Thursday, 21st November 2024

ಕಾಶ್ಮೀರ: ಕಲ್ಲು ತೂರಿದವರ ಕೈಗೇ ಉದ್ಯೋಗ !

ವೀಕೆಂಡ್ ವಿತ್ ಮೋಹನ್‌

ಮೋಹನ್ ವಿಶ್ವ

camohanbn@gmail.com

‘ಕಾಶ್ಮೀರಿ ಫೈಲ್ಸ್’ ಚಿತ್ರದ ಬಗ್ಗೆ ಎಡೆಯೂ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯಾ ನಂತರದ ಏಳು ದಶಕಗಳಲ್ಲಿ ಆಗದ ಬಹುದೊಡ್ಡ ಕೆಲಸ ವೊಂದನ್ನು ಈ ಸಿನಿಮಾ ಮಾಡಿದೆ ಕಾಶ್ಮೀರದ ವಿಷಯದಲ್ಲಿ ರಾಜಾ ಹರಿಸಿಂಗ್, ಮುಸಲ್ಮಾನರನ್ನು ಒಗ್ಗೂಡಿಸಿಕೊಂಡು ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹಲವು ಪ್ರಯತ್ನಗಳನ್ನು ಮಾಡಿದ್ದರು.

ಬಾಲ್ಯ ವಿವಾಹ ರದ್ದು ಗೊಳಿಸಿದ್ದರು. ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದರು. ಹಿಂದುಳಿದ ವರ್ಗಗಳ ಒಳಿತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಾರ್ವಜನಿಕ ಶಾಲೆಗಳನ್ನು ತೆರೆದಿದ್ದರು. ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಬಾವಿಗಳನ್ನು ತೆರೆಸಿದ್ದರು. ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಜಾರಿಗೆ ತಂದಿದ್ದರು. ಕೈಗಾರಿಕಾ ವಲಯಗಳನ್ನು 1941ರಲ್ಲಿಯೇ ಸ್ಥಾಪಿಸಿದ್ದರು. ಬೆಂಕಿ ಪೊಟ್ಟಣ, ಟೆಂಟ್, ಕಾರ್ಪೆಟ್ ಉತ್ಪಾದನಾ ಕಾರ್ಖಾನೆಗಳನ್ನು ಸ್ಥಾಪಿಸಿದ್ದರು.

ಜಮ್ಮು ಮತ್ತು ಕಾಶ್ಮೀರ ಮಹಾರಾಜರ ಅವಧಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗು ತ್ತಿರುವ ಸಂದರ್ಭದಲ್ಲಿ ಅಬ್ದುನ ಕೋಮುವಾದಿ ರಾಜಕೀಯ ಶುರುವಾಯಿತು. ಈತನಿಗೆ ಕಾಶ್ಮೀರದ ಅಭಿವೃದ್ಧಿಯನ್ನು ಸಹಿಸಲಾಗಲಿಲ್ಲ. ತನ್ನ ಕೋಮುವಾದಿ ರಾಜಕೀಯದಿಂದ ಅಲ್ಲಿನ ಮುಸಲ್ಮಾನರನ್ನು ಎತ್ತಿ ಕಟ್ಟುವ ಕೆಲಸವನ್ನು ಮಾಡಿದ. ಈತನ ತಾಳಕ್ಕೆ ಕುಣಿದ ನೆಹರು ಅಭಿವೃದ್ಧಿಯ ಪಥದಲ್ಲಿದಂತಹ ಕಾಶ್ಮೀರವನ್ನು ಬಾವಿಯೊಳಗಿನ ಕಪ್ಪೆಯಾಗಿ ಸಲು ಸಂವಿಧಾನದಲ್ಲಿ ಪರಿಚ್ಛೇದ 370 ರನ್ನು ಪರಿಚಯಿಸಿಬಿಟ್ಟರು.

