Sunday, 15th December 2024

ಭಾರತ ಎಂಬ ಮಾತೃಭೂಮಿಯೇ ಒಂದು ಕುಟುಂಬ: ಸು.ರಾಮಣ್ಣ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ೨೪೩

ಬೆಂಗಳೂರು: ದೇಶವೇ ಒಂದು ಕುಟುಂಬ ಎಂದು ಭಾವಿಸುವವರು ನಾವು. ಅದಕ್ಕಾಗಿಯೇ ನಾವು ದೇಶವನ್ನು ಭಾರತ ಮಾತೆ ಎನ್ನುತ್ತೇವೆ. ಈ ದೇಶದಲ್ಲಿರುವ ಎಲ್ಲ ಜಾತಿ, ಪಂಥ, ಸಂಪ್ರದಾಯ, ಪ್ರದೇಶದವರನ್ನು ಭಾವನಾತ್ಮಕವಾಗಿ ಒಂದುಗೂಡಿವು ದಾದರೆ ಈ ಭಾರತ ಎಂಬುದು ಭೂಮಿ ಮಾತ್ರವಲ್ಲ, ಮಾತೃಭೂಮಿ. ಭಾರತಮಾತೆ ನಮ್ಮ ತಾಯಿ, ನಾವು ಈ ತಾಯಿಯ ಮಕ್ಕಳು ಎಂದು ಭಾವಿಸಿದಾಗ ದೇಶದ ಭಾವನೆ ಮತ್ತು ಕರ್ತವ್ಯ ಅರಳುತ್ತದೆ.

ಭಾರತೀಯ ಕುಟುಂಬ ವ್ಯವಸ್ಥೆ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಅವರ ಮಾತುಗಳಿವು. ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ಕೌಟುಂಬಿಕ ಮೌಲ್ಯ ಗಳು ಕುರಿತು ಅವರು ಅರಿವಿನ ಉಪನ್ಯಾಸ ನೀಡಿದರು.

83ರ ಹರೆಯದಲ್ಲೂ ಬತ್ತದ ಉತ್ಸಾಹದೊಂದಿಗೆ ಸುದೀರ್ಘ ಉಪನ್ಯಾಸ ನೀಡಿದ ಅವರು ಹೇಳಿದ್ದಿಷ್ಟು. ಅವಿಭಕ್ತ ಕುಟುಂಬ ಪರಿಕಲ್ಪನೆಗೆ ನಮ್ಮ ದೇಶ ಮಾದರಿ. ವ್ಯಕ್ತಿಗಳಲ್ಲಿ ಮೌಲ್ಯ ಪ್ರತಿಷ್ಠಾಪನೆ ಮನೆಯಿಂದಲೇ ಆರಂಭವಾಗುತ್ತದೆ. ಮನೆಗಳೇ ಕುಟುಂಬದ ನೆಲೆ. ಆರೋಗ್ಯ ಸಮಾಜ ನಿರ್ಮಾಣ ಕುಟುಂಬಗಳಿಂದ ಮಾತ್ರ ಸಾಧ್ಯ. ಮೌಲ್ಯಯುತ ಕುಟುಂಬಗಳು ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಕಾರಣವಾಗುದರಲ್ಲಿ ಯಾವುದೇ ಸಂದೇಹ ವಿಲ್ಲ. ಅಂತಹ ಕುಟುಂಬ ಮೌಲ್ಯಗಳನ್ನು ಪಾಲಿಸುವ ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆ ಇಡಬೇಕು.

ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅತ್ಯಂತ ಪ್ರಾಚೀನವಾದ ಸಂಸ್ಥೆಯೇ ಕುಟುಂಬ. ಇವತ್ತಿನ ವರೆಗೂ ಅದು ನಡೆದುಕೊಂಡು ಬಂದಿದೆ. ಅದು ಎಷ್ಟೇ ಪ್ರಾಚೀನವಾಗಿದ್ದರೂ ಕಾಲಬಾಹಿರವಾಗಿಲ್ಲ. ಇವತ್ತಿಗೂ ಕೂಡ ಕುಟುಂಬದ ಕಾಲ ಸುಸಂಗತವಾಗಿದೆ. ಕಾಲ ಉರುಳಿದಂತೆ ಈ ಸಂಸ್ಥೆ ಭಾರತದ ಹೊರಗಿನ ರಾಷ್ಟ್ರಗಳಲ್ಲಿ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ, ಶಿಥಿಲವಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಇಂದಿಗೂ ಈ ವ್ಯವಸ್ಥೆ ಅತ್ಯಂತ ಶ್ಲಾಘನೀಯ ರೀತಿಯಲ್ಲಿದೆ.

ಅಲ್ಲಲ್ಲಿ ಒಡಕಿನ ಗೆರೆಗಳು ಇದ್ದ ಹಾಗೆ ಕಾಣಿಸುತ್ತಿದೆಯಾದರೂ ಒಟ್ಟಾರೆ ಕುಟುಂಬ ವ್ಯವಸ್ಥೆ ಈಗಲೂ ಅತ್ಯಂತ ಸಮರ್ಥವಾಗಿದೆ. ಕುಟುಂಬ ಎಂಬ ಸಂಸ್ಥೆಯ ಗಟ್ಟಿತನ, ಹೊಸತನ ಉಳಿದುಕೊಂಡಿದೆ. ಅದರ ಆಕರ್ಷಣೆ, ಅವಶ್ಯಕತೆಯನ್ನು ಹೆಚ್ಚಿಸಿದೆ. ಅಷ್ಟರ ಮಟ್ಟಿಗೆ ಕುಟುಂಬ ವ್ಯವಸ್ಥೆ ಜನಪ್ರಿಯವಾಗಿದೆ ಎಂದರೆ ಎಲ್ಲರೂ ಅದನ್ನು ಇಷ್ಟಪಡುವಂತಾಗಿದೆ.

ಇದು ಕುಟುಂಬ ಸಂಸ್ಥೆಯ ಮೊದಲ ಲಕ್ಷಣ. ಚಿರ ಪುರಾತನವಾದರೂ ಕಾಲ ಸುಸಂಗತವಾದದು. ಈ ಸಂಸ್ಥೆಯಲ್ಲಿ ಸದಸ್ಯರು ಇದ್ದಾರೆ. ಆದರೆ ಉಳಿದ ಸಂಘಟನೆಗಳಲ್ಲಿ ಇದ್ದಂತೆ ಸದಸ್ಯತ್ವ ಎಂದೇನೂ ಇಲ್ಲ. ಇಲ್ಲಿ ವಿರೋಧ ಪಕ್ಷವೂ ಇಲ್ಲ, ಆಡಳಿತ ಪಕ್ಷವೂ ಇಲ್ಲ. ಎಲ್ಲರೂ ಆಡಳಿತ ಪಕ್ಷಕ್ಕೆ ಸೇರಿದವರು. ಹತ್ತಾರು ಜನ ಒಟ್ಟಿಗೆ ಇರುತ್ತಾರೆ ಎಂದರೆ ಭಿನ್ನಾಭಿಪ್ರಾಯಗಳು ಸಹಜ.
ಆದರೆ, ಇದು ಮತಭಿನ್ನತೆ ಅಷ್ಟೆ, ಮನಭಿನ್ನತೆ ಅಲ್ಲ. ಆತ್ಮೀಯ ಭಾವವನ್ನು ಎಲ್ಲರಲ್ಲೂ ಒಂದು ಗೂಡಿಸುವ ಸಂಸ್ಥೆ ಕುಟುಂಬ ವಾಗಿದೆ.

