೇಳಲಿಕ್ಕೆ ಮೂರು ಗಂಟೆಯಲ್ಲ, ಮೂರು
ತಿಂಗಳಾದರೂ ಸಾಧ್ಯವಿಲ್ಲ. ಯಾವದೇ ದೊಡ್ಡ ಸ್ಟಾರ್ ಇಲ್ಲದೆ, ಯಾವುದೇ ಮೀಡಿಯಾ ಹೈಪ್ ಇಲ್ಲದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಜನಸಾಮಾನ್ಯರು ಗೆಲ್ಲಿಸಿದ್ದಾರೆ.

ಕಾಶ್ಮೀರದ ಪಂಡಿತರ ಶೋಚನೀಯ ಸ್ಥಿತಿ ಒಂದೆಡೆಯಾದರೆ, ಇಷ್ಟಾದರೂ ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು
ಏಕೆ ಏನನ್ನೂ ಮಾಡಲಿಲ್ಲ ಎಂಬ ಆಕ್ರೋಶ ಇನ್ನೂ ಜನರಲ್ಲಿದೆ. ಹೀಗಾಗಿ ಅಂದಿನ ಘಟನೆಗಳು ಯಾವ ರೀತಿ ನಡೆದಿವೆ ಎಂಬು ದನ್ನು ನೋಡಲು ಜನರು ಕಾತರರಾಗಿದ್ದಾರೆ. ಆದ್ದರಿಂದಲೇ ಸಿನಿಮಾ ಗೆಲ್ಲುತ್ತಿದೆ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಮತ್ತು ಕಾಶ್ಮೀರದಲ್ಲಿ ನಡೆದ ಕೆಲವು ನೈಜ ಘಟನೆಗಳ ಬಗ್ಗೆ ಅರಿವಿನ ಉಪನ್ಯಾಸ ನೀಡಿದರು. ಅವರು ಒಟ್ಟಾರೆ ಹೇಳಿದ್ದಿಷ್ಟು… ಭಾರತದ ಉದ್ದಗಲಕ್ಕೂ ಅಕ್ಷಾರಾಭ್ಯಾಸ ಮಾಡಿಸ ಬೇಕಾದರೆ ಸರಸ್ವತೀ ದೇವಿ ಸ್ಮರಣೆ ಮಾಡಿಸಿ, ಅಕ್ಷರ ಬರೆಸುತ್ತೇವೆ. ಜ್ಞಾನಕ್ಕೆ ಅಧಿದೇವತೆಯಾದ ಶಾರದೆ ಕಾಶ್ಮೀರ ಪುರವಾಸಿನಿ. ಸರಸ್ವತಿ ನದಿಯೂ ಹೌದು, ದೇವತೆಯೂ ಹೌದು. ಆ ನದಿಯ ತೀರದಲ್ಲಿ ಬೆಳೆದು ಬಂದ ನಾಗರೀಕತೆಯೇ ಸರಸ್ವತೀ ನಾಗರೀಕತೆ.

ಶಿಕ್ಷಣ, ಜ್ಞಾನ ಮತ್ತು ವಿದ್ಯೆಗೆ ಸಂಬಂಧಪಟ್ಟ ಎಲ್ಲಾ ವಿಚಾರಕ್ಕೂ ಮರೆಯದೆ ಜೋಡಿ ಸುವ ಹೆಸರು ಶಾರದೆ ಮತ್ತು ಸರಸ್ವತಿ. ಇವರಿಬ್ಬರ ವಾಸಸ್ಥಾನ ಕಾಶ್ಮೀರ. ಆದರೆ ಈಗ ಕಾಶ್ಮೀರ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮುಸ್ಲಿಮ್ ವ್ಯಕ್ತಿಯ ಚಿತ್ರ ಮೂಡುತ್ತದೆ. ಶ್ರೀನಗರ ಎಂದಾಕ್ಷಣ ಮುಸುಕು ಹಾಕಿದ ಉಗ್ರರನ ಕಲ್ಪನೆ ಬರುತ್ತದೆ. ಶ್ರೀನಗರ ಎಂಬುದು ಸಂಸ್ಕೃತದ ಹೆಸರು. ನೂರು ವರ್ಷ ದಲ್ಲಿ ಭಾರತದ ಒಂದು ಭಾಗವಾದ ಕಾಶ್ಮೀರದ ಇತಿಹಾಸ ಹೇಗೆ ಬದಲಾಗಿದೆ ಎಂಬುದನ್ನು ನಾವು ಅರಿಯಬಹುದು.

