ಪ್ರಚಲಿತ
ಮೋಹನದಾಸ ಕಿಣಿ, ಕಾಪು
ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ಮಾತ್ರವಲ್ಲ, ವೈಜ್ಞಾನಿಕ ತಳಹದಿಯ ಮೇಲೂ ನಿರ್ಮಾಣವಾದವುಗಳಾಗಿವೆ. ಆದುದರಿಂದ ಅಂತಹ ಆಚರಣೆಗಳನ್ನು ಸಮಾನತೆಯ, ಆಧುನಿಕ, ಮಾನವ ನಿರ್ಮಿತ ಕಾನೂನಿನ ದೃಷ್ಟಿಿಕೋನದಿಂದ ಮಾತ್ರ ನೋಡುವ ಬದಲು ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಹಿನ್ನೆೆಲೆಯಲ್ಲಿಯೂ ನೋಡಿದರೆ ಗೋಚರಿಸಬಹುದಾದ ಸತ್ಯವೇ ಬೇರೆ. ಶಬರಿಮಲೆ ಸೇರಿದಂತೆ ಪ್ರತಿಯೊಂದು ತೀರ್ಥಕ್ಷೇತ್ರಕ್ಕೂ ಅದರದ್ದೇ ಆದ ನಿರ್ದಿಷ್ಟ ಪೂಜಾ ವಿಧಾನಗಳಿವೆ.
ಶಬರಿಮಲೆಗೆ ಬರುವ ಯಾತ್ರಾಾರ್ಥಿಗಳು 48 ದಿನಗಳ ಕಠಿಣ ವ್ರತಾಚರಣೆಯೊಂದಿಗೆ ಪಾದಯಾತ್ರೆೆ ಮೂಲಕವೇ ದೇಗುಲಕ್ಕೆೆ ಪ್ರವೇಶಿಸುವುದು ನಡೆದುಬಂದ ಪದ್ಧತಿ. ಹೀಗಾಗಿ ಶಬರಿಮಲೆ ದೇವಸ್ಥಾಾನವನ್ನು ಪ್ರವೇಶಿಸುವುದಕ್ಕೆೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಇರುವ ನಿರ್ಬಂಧಗಳನ್ನು ನಿಗದಿಪಡಿಸಿರುವುದನ್ನು ಸ್ತ್ರೀಯರ ದೇಹ ಪ್ರಕೃತಿಯ ಹಿನ್ನೆೆಲೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಹಾಗೆಯೇ ದಕ್ಷಿಣ ಭಾರತದ ದೇವಸ್ಥಾಾನಗಳ ನಿರ್ಮಾಣದಲ್ಲಿರುವ ವಿಶಿಷ್ಟ ವಿಚಾರಗಳ ಬಗ್ಗೆೆ ತಜ್ಞರ ಪ್ರತಿಪಾದನೆಗಳನ್ನು ಮೇಲ್ನೋೋಟಕ್ಕೆೆ ಮಹಿಳೆಯರು ರಜಸ್ವಲೆಯಾಗುವ ವಯೋಮಾನದ ಅವಧಿಯಲ್ಲಿ ಶಬರಿಮಲೆ ದೇಗುಲಕ್ಕೆೆ ಪ್ರವೇಶ ನಿಷಿದ್ಧ ಎಂಬ ವಾದದಲ್ಲಿ ಮುಟ್ಟಿಿನ ಅವಧಿಯಲ್ಲಿ ಕೆಲವೊಂದು ದೇವತಾ ಕಾರ್ಯಗಳಲ್ಲಿ ನಿರ್ಬಂಧಿಸುವ ಸಾಮಾನ್ಯ ನಂಬಿಕೆಯಂತೆ ಅನ್ವಯಿಸಲಾಗುತ್ತಿಿದೆ ಎಂಬುದು ವಾದ. ಆದರೆ, ದೇವಸ್ಥಾಾನಕ್ಕೆೆ ಭಕ್ತಿಿ ಪೂರ್ವಕ ಭೇಟಿ ನೀಡುವ ಯಾವುದೇ ಮಹಿಳೆ ಆ ದಿನಗಳಲ್ಲಿ ಸ್ವಯಂ ಪ್ರೇರಣೆಯಿಂದ ದೂರ ಉಳಿಯುತ್ತಾಾರೆ. (ಗೋವಾದಲ್ಲಿ ಇತ್ತೀಚಿನವರೆಗೂ ವಿದೇಶೀಯರಿಗೂ ಮುಕ್ತ ಪ್ರವೇಶವಿರುತ್ತಿಿತ್ತು. ಆದರೆ, ಈಗ ವಸ್ತ್ರ ಸಂಹಿತೆ ಜಾರಿಗೊಳಿಸಿದೆ ಮತ್ತು ಮುಟ್ಟಿಿನ ದಿನಗಳಲ್ಲಿ ಪ್ರವೇಶ ನಿಷೇಧಿಸುವ ಫಲಕಗಳನ್ನು ಅಳವಡಿಸಲಾಗಿದೆ.) ಆದ್ದರಿಂದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಾತ್ರ ನಿರ್ದಿಷ್ಟ ವಯೋಮಾನದವರಿಗೆ ಪೂರ್ಣ ನಿರ್ಬಂಧವಿರುವುದರ ಹಿಂದೆ ಬೇರೆಯೇ ಕಾರಣಗಳಿರಬೇಕು!