ಈ ಸಂಸ್ಥೆಯಲ್ಲಿ ಬಡಾವಣೆಗಳು, ಶಾಖೆಗಳು ಆಗುತ್ತವೆ. ಆದರೆ ವಿಭಜನೆ ಆಗುವುದಿಲ್ಲ ಇದೇ ಅದರ ವಿಶೇಷತೆ. ಈ ಸಂಸ್ಥೆಯಲ್ಲಿ ಹಕ್ಕುಗಳಿಗಾಗಿ ಜಗಳವಿಲ್ಲ. ಪ್ರತಿಯೊಬ್ಬರಲ್ಲೂ ಕರ್ತವ್ಯದ ಪ್ರಜ್ಞೆ, ಅರಿವು ಇದೆ. ನನ್ನವರು ಎಂಬ ಕಾಳಜಿ ಇದೆ. ಸೀ-ಪುರುಷರು ಇದ್ದಾರೆ. ಪುರುಷರು ಮತ್ತು ಮಹಿಳೆಯರಿಗೆ ಅವರದ್ದೇ ಆದಂತಹ ಭೂಮಿಕೆ ಇದೆ. ಅವಕು ತಮ್ಮ ತಮ್ಮ ಭೂಮಿಕೆಯನ್ನು
ಸಮರ್ಥವಾಗಿ ನಿರ್ವಹಿಸಿಕೊಂಡು ಹೋದರೆ ಈ ಕುಟುಂಬ ಅನ್ನುವ ಸಂಸ್ಥೆ ಬಹಳ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಭಾರತನ್ನು 150 ವರ್ಷಕ್ಕೂ ಹೆಚ್ಚು ಕಾಲ ಆಳಿದ ಬ್ರಿಟನ್‌ನ ಪ್ರಧಾನಿಯೊಬ್ಬರು ನಮ್ಮ ಕುಟುಂಬ ವ್ಯವಸ್ಥೆಯ ಬಗ್ಗೆ, ದಯ ವಿಟ್ಟು ನೀವು ನಮ್ಮನ್ನು ಅನುಕರಣೆ ಮಾಡಬೇಡಿ. ಆಧುನಿಕತೆಯನ್ನು ನೀವು ಅನುಸರಿಸಬೇಡಿ ಎಂದು ಹೇಳಿದ್ದರು. ಇದು ನಮ್ಮ ಕುಟುಂಬ ವ್ಯವಸ್ಥೆಗೆ ಇರುವ ಮಹತ್ವ.

ಭಾರತೀಯ ಕುಟುಂಬದ ಹಿರಿಮೆ ಮತ್ತು ಹೆಗ್ಗಳಿಕೆ: ಕುಟುಂಬ ಅಂದು ಮತ್ತೆ ಕುಟುಂಬ ಇಂದು ಹಾಗೂ ಕುಟುಂಬ ಮುಂದು… ಇದರ ಭವಿಷ್ಯ ಹೀಗಿದೆ? ಕುಟುಂಬ ಎನ್ನುವುದು ಒಂದು ಪರಿಕಲ್ಪನೆ. ಜಗತ್ತು ಎನ್ನುವ ಶಬ್ಧವನ್ನು ವಿಮರ್ಶಿಸಿದಾಗ- ಇದೊಂದು ಆವರಣ. ಹಾಗೇಯೆ ಕುಟುಂಬ ಎಂದರೆ ತಂದೆ-ತಾಯಿ-ಮಕ್ಕಳು. ಇದು ಭಾರತೀಯ ಕುಟುಂಬ ಪರಿಕಲ್ಪನೆಯ ಮೂಲ ಸಂಗತಿ. ಕುಟುಂಬವನ್ನು ಕೂಡಿಸುವ ಭಾವವೇನಿದೆಯೋ ಈ ಬಾವ ವಿಸ್ತಾರವಾದಂತೆ ಸಣ್ಣ ಕುಟುಂಬ ಇದ್ದದ್ದು ಇಡೀ ಊರು ಒಂದು ಕುಟುಂಬ ಎಂದು ನಡೆದುಕೊಳ್ಳುತ್ತದೆ.

