Sunday, 15th December 2024

ದಿ ಕಾಶ್ಮೀರ್‌ ಫೈಲ್ಸ್ ಸಿನೆಮಾ ತೆರೆದಿಟ್ಟ ಸಾಂಕೇತಿಕ ಸೂಕ್ಷ್ಮಗಳು

ಅವಲೋಕನ

ತತ್ವಮಸಿ

ದೇಶಾದ್ಯಂತ ಬಿಡುಗಡೆಯಾದ, ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ, ನೂರಾರು ಕೋಟಿ ಹಣ ಗಳಿಕೆ ಮಾಡುತ್ತ ಬಾಕ್ಸ್ ಆಫೀಸಿನಲ್ಲಿ ಸಂಚಲನ ಉಂಟುಮಾಡುತ್ತಿರುವುದಷ್ಟೇ ಅಲ್ಲದೇ, ಜನಮಾನಸದಲ್ಲೂ ಅಚ್ಚಳಿಯದ ಪರಿಣಾಮ ಉಂಟುಮಾಡಿ, ಅವಿತಿಟ್ಟ ಸತ್ಯ ಮತ್ತು ತೇಲಿಬಿಟ್ಟ ಸುಳ್ಳುಗಳ ಕುರಿತು ಜಾಗೃತಿ ಮೂಡಿಸುತ್ತಿದೆ.

ಚಿತ್ರದಲ್ಲಿ ನಿರ್ದೇಶಕರು ವಾಚ್ಯವಾಗಿ ಬಿಡಿಸಿ ಹೇಳದೇ, ಪ್ರೇಕ್ಷಕರು ತಾವೇ ಕಂಡು ಕೊಳ್ಳಲು ಹುದುಗಿಸಿಟ್ಟಿರುವ ಸೂಕ್ಷ್ಮ ಸಾಂಕೇತಿಕ ರೂಪಕಗಳು ಹಲವಾರು ಇರುವು ದರಿಂದ ಇದೊಂದು ವಿಶಿಷ್ಟ ಮತ್ತು ಉತ್ತಮ ಕಲಾಕೃತಿಯೂ ಆಗಿದೆ. ಚಿತ್ರದಲ್ಲಿ ಹುದುಗಿ ರುವ ಈ ಸಂಕೇತಗಳು ಭಾರತೀಯ ಧರ್ಮ-ಪುರಾಣ-ಇತಿಹಾಸ-ಸಮಾಜಗಳಲ್ಲಿರುವ ತತ್ವ- ಪಾತ್ರ-ವ್ಯಕ್ತಿ-ಘಟನೆಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತವಾದ್ದರಿಂದ, ವಾಚ್ಯ ವಾಗಿ ಹೇಳದ ಸೂಕ್ಷ್ಮಗಳು ಸಹ, ನೋಡುವ ಭಾರತೀಯ ಮನಸ್ಸಿಗೆ ತನ್ನ ಅರಿವಿಲ್ಲ ದಂತೆಯೇ ಆಳದಲ್ಲಿ connect ಆಗಿ, ಚಿತ್ರದ ಪಾತ್ರಗಳು ಆಪ್ತವಾಗುತ್ತವೆ. ಮತ್ತು ಆ ಪಾತ್ರಗಳು ಅನುಭವಿಸುವ ನೋವು- ಸಂಕಟ-ಸಂಘರ್ಷಗಳು ವರ್ತಮಾನದಲ್ಲಿ ತನ್ನವೇ, ತನ್ನ ಸಮಾಜದ್ದೇ, ತನ್ನ ನಾಗರಿಕತೆಯದ್ದೇ ಹೊರತು ಹೊರಗಿನದ್ದಲ್ಲ ಎಂಬ ಅರಿವು ಪ್ರeಯ ಮಟ್ಟದಲ್ಲಿ ತಟ್ಟುತ್ತದೆ. ಹಾಗಾಗಿ ಪ್ರಸ್ತುತ ಚಲನಚಿತ್ರದ್ದು ರಸದ ಮಟ್ಟದಲ್ಲಿಯೂ ಗೆಲುವೇ ಸರಿ.