ಭಾರತೀಯ ಸಂಜಾತೆ ಅಮೆರಿಕನ್ ಹೃದ್ರೋಗ ತಜ್ಞೆ ಡಾ. ನಿಶಾ ಪಿಳ್ಳೈ ಮೂಲತಃ ಕೇರಳದಲ್ಲಿ ಜನಿಸಿದವರು. ಕೊಟ್ಟಾಾಯಂ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿಯನ್ನು ಪಡೆದು ನ್ಯೂಯಾರ್ಕ್‌ನಲ್ಲಿ ಉನ್ನತ ಪದವಿ ಪಡೆದು, ಪ್ರಸಿದ್ಧ ಲಾಂಗ್ ಐಲ್ಯಾಾಂಡ್ ಯಹೂದಿ ಮೆಡಿಕಲ್ ಸೆಂಟರ್‌ನಲ್ಲಿ ಸೇವೆ ಸಲ್ಲಿಸುತ್ತಿಿದ್ದಾರೆ. ಇವರ ಸಂಶೋಧನಾ ಬರಹವೊಂದರಲ್ಲಿ ಮಾಸಿಕ ಧರ್ಮದ ಅವಧಿಯಲ್ಲಿ ಮಹಿಳೆಯರು ಶಬರಿಮಲೆ ಅಥವಾ ಇನ್ನಿಿತರ ದೇವಸ್ಥಾಾನಗಳಿಗೇಕೆ ಹೋಗಬಾರದು ಎಂಬುದಕ್ಕೆೆ ವೈಜ್ಞಾನಿಕ ಕಾರಣಗಳನ್ನು ನೀಡಿದ್ದಾಾರೆ. ಸನಾತನ ಧರ್ಮ ಸಂಪೂರ್ಣವಾಗಿ ವೈಜ್ಞಾನಿಕ ಆಧಾರದ ಮೇಲೆ ರೂಪುಗೊಂಡಿದೆ. ಬಹುತೇಕ ಆಚರಣೆಗಳ ಹಿಂದೆ ವೈಜ್ಞಾನಿಕವಾಗಿ ಕಂಡುಕೊಂಡ ಸತ್ಯಗಳಿವೆ.
ಅವರ ವಿವರಣೆಯ ಮುಖ್ಯಾಾಂಶಗಳು.. ದಕ್ಷಿಣ ಭಾರತದ ಬಹುತೇಕ ಹಿಂದೂ ಮಂದಿರಗಳು ನಿರ್ದಿಷ್ಟವಾದ ಕಾಂತಕ್ಷೇತ್ರದಲ್ಲಿವೆ. ಹೀಗೆ ಕಾಂತಕ್ಷೇತ್ರಗಳಲ್ಲಿರುವ ದೇವಾಲಯಗಳಲ್ಲಿ ವಿಗ್ರಹದ ಪ್ರಾಾಣ ಪ್ರತಿಷ್ಠೆೆಯಾಗುವ ಸಮಯದಲ್ಲಿ ವಿಗ್ರಹಕ್ಕೆೆ ಕಾಂತೀಯ ಜೀವಶಕ್ತಿಿ ವರ್ಗಾಯಿಸಲ್ಪಡುತ್ತದೆ. ಇದರಿಂದ ವಿಗ್ರಹ ಮತ್ತು ದೇವಾಲಯದ ಸಂಪೂರ್ಣ ಪರಿಸರದಲ್ಲಿ ಅವಿಚ್ಛಿಿನ್ನ ಧನಾತ್ಮಕ ಶಕ್ತಿಿ ಪ್ರವಹಿಸುತ್ತಿಿರುತ್ತದೆ.