ತಾತ್ಕಾಲಿಕವಾಗಿ ಮುಸಲ್ಮಾನರನ್ನು ಓಲೈಸಲು ಜಾರಿಗೆ ತಂದಂತಹ ಪರಿಚ್ಛೇದವನ್ನು ನಂತರದ ದಿನದಲ್ಲಿ ತೆಗೆಯುವ ಪ್ರಯತ್ನವನ್ನು ಮಾಡಲಿಲ್ಲ. ಅದರ ಲಾಭ ಪಡೆದ ಅಬ್ದು ಹಾಗು ಮುಫ್ತಿ ಸಂತತಿಯವರು ಕಾಶ್ಮೀರವನ್ನು 70 ವರ್ಷಗಳ ಕಾಲ ಕತ್ತಲಿನಲ್ಲಿಟ್ಟಿದ್ದರು. ಕಾಶ್ಮೀರದಲ್ಲಿ 2019 ನಂತರ ಪಾರಂಭವಾಗಿರುವುದು ನೂತನ ಯುಗ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ
ಭೇಟಿ ನೀಡಿದಾಗ ಅಲ್ಲಿನ ಜನ ಪಾಕಿಸ್ತಾನದ ಭಾವುಟಗಳ ಮೂಲಕ ಸ್ವಾಗತಿಸಿದ್ದರು. ಲಾಲ್‌ಚೌಕ್‌ದಲ್ಲಿ ಪಾಕಿಸ್ತಾನ ಧ್ವಜ ಹಾರಾಡು ತ್ತಿತ್ತು. ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದರು.

ಇಂದು ಕಾಶ್ಮೀರದ ಪರಿಸ್ಥಿ ಬದಲಾಗಿದೆ. ಭಾರತದ ಪ್ರಧಾನಿ ಅಥವಾ ಮಂತ್ರಿಗಳು ಕಾಶ್ಮೀರಕ್ಕೆ ಭೇಟಿ ನೀಡಿದರೆ ತ್ರಿವರ್ಣ ಧ್ವಜಗಳ ಮೂಲಕ ಸ್ವಾಗತ ಕೋರಲಾಗುತ್ತಿದೆ. ಸ್ವಾತಂತ್ರ್ಯ ದಿನದಂದು ಲಾಲ್‌ಚೌಕ್‌ದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಸೈನಿಕರು ಒದ್ದು ಒಳಗೆ ಹಾಕುತ್ತಿದ್ದಾರೆ. ಭಯೋತ್ಪಾದಕರನ್ನು ಹುಡುಕಿ ಗುಂಡಿಟ್ಟು ಕೊಲ್ಲುತ್ತಿದ್ದಾರೆ.
ಭಾರತೀಯ ಸೇನೆ ಕಾಶ್ಮೀರದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಂಡಿದೆ, ಪ್ರತ್ಯೇಕತಾ ವಾದಿಗಳ ಜತೆ ಸಂಪರ್ಕವಿಟ್ಟುಕೊಂಡಿರುವ ಸ್ಥಳೀಯರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ.

ದಶಕಗಳ ಕಾಲ ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಲು ಭಯ ಪಡುತ್ತಿದ್ದಂತಹ ಪ್ರವಾಸಿಗರು ಈಗ ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದಾರೆ. ಕಾಶ್ಮೀರದ ಪ್ರತಿಯೊಂದು ಹಿಂದೂ ದೇವಾಲಯಗಳಿಗೆ ಭಾರತೀಯ ಸೇನೆ ಭದ್ರತೆಯನ್ನು ಒದಗಿಸಿದೆ. ಭಾರತ ದೊಳಗಿದ್ದರೂ ತಮಗಿಷ್ಟ ಬಂದಂತೆ ಭಾವಿಯೊಳಗಿನ ಕಪ್ಪೆಗಳ ರೀತಿ ಆಡಳಿತ ನಡೆಸುತ್ತಿದ್ದಂತಹ ಸ್ಥಳೀಯ ದೇಶವಿರೋಧಿ ನಾಯಕರು ಗಳ ಕೈಗಳಿಗೆ ಕೋಳ ಹಾಕಿಸಿ ಜೈಲಿಗಟ್ಟಲಾಗಿದೆ.

