ಲಖನೌ:
ಯುವ ವೇಗಿ ರಕೀಮ್ ಕಾರ್ನ್ವಾಲ್ (75ಕ್ಕೆೆ 7) ಸ್ಪಿಿನ್ ಮೋಡಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಏಕೈಕ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಅಫ್ಘಾಾನಿಸ್ತಾಾನ ತಂಡವನ್ನು 187 ರನ್ ಗಳಿಗೆ ಕಟ್ಟಿಿ ಹಾಕಿದೆ.
ಮೊದಲು ಬ್ಯಾಾಟ್ ಮಾಡಿದ ಆಫ್ಘನ್ 68.3 ಓವರ್ಗಳಲ್ಲಿ 187 ರನ್ ಆಲೌಟ್ ಆಯಿತು. ಆರಂಭದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡ ಅಫ್ಘಾಾನಿಸ್ತಾಾನ ತಂಡಕ್ಕೆೆ ಎರಡನೇ ವಿಕೆಟ್ಗೆ ಜಾವೀದ್ ಅಹ್ಮದ್ ಹಾಗೂ ಇಶಾನುಲ್ಲ ಜೋಡಿ ತಂಡಕ್ಕೆೆ ಅರ್ಧಶತಕ ಜೊತೆಯಾಟ ನೀಡಿ ತಂಡಕ್ಕೆೆ ನೆರವಾಯಿತು. ಜಾವೀದ್ 81 ಎಸೆತಗಳಲ್ಲಿ 39 ಹಾಗೂ ಇಶಾನುಲ್ಲ 24 ರನ್ ಬಾರಿಸಿ ಆಧಾರವಾದರು.
ಅಫ್ಸರ್ ಜಜಾಯಿ 3 ಬೌಂಡರಿ ನೆರವಿನಿಂದ 32 ರನ್ ಬಾರಿಸಿದರೆ, ಅಮೀರ್ ಹಮ್ಜಾಾ 84 ಎಸೆತಗಳಲ್ಲಿ 34 ರನ್ ಸಿಡಿಸಿದರು. ಉಳಿದ ಬ್ಯಾಾಟ್ಸ್ಮನ್ಗಳು ಕ್ರೀಸ್ನಲ್ಲಿ ಉಳಿಯುವಲ್ಲಿ ವಿಫಲರಾದರು.
ವಿಂಡೀಸ್ ತಂಡದ ಯುವ ಬೌಲರ್ ರಹಕೀಮ್ ಕಾರ್ನ್ವಾಲ್ 25.3 ಓವರ್ಗಳಿಗೆ 75 ರನ್ ನೀಡಿ 7 ವಿಕೆಟ್ ಕಬಳಿಸಿದರು. ಜೇಸನ್ ಹೋಲ್ಡರ್ ಎರಡು ವಿಕೆಟ್ ಪಡೆದರು.
ಮೊದಲ ಇನ್ನಿಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಮೊದಲನೇ ದಿನದಾಟ ಮುಕ್ತಾಾಯಕ್ಕೆೆ 22 ಓವರ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು 68 ರನ್ ಗಳಿಸಿದೆ. ಕ್ರೀಸ್ನಲ್ಲಿ ಜಾನ್ ಕ್ಯಾಾಂಪ್ಬೆಲ್ (30) ಹಾಗೂ ಬ್ರೂಕ್ಸ್ (19) ಇದ್ದಾಾರೆ.