ಈ ಎಲ್ಲ ಹಿನ್ನಲೆ, ವಿಚಾರಗಳನ್ನು ಹಿಡಿದುಕೊಂಡು ಅಗ್ನಿಹೋತ್ರಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತಯಾರಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಈ ಚಿತ್ರ ನೋಡಬೇಕು ಎಂದು ಸಿನಿಮಾ ನೋಡಿದವರೆಲ್ಲರೂ ಹೇಳುತ್ತಿದ್ದಾರೆ. ಯಾವುದೇ ಮಾಧ್ಯಮದ ಬೆಂಬಲ
ಇಲ್ಲದೇ, ಯಾವುದೇ ಸಿನಿಮಾ ವಿಮರ್ಶಕರ ಬಣ್ಣಬಣ್ಣದ ಮತುಗಳಿಲ್ಲದೆ, ಯಾವುದೇ ರೇಟಿಂಗ್ಸ್ ಇಲ್ಲದೆ, ಕೇವಲ ಜನರಿಂದ, ಜನರೇ ಗೆಲ್ಲಿಸಿದ ಚಿತ್ರ ಎಂದರೆ ಅದು ದಿ ಕಾಶ್ಮಿರ್ ಫೈಲ್ಸ್. ಹೇಗಾದರೂ ಈ ಸಿನಿಮಾ ಪ್ರದರ್ಶನ ನಿಲ್ಲಿಸಬೇಕು ಎಂದು ಕೆಲವರು
ಪ್ರಯತ್ನಿಸಿದರೆ, ಬಾಲಿವುಡ್ ಮಾಫಿಯಾ ಅದಕ್ಕೆ ಬೆಂಬಲ, ಪ್ರಚಾರ ನೀಡದೆ ಹುನ್ನಾರ ನಡೆಸಿದರೂ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವುದಕ್ಕೆ ಜನರೇ ಕಾರಣ ಎಂದರು.

ಕಾಶ್ಮೀರದ ಬಗ್ಗೆ ಅನೇಕ ಬರಹಗಳು ಬಂದಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದ ಹತ್ಯಾಕಾಂಡ, ನರಮೇಧ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಸಿನಿಮಾ ನೋಡಲು ಜನ ಹೋಗುತ್ತಿರುವುದೇಕೆ? ಇದು ಕೇವಲ ಪಂಡಿತರ ಮೇಲಿರುವ ಪ್ರೀತಿ ಮಾತ್ರವಲ್ಲ, ವ್ಯವಸ್ಥೆ ಮೇಲಿರುವ ಆಕ್ರೋಶ. ಏಕೆ ನಮ್ಮ ಸರಕಾರಗಳು ಆ ಸಮಯದಲ್ಲಿ ಏನು ಮಾಡಲಿಲ್ಲ? ನಮ್ಮ ದೇಶದಲ್ಲಿ ಸಂವಿಧಾನ ವಿತ್ತು, ದೇಶ ಸ್ವತಂತ್ರವಾಗಿತ್ತು, ನಮ್ಮದೇ ಸರಕಾರ ಇತ್ತು. ಇಷ್ಟೆಲ್ಲಾ ಮುಕ್ತ ವ್ಯವಸ್ಥೆ ಇದ್ದರೂ ಸರಕಾರಗಳು ಮೌನವಾಗಿದ್ದಕ್ಕೆ
ಜನರಲ್ಲಿ ಆಕ್ರೋಶವಿದೆ. ಇದು ಜನರನ್ನು ಸಿನಿ ಮಾದೆಡೆ ಎಳೆತರುತ್ತದೆ.

ಗಂಜು ಎಂಬ ವ್ಯಕ್ತಿಯ ಸತ್ಯ ಘಟನೆ: ಆತ ಟೆಲಿಕಾಂ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾತ. ಮುಸ್ಲಿಮರ ವಿರುದ್ಧ ಯಾವುದೇ ಕ್ರಾಂತಿ ಮಾಡಿದವನಲ್ಲ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಯಾರೋ ಹಿಂಬಾಲಿಸುತ್ತಿದ್ದುದನ್ನು
ಅರಿತು, ಮನೆಗೆ ಬಂದು ಬಾಗಿಲು ಹಾಕಿ ಹೆಂಡತಿಗೆ ತಿಳಿಸಿ, ಅಕ್ಕಿ ಡ್ರಂನೊಳಗೆ ಅಡಗಿಕೊಳ್ಳುತ್ತಾರೆ.

