Saturday, 23rd November 2024

ಸಂವಿಧಾನದ ಪಾಠ ಹಿಂದೂಗಳಿಗೆ ಮಾತ್ರವೋ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಆರ್ಥಿಕ ಬಹಿಷ್ಕಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಿ ವ್ಯಾಪಾರಕ್ಕೆ ಅವಕಾಶ ನೀಡಿದರೂ ಹಿಂದೂಗಳು ಹಿಂದೂಗಳಿಂದ ಮಾತ್ರ ಖರೀದಿಸುವ ದಿಟ್ಟ ಸಂಕಲ್ಪಕ್ಕೆ ಬದ್ಧರಾದರೆ ಅವರ ಹಕ್ಕನ್ನು ತಡೆಯಲಾದೀತೇ? ಈಗಾಗಲೇ ಹಲಾಲ್ ಕಾರಣದಿಂದಾಗಿ ಎಚ್ಚೆತ್ತ ಹಿಂದೂ ಗಳ ‘ಜಟ್ಕಾ ಕಟ್’ ಮಟನ್ ಅಂಗಡಿಗಳು ತಲೆಯೆತ್ತುತ್ತಿವೆ.

ಶ್ರೀರಾಮದೇವರ ವಾನರಸೈನ್ಯ ಯುದ್ಧಕ್ಕೆ ಸಿದ್ಧವಾಗಿ ನಿಂತಿದೆ. ಅತ್ತ ರಾವಣನ ಸೈನ್ಯವೂ ಸಮರೋತ್ಸಾಹದಲ್ಲಿದೆ. ಆದರೆ ಶ್ರೀರಾಮ ನಿಗೆ ಶಿವಪೂಜೆ ನೆರವೇರಿಸಿ ಯುದ್ಧದ ಗೆಲುವಿಗಾಗಿ ಶುಭಮುಹೂರ್ತವಿಟ್ಟು ಕಂಕಣ ಕಟ್ಟುವ ಕಾರ್ಯಕ್ಕೆ ವೈದಿಕರ ಕೊರತೆ ಯಾಗಿತ್ತು. ಇದಕ್ಕಾಗಿ ಒಬ್ಬ ದ್ವಿಜೋತ್ತಮನನ್ನು ಕರೆತರಲು ಶ್ರೀರಾಮರು ಹನುಮದೇವರಿಗೆ ಆದೇಶಿಸುತ್ತಾರೆ. ಆದರೆ, ಲಂಕೆಯಲ್ಲಿ ಯಾವ ಬ್ರಾಹ್ಮಣರೂ ಸಿಗದೇ ಕೊನೆಯದಾಗಿ ಬ್ರಾಹ್ಮಣರೊಬ್ಬರು ಒಪ್ಪಿಕೊಳ್ಳುತ್ತಾರೆ. ಅಂಥ ಮಹಾಬ್ರಾಹ್ಮಣ ಯಾರು ಗೊತ್ತೇ? ಸಾಕ್ಷಾತ್ ರಣವೈರಿ ರಾವಣ!

ಆಶ್ಚರ್ಯವಾದರೂ ಇದು ರಾಮಾಯಣದ ಒಂದು ಧರ್ಮಶ್ರೇಷ್ಠ ವಿಚಾರ. ಈ ವೇಳೆ ಯುದ್ಧಪೂಜೆ ಮಾಡಲಾಗದೆ ಕುಳಿತಿರುವ ಸೈನ್ಯದ ಮೇಲೆ ದಾಳಿಮಾಡಿ ಯುದ್ಧ ಆರಂಭಕ್ಕೂ ಮೊದಲೇ ಶ್ರೀರಾಮನ ಸೈನ್ಯವನ್ನು ಸದೆಬಡಿಯಬಹುದೆಂದು ರಾವಣನ ಮಗ ಉಪಾಯ ಹೇಳುತ್ತಾನೆ. ಆದರೆ, ಇಂಥ ಅಧರ್ಮಯುಕ್ತ ಆಲೋಚನೆಯನ್ನು ಧಿಕ್ಕರಿಸುವ ರಾವಣ ತನ್ನ ಕಿರೀಟವನ್ನು ಕಳಚಿಟ್ಟು ಒಬ್ಬ ಪುರೋಹಿತನಾಗಿ ಯುದ್ಧ ಭೂಮಿಗೆ ತೆರಳಿ ಶ್ರೀರಾಮನ ಮುಂದೆ ಕುಳಿತುಕೊಳ್ಳುತ್ತಾನೆ.

