Thursday, 12th December 2024

ಶಿಕ್ಷಣವೇ ಮೊದಲು, ಧರ್ಮಾಚರಣೆಯಲ್ಲ

ಪ್ರಚಲಿತ

ಚಂದ್ರಶೇಖರ ಬೇರಿಕೆ

ಶಿಕ್ಷಣ ಮುಗಿಸಿ ಹೊರಗಡೆ ಬಂದಾಗ ಹಿಜಾಬ್ ಅಥವಾ ಕೇಸರಿಗಾಗಿ ಮಾಡಿದ ಹೋರಾಟಗಳು ಪರಿಗಣನೆಗೆ ಬರುವುದಿಲ್ಲ. ತಲೆಯೊಳ ಗಿನ ಜ್ಞಾನ ನಿರ್ಣಾಯಕವಾಗುತ್ತದೆಯೇ ಹೊರತು ತಲೆಗೆ ಸುತ್ತಿಕೊಂಡ ಹಿಜಾಬ್ ಅಥವಾ ಕೇಸರಿಯಿಂದ ಅರ್ಹತೆ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ.

ಶಿಕ್ಷಣ ಸಮಾಜದ ಎಲ್ಲಾ ಅನಿಷ್ಟಗಳನ್ನು ಹೋಗಲಾಡಿಸಿ ಪ್ರಬುದ್ಧ ನಾಗರಿಕ ಸಮಾಜವನ್ನು ರೂಪಿಸುತ್ತದೆ ಎಂಬುದನ್ನು ಸಾಮಾನ್ಯರು ಒಪ್ಪಿಕೊಳ್ಳುವ ಸಂಗತಿ. ಬೌದ್ಧಿಕ ವಿಕಸನಕ್ಕೆ ಮತ್ತು ನಾನಾ ರೀತಿಯ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸ್ವಸ್ಥ  ಸಮಾಜ ನಿರ್ಮಾಣಕ್ಕೆ ಶಿಕ್ಷಣವೊಂದೇ ಸಾಧನ ಎಂಬ ಸತ್ಯವನ್ನು ಈ ಜಗತ್ತು ಹಳ ಹಿಂದೆಯೇ ಅರಿತಿದೆ. ಆದರೆ ಪ್ರಬುದ್ಧ ನಾಗರಿಕರನ್ನು ರೂಪಿಸುವಂತಹ ವಿದ್ಯಾದೇಗುಲಗಳಲ್ಲಿ ಧರ್ಮಾಚರಣೆಗೆ ಸಂಬಂಧ ಪಟ್ಟ ಬೆಳವಣಿಗೆಗಳನ್ನು ಗಮನಿಸಿದರೆ ಶಿಕ್ಷಣದ ಧ್ಯೇಯವನ್ನು, ಮಹತ್ವವನ್ನು ಅಣಕಿಸಿ ದಂತೆ ಭಾಸವಾಗುತ್ತಿದೆ.

‘ಜಗತ್ತಿನಲ್ಲಿ ನಾವು ನಿಜವಾದ ಶಾಂತಿಯನ್ನು ತಲುಪಲು ಬಯಸಿದರೆ, ನಾವು ಮಕ್ಕಳಿಗೆ ಶಿಕ್ಷಣವನ್ನು ನೀಡಲು ಪ್ರಾರಂಭಿಸಬೇಕು’ ಎಂದು ಮಹಾತ್ಮ ಗಾಂಧೀಜಿಯವರು ಶಿಕ್ಷಣದ ಮಹತ್ವವನ್ನು ಸಾರಿದ್ದರೆ, ಹಿಜಾಬ್ ವಿವಾದದ ಸಂದರ್ಭದಲ್ಲಿ ಒಬ್ಬ ಜವಾಬ್ದಾರಿ ಯುತ ತಂದೆಯ ಸ್ಥಾನದಲ್ಲಿ ದ್ದುಕೊಂಡು, ತನ್ನ ಮಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಹಿಜಾಬ್ ಕುರಿತಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು, ‘ನಮಗೆ ನಮ್ಮ ಧರ್ಮ ಮೊದಲು, ಶಿಕ್ಷಣವಲ್ಲ!’. ಎಂಥಾ ವಿಪರ್ಯಾಸ ? ಈ ಬೆಳವಣಿಗೆ ನೋಡಿದಾಗ, ಜನರು ವಿದ್ಯಾವಂತ ರಾಗುತ್ತಿದ್ದಂತೆ ಸಮಾಜಕ್ಕೆ ಮಬ್ಬು ಆವರಿಸುತ್ತದೆಯೇ ಎಂಬ ಜಿಜ್ಞಾಸೆ ಮೂಡುವಂತಾಗಿದೆ.