ಇಂದು ಭಾರತವನ್ನು ಒಂದುಗೂಡಿಸಬಲ್ಲ ಏಕಮೇವ ಶಕ್ತಿ ಎಂದರೆ ಸೈನ್ಯವೂ ಅಲ್ಲ, ಸರಕಾರವೂ ಅಲ್ಲ. ಅದು ಕುಟುಂಬ ಮಾತ್ರ. ಏಕೆಂದರೆ, ಸೃಷ್ಟಿಯಲ್ಲೇ ಕುಟುಂಬದ ಭಾವವನ್ನು ಕಂಡವರು ನಾವು. ಇದು ನಮ್ಮ ದೇಶದ ವಿಶೇಷ. ಇಲ್ಲಿರುವ ನದಿ, ತುಳಸಿಯಲ್ಲಿ ಮಾತೃತ್ವವನ್ನು ಕಂಡವರು ನಾವು. ಪಶು-ಪಕ್ಷಿಗಳಲ್ಲಿ ಕೌಟುಂಬಿಕ ಭಾವದ ಸಾಮರಸ್ಯ ಕಾಣುತ್ತೇವೆ. ಪ್ರಕೃತಿಯ ಪೋಷಣೆ, ಪ್ರಕೃತಿಯ ಆರಾಧನೆ, ಪ್ರಕೃತಿಯ ಸಂಪೋಷಣೆ ಎಂಬುದು ನಮ್ಮ ಸಂಸ್ಕೃತಿ. ಇಂತಹ ಒಂದು ಭಾವ ನಮ್ಮಲ್ಲಿ ಕುಟುಂಬದ ಮೌಲ್ಯಗಳಿಂದ ಬೆಳೆದುಕೊಂಡು ಬಂಡಿದೆ.

ಸಂಸ್ಕಾರದ ಕೇಂದ್ರ ನಮ್ಮ ಮನೆ: ಸಂಸ್ಕಾರದ ಕೇಂದ್ರ ನಮ್ಮ ಮನೆ. ಹೋಟೆಲ್‌ನಲ್ಲಿಯೂ ಉಟ ತಿಂಡಿ ಸಿಗುತ್ತದೆ. ಮನೆಗಿಂತ ಹೋಟೆಲ್‌ನಲ್ಲಿ ವ್ಯವಸ್ಥೆ ಚೆನ್ನಾಗಿ ಇರುತ್ತದೆ. ಆದರೆ, ಹೋಟೆಲ್‌ಗಳಲ್ಲಿ ವಿಟಮಿನ್ ಎಂ- ಮಮತೆ ಮತ್ತು ವಿಟಮಿನ್ ಡಬ್ಲ್ಯೂ- ವಾತ್ಸಲ್ಯ ಸಿಗುವುದಿಲ್ಲ. ಅದು ಸಿಗುವುದು ಮನೆಯಲ್ಲಿ ಮಾತ್ರ. ಹಾಗಾಗಿ ನಾವು ಮನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಏಕೆಂ
ದರೆ, ಅದು ನಮ್ಮ ಕುಟುಂಬ. ಇಷ್ಟರ ಮಧ್ಯೆಯೂ ಕುಟುಂಬದ ಪ್ರಾದಾನ್ಯತೆ ಇಂದು ಸ್ವಲ್ಪ ಮಟ್ಟಿಗೆ ಕುಂಠಿತಗೊಳ್ಳುತ್ತಿದೆ. ಆಧುನಿಕತೆ ಹೆಚ್ಚಾದಂತೆ ಸಮೃದ್ಧಿ ಹೆಚ್ಚಾಗುತ್ತದೆ. ಹಿಂದೆ ಇದ್ದ ದೈನ್ಯತೆ ಈಗ ಕಡಿಮೆಯಾಗುತ್ತಿದೆ.