ಮಂದಿರಗಳು ನಮ್ಮ ಜೀವಶಕ್ತಿಿಯನ್ನು ಊರ್ಧ್ವಮುಖವಾಗಿ ಚಲಿಸುವಂತೆ ಮಾಡುತ್ತವೆ. ಮಹಿಳೆಯರ ಋತುಚಕ್ರದ ಸಮಯದಲ್ಲಿ ಶಕ್ತಿಿಯು ಕೆಳಮುಖವಾಗಿ ಚಲಿಸುತ್ತಿಿರುತ್ತದೆ. ಈ ಕಾಲದಲ್ಲಿ ಆಕೆ ದೇವಸ್ಥಾಾನಗಳಂತಹ ಊರ್ಧ್ವಮುಖಿ ಶಕ್ತಿಿಯ ಜಾಗಗಳಿಗೆ ಭೇಟಿ ನೀಡಿದರೆ ಆಕೆಯ ಗರ್ಭಾಶಯಕ್ಕೆೆ ತೀವ್ರತರನಾದ ಹಾನಿಯಾಗುವ ಸಾಧ್ಯತೆಗಳಿವೆ. ಬಹುಶಃ ನ್ಯಾಾಯಾಲಯದ ವಾದಮಂಡನೆಗೆ ಪೂರಕವಾಗಿ ಸಾಕಷ್ಟು ಅಧ್ಯಯನ ನಡೆಸಿ ತಯಾರಿಸಿದ ಇಂತಹ ಸಂಶೋಧನಾ ಬರಹದ ಮುಖ್ಯಾಾಂಶಗಳನ್ನು ಈ ಪ್ರಕರಣದಲ್ಲಿ ನ್ಯಾಾಯಾಲಯದ ಅವಗಾಹನೆಗೆ ಸಮರ್ಥವಾಗಿ ಸಲ್ಲಿಸದಿರಬಹುದು. ಹೀಗಾಗಿ ಅಂತಹ ತೀರ್ಪು ಬಂದಿರಬಹುದು.
ಶಬರಿಮಲೆಗೆ ಹೋಗುವವರು 48 ದಿನಗಳ ಮಂಡಲ ಕಾಲದಲ್ಲಿ ಕಠಿಣ ವ್ರತವನ್ನು ಪಾಲಿಸಬೇಕು. ಜೀವಕೋಶದ ನವೀಕರಣ ಶಕ್ತಿಿಯನ್ನು ಪೂರ್ಣಗೊಳಿಸಲು ದೇಹಕ್ಕೆೆ 21 ದಿನಗಳು ಬೇಕಾಗುತ್ತದೆ. ಮಂಡಲ ಕಾಲದ 48 ದಿನಗಳ ಅವಧಿಯಲ್ಲಿ ಸಂಯಮವನ್ನು ಪರಿಪಾಲಿಸುವಾಗ, ದೇಹವು ಎರಡು ಸಂಪೂರ್ಣ ಜೀವಕೋಶ ಪುನರುತ್ಪಾಾದನಾ ಚಕ್ರಗಳನ್ನು ಹಾದು ಹೋಗುತ್ತದೆ. ಆದ್ದರಿಂದ ಮಹಿಳೆಯರಿಗೆ ಸಂಯಮದ ಶಪಥವನ್ನು 48 ದಿನಗಳವರೆಗೆ ಪಾಲಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರ ದೇಹ ಪ್ರಕೃತಿ ಋತು ಚಕ್ರದ ಅವಧಿಯಲ್ಲಿ ಸೂಕ್ಷ್ಮವಾಗಿರುವುದರಿಂದ ಈ ರೀತಿಯ ದೇವಾಲಯಗಳಿಗೆ ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಿರಬಹುದು.
ನ್ಯಾಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆದಾಗ ಇಂತಹ ತಜ್ಞರ ಅಭಿಪ್ರಾಾಯಗಳನ್ನು ಸಮರ್ಪಕವಾಗಿ ಮಂಡಿಸಿದ್ದಿದ್ದರೆ ಇದು ಬೇರೆಯೇ ತಿರುವನ್ನು ಪಡೆಯುತ್ತಿಿತ್ತೇನೋ. ನ್ಯಾಾಯಾಧೀಶರು ತಮ್ಮ ಮುಂದೆ ಮಂಡಿಸಿದ ದಾಖಲೆಗಳನ್ನು ಆಧಾರಿಸಿ ತೀರ್ಮಾನಕ್ಕೆೆ ಬರುವರೇ ಹೊರತು ಅದರಾಚೆಗೆ ವ್ಯವಹರಿಸುವುದಿಲ್ಲ. ಇದಿಷ್ಟು ಕಳೆದ ವರ್ಷ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿಿದ್ದ ನಿರ್ಬಂಧವನ್ನು ತೆರವುಗೊಳಿಸಿದ ಸರ್ವೋಚ್ಚ ನ್ಯಾಾಯಾಲಯದ ತೀರ್ಪಿನವರೆಗಿನ ಬೆಳವಣಿಗೆಗಳು.
ಈ ತೀರ್ಪು ಕೇರಳದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಿಸಿತ್ತು. ದೇಶದ ಯಾವುದೋ ಮೂಲೆಯಿಂದ, ಅದುವರೆಗೂ ಶಬರಿಮಲೆ ಬಗ್ಗೆೆ ಏನೊಂದಿಷ್ಟೂ ತಿಳಿಯದ ಕೆಲವು ಮಹಿಳೆಯರು ಬಲವಂತವಾಗಿ ದೇಗುಲ ಪ್ರವೇಶಿಸಲು ಪ್ರಯತ್ನಿಿಸಿದ್ದೂ ಆಯಿತು, ಅದಕ್ಕೆೆ ಆಡಳಿತಾರೂಢ ಸರಕಾರ ರಕ್ಷಣೆ ನೀಡುವ ನೆಪದಲ್ಲಿ ಹಿಂಬಾಗಿಲಿನ ಮೂಲಕ ಪ್ರವೇಶಕ್ಕೆೆ ಅವಕಾಶ ಮಾಡಿದ ಪ್ರಹಸನವೂ ನಡೆಯಿತು. ಅನೇಕ ಬೆಳವಣಿಗೆಗಳು ನಡೆದವು. ಅಂತಿಮವಾಗಿ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸರ್ವೋಚ್ಚ ನ್ಯಾಾಯಾಲಯದಲ್ಲಿ ಹಲವಾರು ಅರ್ಜಿಗಳನ್ನು ದಾಖಲಿಸಲಾಯಿತು. ಈ ಕುರಿತಾದ ತಾತ್ಕಾಾಲಿಕ ತೀರ್ಪು ಮೊನ್ನೆೆತಾನೇ ಬಂದಿದೆ.
ಈ ವಿಷಯದಲ್ಲಿ ಕೆಲವು ಕಾನೂನು ತಜ್ಞರ ಅಭಿಪ್ರಾಾಯ ಹೀಗಿದೆ; ಕೇರಳದಲ್ಲಿ ಅಸಂಖ್ಯಾಾತ ಅಯ್ಯಪ್ಪ ಮಂದಿರಗಳಿವೆ. ಅದರಲ್ಲಿ ಶಬರಿಮಲೆಗೆ ಮಾತ್ರ ಋತುಚಕ್ರದ ವಯಸ್ಸಿಿನ ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಬೇರೆಲ್ಲ ದೇವಸ್ಥಾಾನಗಳಿಗೆ ಯಾವುದೇ ವಯಸ್ಸಿಿನ ಮಹಿಳೆ ಹೋಗಬಹುದು. ಅಷ್ಟೇ ಅಲ್ಲ, ಅಲ್ಲಿರುವ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶಕ್ಕೆೆ ನಿರ್ಬಂಧವಿದೆ. ಕೆಲವೆಡೆ ಮಹಿಳೆಯರೇ ಅರ್ಚಕರಾಗಿದ್ದಾರೆ. ಹೀಗಾಗಿ ಮಹಿಳಾ ಅಸಮಾನತೆಯೆಂಬ ವಾದ ಸರಿಯಲ್ಲ.
ಈ ಪ್ರಕರಣದಲ್ಲಿ ದಾವೆ ಹೂಡಿರುವವರು ಕೇರಳದವರಲ್ಲ. ಅಷ್ಟೇ ಅಲ್ಲ, ಇದರಲ್ಲಿ ಪರೋಕ್ಷವಾಗಿ ಅನ್ಯ ಧರ್ಮೀಯರ ಕುಮ್ಮಕ್ಕು ಕೂಡ ಇದೆ. ಅವರಿಗೆ ಇಲ್ಲಿನ ನೀತಿ, ನಿಯಮಗಳು ಗೊತ್ತಿಿಲ್ಲ. ಧಾರ್ಮಿಕ ಆಚರಣೆಯ ಅಗತ್ಯವೂ ಇಲ್ಲ. ಹಾಗಿರುವಾಗ ದೇಗುಲ ಪ್ರವೇಶದ ಹಕ್ಕು ಪ್ರತಿಪಾದಿಸಲು ಅದೇನು ಪ್ರವಾಸಿ ತಾಣವೇ? ಸಂವಿಧಾನದ ಅನುಚ್ಛೇದ 14ರಲ್ಲಿ ಪುರುಷ, ಮಹಿಳಾ ಸಮಾನತೆ ಕೊಟ್ಟಿಿರಬಹುದು. ಆದರೆ,* ಅದೇ ಸಂವಿಧಾನದ 25 ಮತ್ತು 26ರಲ್ಲಿ ತಾನು ನಂಬುವ ಧಾರ್ಮಿಕ ಸಿದ್ಧಾಾಂತವನ್ನು ಅನುಸರಿಸುವ ಹಕ್ಕು ಪ್ರತಿಯೊಬ್ಬ ಭಾರತೀಯರಿಗೂ ಇದೆಯೆಂದು ಹೇಳಲಾಗಿದೆ. ಒಬ್ಬರ ನಂಬಿಕೆ ಮತ್ತು ಆಚರಣೆಗಳ ವಿಷಯ ಬಂದಾಗ ಸಮರ್ಪಕ ಅಧ್ಯಯನ ಮಾಡದೇ ಮುಂದಡಿ ಇಡುವುದು ಅವರ ಧಾರ್ಮಿಕ ನಂಬಿಕೆಗೆ ಮಾಡುವ ಅನ್ಯಾಾಯವೆನಿಸದೆ? ಸಮಾನತೆಯ ಹೆಸರಿನಲ್ಲಿ ಸನಾತನ ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ಸತ್ಯಗಳನ್ನು ಧಿಕ್ಕರಿಸಿದರೆ ಅದು ವ್ಯತಿರಿಕ್ತ ಪರಿಣಾಮಕ್ಕೆೆಡೆ ಮಾಡಿಕೊಡಬಹುದು.
