ನವದೆಹಲಿ/ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇ.40 ರಷ್ಟು ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಮೂಲಕ ಭಾರತದಲ್ಲೂ ಪ್ರತಿ ಲೀಟರ್ಗೆ ಡೀಸೆಲ್ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ಲೀಟರ್ಗೆ ಸುಮಾರು 25 ರೂಪಾಯಿಗಳಷ್ಟು ಏರಿಕೆಯಾಗಿರುವುದು ವಿವಿಧ ರೀತಿಯಲ್ಲಿ ಪರಿಣಾಮ ಬೀರಲಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆಯ ಹೆಚ್ಚಳದಿಂದ ನಯಾರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್ನಂತಹ ಖಾಸಗಿ ಚಿಲ್ಲರೆ ವ್ಯಾಪಾರಿಗಳು ಹೆಚ್ಚು ಹಾನಿಗೊಳಗಾಗಿದ್ದಾರೆ. ಆದರೆ ಈಗ ಪಂಪ್ಗಳನ್ನು ಮುಚ್ಚುವುದು ಹೆಚ್ಚು ಕಾರ್ಯ ಸಾಧ್ಯವಾದ ಪರಿಹಾರ ವಾಗಿದೆ ಎನ್ನಲಾಗಿದೆ. ಆದರೆ ಈ ಕಂಪನಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ವಿವರ:
ಬಾಗಲಕೋಟೆ – 85.51
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ – 84.68
ಬೆಳಗಾವಿ – 84.57
ಬಳ್ಳಾರಿ – 86.56
ಬೀದರ್ – 85.30
ಬಿಜಾಪುರ – 85.30
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 87.26
ಚಿತ್ರದುರ್ಗ – 85.87
ದಕ್ಷಿಣ ಕನ್ನಡ – 84.72
ದಾವಣಗೆರೆ – 86.09
ಧಾರವಾಡ – 84.79
ಗದಗ – 84.41
ಕಲಬುರ್ಗಿ – 84.45
ಹಾಸನ – 84.72
ಹಾವೇರಿ – 85.76
ಕೊಡಗು – 86.06
ಕೋಲಾರ – 84.89
ಕೊಪ್ಪಳ- 85.89
ಮಂಡ್ಯ – 85.19
ಮೈಸೂರು – 84.56
ರಾಯಚೂರು – 84.87
ರಾಮನಗರ – 85.43
ಶಿವಮೊಗ್ಗ – 85.68
ತುಮಕೂರು – 85.83
ಉಡುಪಿ – 85.07
ಉತ್ತರ ಕನ್ನಡ – 86.71
ಯಾದಗಿರಿ – 85.44ಇಂಧನ ಖರೀದಿಸಲು ಬಸ್ ಫ್ಲೀಟ್ ಆಪರೇಟರ್ಗಳು ಮತ್ತು ಮಾಲ್ಗಳಂತಹ ಬೃಹತ್ ಬಳಕೆದಾರರು ಪೆಟ್ರೋಲ್ ಬಂಕ್ಗಳಲ್ಲಿ ಖರೀದಿ ಆರಂಭಿಸಿವೆ.