ಸಂವಿಧಾನದಲ್ಲಿ ದಯಪಾಲಿಸಿದ ಹಕ್ಕುಗಳಿಗಾಗಿ ಈ ದೇಶದ ಜನರು ಹೋರಾಟ ಮಾಡಿದಷ್ಟು ನಾಗರಿಕ ಕರ್ತವ್ಯಗಳ ಪಾಲನೆಯ ವಿಷಯದಲ್ಲಿ ಆಸ್ಥೆ ವಹಿಸಿಲ್ಲ. ಕೇವಲ ಹಕ್ಕುಗಳನ್ನು ಅನುಭವಿಸುವುದಕ್ಕಷ್ಟೇ ಆದ್ಯತೆ. ಕರ್ತವ್ಯ ಪಾಲನೆಯ ವಿಷಯ ಬಂದಾಗ ಎಷ್ಟು ಸಾಧ್ಯವೋ ಅಷ್ಟು ನುಣುಚಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಆದರೆ ನಾವು ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ಕರ್ತವ್ಯ ಪಾಲನೆಗೂ ಸಮಾನ ಹೊಣೆಗಾರರು ಎಂಬುದನ್ನು ಮರೆಯಬಾರದು. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಪ್ರಸಕ್ತ ಹಿಜಾಬ್ ವಿವಾದ ಆರಂಭವಾzಗಿನಿಂದ ಪ್ರಧಾನವಾಗಿ ಚರ್ಚೆಗೆ ಒಳಗಾಗಿದ್ದು ಸಾಂವಿಧಾನಿಕ ಹಕ್ಕುಗಳು ಎಂಬ ವಿಷಯ.

ನಂತರದ ವಿಷಯವಾಗಿ ಮುನ್ನೆಲೆಗೆ ಬಂದಿದ್ದು ಧರ್ಮ ಗ್ರಂಥದಲ್ಲಿ ಧರ್ಮಾಚರಣೆಯ ಪ್ರತೀಕ ಹಿಜಾಬ್ ಬಗೆಗಿನ ಉಲ್ಲೇಖ ಮತ್ತು ಅದರ ಪಾಲನೆಯ ವಿಚಾರ. ಆದರೆ ಶಿಕ್ಷಣದ ಮಹತ್ವವು ಈ ಚರ್ಚೆಯಿಂದ ಹೊರಗುಳಿದಿದ್ದು ಮಾತ್ರ ದುರಂತ. ಈ ಮಧ್ಯೆ ಹಿಜಾಬ್ ಪ್ರಕರಣದ ವಿಚಾರಣೆಯ ಹಂತದಲ್ಲಿ ಶಾಲಾ ಸಮವಸದ ಹೊರತಾಗಿ ಧರ್ಮವನ್ನು ಸಾಂಕೇತಿಸುವ ಯಾವುದೇ ಉಡುಗೆಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಧರಿಸಬಾರದು’ ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಗೌರವಾನ್ವಿತ ನ್ಯಾಯಾಲಯದ ನಾಲ್ಕು ಗೋಡೆಗಳಷ್ಟೇ ಕೇಳಿಸಿಕೊಂಡಂತಿತ್ತು.

ಆ ಆದೇಶಕ್ಕೆ ತಲೆಬಾಗಿ ಅದನ್ನು ಯಥಾವತ್ತಾಗಿ ಪಾಲಿಸಿ ನಾಗರಿಕ ಪ್ರಜ್ಞೆ ಮೆರೆಯಬೇಕಾದ ಭಾರತದ ಭವಿಷ್ಯದ ಕುಡಿಗಳು ಎನಿಸಿ ಕೊಂಡ ವಿದ್ಯಾರ್ಥಿಗಳು ಮಾಡಿದ್ದೇನು? ಈ ವಿವಾದವನ್ನು ಮತ್ತಷ್ಟು ತೀವ್ರ ಸ್ವರೂಪಕ್ಕೆ, ಉದ್ವಿಗ್ನತೆಯ ಹಂತಕ್ಕೆ ಕೊಂಡೊಯ್ಯಲು ಕೈಜೋಡಿಸಿದ್ದು. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಸಾಂವಿಧಾನಿಕ ಸಂಸ್ಥೆಯ ಆದೇಶ ಪಾಲನೆಗೆ ಮುಂದಾಗಲಿಲ್ಲ. ನ್ಯಾಯಾ ಲಯದ ಆದೇಶಗಳಿಗೆ ಗೌರವಿಸಿ, ಸಂಯಮ ಕಾಪಾಡುವ ವ್ಯವಧಾನವೂ ಇರಲಿಲ್ಲ.

ನ್ಯಾಯಾಲಯ ಈಗ ಈ ಪ್ರಕರಣದ ಅಂತಿಮ ತೀರ್ಪು ನೀಡಿದ್ದು, ಶಾಲಾ ಸಮವಸ್ತ್ರದ ಹೊರತಾದ ವಸ್ತ್ರಧಾರಣೆಗೆ ಅವಕಾಶವಿಲ್ಲ, ಶಾಲಾ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸ್ಪಷ್ಟವಾಗಿ ಹೇಳಿದೆ. ಈ ತೀರ್ಪಿನ ವಿರುದ್ಧವೂ ಹಿಜಾಬ್ ಪರವಾದ ವಿದ್ಯಾರ್ಥಿಗಳು ಧ್ವನಿ ಎತ್ತುತ್ತಿರುವುದು ಅಪಾಯಕಾರಿ ಮಾನಸಿಕತೆಯನ್ನು ಸೂಚಿಸುತ್ತದೆ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿಲ್ಲ, ನಮಗೆ ನ್ಯಾಯ ಸಿಕ್ಕಿಲ್ಲ, ನಾವು ಹಿಜಾಬ್ ತೆಗೆಯುವುದಿಲ್ಲ, ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕು, ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗುವುದಿಲ್ಲ ಎಂಬುದಾಗಿ ಹೇಳಿಕೆ ನೀಡಿ ಹೈಕೋರ್ಟ್ ತೀರ್ಪಿನ ವಿರುದ್ಧ ಅಸಮಧಾನ ಹೊರಹಾಕಿರುವುದು ನ್ಯಾಯಾಲಯಕ್ಕೆ ತೋರುವ ಅಗೌರವ ತ್ರವಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವೂ ಹೌದು.

ಕಾನೂನು ಹೋರಾಟದ ಮುಂದುವರೆದ ಭಾಗವಾಗಿ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದನ್ನು ಗಮನಿಸಿದಾಗ ಇವರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟ ಕೆಲವೊಂದಷ್ಟೇ ವಿಷಯಗಳನ್ನು ಆಯ್ದುಕೊಂಡು ಪ್ರಾಸಂಗಿಕ ವಿಚಾರಗಳಿಗೆ ಸಂಯೋಜಿಸಿ ಸಂವಿಧಾನದ ಆಶಯಗಳನ್ನು ದುರುಪಯೋಗ ಪಡಿಸಿ ಕೊಳ್ಳುವುದನ್ನು ತಡೆಯಬೇಕು. ತನ್ನಿಷ್ಟದ ಉಡುಗೆ ತೊಡಲು ಸಂವಿಧಾನ ನಮಗೆ ಅವಕಾಶ ನೀಡಿದೆ ಎಂದು ಬೊಬ್ಬಿಡುವ ಯುವ ಸಂವಿಧಾನ ತಜ್ಞರು ಓದಿದ ಸಂವಿಧಾನದಲ್ಲಿ ಬಹುಶಃ ನಾಗರಿಕ ಕರ್ತವ್ಯಗಳು ಬರೆಯಲ್ಪಟ್ಟಿಲ್ಲವೇನೋ? ದೇಶದ ಯಾವುದೇ ನ್ಯಾಯಾ ಲಯಗಳು ನೀಡುವ ಆದೇಶಗಳ ಪಾಲನೆಯು ನಾಗರಿಕ ಕರ್ತವ್ಯದ ವ್ಯಾಖ್ಯೆಯಡಿ ಬರುತ್ತದೆ ಎಂಬುದರ ಕಲ್ಪನೆಯೇ ಇಲ್ಲದಂತಿದೆ.

ಇನ್ನು ಹಿಜಾಬ್‌ನ ಗಲಾಟೆಗೆ ಪ್ರತಿಯಾಗಿ ಕೇಸರಿ ಹೋರಾಟವೂ ಮುಂದುವರೆಸಿದ್ದು ಶಿಕ್ಷಣ ಸಂಸ್ಥೆಯ ಘನತೆ, ಗೌರವಕ್ಕೆ ಚ್ಯುತಿ
ತಂದಿದ್ದು ಸುಳ್ಳಲ್ಲ. ಇದು ನ್ಯಾಯಾಲಯಕ್ಕೆ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸಲ್ಲಿಸುವ ಗೌರವವೂ ಅಲ್ಲ. ವಿವಾದ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದ್ದಾಗ ಸಂಯಮ ವಹಿಸದವರಿಗೆ ಈ ದೇಶದ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಗೌರವ, ಈ ಸಮಾಜದ ಬಗ್ಗೆ ಬದ್ಧತೆಯಿದೆ ಎಂದು ಭಾವಿಸುವುದಾದರೂ ಹೇಗೆ ? ಯಾರೂ ಶಿಕ್ಷಣದಿಂದ ಹೊರಗುಳಿಯಬಾರದು ಎನ್ನುವ ದಿಸೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಾಲಕಾಲಕ್ಕೆ ಸೂಕ್ತ ಸುಧಾರಣೆಗಳನ್ನು ಮಾಡಲಾಗಿದೆ. ಇದರ ಧ್ಯೇಯೋದ್ದೇಶವೇ ಶಿಕ್ಷಣ ಎಲ್ಲಕ್ಕಿಂತಲೂ ಮಿಗಿಲಾದುದು, ಸರ್ವಶ್ರೇಷ್ಠ ವಾದುದು ಮತ್ತು ನಾಗರಿಕರಿಗೆ ಮೂಲಭೂತವಾಗಿ ದೊರೆಯಲೇಬೇಕಾದ ಅವಶ್ಯಕತೆ ಎಂಬುದೇ ಆಗಿದೆ. ಧರ್ಮವೂ ಸೇರಿದಂತೆ ಉಳಿದೆಲ್ಲವೂ ನಂತರದಲ್ಲಿ ಗುರುತಿಸಿಕೊಳ್ಳುತ್ತದೆ. ಆದರೆ ‘ನಮಗೆ ನಮ್ಮ ಧರ್ಮ ಮೊದಲು, ಶಿಕ್ಷಣವಲ್ಲ ಎಂಬ ಅಸಂಬದ್ಧ ಹೇಳಿಕೆಗಳಿಂದ ಶಿಕ್ಷಣ ಮೊದಲು’ ಎನ್ನುವ ಚಿಂತನೆಯೊಂದಿಗೆ ಪ್ರeವಂತ ನಾಗರಿಕರಾಗಿ ಬೆಳೆಯಬೇಕಾದ ಯುವ ಸಮೂಹವನ್ನು ದಾರಿ ತಪ್ಪಿಸಿದಂತಾಗು ವುದಿಲ್ಲವೇ?.