ಮನೆ ಎನ್ನುವುದು ಸಂಸ್ಕೃತಿ ಹಾಗೂ ಸಮೃದ್ಧಿಯಿಂದ ಕೂಡಿರಬೇಕು. ಸಮೃದ್ಧಿ ಹೆಚ್ಚಾದಂತೆ ಶ್ರೀಮಂತರ ಮನೆಗಳಲ್ಲಿ ಸಂಸ್ಕೃತಿ ಯೂ ಹೆಚ್ಚಾಗಬೇಕಿದೆ. ಸಂಸ್ಕೃತಿ ಇರುವ ಬಡವರ ಮನೆಯಲ್ಲಿ ಸಮೃದ್ಧಿ ಹೆಚ್ಚಾಗಬೇಕಿದೆ. ಆಧುನಿಕತೆಯ ಹೆಸರಿನಲ್ಲಿ ಆಸ್ತಿಕತೆಯ ಆಲಿಂಗನ ಮನೆ ಮಾಡುತ್ತಿದೆ. ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬ ವನ್ನು ಆಡಂಬರದಿಂದ ಆಚರಿಸುತ್ತೇವೆ. ಆದರೆ, ನಮ್ಮ ಪರಂಪರೆ ಅದು ಅಲ್ಲ. ಜನ್ಮ ದಿನದಂದು ದಾನ ಮಾಡುವುದು ನಮ್ಮ
ಪರಂಪರೆ. ಈ ಪರಂಪರೆಯನ್ನು ನಾವು ಬೆಳೆಸಿಕೊಂಡು ಹೋಗಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ.

ಹಾಗೇಯೇ ಕುಟುಂಬೊ ರಕ್ಷತಿ ರಕ್ಷತಃ ಎಂದರೆ, ಕುಟುಂಬವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಮ್ಮ ಪರಂಪರೆಯ ಬಗ್ಗೆ ಅರಿವು ಮೂಡಿಸಿದರು.

ವಂದೇಮಾತರಂ ಹಾಡಿ ಅಚ್ಚರಿ ಮೂಡಿಸಿದ ಸು.ರಾಮಣ್ಣ
ಸು.ರಾಮಣ್ಣ ಅವರು ೮೩ರ ಹರೆಯದ ಯುವಕ. ನಾಲ್ಕು ತಿಂಗಳ ಹಿಂದೆ ಹೃದಯ ಸಮಸ್ಯೆಗೆ ತುತ್ತಾಗಿ ಸ್ಟೆಂಟ್ ಅಳವಡಿಸಿ ಕೊಂಡಿದ್ದರು. ಅದಾದ ಬಳಿಕ ವಿಶ್ವವಾಣಿ ಕ್ಲಬ್ ಹೌಸ್ ಅವರ ಉಪನ್ಯಾಸದ ಮೊದಲ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ
ವಂದೇಮಾತರಂ ಗೀತೆಯನ್ನು ನಾಲ್ಕೂವರೆ ನಿಮಿಷಗಳ ಕಾಲ ಶುಶ್ರಾವ್ಯವಾಗಿ ಹಾಡುವ ಮೂಲಕ ಅವರು ಯುವಕರನ್ನೂ ನಾಚಿಸಿದರು. ಆ ಮೂಲಕ ಅಚ್ಚರಿ ಮೂಡಿಸಿದರು.

? ಸಮೃದ್ಧಿ ಇರುವ ಕುಟುಂಬದಲ್ಲಿ ಸಂಸ್ಕೃತಿ ಹೆಚ್ಚಾಗಬೇಕು
? ಸಂಸ್ಕೃತಿ ಇರುವ ಕುಟುಂಬದಲ್ಲಿ ಸಮೃದ್ಧಿ ಹೆಚ್ಚಾಗಬೇಕು
? ಜನ್ಮದಿನದಂದು ದಾನ ಮಾಡುವುದು ನಮ್ಮ ಪರಂಪರೆ

? ನಾವು ಸ್ವಾವಲಂಬಿಗಳಾಗಿ ಬದುಕಬೇಕು
? ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ.

ಭಾರತವನ್ನು ಒಂದುಗೂಡಿಸಬಲ್ಲ ಶಕ್ತಿ ಎಂದರೆ ಅದು ಕುಟುಂಬ ಮಾತ್ರ

? ಕುಟುಂಬವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ
? ಆಧುನಿಕತೆ ಹೆಚ್ಚಾದಂತೆ ಸಮೃದ್ಧಿ ಹೆಚ್ಚಾಗಿದೆ