‘ಇನ್ನೊಂದು ಮುಹೂರ್ತ ಮೀರಿದರೆ ರಾವಣನಾದ ನನ್ನನ್ನು ಜಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ, ಆದ್ದರಿಂದ ಬೇಗನೆ ರಣಕಂಕಣ ಕಟ್ಟಿಕೋ ರಾಮ’ ಎಂದು ಕಂಕಣ ಕಟ್ಟಿ ವಿಜಯೀಯಾಗೆಂದು ಆಶೀರ್ವದಿಸಿ ವಾಪಸು ತೆರಳಿ ಯುದ್ಧಭೂಮಿಯಲ್ಲಿ ಶತ್ರುರಾಜ ನಾಗಿ ಎದುರಾಗುತ್ತಾನೆ ಮಹಾರಾವಣ. ಇದು ಜಗತ್ತಿಗೆ ಸಾರುವ ರಾಮಾಯಣದ ಒಂದು ಧರ್ಮತತ್ವ. ಬದ್ಧವೈರಿಗಳಾಗಿ ನಿಂತರೂ ಎದುರಾಳಿಯ ರಾಜ ತನ್ನ ಶತ್ರುವಿಗೆ ಕಂಕಣಕಟ್ಟಿ ಯುದ್ಧ ಗೆಲ್ಲುವಂತೆ ಆಶೀರ್ವಾದ ಮಾಡುವುದನ್ನು ಜಗತ್ತಿನಲಿ ಎದರೂ ಕೇಳಿರಲು ಸಾಧ್ಯವೇ? ಅದೇ ಹಿಂದೂಧರ್ಮದ ವೈಚಾರಿಕತೆ ಮತ್ತು ಔದಾರ್ಯ.

ತನ್ನ ತಪ್ಪಿಲ್ಲದಿದ್ದರೂ ತನಗೆ ಅನ್ಯಾಯಮಾಡಿದ ರಾವಣನನ್ನು ಕಂಕಣಕಟ್ಟಲು ಬಂದಾಗಲೇ ಶ್ರೀರಾಮ ಕೊಂದಿದ್ದರೆ ಯುದ್ಧಕಾಂಡವೇ ನಡೆಯುತ್ತಿರಲಿಲ್ಲ. ಆದರೆ ಅಂಥ ಹೇಡಿತನ ಅಧರ್ಮ ವಂಚನೆಯ ಆಲೋಚನೆ ಶ್ರೀರಾಮನಲ್ಲೂ ಇರಲಿಲ್ಲ ರಾವಣನಲ್ಲೂ ಇರಲಿಲ್ಲ ಮತ್ತು ಇಂದಿನ ಹಿಂದೂಗಳಲ್ಲೂ ಇರಲು ಸಾಧ್ಯವಿಲ್ಲ. ಸ್ವಾರ್ಥ ರಾಜಕಾರಣಕ್ಕಾಗಿ ಇಂಥ ಪರಮ ಧರ್ಮಸಹಿಷ್ಣು ಹಿಂದೂ ಧರ್ಮವನ್ನು ಅಸಹಿಷ್ಣು ವೆಂಬಂತೆ ಬಿಂಬಿಸುವ ಹುನ್ನಾರ ನಡೆಯುತ್ತಲೇ ಇದೆ.

ಮಾತೆತ್ತಿದರೆ ಹಿಂದೂಗಳನ್ನು ದೂಷಿಸುವ ಇವರು ತಮ್ಮನ್ನು ತಾವು ದೊಡ್ಡ ಜಾತ್ಯತೀತವಾದಿಗಳಂತೆ, ಸಂವಿಧಾನದ ಮಹಾ ಪಂಡಿತ ರಂತೆ ತೋರಿಸಿಕೊಳ್ಳುವ ತೆವಲು ಹೆಚ್ಚಾಗುತ್ತಿದೆ. ನೆನಪಿರಲಿ, ಚರಿತ್ರೆಯ ಯಾವ ಕಾಲಘಟ್ಟದಲ್ಲೂ ಹಿಂದೂಗಳು ಅನ್ಯ ಧರ್ಮದ ಮೇಲೆ (ಆಗಿನ್ನೂ ಇತರೆ ಧರ್ಮಗಳೇ ಅಸ್ತಿತ್ವದಲ್ಲಿರಲಿಲ್ಲ) ಏಕಾಏಕಿ ಸ್ವಯಂಪ್ರೇರಿತರಾಗಿ ದಂಡೆತ್ತಿ ದಾಳಿ ಮಾಡಿಲ್ಲ. ಧರ್ಮಾಂಧತೆ ಯಿಂದ ಆಕ್ರಮಣ ಮಾಡಿಲ್ಲ, ಅನ್ಯಧರ್ಮವನ್ನು ನೋಯಿಸಿಲ್ಲ, ಸಾವಿರಾರು ಮಂದಿರಗಳು, ಮಂಟಪಗಳು ಮಸೀದಿ ಸಮಾಧಿಗಳಾಗಿ ಪರಿವರ್ತಿತ ಗೊಂಡಾಗಲೂ ಅನ್ಯಧರ್ಮಿಯರ ಒಂದು ಗೋಡೆಯನ್ನೂ ಕೆಡವಿದರವಲ್ಲ.

ಆದರೂ ಈ ಡೋಂಗಿಗಳು ಜಾತ್ಯತೀತ-ಸಂವಿಧಾನ ಎಂಬ ಎರಡು ಪದಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಹಿಂದೂಗಳ ತಾಳ್ಮೆ ಪರೀಕ್ಷಿಸುತ್ತಲೇ ಇದ್ದಾರೆ. ನೋಡಿ, ಸರಕಾರದ ಆದೇಶದ ರೀತ್ಯ ಹಿಜಾಬ್ ಧರಿಸದೇ ಸಮಾನತೆ ಪಾಲಿಸಿ ಎಂದು ಸಂವಿಧಾನದ ಪಾಠವನ್ನು ಆರಂಭದ ಹೇಳಲಿಲ್ಲ. ಆದರೆ, ಹಿಜಾಬ್‌ಗೆ ಪ್ರತಿಯಾಗಿ ಕೇಸರಿಶಾಲು ಬಂದಾಗ
ಹಿಂದೂಗಳಿಗೆ ಸಂವಿಧಾನದ ಪಾಠ ಹೇಳಿದರು. ನ್ಯಾಯಾಲಯ ಮಧ್ಯಂತರ ಆದೇಶ ನೀಡಿದಾಗ ಆದೇಶವನ್ನು ಪಾಲಿಸಿ ಎಂದು ತಿಳಿ ಹೇಳಲಿಲ್ಲ. ಸಿಎಎ ವಿರುದ್ಧ ಗಲಭೆ ಎಬ್ಬಿಸಿ ಗೋಲಿಬಾರ್‌ನಲ್ಲಿ ಮೃತರಾದ ಮನೆಗಳಿಗೆ ಎಡತಾಕಿ ಲಕ್ಷಗಟ್ಟಲೆ ಹಣ ನೀಡಿ ಬಂದ ಡೋಂಗಿ ಗಳು, ಅದೇ ರಾಷ್ಟ್ರಭಕ್ತ ಹರ್ಷನ ಕೊಲೆಯಾದಾಗ ಎಡಗೈ ನೆಕ್ಕುವುದನ್ನು ಬಿಟ್ಟು ಯಾವೊಬ್ಬನೂ ಆತನ ಮನೆಗೆ ಭೇಟಿನೀಡಿ ಸಾಂತ್ವನ ಹೇಳಲಿಲ್ಲ.

ಉಚ್ಚ ನ್ಯಾಯಾಲಯ ಸಮವಸ್ತ್ರ ಪಾಲನೆಗೆ ಆದೇಶ ನೀಡಿದಾಗ ಅದನ್ನು ಧಿಕ್ಕರಿಸಿ ನ್ಯಾಯಾಧೀಶರನ್ನೇ ಬೆದರಿಸಿದಾಗಲೂ ಸಂವಿಧಾ
ನದ ಪಾಠಮಾಡಲಿಲ್ಲ. ದೇಶದ ನ್ಯಾಯಾಲಯ ಸಂವಿಧಾನಕ್ಕಿಂತಲೂ ನಮಗೆ ಧರ್ಮ ಮತ್ತು ಕುರಾನ್ ಪಾಲನೆಯೇ ಮಿಗಿಲೆಂದಾಗಲೂ ಇವರುಗಳು ಬಾಯಿಗೆ ಲಕ್ವಾ ಹೊಡೆದಿರುವಂತೆ ಸುಮ್ಮನಿರುತ್ತಾರೆ. ತಮಿಳುನಾಡಿನಲ್ಲಿ ಮತಾಂಧನೊಬ್ಬ ನ್ಯಾಯಮೂರ್ತಿಗಳಿಗೇ ಬೆದರಿಕೆ ಹಾಕಿದಾಗಲೂ ಆತನನ್ನು ಕೂಡಲೇ ಬಂಧಿಸಿ ಎಂದು ವಿಧಾನಸಭೆಯಲ್ಲಿ ಆಗ್ರಹಿಸಲಿಲ್ಲ.

ಈ ದೇಶದ ಸಂವಿಧಾನ ಮತ್ತು ನ್ಯಾಯಾಲಯವನ್ನು ಒಪ್ಪದೆ ಮೊನ್ನೆ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದೇ ರಾಜ್ಯದ ಕೆಲ ಮುಸಲ್ಮಾನರು ಕರ್ನಾಟಕ ಬಂದ್‌ಗೆ ಕರೆನೀಡಿದಾಗಲೂ ಇವರುಗಳು ಸಂವಿಧಾನದ ಪಾಠಹೇಳದೆ ಬಂದ್ ಮಾಡುವುದು ಅವರ ಹಕ್ಕು ಎಂದು ಸಮರ್ಥಿಸಿಕೊಂಡುಬಿಟ್ಟರು. ಆ ಮೂಲಕ ಇವರುಗಳು ಪಡೆದಿರುವ ಎಲ್ಎಲ್ಬಿ ಪದವಿಯೇ ಮಣ್ಣು ತಿನ್ನುವಂತೆ ಮಾಡಿ ಕೊಂಡರು. ಇದೆಲ್ಲದರ ಪರಿಣಾಮ ಈ ದೇಶದ ಸಂವಿಧಾನ ನ್ಯಾಯಾಲಯದ ಮೇಲೆ ನಂಬಿಕೆ ಗೌರವವಿಲ್ಲದ ಮಂದಿ ದೇಶದಲ್ಲಿ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂದು ಮನಗಂಡ ದೇಶಭಕ್ತರು ದೇವಾಲಯಗಳಲ್ಲಿ ಇವರ ವ್ಯಾಪಾರ ವಹಿವಾಟನ್ನು ತಿರಸ್ಕರಿಸಿ ಆರ್ಥಿಕ ಬಹಿಷ್ಕಾರ ಹಾಕಿದರು.