ಶಿಕ್ಷಣ ಮತ್ತು ಧರ್ಮ ಎಂಬೆರಡು ವಿಚಾರಗಳನ್ನು ಮುಂದಿಟ್ಟಾಗ ಸ್ವಾಭಾವಿಕವಾಗಿ ಶಿಕ್ಷಣ ಮೊದಲ ಆಯ್ಕೆಯಾಗಿರಬೇಕು. ಯಾವುದು ಮೊದಲ ಆಯ್ಕೆಯಾಗಿರಬೇಕು ಎಂಬುದು ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ತಿಳಿ ಹೇಳುವ ಕೆಲಸಗಳು ಆಗಬೇಕು. ಆದರೆ ಸುಶಿಕ್ಷಿತ ನಾಗರಿಕರಾಗಿ ಬೆಳೆಯಬೇಕಾದ ಮಕ್ಕಳಿಗೆ ಪೋಷಕರು ಧರ್ಮದ ಅಮಲನ್ನು ಹತ್ತಿಸಿದರೆ ಸಮಾಜದ ಮೇಲೆ ಅದರ ಪರಿಣಾಮಗಳು ತೀರಾ ನಕಾರಾತ್ಮಕವಾಗಿರುತ್ತದೆ. ಸಾಮರಸ್ಯ ನೆಲೆಯಾಗಬೇಕಾದ ಸಮಾಜದಲ್ಲಿ ಅರಾಜಕತೆ ಸೃಷ್ಠಿಗೆ ಅವಕಾಶವಾಗುತ್ತದೆ. ಪ್ರೌಢ ಹಂತದ ವಿದ್ಯಾರ್ಜನೆ ಮಾಡುತ್ತಿದ್ದರೂ ಯೋಚನಾ ಶಕ್ತಿ, ಚಿಂತನಾ ಸಾಮರ್ಥ್ಯ ಮತ್ತು ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದದವರಿಗೆ ಶಿಕ್ಷಣ ಏತಕ್ಕೆ? ರೋಗ ಬಾಧೆಯ ಕೀಟ ಗಿಡದ ಯಾವುದೋ ಒಂದು ಭಾಗದಲ್ಲಿ ಕಾಣಿಸಿಕೊಂಡಾಗಲೇ ಅದಕ್ಕೆ ಸೂಕ್ತ ಔಷಧಿ ಸಿಂಪರಣೆ ಮಾಡಿದರೆ ಆ ರೋಗ ಗಿಡದ ಇತರೆ ಭಾಗಕ್ಕೆ ಪಸರಿಸದಂತೆ ತಡೆಯಬಹುದು.

ಅದನ್ನು ನಿರ್ಲಕ್ಷಿಸಿದರೆ ಇಡೀ ಗಿಡಕ್ಕೆ ವ್ಯಾಪಿಸಿಕೊಳ್ಳುತ್ತದೆ. ಅಂತೆಯೇ ಹಿಜಾಬ್ ವಿವಾದ ಹುಟ್ಟಿಕೊಂಡಾಗಲೇ ಅದನ್ನು ಕಠಿಣ
ಕ್ರಮ ಗಳ ಮೂಲಕ ನಿಗ್ರಹಿಸುವ ಪ್ರಯತ್ನ ಮಾಡಿದಿದ್ದರೆ ಈ ವಿವಾದ ಇಷ್ಟೊಂದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರಲಿಲ್ಲ ಮತ್ತು ರಾಷ್ಟ್ರೀ
ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರಲಿಲ್ಲ. ರಾಜ್ಯ ಸರ್ಕಾರ ಈ ವಿವಾದವನ್ನು ನಿಭಾಯಿಸಿದ ಬಗೆಯಲ್ಲಿ ಎಡವಿದ್ದು ಮತ್ತು ವಿರೋಧ ಪಕ್ಷಗಳೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದು ಸ್ಪಷ್ಟವಾಗಿದೆ.

ಈ ಘಟನೆಯಿಂದ ಆಗಬಹುದಾದ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳೂ ಇದರ ಹಿಂದಿರಬಹುದು. ಆದರೆ ಸಾರ್ವಜನಿಕರು ಇಂತಹ ಲೆಕ್ಕಾಚಾರಗಳ ಬಗ್ಗೆ ತುಸು ಎಚ್ಚರಿಕೆ ವಹಿಸುವುದು ಸಮಾಜಕ್ಕೆ ಒಳಿತು. ದೇಶದ ಒಬ್ಬ ಪ್ರಜ್ಞಾವಂತ ಮತ್ತು ಜವಾಬ್ದಾರಿ
ಯುತ ನಾಗರಿಕ ರೂಪುಗೊಳ್ಳುವ ಶಿಕ್ಷಣ ಸಂಸ್ಥೆ ಯೊಳಗಡೆ ಧರ್ಮದ ವಿಚಾರಗಳು ನುಸುಳಬಾರದು. ಯಾವುದೇ ಧರ್ಮದ ಕಟ್ಟುಪಾಡುಗಳು ಆಯಾ ಧರ್ಮದ ಅನುಯಾಯಿಗಳ ಮನೆಗಳಲ್ಲಿ ಆಚರಣೆಗೆ ಸೀಮಿತವಾಗಿರಬೇಕು. ಶಿಕ್ಷಣ ಮುಗಿಸಿ ಹೊರಗಡೆ ಬಂದಾಗ ಹಿಜಾಬ್ ಅಥವಾ ಕೇಸರಿಗಾಗಿ ಮಾಡಿದ ಹೋರಾಟಗಳು ಪರಿಗಣನೆಗೆ ಬರುವುದಿಲ್ಲ.