ಇಲ್ಲಿ ಜಾತಿ ಆಧಾರಿತ ನಿರ್ಬಂಧವಿಲ್ಲ, ವೈಜ್ಞಾನಿಕ ಹಿನ್ನೆೆಲೆಯ ನಿರ್ಬಂಧವಿದೆ; ಅಷ್ಟೇ. ಕಳೆದ ವರ್ಷದ ತೀರ್ಪಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಸಂದರ್ಭದಲ್ಲಿ ಅನ್ಯ ಧರ್ಮೀಯರ ಪೂಜಾ ಮಂದಿರಗಳ ಪ್ರವೇಶಕ್ಕೆೆ ಇರುವ ನಿರ್ಬಂಧಗಳನ್ನು ಬೆಟ್ಟು ಮಾಡಲಾಗಿತ್ತು. ಇದು ತೀರಾ ಅಪ್ರಸ್ತುತ ಮತ್ತು ಅವಾಸ್ತವಿಕ. ಏಕೆಂದರೆ ಬೇರೆಯವರಿಗೆ ಅನ್ಯಾಾಯವಾದರೆ ಅದಕ್ಕೆೆ ಅವರೇ ಹೋರಾಟ ಮಾಡಬೇಕು. ನಮ್ಮ ಧಾರ್ಮಿಕ ಆಚರಣೆಗಳನ್ನು, ನಮ್ಮ ಆಚಾರ ಮತ್ತು ಸಂಸ್ಕೃತಿಯನ್ನು ಪಾಲಿಸುವಲ್ಲಿ ದೇಶದ ಯಾವುದೋ ಮೂಲೆಯಿಂದ ಬಂದವರು, ನಮ್ಮ ಆಚಾರ ವಿಚಾರ, ಆಚರಣೆಗಳಲ್ಲಿ ನಂಬಿಕೆ, ಶ್ರದ್ಧೆೆಯಿಲ್ಲದವರು ಅವುಗಳ ಮೇಲೆ ಅತಿಕ್ರಮಣ ಮಾಡಿದಾಗ ನಾವು ಪ್ರತಿಭಟನೆ ಮಾಡಬೇಕು. ಅದು ಕೂಡ ಸಂವಿಧಾನ-ಕಾನೂನಿನ ಪರಿಮಿತಿಯಲ್ಲಿ. ನ್ಯಾಾಯಾಲಯದಲ್ಲಿ ಸಮರ್ಪಕ ವಾದ ಮಂಡನೆ, ದಾಖಲೆಗಳನ್ನು ಪ್ರಸ್ತುತಪಡಿಸಿದರೆ ನ್ಯಾಾಯ ಖಂಡಿತಾ ದೊರೆಯುತ್ತದೆ ಎಂಬುದಕ್ಕೆೆ ಅಯೋಧ್ಯೆೆ ಪ್ರಕರಣದಲ್ಲಿ ಇತ್ತೀಚಿನ ಸರ್ವೋಚ್ಚ ನ್ಯಾಾಯಾಲಯದ ಸಾಂವಿಧಾನಿಕ ಪೀಠ ನೀಡಿದ ತೀರ್ಪು ಸಾಕ್ಷಿ.
ಇದುವರೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಕೇವಲ ಪ್ರಚಾರದ ತೆವಲಿಗಾಗಿ ಮಾಡಿದ ಹಾಗೂ ರಾಜಕೀಯ ಪ್ರೇರಿತ ಕೃತ್ಯ ಎಂಬುದು ಸುಸ್ಪಷ್ಟ. ಇದುವರೆಗೆ ಕೇರಳದ ಅಡಳಿತರೂಢ ಸರಕಾರವೂ ದೇಗುಲ ಪ್ರವೇಶದ ಹಕ್ಕಿಿಗಾಗಿ ಹೋರಾಟ ಮಾಡುತ್ತಿಿದ್ದವರನ್ನು ಬೆಂಬಲಿಸುತ್ತಿಿತ್ತು. ಕಳೆದ ಸಾಲಿನ ಪ್ರತಿಭಟನೆಯ ಕಾವು ಮತ್ತು ಲೋಕಸಭಾ ಚುನಾವಣೆ ಪರಿಣಾಮ, ಈಗ ಅದು ತನ್ನ ರಾಗವನ್ನು ಬದಲಾಯಿಸಿದೆ. ಇದೆಲ್ಲ ರಾಜಕೀಯ ಪ್ರೇರಿತ ಎನ್ನುವುದಕ್ಕೆೆ ಇಷ್ಟು ಸಾಕ್ಷಿ ಸಾಲದೆ? ಇದೀಗ ಈ ಪ್ರಕರಣವನ್ನು ಸರ್ವೋಚ್ಚ ನ್ಯಾಾಯಾಲಯ ಏಳು ನ್ಯಾಾಯಾಧೀಶರ ವಿಸ್ತೃತ ಪೀಠಕ್ಕೆೆ ವರ್ಗಾಯಿಸಿದ್ದು ಅಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಮರ್ಥ ವಾದ ಮಂಡನೆ ಮಾಡಿದಲ್ಲಿ ಪರಿಹಾರ ಕಷ್ಟವೇನಲ್ಲ.