ಇವರ ವರ್ತನೆ ಹೀಗೇ ಮುಂದುವರಿದರೆ ಪ್ರತಿಯೊಬ್ಬ ದೇಶಪ್ರೇಮಿಯೂ ಎಚ್ಚೆತ್ತುಕೊಂಡು ಇಂಥವರಿಂದ ಪಂಕ್ಚರ್ ಕೂಡ ಹಾಕಿಸಿಕೊಳ್ಳ ದಿರುವ ಮನಃಸ್ಥಿತಿಗೆ ಬಂದರೆ ಆಶ್ಚರ್ಯವಿಲ್ಲ. ಆರ್ಥಿಕ ಬಹಿಷ್ಕಾರ ಮಾತ್ರ ಸಂವಿಧಾನದ ವಿರೋಧಿ ನಡೆಯೆಂದು ಹಿಂದೂಗಳಿಗೆ ಪಾಠ ಹೇಳುತ್ತಿದ್ದಾರೆ ಈ ಸೋಗಲಾಡಿಗಳು. ಆದರೆ ಈ ನಡೆಯು ಸರಕಾರದ ಧಾರ್ಮಿಕ ದತ್ತಿ ಕಾಯಿದೆಯಡಿಯಲ್ಲಿ ಸರಿಯಾಗಿಯೇ ಇದೆ ಎಂದು ಸಚಿವ ಮಾಧುಸ್ವಾಮಿ ಯವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಿಂದೂ ದೇವಾಲಯಗಳ ವ್ಯಾಪ್ತಿಯಲ್ಲಿ ಅನ್ಯಧರ್ಮಿಯರ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ದೇಶದೆಡೆ ಇವೆ. ಆದರೆ, ದೇಶದಾದ್ಯಂತ ಮಸೀದಿಗಳ ಆಡಳಿತಕ್ಕೊಳಪಡುವ ದೊಡ್ಡ ಅಂಗಡಿಗಳಿಂದ ಹಿಡಿದು ಗೂಡಂಗಡಿಗಳವರೆಗೂ ಎಲ್ಲೆಡೆ ಮುಸಲ್ಮಾನರದ್ದೇ ಪಾರುಪಥ್ಯ. ಅಂಥ ಮಸೀದಿಯ ಮುಂದೆ ಹಿಂದೂಗಳ ಒಂದು ತಳ್ಳುಗಾಡಿಯನ್ನೂ ನಿಲ್ಲಸಲು ಅನೇಕರು ಅವಕಾಶ ನೀಡುವುದಿಲ್ಲ. ಬೆಂಗಳೂರು ಮಾರುಕಟ್ಟೆಯ ದೊಡ್ಡ ಮಸೀದಿಯಾಗಲಿ, ಇನ್ನಾವುದೇ ಮುಸ್ಲಿಂ ಧಾರ್ಮಿಕ ಸ್ಥಳಗಳಲ್ಲಾಗಲೀ ನೋಡಿಬರಲಿ ಅಲ್ಲ ಉರ್ದು
ಫಲಕಗಳೊಂದಿಗೆ ಅವರದೇ ಆದ ಸಾಮ್ರಾಜ್ಯವಿರುತ್ತದೆ. ಆದರೆ ಹಿಂದೂಗಳು ಇವರ ದೇಶವಿರೋಧಿ ನಡೆಗಳಿಂದ ಬೇಸತ್ತು ಅವರಿಗೆ ಆರ್ಥಿಕ ಬಹಿಷ್ಕಾರ ಹಾಕಿದರೆ ಮಾತ್ರ ಎಡಬಿಡಂಗಿಗಳು ಹಿಂದೂಗಳಿಗೆ ಸಂವಿಧಾನದ ಪಾಠ ಹೇಳುತ್ತಾರೆ.