ಕೆಲವರು ಈ ಚಿತ್ರವನ್ನು ‘ಶಿಂಡ್ಲರ್ಸ್ ಲಿಸ್ಟ್’ ಎಂಬ ನಾಝಿ ಕಾಲದ ಯಹೂದಿ ಹತ್ಯಾಕಾಂಡದ ಘೋರಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಆಸ್ಕರ್ ಪುರಸ್ಕೃತ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ‘ಅಲ್ಲಿ ಸಂಭವಿಸಿದ್ದು, ಇಲ್ಲಿಯೂ ಸಂಭವಿಸಬಹುದು’ ಎನ್ನುವಷ್ಟು ಮಾತ್ರದ ಜಾಗೃತಿ ಪ್ರೇಕ್ಷಕನ ಪ್ರeಯನ್ನು ತಲುಪುವಂತೆ ಮಾಡಿದ್ದಿದ್ದರೆ ಹಾಗೆನ್ನಬಹುದಿತ್ತೇನೋ. ಆದರೆ ‘ದಿ ಕಾಶ್ಮೀರ್ ಫೈಲ್ಸ್’ ಅದನ್ನೂ ಮೀರಿ, ‘ಕಾಶ್ಮೀರ ಎನ್ನುವುದು ಅ ಇರುವ ಏಲಿಯನ್ ಭೂಮಿಯಲ್ಲ; ಅದು ನಮ್ಮದೇ ಸಂಸ್ಕೃತಿಯ, ನಾಗರಿಕತೆಯ ಕಿರೀಟ. ಅಲ್ಲಿ ಸಂಭವಿಸಿದ್ದು ಎಂದರೆ ಅದು ಬೇರೆಲ್ಲೂ ಅಲ್ಲ, ಇಲ್ಲಿಯೇ ಸಂಭವಿಸಿದ್ದು!’ ಎಂಬ ಮಟ್ಟಿಗೆ ಭಾರತೀಯ ಪ್ರೇಕ್ಷಕನನ್ನು ಆಳವಾಗಿ ಕಲಕಿಬಿಟ್ಟಿದೆ.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಕಾಶ್ಮೀರವಿಲ್ಲದೇ ಭಾರತವಿಲ್ಲ ಎಂಬುದನ್ನು ಪ್ರತೀ ಭಾರತೀಯನಿಗೂ ಬಲವಾಗಿ ಮನದಟ್ಟು ಮಾಡಿಕೊಟ್ಟಿದೆ. ಆದ್ದರಿಂದ ಇದು ಭಾರತೀಯ ಸಂದರ್ಭದ ಮಟ್ಟಿಗೆ ‘ಶಿಂಡ್ಲರ್ಸ್ ಲಿಸ್ಟ್’ಗಿಂತಲೂ ಹೆಚ್ಚು ಪ್ರಸ್ತುತ ಚಿತ್ರ ಎನ್ನಬಹುದು.
ಚಿತ್ರದಲ್ಲಿ ಹುದುಗಿರುವ ಸೂಕ್ಷ್ಮ ಸಂಕೇತಗಳಿಂದಾಗಿ, ಪ್ರೇಕ್ಷಕನಿಗೆ ಇದರಲ್ಲಿ ತಾನು ಕಂಡದ್ದಷ್ಟೇ ಅಲ್ಲ, ಕಾಣದ್ದೂ ಇದೆ. ಹುಡುಕಿ ನೋಡಿ ದಷ್ಟೂ ಹೆಚ್ಚು ಹೆಚ್ಚು ಕಾಣುತ್ತದೆ ಎಂದು ಚಿಂತನೆಗೆ incentive ನೀಡುತ್ತದೆ. ಉದಾಹರಣೆಗೆ, ನಿರ್ದೇಶಕರು ವಿವಿಧ ಪಾತ್ರಗಳಿಗೆ ಇಟ್ಟಿ ರುವ ಹೆಸರುಗಳನ್ನೂ ಗಮನಿಸೋಣ:

೦. ಆರಂಭದ ದೃಶ್ಯದಲ್ಲಿ ಕಾಶ್ಮೀರದಲ್ಲಿ ಕ್ರಿಕೆಟ್ ಆಡುತ್ತಿರುವ ಹುಡುಗನ ಹೆಸರು ‘ಶಿವ’. ಶಿವನೆಂದರೆ ಆದಿ ಅಂತ್ಯಗಳಿಲ್ಲದ, ಸನಾತನ ವಾದ ತತ್ವ. ಶಿವನ ಆವಾಸ ಕೈಲಾಸ. ಅಂದರೆ ಕಾಶ್ಮೀರದ ಮೂಲ ನಾಗರಿಕತೆ ಸನಾತನವಾದ, ಪ್ರಪಂಚದ ನಾಗರಿಕತೆಗಳ ತೊಟ್ಟಿ ಲಾದ ಹಿಂದೂ ನಾಗರಿಕತೆ ಎಂಬುದನ್ನು ‘ಶಿವ’ ಎಂಬ ಹೆಸರು ಸೂಚಿಸುತ್ತದೆ.
೧. ಬ್ರಹ್ಮ ದತ್ತ (ಮಿಥುನ್ ಚಕ್ರವರ್ತಿ) – ಐಎಎಸ್ ಅಧೊಕಾರಿ (ಸರಕಾರ)
೨. ವಿಷ್ಣು ರಾಮ್ (ಅತುಲ್ ಶ್ರೀವಾಸ್ತವ) – ವಾರ್ತಾ ವಾಚಕ (ಮಾಧ್ಯಮ)
೩. ಹರಿ ನಾರಾಯಣ (ಪುನೀತ್ ಇಸ್ಸಾರ್) – ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ)
೪. ಮಹೇಶ್ ಕುಮಾರ್ (ಪ್ರಕಾಶ್ ಬೆಳವಾಡಿ) – ವೈದ್ಯ

ಈ ಪಾತ್ರಗಳ ಮೂಲಕ ಚಿತ್ರವು ಕಾಶ್ಮೀರದ ಹತ್ಯಾಕಾಂಡದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಅಂಗಗಳ ದೌರ್ಬಲ್ಯ, ಅಸಹಾಯಕತೆ ಮತ್ತು ತತ್ಪರಿಣಾಮವಾದ ವೈಫಲ್ಯವನ್ನು, ಮತ್ತು ಭಾರತೀಯವಲ್ಲದ ಪ್ರಕೃತಿಯ ನಿಯಮಗಳ ಅಡಿಯಲ್ಲಿ (ಕಾಶ್ಮೀರದ ಪ್ರತ್ಯೇಕ ಸಂವಿಧಾನ) ಬ್ರಹ್ಮ-ವಿಷ್ಣು-  ಮಹೇಶ್ವರರೂ ಕೈಕಟ್ಟಿ ಕೂತು, ದಾನವರ ಪೈಶಾಚಿಕ ಕೃತ್ಯಗಳನ್ನು ಅಸಹಾಯಕರಾಗಿ ನೋಡುವಂತಾಯಿತು ಎಂಬುದನ್ನು ಸಾರುತ್ತದೆ.

೫. ಪುಷ್ಕರ ನಾಥ್ ಪಂಡಿತ್ – ಈ ಪಾತ್ರದ ಹೆಸರು ವೈಯಕ್ತಿಕವಾಗಿ ನಟ ಅನುಪಮ್ ಖೇರ್‌ರಿಗೆ ಪಾತ್ರ ಪೋಷಣೆಯನ್ನು ಇನ್ನಷ್ಟು ಕಠಿಣವಾಗಿಸಿರಬೇಕು. ಏಕೆಂದರೆ ಪುಷ್ಕರ್‌ನಾಥ್ ಎನ್ನುವುದು ಸ್ವತಃ ಕಾಶ್ಮೀರಿ ಪಂಡಿತ ಮನೆತನದಲ್ಲಿ ಜನಿಸಿರುವ ಅನುಪಮ್ ಖೇರರ ತಂದೆಯ ಹೆಸರು.

ಪುಷ್ಕರ ನಾಥರ ಪಾತ್ರ ಏನನ್ನು ಪ್ರತಿನಿಧಿಸುತ್ತದೆ?
– ಪುಷ್ಕರ ನಾಥರ ಮನೆಯ ಗೇಟಿನ ಬಳಿಯ ನಾಮಫಲಕ ‘ಎಂ.ಎ. ಫಿಲಾಸಫಿ’ ಎನ್ನುತ್ತದೆ. ಅಂದರೆ ಪುಷ್ಕರ ನಾಥ್ ಎನ್ನುವುದು ಭಾರತೀಯ ಕಾವ್ಯ-ತತ್ವಶಾಸ ಪರಂಪರೆಗೆ ಕೊಡುಗೆ ನೀಡಿರುವ ಪಾಣಿನಿ, ಪತಂಜಲಿ, ಅಭಿನವ ಗುಪ್ತ, ಕ್ಷೇಮೇಂದ್ರ, ಕಲ್ಹಣ, ಬಿಲ್ಹಣ ಮೊದಲಾದ ಅಸಂಖ್ಯಾತ ಕಾಶ್ಮೀರಿ ಪಂಡಿತೋತ್ತಮರ ಪರಂಪರೆಯ ಪ್ರತೀಕ.

– ಚಿತ್ರದಲ್ಲಿ ಪುಷ್ಕರ ನಾಥರು ನಾಟಕ ತರಬೇತಿ ನೀಡುವ ಗುರು. ಇದು ಕಾಶ್ಮೀರವು ನಾಟ್ಯ ಶಾಸ್ತ್ರ ರಚಿಸಿದ ಭರತ ಮುನಿ ಯ ತವರು ಎನ್ನುವುದನ್ನು ಸೂಕ್ಷ್ಮವಾಗಿ ಸೂಚಿಸುವ ನಿರ್ದೇಶಕರ ಜಾಣ್ಮೆ.

– ನಾಟಕದಲ್ಲಿ ನೀಲಿ ಬಣ್ಣವನ್ನು ಮುಖಕ್ಕೆ ಬಳಿದುಕೊಂಡು ಶಿವನ ವೇಷಧಾರಿಯಾಗುವ ಪುಷ್ಕರ ನಾಥರ ಪಾತ್ರ, ಆಮೀರ್ ಖಾನ್‌ನ ‘ಪೀಕೆ’, ಸೈ- ಅಲಿ ಖಾನ್‌ನ ‘ತಾಂಡವ’ ಇತ್ಯಾದಿ ಸಿನೆಮಾ-ಸೀರೀಸ್‌ಗಳಲ್ಲಿ, ಕಲೆಯ ಹೆಸರಿನಲ್ಲಿ ಶಿವ ಪಾತ್ರಧಾರಿಯನ್ನು, ತನ್ಮೂಲಕ ಹಿಂದೂ ಧರ್ಮವನ್ನು ಹೀನಾವಾಗಿ, ಅವಹೇಳನಕಾರಿಯಾಗಿ ತೋರಿಸಿದ್ದರ ವಿರುದ್ಧ, ನಿರ್ದೇಶಕರು ಸಿನೆಮಾ ಎಂಬ ಕಲಾ ಮಾಧ್ಯಮದ ಮೂಲಕವೇ ತೋರಿಸುತ್ತಿರುವ ಸೂಕ್ಷ್ಮ ಪ್ರತಿಭಟನೆಯೇನೋ ಎಂಬಂತೆ ಭಾಸವಾಗುತ್ತದೆ.

೬. ಶಾರದಾ ಪಂಡಿತ್- ಪಂಡಿತರ ಮನೆಗೆ ‘ಕರಣ್ ಪಂಡಿತ್ ’ನ ಕೈಹಿಡಿದು ಬಂದು ನೆಲೆಸಿದವಳು (ಕರಣ=ಜ್ಞಾನೇಂದ್ರಿಯ). ಶಂಕರರು ಶಾರದಾ ಪೀಠ ಸ್ಥಾಪಿಸಿದ್ದು ಕಾಶ್ಮೀರದಲ್ಲಿ. ಶಾರದೆಯ ಆವಾಸ ಕಾಶ್ಮೀರ. ಶಾರದೆ ಬೇರೆಯಲ್ಲ ಕಾಶ್ಮೀರ ಬೇರೆಯಲ್ಲ. ಮಾರಣಹೋಮದ ಮೂಲಕ ಇಂತಹಾ ಕಾಶ್ಮೀರವನ್ನು ಕೊಯ್ದು ಇಬ್ಬಾಗವಾಗಿಸಿದ್ದು ಇತಿಹಾಸ ಅಷ್ಟೇ ಅಲ್ಲ, ವರ್ತಮಾನವೂ ಕೂಡ.