ಕಳೆದ ವರ್ಷ ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಹಿಂದೆ ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರು ಹೆದರುತ್ತಿದ್ದರು. ಪ್ರವಾಸ ಕೈಗೊಂಡರೂ ಅಲ್ಲಿನ ಸ್ಥಳೀಯರು ತೋರಿಸಿದ ಜಾಗಗಳನ್ನು ಮಾತ್ರ ನೋಡಬೇಕಿತ್ತು. ಈಗ ಕಾಶ್ಮೀರದಲ್ಲಿ ನಡೆದ ರಕ್ಕಸ ಇತಿಹಾಸದಲ್ಲಿ ಹುದುಗಿಹೋಗಿರುವ ಹಲವು ಜಾಗಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅನಂತನಾಗ್ ಜಿಯಲ್ಲಿರುವ ‘ಮಾರ್ತಾಂಡ ದೇವಾಲಯ’ವನ್ನು ಅಲ್ಲಿನ ಸ್ಥಳೀಯರು ತೋರಿಸುತ್ತಿರಲಿಲ್ಲ. ಈಗ ಪ್ರವಾಸಿಗರೇ ಖುದ್ದು ಮುಸಲ್ಮಾನರು ದ್ವಂಸ ಗೊಳಿಸಿರುವ ದೇವಾಲಯದ ಅವಶೇಷಗಳನ್ನು ವೀಕ್ಷಿಸುತ್ತಿದ್ದಾರೆ.

ತುಲ್ಲ ಮುದಲ್ಲಿರುವ ’ಖೀರ್ ಭವಾನಿ’ ದೇವಸ್ಥಾನ ವೀಕ್ಷಿಸಲು ಭಯ ಪಡುವ ಅಗತ್ಯ ಈಗಿಲ್ಲ. ಭಾರತೀಯ ಸೇನೆ ದೇವಸ್ಥಾನವನ್ನು ಕಾಯುತ್ತಿದೆ. ಶಂಕರ ಪೀಠದಲ್ಲಿ ಪೂಜೆ ಮಾಡುತ್ತಿರುವ ಪಂಡಿತರಿಗೆ ಭಾರತೀಯ ಸೇನೆ ಭದ್ರತೆಯನ್ನು ಒದಗಿಸುತ್ತಿದೆ. ಶ್ರೀನಗರದಲ್ಲಿ
ಸ್ಥಳೀಯರಿಗೆ ಓಡಾಡಲು ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಲಿಲ್ಲ, ಅತ್ತ ಬಸ್ಸೂ ಅಲ್ಲದ ಇತ್ತ ಟೆಂಪೋವೂ ಅಲ್ಲದ ಗುಜರಿ ಮಾದರಿಯ ವಾಹನಗಳಲ್ಲಿ ಜನರು ಓಡಾಡುತ್ತಿದ್ದರು.