ಜತೆಗೆ ದೇವಾಲಯದ ಸ್ವಾಯತ್ತೆಯ ವಿಚಾರದಲ್ಲೂ ಇವರುಗಳು ಹಿಂದೂಗಳಿಗೆ ಮಾತ್ರ ಸಂವಿಧಾನ ಬೋಧಿಸುತ್ತಾರೆ. ಲಾಕ್‌ಡೌನ್ ಕಾಲದಲ್ಲಿ ತಬ್ಲಿಗಿಗಳ ನಡತೆಯನ್ನು ಇಡೀ ದೇಶವೇ ಅಸಹನೆಯಿಂದ ನೋಡಿತ್ತು. ಜತೆಗೆ ಅದೇನು ಸತ್ಯವೋ ಅಪಪ್ರಚಾರವೋ ಅಂತೂ
ಆಹಾರ ಪದಾರ್ಥಗಳಿಗೆ ಮುಸಲ್ಮಾನರು ಎಂಜಲು ಸೋಕಿಸಿ ಮಾರುವ ಸುದ್ದಿ ಹರಿದಾಡಿತ್ತು. ಆಗಲೂ ಅದು ಅವರ ಧರ್ಮಾಪಾಲನೆಯ ಒಂದು ಭಾಗವೆಂಬಂತೆ ಸಂರ್ಥನೆಗಿಳಿದವರಿದ್ದಾರೆ. ಪರಿಣಾಮ ಇವತ್ತು ದಿನಸಿ, ದಿನಬಳಕೆಯ ಪದಾರ್ಥಗಳ ಬ್ರಾಂಡಿನ ತಯಾರಕರ-ಮಾಲೀಕರ ಧರ್ಮ ಯಾವುದೆಂದು ಗೂಗಲ್‌ಲ್ಲಿ ಹುಡುಕಿ ಖರೀದಿಸುವಷ್ಟು ಬದಲಾವಣೆಗಳಾಗುತ್ತಿವೆ. ಜತೆಗೆ ಮೊನ್ನೆ ಹಿಜಾಬ್ ವಿಚಾರದಲ್ಲಿ ಯಾವಾಗ ಹಿಂದೂಗಳ ಸಿಂಧೂರ-ಕುಂಕುಮ, ಹೂವು, ಬಳೆ ಕಾಲ್ಗೆಜ್ಜೆಯ ವಿಚಾರಕ್ಕೆ ಕೈ ಹಾಕಿದರೋ ಆಗಲೇ ಹಿಂದೂಗಳ ಸಹನೆಯ ಕಟ್ಟೆ ಹೊಡೆದದ್ದು.

ಇದೆಲ್ಲದಕ್ಕಿಂತ ಮಿಗಿಲಾಗಿ ಇದೇ ದೇಶದ ಸಂವಿಧಾನ-ಕಾನೂನು-ನ್ಯಾಯಾಲಯವನ್ನು ಗೌರವಿಸದೆ ನಮಗೆ ಕುರಾನ್ ಪರಿಪಾಲನೆ ಮತ್ತು ಧರ್ಮವೇ ಮುಖ್ಯವೆಂದು ಹೇಳಿ ನ್ಯಾಯಾಲಯದ ಆದೇಶದ ವಿರುದ್ಧವೇ ಬಂದ್‌ಗೆ ಕರೆಕೊಟ್ಟರಲ್ಲ, ಮತ್ತು ಅಂಥವರ ಪರವಾಗೇ ಈ ಎಲಎಲಬಿ ಮತ್ತು ಸಂವಿಧಾನ ಸ್ಪೆಷಲಿಸ್ಟ್‌ಗಳು ನಿಂತರೋ ಆಗಲೇ ಹಿಂದೂಗಳಲ್ಲಿನ ಸಹಿಷ್ಣುತೆ ಸಹಬಾಳ್ವೆ ಸೌಹಾರ್ದಕ್ಕೆ ಬೆಂಕಿಬಿದ್ದು
ಸ್ವಾಭಿಮಾನ ಬಡಿದೆಬ್ಬಿಸಿತು. ಇದೇ ಬಹಿಷ್ಕಾರವನ್ನು ಹಿಂದೂಗಳು ಪಾಕಿಸ್ತಾನದ ಅಪ್ಘಾನಿಸ್ತಾನದ ತೋರಿದ್ದರೆ ಹಿಂದೂಗಳ ಹೆಣಗಳು
ಗುಡ್ಡೆಯಾಗುತ್ತಿದ್ದವು. ಆದರೆ ಹಿಂದೂಗಳು ಸಾತ್ವಿಕ ಪ್ರಭುಗಳು. ಭಯೋತ್ಪಾದಕರಂತೆ ಬಾಂಬುಗಳನ್ನಿಟ್ಟು ಉಡಾಯಿಸುವುದಾಗಲಿ ಅಥವಾ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದಂತೆ ರಕ್ಕಸರಾಗುವಷ್ಟು ಮತಾಂಧರಲ್ಲ.

ಆದ್ದರಿಂದಲೇ ಅವರು ಕೇವಲ ವ್ಯಾಪಾರ ಬಹಿಷ್ಕಾರಿಸುತ್ತಿದ್ದಾರಷ್ಟೆ. ಜಾತ್ಯತೀತವಾದಿಗಳ ನೀಚಾವತಾರ ಹೀಗೆ ಮುಂದುವರಿದು ಆರ್ಥಿಕ ಬಹಿಷ್ಕಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಿ ವ್ಯಾಪಾರಕ್ಕೆ ಅವಕಾಶ ನೀಡಿದರೂ ‘ಹಿಂದೂಗಳಿಂದಲೇ ಖರೀದಿಸುವ’ ದಿಟ್ಟ ಸಂಕಲ್ಪ ಕ್ಕೆ ಹಿಂದೂಗಳು ಬದ್ಧರಾದರೆ ಅವರ ಹಕ್ಕನ್ನು ತಡೆಯಲಾದೀತೇ? ಈಗಾಗಲೇ ಮಾಂಸ ದಂಗಡಿಗಳಲ್ಲಿ ಹಲಾಲ್ ಕಾರಣ ದಿಂದಾಗಿ ಎಚ್ಚೆತ್ತ ಹಿಂದೂಗಳ ‘ಜಟ್ಕಾ ಕಟ್’ ಮಟನ್ ಅಂಗಡಿಗಳು ತಲೆಯೆತ್ತುತ್ತಿವೆ.

ಆಹಾರ ಪದಾರ್ಥಗಳಲ್ಲಿ ಹಲಾಲ್ ಔಚಿತ್ಯವನ್ನು ಪ್ರಶ್ನಿಸಿ ಬಹಿಷ್ಕರಿಸಲಾಗುತ್ತಿದೆ. ಹೀಗೆ ಎಲ್ಲ ವಿಚಾರಗಳಲ್ಲೂ ಹಿಂದೂಗಳಿಗೆ ಸಂವಿಧಾನದ ಪಾಠ ಹೇಳುವ ಡೋಂಗಿಗಳು ಮಾನವ ವಿರೋಧಿ ಭಯೋತ್ಪಾದಕರ ಧರ್ಮ ಯಾವುದೆಂದು ಹೇಳುವ ಧೈರ್ಯತೋರುವರೇ? ನಾಡೋಜ ಡಾ.ಎಂ. ಚಿದಾನಂದಮೂರ್ತಿಗಳು ಹೇಳುತಿದ್ದರು ‘ಮುಸಲ್ಮಾನರೆಲ್ಲ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲ ಮುಸಲ್ಮಾನರೇ’ ಎಂದು. ಅಂಥ ನಗ್ನಸತ್ಯವನ್ನು ಹೇಳುವ ಗುಂಡಿಗೆ ಈ ಡೋಂಗಿಗಳಿಗಿದೆಯೇ? ವಿಶ್ವದಲ್ಲಿ ಭಯೋತ್ಪಾದನೆಯೆಂಬ ಕಂಟಕದಿಂದ ಅನೇಕ ದೇಶಗಳು ನಲುಗುತ್ತಿವೆ. ಅಂಥ ಭಯೋತ್ಪಾದಕರ ಧರ್ಮ ಯಾವುದೆಂದು ಇಡೀ ವಿಶ್ವಕ್ಕೆ ಗೊತ್ತಿದೆ.

ಇಂಥ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾಗಿ ಕಾಶ್ಮೀರವನ್ನು ತೊರೆದ ಲಕ್ಷಾಂತರ ಹಿಂದೂಗಳು ನಿರ್ಗತಿಕರಾದರೂ ಒಬ್ಬನೂ ಭಯೋತ್ಪಾದಕನಾಗಲಿಲ್ಲ. ಇನ್ನು ಪಠ್ಯಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವ ವಿಚಾರದಲ್ಲೂ ಸಂವಿಧಾನದ ಪಾಠ ಹೇಳಲಾರಂಭಿಸಿ ದ್ದಾರೆ. ಇಂದು ಭಾರತಕ್ಕಿಂತ ಹೆಚ್ಚಾಗಿ ಅನೇಕ ರಾಷ್ಟ್ರಗಳಲ್ಲಿ ಭಗವದ್ಗೀತೆಯ ಸಾರವನ್ನು ಅರ್ಥೈಸಿಕೊಂಡು ಆರಾಧಿಸುತ್ತಿದ್ದಾರೆಯೇ ಹೊರತು ಭಗವದ್ಗೀತೆಯಾಗಲೀ ರಾಮಾಯಣ, ಮಹಾಭಾರತವನ್ನಾಗಲೀ ಕಲಿತವರು ಭಯೋತ್ಪಾದಕ ರಾಗಿಲ್ಲ.