ನಿರಾಶ್ರಿತರಾಗಿ ಅಲೆವ ದಿನಗಳಲ್ಲೂ ಮಗನಿಗೆ ವಿದ್ಯೆಯ ಮಹತ್ವವನ್ನು ಒತ್ತಿ ಹೇಳುವ ಮಾತೃ ಸ್ವರೂಪಿಣಿ ಶಾರದಾ. ‘ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀ….’ ಎಂದು ಪೂಜ್ಯ ಭಾವದಿಂದ ಸರಸ್ವತಿಗೆ ನಮಿಸುವ ಹಿಂದೂ ಮನಸ್ಸಿಗೆ, ಶಾರದಾಳ ಮೇಲೆ ಜಿಹಾದಿಗಳು ಎಸಗುವ ಕ್ರೌರ್ಯ, ಭಾರತೀಯ ಜ್ಞಾನ ಪರಂಪರೆಯ ಮೇಲೆ ಆದ ಅತ್ಯಾಚಾರ ಅನಿಸದೇ ಇರದು.

೭. ANU ಚಲನಚಿತ್ರದಲ್ಲಿ ದೇಶವಿರೋಧಿ, ಪ್ರತ್ಯೇಕತಾವಾದಿ ಶಕ್ತಿಗಳ ಆಟಕ್ಕೆ ಮೈದಾನವಾಗಿ ಸಹಕರಿಸುವ ANU  ಸಂಸ್ಥೆಯ ಹೆಸರು, ಹಿಂದೆ ದೇಶ ವಿಭಜನೆಯ ಬೀಜ ಬಿತ್ತಿದ AMU  ಮತ್ತು ಇಂದು ಮತ್ತದೇ ವಿಷಬೀಜಕ್ಕೆ ನೀರೆರೆಯುತ್ತಿರುವ AMU ಗಳ ಅಪವಿತ್ರ ಸಮಾಗಮದಿಂದ ಹುಟ್ಟಿದಂತಿದೆ.
೮. ರಾಧಿಕಾ ಮೆನನ್- ದೇಶ ಒಡೆಯಲು ಭಯೋತ್ಪಾದಕರ ಕೈ ಹಿಡಿಯುವ, ರಂಜಕ ಮಾತಿನಿಂದ ಯುವಜನತೆಯ ತಲೆ ಕೆಡಿಸುವ ಬುದ್ಧಿಜೀವಿಗಳ ಪ್ರತೀಕ.

ಈ ಪಾತ್ರವು ದೇಸೀಯ ಉಡುಗೆ ತೊಡುಗೆಗಳಾದ ಸೀರೆ ಮತ್ತು ದೊಡ್ಡ ಬಿಂದಿಯನ್ನು ಧರಿಸಿ, ದೇಶದ ವಿರುದ್ಧವೇ ಪಿತೂರಿ ನಡೆಸುವ ಅರುಂಧತಿ ರಾಯ್‌ನಂತಹ ಅನೇಕರನ್ನು ನೆನಪಿಸುತ್ತದೆ. ರಾಧಿಕಾ ಎಂಬ ಹೆಸರು JNU  ನಲ್ಲಿ ಟುಕ್ದೆ ಗ್ಯಾಂಗಿನ ಪರ ನಿಂತ ದೀಪಿಕಾ ಪಡುಕೋಣೆಯ ಹೆಸರನ್ನು ಹೋಲುವುದು ಕೇವಲ ಕಾಕತಾಳೀಯ ಇರಲಾರದು.

೯. ಕೃಷ್ಣ ಪಂಡಿತ್- ಇಬ್ಬಂದಿ ಮನಸ್ಥಿತಿಯನ್ನು ಹೊಂದಿರುವ, ಸರಿ ತಪ್ಪುಗಳ ನಿಷ್ಕರ್ಷೆ ಮಾಡಲಾರದೆ ಗೊಂದಲದಲ್ಲಿ ತೊಳಲಾಡುವ ಈ ಪಾತ್ರ, ಮಹಾಭಾರತದ ಅರ್ಜುನ ನನ್ನು ಪ್ರತಿನಿಽಸುತ್ತದೆ. ಚಿತ್ರದಲ್ಲಿ ಉಗ್ರಗಾಮಿ ಬಿಟ್ಟಾ ಪಾತ್ರ ಧಾರಿಯು ನಿನ್ನ ಹೆಸರು ಕೃಷ್ಣ, ಆದರೆ ನೀನು ಅರ್ಜುನನಂತೆ ಕಾಣುತ್ತೀಯ ಎನ್ನುವಲ್ಲಿ ಇದನ್ನು ವಾಚ್ಯವೂ ಆಗಿಸಲಾಗಿದೆ.