ಕಳೆದ ಆರು ತಿಂಗಳಿಂದ ಟಾಟಾ ಸಂಸ್ಥೆಯು ಬ್ಯಾಟರಿ ಚಾಲಿತ ಸುಸಜ್ಜಿತ ಬಸ್‌ಗಳನ್ನು ಶ್ರೀನಗರದಲ್ಲಿ ಸ್ಥಳೀಯರ ಸಾರ್ವಜನಿಕ ಸಾರಿಗೆಯನ್ನಾಗಿ ಬಳಸುತ್ತಿದೆ. ಪ್ರವಾಸಿ ತಾಣಗಳಲ್ಲಿ ತಮ್ಮದೇ ಸಿಂಡಿಕೇಟ್ ಮಾಡಿಕೊಂಡು ಜನರಿಂದ ಲೂಟಿ ಮಾಡುತ್ತಿದ್ದಂತಹ ದಂಧೆಗಳಿಗೆ ಕಡಿವಾಣ ಬಿದ್ದಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದಂತಹ ಗುಲ್‌ಮಾರ್ಗ್, ಸೋನ್ ಮಾರ್ಗ್‌ನಲ್ಲಿ ಶಿಸ್ತುಬದ್ಧವಾಗಿ
ಪ್ರವಾಸಿಗರಿಗೆ ಅನುಕೂಲವಾಗುವಂತೆ ಭಾರತೀಯ ಸೈನ್ಯ ಸದಾ ಪಹರೆಯಲ್ಲಿರುತ್ತದೆ. ಸ್ಥಳೀಯರ ಅಂಧಾ ದರ್ಬಾರ್ ಒಂದು ಮಟ್ಟಕೆ ನಿಂತಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಮಾರು 122000 ಕೋಟಿ ರುಪಾಯಿಯ ಆಯವ್ಯಯವನ್ನು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಮಂಡಿಸಿದರು. ಕಾಶ್ಮೀರದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಾಗತಿಕ ಬಂಡವಾಳ ಸಮಾವೇಶಗಳು ನಡೆಯುತ್ತವೆ. ಟಾಟಾ, ರಿಲಯನ್ಸ್ ಸಂಸ್ಥೆಗಳು ಕಾಶ್ಮೀರದಲ್ಲಿ ಪ್ರವಾಸೀ ತಾಣಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಬಂಡವಾಳ ಹೂಡಲು ನಿರ್ಧರಿಸಿವೆ.

ಕಾಶ್ಮೀರದ ಯುವಕರಿಗೆ ಉದ್ಯೋಗವನ್ನು ನೀಡಿ ಜೇಬಿನಲ್ಲಿ ಹಣವಿರಿಸಿದರೆ ಸಾಕು, ಈ ತಲೆಮಾರಿನ ಯುವಕರು ಭಯೋತ್ಪಾದನೆಯ ಬಗ್ಗೆ ಚಿಂತಿಸುವುದಿಲ್ಲ. ಬದಲಾಗಿ ತಮ್ಮ ಕುಟುಂಬ ಹಾಗೂ ರಾಜ್ಯದ ಅಭಿವೃದ್ಧಿಯೆಡೆಗೆ ಚಿಂತಿಸುತ್ತಾರೆ. ಮುಫ್ತಿ ಹಾಗೂ ಅಬ್ದುನ ಕುಟುಂಬ ಗಳಿಗೆ ಈ ರೀತಿಯ ಬೆಳವಣಿಗೆ ಬೇಕಿರಲಿಲ್ಲ. ಅವರಿಗೆ ಅಲ್ಲಿನ ಜನ ಬಡವರಾಗಿಯೇ ಉಳಿಯಬೇಕು. ಯುವಕರು ಶ್ರೀನಗರದ ದಾಲ್ ಸರೋವರದಲ್ಲಿ ‘ಕಾಶ್ಮೀರಿ ಕಾವ’ ಮಾರಿಕೊಂಡು ಜೀವನ ಸಾಗಿಸಬೇಕು.

ಜನವರಿ 2022ರಲ್ಲಿ ದುಬೈನಲ್ಲಿ ನಡೆದ ಬಂಡವಾಳ ಸಮಾವೇಶದಲ್ಲಿ ಕಾಶ್ಮೀರ ಕಣಿವೆಯ ಐದು ಸ್ಟಾರ್ಟ್‌ಅಪ್ ಕಂಪನಿಗಳು ಭಾಗ ವಹಿಸಿದ್ದವು. ಕಾಶ್ಮೀರದ ರಾಜ್ಯಪಾಲ ಮನೋಜ್ ಸಿಂಹ ನೇರವಾಗಿ ಈ ಬಾರಿಯ ದುಬೈ ಸಮಾವೇಶದಲ್ಲಿ ನೂತನ ಸ್ಟಾರ್ಟ್‌ ಅಪ್ ಸಂಸ್ಥಾಪಕರ ಜತೆಯಲ್ಲಿ ಭಾಗವಹಿಸಿ, ಕೇಂದ್ರ ಸರಕಾರ ಕಾಶ್ಮೀರದ ಅಭಿವೃದ್ಧಿಯ ವಿಷಯದಲ್ಲಿ ಮುಂಚೂಣಿಯಲ್ಲಿರುವುದನ್ನು ಮನವರಿಕೆ ಮಾಡಿಸಿದರು.

