Sunday, 24th November 2024

ಅಸ್ಸಾಂ ಸ್ಟಾರ್ಟಪ್’ನ ಝೆಲೆನ್ಸ್ಕಿ ಚಹಾ !

ಗುವಾಹಟಿ: ಅಸ್ಸಾಂ ಮೂಲದ ಸ್ಟಾರ್ಟಪ್ ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಹೆಸರನ್ನಿಟ್ಟಿದೆ.

ಭಾರತದ ಅಸ್ಸಾಂನ ಸ್ಟಾರ್ಟ್ ಅಪ್‌ ಕಂಪನಿ ಉಕ್ರೇನ್‌ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಚಹಾ ಪುಡಿಗೆ ಅಧ್ಯಕ್ಷ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ. ಉಕ್ರೇನ್ ಅಧ್ಯಕ್ಷರನ್ನು ತಮ್ಮದೇ ಆದ ರೀತಿಯಲ್ಲಿ ಗೌರವಿಸಲು ಈ ಸ್ಟಾರ್ಟಪ್ ನಿರ್ಧರಿಸಿದ್ದು, ಅವರ ಹೆಸರನ್ನು ಅವರ ಹೊಸ ಚಹಾಕ್ಕೆ ಇಟ್ಟಿದೆ. ತನ್ನ ಚಹಾವನ್ನು “ಝೆಲೆನ್ಸ್ಕಿ” ಎಂದು ಹೆಸರಿಸಲು ಸ್ಟಾರ್ಟ್-ಅಪ್ ನಿರ್ಧರಿಸಿದೆ.

ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ, Zelenskyy ಬ್ರ್ಯಾಂಡ್ ಚಹಾದ ಚಿತ್ರ ವನ್ನು ಟೀ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಪ್ರಧಾನ ಅಧಿಕಾರಿ ಜೋಯ್ದೀಪ್ ಫುಕನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಝೆಲೆನ್ಸ್ಕಿ ಅವರು ಯುದ್ಧ ಭೂಮಿ ತೊರೆಯದೇ ಕೊನೆಯ ಸೈನಿಕ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಇದು ಅವರ ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಬರುವಾ ತಿಳಿಸಿದರು.

ಆರೊಮ್ಯಾಟಿಕ್ ಟೀ ಕಂಪನಿಯ ಝೆಲೆನ್ಸ್ಕಿ ಬ್ರಾಂಡ್ ಚಹಾವು ಆನ್‌ಲೈನ್‌ನಲ್ಲಿ ಮಾರಾ ಟಕ್ಕೆ ಲಭ್ಯವಿರುತ್ತದೆ ಎಂದು ಬರುವಾ ಈ ಸಂದರ್ಭದಲ್ಲೇ ಹೇಳಿದರು.

ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಉಂಟಾದ ನಾಶ, ಹಾನಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಅಂತೆಯೇ ಜಗತ್ತಿನ ಪ್ರಬಲ ರಾಷ್ಟ್ರದ ಎದುರು ಮಂಡಿಯೂರದೆ ಕೆಚ್ಚದೆಯಿಂದ ಹೋರಾಟ ಮಾಡುತ್ತಿರುವ ಉಕ್ರೇನ್ ಹೋರಾಟವೂ ಸುದ್ದಿಯಾಗುತ್ತಿದೆ.

ರಷ್ಯಾದ ಆಕ್ರಮಣದ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.