ಹಿಂದೆಯೇ ಬಂದ ಗುಂಪೊಂದು ಬಗಿಲು ಬಡಿಯುವ ಶಬ್ಧ ಕೇಳಿ ಆತನ ಹೆಂಡತಿ ಬಾಗಿಲು ತೆಗೆಯುವಷ್ಟರಲ್ಲಿ ಅವರೇ ಬಾಗಿಲು ಒಡೆದು ಒಳನುಗ್ಗಿ ಮನೆಯೆಲ್ಲಾ ಹುಡುಕುತ್ತಾರೆ. ಆತ ಕಾಣದೇ ಇದ್ದಾಗ ಅಲ್ಲಿಂದ ಹೊರಬರುತ್ತಾರೆ. ಅಷ್ಟರಲ್ಲಿ ಪಕ್ಕದ ಮನೆಯ ಮುಸ್ಲಿಮ್ ವ್ಯಕ್ತಿಯೊಬ್ಬ ಆತ ಅಕ್ಕಿ ಡ್ರಂನಲ್ಲಿ ಅಡಗಿಕೊಂಡಿರುವುದನ್ನು ತಿಳಿಸುತ್ತಾನೆ.

ತಕ್ಷಣ ಒಳನುಗ್ಗಿದ ದುಷ್ಕರ್ಮಿಗಳು ಯಾವುದೇ ಕಾರಣವಿಲ್ಲದೆ ಆ ಕಾಶ್ಮೀರ ಪಂಡಿತನನ್ನು ಹತ್ಯೆ ಮಾಡುತ್ತಾರೆ. ಬಳಿಕ ಆ ರಕ್ತಸಿಕ್ತ ಅಕ್ಕಿಯನ್ನು ತಿನ್ನುವಂತೆ ಆತನ ಪತ್ನಿ ಮತ್ತು ಮಕ್ಕಳನ್ನು ಹಿಂಸಿಸುತ್ತಾರೆ. ಇದು ಕಥೆಯಲ್ಲ ವಾಸ್ತವ ಸತ್ಯ. ಇದು ಅಂದಿನ
ಕಾಶ್ಮೀರ. ಅದನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಹಲವು ಘಟನೆಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ, ಅನೇಕ ಹೆಣ್ಣುಮಕ್ಕಳನ್ನು ಭೀಬತ್ಸವಾಗಿ ಅತ್ಯಚಾರ ಮಾಡುವುದು ಮಾತ್ರವಲ್ಲ, ‘ಪಾರ್ಶವೀ ಸಂಭೋಗ’
ಎಂಬ ಮನುಷ್ಯರು ಮಾಡದೆ ಇರುವಂತಹ ಸಂಭೋಗ ಹೆಣ್ಣುಮಕ್ಕಳ ಮೇಲೆ ಮಾಡಲಾಗುತ್ತದೆ.

ಇಂತಹ ಹಲವಾರು ದೃಶ್ಯಗಳು ಸಿನಿಮಾದಲ್ಲಿದ್ದು, ಜನರಲ್ಲಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಹುಟ್ಟಿಸುತ್ತದೆ. ನಾನು ಹೇಳಿದ ಹಾಗೆ ಜಗತ್ತು ಕೇಳಬೇಕು, ಇಲ್ಲ ಅವರೆಲ್ಲಾ ಸಾಯುವುದಕ್ಕೆ ಅರ್ಹರು ಎಂದು ಭಾವಿಸುವುದು ಈ ಧಾರ್ಮಿಕ ಮನಸ್ಥಿತಿಯವರ ಮಾನಸಿಕ ರೋಗ. ಈ ಸೂಕ್ಷ್ಮ ವನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳದಿದ್ದರೆ ಮುಂದೊಂದು ದಿನ ದಿ ಬೆಂಗಳೂರು ಫೈಲ್ಸ್, ದಿ ದೆಹಲಿ ಫೈಲ್ಸ್ ನೋಡಬೇಕಾಗುತ್ತದೆ ಎಂದು ರೋಹಿತ್ ಚಕ್ರತೀರ್ಥ ಎಚ್ಚರಿಕೆ ನೀಡಿದರು.