ಇಂಥ ಜೀವನಮೌಲ್ಯವನ್ನು ಕಲಿಸುವ ಭಗವದ್ಗೀತೆಯನ್ನು ನಮ್ಮ ಮಕ್ಕಳಿಗೆ ನಾವು ಕಲಿಸಿದರೆ ಮೈಸೂರಿನ ಅಯೋಗ್ಯನೊಬ್ಬ ಅದನ್ನು ಕರೋನಾ ಸೋಂಕಿಗೆ ಹೋಲಿಸಿ ಮಾತನಾಡುತ್ತಾನೆ. ನಿಜಕ್ಕೂ ಈತನ ತಲೆಯಲ್ಲಿ ಮಿದುಳಿದೆಯೋ ಅಥವಾ ಹೊಲಸಿದೆಯೋ? ಸನಾತನ ಧರ್ಮದ (ಹಿಂದೂಧರ್ಮಾ) ಉದಾರತೆ, ಸಹಿಷ್ಣುತೆಯ ಬಗ್ಗೆ ಯಾವ ಪುಟಗೋಸಿ ನಾಯಕನೂ ಪಾಠ ಹೇಳುವ ಅವಶ್ಯಕತೆ ಯಿಲ್ಲ. ಇದೆಲ್ಲ ಆದಮೇಲೆ ಇದೀಗ ಅಪ್ಪು ‘ಜೇಮ್ಸ್’ ಚಿತ್ರವನ್ನು ಇಟ್ಟುಕೊಂಡು ಒಂದು ಸ್ಟಂಟ್ ಮಾಡಿ ನೋಡೋಣವೆಂದು ಸಿನಿಮಾ ರಾಜಕೀಯಕ್ಕಿಳಿದಿದ್ದಾರೆ.

ಕಾಶ್ಮಿರ್ ಫೈಲ್ಸ್ ಚಿತ್ರವನ್ನು ಹಳ್ಳಹಿಡಿಸಿ ಕೊಂಚ ಮಟ್ಟಿಗಾದರೂ ಮುಖ ಒರೆಸಿಕೊಳ್ಳುವ ದುರುದ್ದೇಶದಿಂದ ಅಪ್ಪು ಚಿತ್ರವನ್ನು ಬಳಸಿ ಕೊಂಡು ಕನ್ನಡಿಗರ ಮಧ್ಯೆಯೇ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರ ವಾಗಿ ತೆಗೆದುಕೊಂಡು ಎರಡೂ ಚಿತ್ರಗಳನ್ನು ಕಾಪಾಡಿಕೊಂಡು ಬರುವ ಹೊಣೆಗಾರಿಕೆ ಹೊತ್ತಿದ್ದಾರೆ. ನೆನಪಿರಲಿ, ಹಿಂದೂಗಳು ಈಗ ಶತ್ರು ವನ್ನೂ ಗೌರವಿಸುವ ತ್ರೇತಾಯುಗದಲ್ಲಿದ್ದಾರೆ. ಇಲ್ಲಿ ಅವರಿಗೆ ಅನ್ಯಾಯವಾದರೆ ಮುಂದೆ ದ್ವಾಪರಯುಗ ಇದ್ದೇ ಇದೆ. ಆಗ ಶ್ರೀಕೃಷ್ಣ ಬಂದೇಬರುತ್ತಾನೆ.. ಹಿಂದೂಗಳು ಕನಸು ಕಾಣುತ್ತಿzರೆ..ನನಸಿಗಾಗಿ !.