ಕಾಶ್ಮೀರದ ಸ್ಟಾರ್ಟ್‌ಅಪ್‌ಗಳಾದ ಫಾಸ್ಟ್ ಬೀಟಲ್ – ತಂತ್ರಜ್ಞಾನ ಆಧಾರಿತ ಲಾಜಿಸ್ಟಿಕ್ಸ್ ಸೇವೆ ಒದಗಿಸುವ ಕಂಪನಿ, ಈ-ಫ್ರೂಟ್ ಮಂಡಿ – ಜಮ್ಮು ಕಾಶ್ಮೀರದ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ಮತ್ತು ತರಕಾರಿಗಳನ್ನು ತಲುಪಿಸುವ ಕಂಪೆನಿ, ಕಾಶ್ಮೀರಿ ಟ್ರೌಟ್ – ಕಾಶ್ಮೀರದ ಪ್ರಸಿದ್ಧ ಮೀನನ್ನು ಸಂಸ್ಕರಿಸಿ ,ಶೇಖರಿಸಿ ಜನರಿಗೆ ತಲುಪಿಸುವ ತಂತ್ರಜ್ಞಾನ ಆಧಾರಿತ ಕಂಪನಿ, ಸ್ಕೈ ರೋಬೊ ಡ್ರೋನ್ಸ್ –
ವಿಪತ್ತಿನ ಸಂದರ್ಭಗಳಲ್ಲಿ ಜನರನ್ನು ರಕ್ಷಿಸುವ ತಂತ್ರಜ್ಞಾನ ಆಧಾರಿತ ಕಂಪನಿಗಳು ತಮ್ಮ ಆವಿಷ್ಕಾರವನ್ನು ದುಬೈ ಬಂಡವಾಳಶಾಹಿ ಗಳಿಗೆ ಪರಿಚಯಿಸಿದರು. ಶ್ರೀನಗರದ ಫಾಸ್ಟ್ ಬೀಟಲದ ಸ್ಟಾರ್ಟ್‌ಅಪ್ ಒಂದು ಲಕ್ಷ ಅಮೆರಿಕನ್ ಡಾಲರ್ ಬಂಡವಾಳವನ್ನು ಆಕರ್ಷಿಸುವ ಮೂಲಕ ಕಾಶ್ಮೀರದ ಯುವಕರ ಗಮನ ಸೆಳೆದಿದೆ.

ಜಮ್ಮು ಹಾಗು ಕಾಶ್ಮೀರ ಸರಕಾರ ದುಬೈನ ಪ್ರಸಿದ್ಧ ಹಣಕಾಸು ಸೇವೆ ಒದಗಿಸುವ ಕಂಪನಿಯಾದ ಸೆಂಚುರಿ ಫೈನಾನ್ಸಿಯಲ್ ಜತೆಗೆ 100 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಕಣಿವೆ ರಾಜ್ಯದಲ್ಲಿ ಬಂಡವಾಳ ಹೂಡುವ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಮೂರು ಹೋಟೆಲ್ ಹಾಗೂ ಒಂದು ಬೃಹತ್ ವಾಣಿಜ್ಯ ಮಳಿಗೆಗಳು ಈ ಒಡಂಬಡಿಕೆಯ ಪ್ರಮುಖ ಬಂಡವಾಳವಾಗಿರಲಿವೆ. ಇದಲ್ಲದೇ ಜಮ್ಮು ಮತ್ತು ಕಾಶ್ಮೀರ ಸರಕಾರ ಮಾಯಾ ಸಮೂಹ ಸಂಸ್ಥೆ, ಮಾತು ಇನ್ವೆಸ್ಟ್‌ಮೆಂಟ್ಸ್, ಜಿ.ಎಲ್.ಎಂಪ್ಲಾಯ್ಮೆಂಟ್ ಬ್ರೊಕೆರೇಜ ಕಂಪನಿಗಳ ಜತೆಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.