***

ದಿ ಕಾಶ್ಮೀರ್ ಫೈಲ್ಸ್ ದೇಶದ ಎಲ್ಲೆಡೆ ಬಿರುಸಿನ ಚರ್ಚೆ ಹುಟ್ಟು ಹಾಕಿದೆ. ಕಳೆದ ಮೂವತ್ತು ನಲ್ವತ್ತು ವರ್ಷಗಳಲ್ಲಿ ಕಾಶ್ಮೀರದ ಪರಿಸ್ಥಿತಿ ಹೇಗಿತ್ತು? ಆ ನಾಡು ಯಾವ ರೀತಿ ನಡುಗಿಹೋಗಿದೆ? ಎಂದು ಈ ಚಿತ್ರ ಹೇಳಿರಬಹುದು. ಆದರೆ, ಅದರ ಬಗ್ಗೆ ನಮಗೆಲ್ಲ ರಿಗೂ ಗಟ್ಟಿ ಧನಿಯಲ್ಲಿ ಮಾತನಾಡುವ ಅವಕಾಶ ಈಗ ಸಿಕ್ಕಿದೆ. ಹಿಂದೆ ಆದಂಥ ಪ್ರಮಾದ ಸರಿಪಡಿಸಿಕೊಳ್ಳಲಿಕ್ಕೆ, ಒಂದು ಚರ್ಚೆಯ ಮುಖಾಂತರ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮ ದೇಶದಲ್ಲಿ ನಿರ್ಮಾ ಣವಾಗಿದೆ ಎಂಬುದಕ್ಕೆ ಈ ಸಿನಿಮಾ ಒಂದು ನಿದರ್ಶನ. ದೇಶದ ಮುಖ್ಯವಾಹಿನಿಯಲ್ಲಿ ಇಷ್ಟು ಚರ್ಚೆ ಮಾಡುವ ವಾತಾವರಣ ಬಂದಿರಲಿಲ್ಲ. ಅದನ್ನು ಈ ಸಿನಿಮಾ ನೀಡಿದೆ. ಅಷ್ಟರಮಟ್ಟಿಗೆ ರಾಷ್ಟ್ರೀಯತೆಯನ್ನು ಹುಟ್ಟುಹಾಕಿದೆ.
-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ, ವಿಶ್ವವಾಣಿ

? ಈ ಸಿನಿಮಾದ ಕಾಶ್ಮೀರದ ಎಲ್ಲಾ ಘಟನೆಗಳನ್ನು ಸಂಪೂರ್ಣ ನೈಜವಾಗಿ ತೋರಿಸಿಲ್ಲ. ಏಕೆಂದರೆ, ಸಮಾಜವೇ ನೋಡಲು ಸಾಧ್ಯವಾಗದಂತಹ ಕ್ರೂರ ಕೃತ್ಯ ಕಾಶ್ಮೀರದಲ್ಲಿ ನಡೆದಿದೆ.

? ಕಾಶ್ಮೀರದಲ್ಲಿ ಏಕ ದೇವತಾ ಸಂಸ್ಕೃತಿ ಕೇವಲ ಒಂದು ಜಾಗವನ್ನು ವಶ ಮಾಡಿಲ್ಲ. ಸಂಸ್ಕೃತಿ ಮತ್ತು ಸಾವಿರಾರು ಮಂದಿಯ ಕನಸುಗಳನ್ನು ಚಿವುಟಿ ಹಾಕಿದೆ.

? ಸಿನಿಮಾ ಗೆಲ್ಲುವುದಕ್ಕೆ ಕೇವಲ ಕಾಶ್ಮೀರದ ಘಟನೆಗಳು ಮಾತ್ರ ಕಾರಣವಲ್ಲ. ಸಮಾಜಕ್ಕೆ ಈ ವ್ಯವಸ್ಥೆ ಮೇಲಿರುವ ಹತಾಶೆ ಕೂಡ
ಕಾರಣವಾಗಿದೆ.

? ಮಾನವೀಯ ಜಗತ್ತಿನ ಪಾಠ ಮಾಡುವವರನ್ನು ಕುರಿತು, ಕಾಶ್ಮೀರದ ಘಟನೆಯಿಂದ ಸಾಧಿಸಿದ್ದು ಏನು ಎಂದು ಕೇಳಬೇಕಾಗಿದೆ.

? ಮಾನವೀಯತೆಗೆ ಬೆಲೆಯೇ ಇಲ್ಲದ ಕರಾಳ ಕಥೆಯನ್ನು ಒಂದಲ್ಲ ಹತ್ತು ಬಾರಿ ನೋಡಿ ಎಚ್ಚೆತ್ತುಕೊಳ್ಳಬೇಕಿದೆ.

? ಈ ಸಿನಿಮಾದಿಂದ, ಧಾರ್ಮಿಕ ಮನಸ್ಥಿತಿ ಹೇಗೆ ಕೆಲಸ ಮಾಡುತ್ತದೆ ಎಂದು ಈಗಲಾದರೂ ಗಂಭೀರವಾಗಿ ಅಧ್ಯಯನ ಮಾಡಬೇಕು.

? ಭ್ರಮೆಯನ್ನು ಕಳಚಿ ಸತ್ಯವನ್ನು ತೋರಿಸಿದೆ ಈ ಸಿನಿಮಾ.

? ಕಾಶ್ಮೀರದ ಈ ಪರಿಸ್ಥಿತಿಗೆ ಒಂದು ಧರ್ಮವೇ ಕಾರಣ.

? ಮಹಾಭಾರತ ಗಾಂಧಾರವಾಗಿದ್ದ ಅಫ್ಘಾನಿಸ್ತಾನದ ಈಗಿನ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ.