ಆನೇಕಲ್: ಮನೆಯಲ್ಲಿ ಮಲಗಿದ್ದ ಪತ್ನಿಯ ಕತ್ತು ಕೊಯ್ದು ಕೊಂದ ಪತಿ, ಬಳಿಕ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸೋಮವಾರ ಬೆಳಗ್ಗೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.
ಸಂಪತ್ ಪತ್ನಿ ಲಾವಣ್ಯ(30) ಹತ್ಯೆಯಾದವಳು. ಸಂಪತ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 12 ವರ್ಷದ ಹಿಂದೆ ಲಾವಣ್ಯ ಮತ್ತು ಸಂತೋಷ್ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ 10 ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು.
ಸೋಮವಾರ ಬೆಳಗ್ಗೆ ಸಂತೋಷ್, ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಅಡ್ಡ ಬಂದ ಮಗ ಭಾರ್ಗವ್ನ ಕೈ ಕೊಯ್ದು ಬಳಿಕ ತನ್ನ ಕತ್ತನ್ನೂ ಕೊಯ್ದುಕೊಂಡು ನೋವಿ ನಿಂದ ಚೀರಾಡುತ್ತಾ ಮೊದಲ ಮಹಡಿ ಮನೆಯಿಂದ ಕೆಳಗೆ ಓಡಿ ಬಂದು ಚರಂಡಿಗೆ ಬಿದ್ದಿದ್ದಾನೆ.
ಸಂತೋಷ್ನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸಂತೋಷ್ ಮತ್ತು ಮಗ ಭಾರ್ಗವ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಡಿತ ಚಟ ಅಂಟಿಸಿಕೊಂಡಿದ್ದ ಸಂಪತ್ ಮನೆಯಲ್ಲಿ ಪದೇಪದೆ ಗಲಾಟೆ ಮಾಡುತ್ತಿದ್ದ. ಕತ್ತು ಕೊಯ್ದುಕೊಂಡಿದ್ದರಿಂದ ರಸ್ತೆಯಲ್ಲಿ ರಕ್ತ ಚೆಲ್ಲಿದ ಕಲೆ ಹಾಗೇ ಇದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.