ತಲೆಯೊಳಗಿನ ಜ್ಞಾನ ನಿರ್ಣಾಯಕವಾಗುತ್ತದೆಯೇ ಹೊರತು ತಲೆಗೆ ಸುತ್ತಿಕೊಂಡ ಹಿಜಾಬ್ ಅಥವಾ ಕೇಸರಿಯಿಂದ ಅರ್ಹತೆ ಗಿಟ್ಟಿಸಿ ಕೊಳ್ಳಲು ಸಾಧ್ಯವಿಲ್ಲ. ಕೇವಲ ಹಕ್ಕುಗಳನ್ನು ಮುಂದಿಟ್ಟುಕೊಂಡು ಹೋರಾಟದಲ್ಲಿ ಗುರುತಿಸಿಕೊಂಡವರಿಗೆ ಬೆಂಬಲ ಸೂಚಿಸುವ ಮುನ್ನ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯ ನಾಗರಿಕ ಕರ್ತವ್ಯಗಳ ಪಾಲನೆಯ ಬಗ್ಗೆಯೂ ತಿಳಿ ಹೇಳುವ ಕೆಲಸಗಳನ್ನು ಮಾಡದೇ ಇದ್ದರೆ ನಿಷ್ಪ್ರಯೋಜಕ ಸಮಾಜವನ್ನು ಪೋಷಿಸಿದಂತಾಗುತ್ತದೆ. ಹಿಜಾಬ್ ಮೊದಲು, ಕಿತಾಬ್ ಅಲ್ಲ ಎನ್ನುವುದರೊಂದಿಗೆ ಈ ವಿವಾದ ತಾರಕ ಕ್ಕೇರುವಲ್ಲಿ ಕೆಲವು ವಿಛಿದ್ರಕಾರಿ ಸಂಘಟನೆಗಳ ಕುಮ್ಮಕ್ಕುಗಳು, ಪಿತೂರಿಗಳು ಪ್ರಚೋದನೆ ನೀಡಿದೆ. ದೇಶದಲ್ಲಿ ಆಂತರಿಕ ಕ್ಷೋಭೆ ಸೃಷ್ಠಿಸಿ, ದೇಶವನ್ನು ದುರ್ಬಲಗೊಳಿಸುವುದೇ ಆ ಸಂಘಟನೆಗಳ ಮೂಲ ಉದ್ದೇಶವೂ ಹೌದು.

ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯ, ಸಾಕಷ್ಟು ಸಂಖ್ಯೆಯ ಶಿಕ್ಷಕರು ಅಥವಾ ಬೋಧಕರ ಕೊರತೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹಗಲು ದರೋಡೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರೆ ಅದಕ್ಕೊಂದು ಅರ್ಥವಿರುತ್ತಿತ್ತು ಮತ್ತು ಅಂತಹ ವಿದ್ಯಾರ್ಥಿಗಳ ಬಗ್ಗೆ ಗೌರವವೂ ಹೆಚ್ಚಾಗುತ್ತಿತ್ತು. ದೇಶದ ಭವಿಷ್ಯದ ಕುರಿತು ಚಿಂತಿಸ ಬೇಕಾದ ತಲೆಗಳಿಗೆ ರಾಷ್ಟ್ರ ನಿರ್ಮಾಣದಲ್ಲಿ ಜೋಡಿಸಬೇಕಾದ ಕೈಗಳ’ ಮೂಲಕ ಹಿಜಾಬ, ಕೇಸರಿ ತೊಡಿಸುವ ಕೆಲಸಗಳು ಮುಂದುವರೆದರೆ ಈ ದೇಶದ, ಹೊಸ ತಲೆಮಾರುಗಳ ಭವಿಷ್ಯವೇನು? ಡಾ. ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಮನಸ್ಸಿನ
ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು’. ದೇಶದ ಯುವಜನತೆ ಈ ನಿಟ್ಟಿನಲ್ಲಿ ಚಿಂತಿಸುವುದು ಇಂದಿನ ಅಗತ್ಯ ವಲ್ಲವೇ?