ಆರಂಭದಲ್ಲಿ ಕೃಷ್ಣ ಪಂಡಿತ್ ಅರ್ಜುನನಂತೆ ಕಾಣುವುದು ನಿಜವಾದರೂ, ಸಿನೆಮಾ ಮುಂದುವರೆದಂತೆ ಪ್ರೇಕ್ಷಕನಿಗೆ, ಕಾಶ್ಮೀರದ ನರಮೇಧದ ಸತ್ಯದ ಬಗ್ಗೆ ಅಂಧಕಾರದಲ್ಲಿರುವ, ಕಾಶ್ಮೀರ ಭಾರತz ಅಲ್ಲವೋ ಎಂಬ ಬಗ್ಗೆ ಗೊಂದಲದಲ್ಲಿರುವ ತಾನೇ ಆ ಅರ್ಜುನ ಎಂದು ಹಂತ ಹಂತವಾಗಿ ಅರಿವಾಗುತ್ತ ಹೋಗುತ್ತದೆ. ಕಡೆಗೆ ಅದೇ ಕೃಷ್ಣ ಪಂಡಿತ ANU  ರಂಗಮಂದಿರವೆಂಬ ಬೌದ್ಧಿಕ ಯುದ್ಧರಂಗದ ಮಧ್ಯದಲ್ಲಿ ನಿಂತು ಮಾಡುವ ಅದ್ಭುತ ಭಾಷಣವನ್ನು ಕೇಳಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ, ಗೀತೋಪದೇಶವಾದ ಬಳಿಕ
ಸಂಶಯಮುಕ್ತನಾದ ಅರ್ಜುನನಂತೆ ಸ್ಪಷ್ಟತೆಯನ್ನು ಪಡೆದಿರುತ್ತಾನೆ.

ಪುಷ್ಕರನಾಥ ಪಂಡಿತರ ಮನೆಯನ್ನು ತನ್ನದಾಗಿಸಿಕೊಳ್ಳುವ ಆಸೆಯಿಂದ, ಪಂಡಿತರನ್ನು ಕೊಲ್ಲಿಸಲು, ಓಡಿಸಲು ಜಿಹಾದಿಗಳಿಗೆ ನೆರವಾಗುವ ಪಕ್ಕದ ಮನೆಯವ, ನೆರೆಯ ಭೂಗಳ್ಳ ’ಭಾಯಿ ಭಾಯಿ’ ಚೀನಾವನ್ನು ನೆನಪಿಸುತ್ತಾನೆ. ಪಾಕಿ ಸೈನ್ಯಕ್ಕೆ, ಉಗ್ರರಿಗೆ ಸಹಾಯ ಮಾಡುವ, POK ಯಲ್ಲಿ ಒಂದು ತುಂಡನ್ನು ಪಾಕಿಸ್ತಾನದಿಂದ ಪಡೆದುಕೊಂಡಿರುವ ಚೀನಾ, ಕಾಶ್ಮೀರಿ ಪಂಡಿತರ ನರಮೇಧದ ನೇರ ಫಲಾನುಭವಿ ಎನ್ನಬೇಕಾಗುತ್ತದೆ.

ನೆರೆಯ ದೇಶಗಳಲ್ಲಿ ಕೋಮು ದಳ್ಳುರಿಯಲ್ಲಿ ಸಂತ್ರಸ್ತರಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆರವಾಗಲು ಕೇಂದ್ರ ಸರಕಾರ ತಂದ CAA ಕಾಯ್ದೆಯ ವಿರುದ್ಧ ಇಲ್ಲಿನ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಲು ಟುಕ್ದೆ ಗ್ಯಾಂಗು ಬಳಸಿಕೊಂಡಿದ್ದ ಪಾಕಿಸ್ತಾನಿ ಕವಿ ಫೈಜ್ ಅಹ್ಮದ್ ನ ಹಮ್ ದೇಖೇಂಗೆ ಎಂಬ ಹಾಡನ್ನು, ವಿವೇಕ್ ಅಗ್ನಿಹೋತ್ರಿ ಬಹಳ ಯಶಸ್ವಿಯಾಗಿ, ಮಾರ್ಮಿಕವಾಗಿ ಎಡಚರ ವಿರುದ್ಧವೇ ತಿರುಗಿಸಿದ್ದಾರೆ. ವಿದ್ಯಾರ್ಥಿಗಳನ್ನು ಭಾರತದ ಸಾರ್ವಭೌಮತ್ವದ ವಿರುದ್ಧ ಎತ್ತಿಕಟ್ಟಲು ANU ಬುದ್ಧಿಜೀವಿ ರಾಧಿಕಾ ಮೆನನ್ ಈ ಹಾಡನ್ನು ಬಳಸಿದರೆ, ಕೃಷ್ಣ ಪಂಡಿತನ ಬಾಯಲ್ಲಿ ’ಹಂ ದೇ ಖೇಂಗೆ’ ಎನ್ನುವುದನ್ನು ಸಂಪೂರ್ಣ ಬೇರೆಯದೇ ಧ್ವನಿ, ಅರ್ಥ ಬರುವಂತೆ ಹೇಳಿಸುವ ನಿರ್ದೇಶಕರು, ಮೂರು ದಶಕಗಳಿಂದ ನೊಂದ ಕಾಶ್ಮೀರಿ ಪಂಡಿತರು ತಮ್ಮದೇ ದೇಶದಲ್ಲಿ ತಮಗೆ ನ್ಯಾಯ ಎಂದು ಸಿಗುವುದೋ ಎಂದು ಎದುರು ನೋಡುತ್ತಲೇ ಇದ್ದಾರೆ ಎಂಬುದನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

‘ಹಂ ದೇ ಖೇಂಗೆ’ ಹಾಡುವ ರಾಧಿಕಾ ಮೆನನ್‌ಳನ್ನು ನೋಡಿದಾಗ ಕನ್ನಡಿಗ ಪ್ರೇಕ್ಷಕನಿಗೆ, ಎರಡು ವರ್ಷಗಳ ಕೆಳಗೆ ಇದೇ ಹಾಡಿನ ಕನ್ನಡ ಅವತರಣಿಕೆಯನ್ನು, ಟೌನ್ ಹಾಲಿನ ಮುಂದೆ ಇಅಅ ವಿರುದ್ಧ ದೇಶದ್ರೋಹಿಗಳ ಗುಂಪುಕಟ್ಟಿಕೊಂಡು ‘ನಾವು ನೋಡೋಣಾ, ನೋಡೇ ಬಿಡೋಣ ..’ ಎಂಬ ಪಲ್ಲವಿಯೊಂದಿಗೆ ಹಾಡಿದ ಗಾಯಕಿಯ ನೆನಪಾಗದೇ ಇರದು. ಮತ್ತು ಆಕೆ ಯಾವುದೋ ಹೊಳೆಯುವ ಮಾಯಾ ಮೃಗದ ಸೆಳೆತಕ್ಕೆ ಸಿಕ್ಕಿ ತನ್ನ ವಿದ್ಯೆಯನ್ನು ಮಾರಿಕೊಂಡ ಬಗ್ಗೆ ಅಸಹ್ಯ, ತಿರಸ್ಕಾರ ಮೂಡದೇ ಇರದು.

ಪುಷ್ಕರನಾಥ ಪಂಡಿತರ ಕೊನೆಯ ಆಸೆಗಳಾದರೂ ಹೇಗಿದ್ದವು? ಆರ್ಟಿಕಲ್ 370 ರದ್ದಾಗಬೇಕು. ತನ್ನ ಮುಂದಿನ ತಲೆಮಾರು ಕಾಶ್ಮೀರಕ್ಕೆ, ತನ್ನ ಮನೆಗೆ, ತನ್ನ ಮೂಲಕ್ಕೆ ಮರಳಬೇಕು; ಸೋರುವ ಹಳೆಯ ಮನೆಯನ್ನು ಬಾಗಿಲನ್ನು ದುರಸ್ತಿ ಮಾಡಿಸಬೇಕು, ತನ್ನ ಬಜಾಜ್ ಸ್ಕೂಟರ್‌ಗೆ ಬಣ್ಣ ಬಳಿಸಬೇಕು. ತನ್ನ ಸ್ನೇಹಿತರಾದ ಬ್ರಹ್ಮ, ವಿಷ್ಣು, ಹರಿ, ಮಹೇಶ್ ಒಟ್ಟಾಗಿ ಸೇರಿ ತನ್ನ ಅಸ್ತಿಯನ್ನು ತಾನು ಹುಟ್ಟಿ ಬೆಳೆದ ಮನೆಯಲ್ಲಿ ವಿಸರ್ಜಿಸಬೇಕು… ಇಂತಹಾ ನಿರ್ಮಲ ಸಾತ್ವಿಕ ಆಸೆಗಳೇ. ಇಲ್ಲಿ ಎಲ್ಲಿಯೂ ದ್ವೇಷ, ಪ್ರತೀಕಾರಗಳ ವಾಸನೆಯೂ ಕಾಣಸಿಗುವುದಿಲ್ಲ.

ಬದಲಿಗೆ, ಕೇವಲ ಇತಿಹಾಸದ ತಪ್ಪುಗಳನ್ನು ಸರಿಮಾಡಬೇಕೆನ್ನುವ, ಒಡೆದುದ್ದನ್ನು ಮತ್ತೆ ಕಟ್ಟಬೇಕೆಂಬುವ ಆಶಯ ಮಾತ್ರ ಇದೆ ಎಂಬು ದನ್ನು ಗಮನಿಸಿದರೆ, ‘ಈ ಸಿನೆಮಾ ಧರ್ಮಗಳ ನಡುವೆ ಒಡಕು ಮೂಡಿಸುತ್ತದೆ’ ಎನ್ನುವವರ ಹುಸಿ ಆರೋಪದ ಹಿಂದಿನ ಪೊಳ್ಳು ಗೊತ್ತಾ ಗುತ್ತದೆ. ಈ ಸಿನೆಮಾ ಚಳಿ ಹುಟ್ಟಿಸಿರುವುದು ಜಾತಿಯ ಆಧಾರದಲ್ಲಿ ಹಿಂದೂಗಳನ್ನು ಒಡೆದು ಆಳುತ್ತಿದ್ದ ರಾಜಕೀಯ ಪಕ್ಷಗಳಿಗೇ ಹೊರತು, ಸಂವಿಧಾನವನ್ನು ಗೌರವಿಸುವ, ಪಾಲಿಸುವ ಯಾವುದೇ ಧರ್ಮದ ಭಾರತೀಯನಿಗಲ್ಲ.

ಕಡೆಯಲ್ಲಿ ಬ್ರಹ್ಮ ದತ್ತರ ಕೈಯಿಂದಲೇ ಪುಷ್ಕರನಾಥರ ಮನೆಯ ಪಲ್ಲಟಗೊಂಡ ಶಿವಲಿಂಗವನ್ನು ಸ್ವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿಸುವ ಮೂಲಕ, ಸರಕಾರವೇ ಮುಂದೆ ನಿಂತು ಕಾಶ್ಮೀರದಲ್ಲಿ ನೆಲೆ ಕಳೆದುಕೊಂಡಿರುವ ಶಿವನಿಗೂ, ಕಾಶ್ಮೀರೀ ಪಂಡಿತರಿಗೂ, ಅವರ ಮೂಲ ಸ್ಥಾನವಾದ ಕಾಶ್ಮೀರದಲ್ಲಿಯೇ ಪುನರ್ವಸತಿ ಕಲ್ಪಿಸಿಕೊಡಬೇಕು ಎಂಬ ಆಶಯವನ್ನು ಸಿನೆಮಾ ವ್ಯಕ್ತಪಡಿಸುತ್ತದೆ.

(ಈ ಲೇಖನವು ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಿದ ಹಲವು ಸ್ನೇಹಿತರೊಂದಿಗೆ ನಡೆಸಿದ ಚರ್ಚೆ ಜಿeಸೆಗಳಿಂದ ಮತ್ತು ’ಗಣರಾಜ’ ಎಂಬುವವರ ಟ್ವೀಟುಗಳಿಂದ ಸ್ಫೂರ್ತಿ ಪಡೆದಿದೆ)