ದುಬೆ’ನ ಪ್ರತಿಷ್ಠಿತ ಬಂದರು ನಿರ್ಮಾಣ ಸಂಸ್ಥೆಯಾದ ಡಿ.ಪಿ.ವರ್ಲ್ಡ್ ಸಂಸ್ಥೆಯೊಂದಿಗೆ ಒಳನಾಡು ಬಂದರು ಸಾರಿಗೆ ವ್ಯವಸ್ಥೆ ನಿರ್ಮಾ
ಣಕ್ಕೆ ಜಮ್ಮು ಮತ್ತು ಕಾಶ್ಮೀರ ಸರಕಾರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಗಲ್ಫ್ ರಾಷ್ಟ್ರದಲ್ಲಿ ಹೆಸರುವಾಸಿಯಾಗಿರುವ ಲುಲು ಸಮೂಹ ಸಂಸ್ಥೆಯೊಂದಿಗೆ ಶ್ರೀನಗರದಲ್ಲಿ ಬೃಹತ್ ಆಹಾರ ಸಂಸ್ಕರಣಾ ಘಟಕವನ್ನು ತೆರೆಯುವ ಒಡಂಬಡಿಕೆ ಪತ್ರಕ್ಕೂ ಕಣಿವೆ ಸರಕಾರ ಸಹಿ ಹಾಕಿದೆ.

ಕಾಶ್ಮೀರದ ಸುಪ್ರಸಿದ್ದ ಸೇಬು, ಡ್ರೈ ಫ್ರುಟ್ಸ್, ಕೇಸರಿಯನ್ನು ಜಗತ್ತಿನೆಡೆಗೆ ತಲುಪಿಸುವ ನಿಟ್ಟಿನಲ್ಲಿ ಲುಲು ಸಂಸ್ಥೆಯೊಂದಿಗಿನ ಒಡಂಬಡಿಕೆ
ಉಪಯೋಗಕಾರಿಯಾಗಲಿದೆ. ಸಂವಿಧಾನದ ಪರಿಚ್ಛೇದ 370 ರದ್ದತಿಯಾದ ನಂತರ ಸುಮಾರು 31000 ಕೋಟಿ ರುಪಾಯಿಯ ಬಂಡವಾಳ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಕೇಂದ್ರ ಸರಕಾರ ಸುಮಾರು 28400 ಕೋಟಿ ರುಪಾಯಿಯ ನೂತನ ಯೋಜನೆ ಗಳಿಗೆ ಚಾಲನೆ ನೀಡುವ ಮೂಲಕ 450000 ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ಸರಕಾರ ರಸ್ತೆ, ವಿದ್ಯುತ್, ವಿದ್ಯಾಭ್ಯಾಸ, ಪ್ರವಾಸೋದ್ಯಮ, ಆರೋಗ್ಯ ಕ್ಷೇತ್ರಗಳಲ್ಲಿ ಅಂದಾಜು 58000 ಕೋಟಿ ರುಪಾಯಿ ಹಣವನ್ನು ಹೂಡಿಕೆ ಮಾಡಿ, ಸುಮಾರು ೫೩ ಮೂಲಭೂತ ಅಭಿವೃದ್ಧಿಯ ಕೆಲಸಗಳು ಬೇರೆ ಬೇರೆ ಹಂತಗಳಲ್ಲಿ ಕಣಿವೆ ರಾಜ್ಯದಲ್ಲಿ 370 ಕಲಂ ರದ್ದತಿಯಾದ ನಂತರ ನಡೆಯುತ್ತಿದೆ.

ಸಂವಿಧಾನದ ಪರಿಚ್ಚೇದ 370ನ್ನು ರದ್ದುಗೊಳಿಸಿದರೆ ರಕ್ತ ದೋಕುಳಿಯಾಗುತ್ತದೆಯೆಂದು ಹೇಳಿದ್ದಂತಹವರಿಗೆ ಕಣಿವೆ ರಾಜ್ಯದಲ್ಲಾಗು ತ್ತಿರುವ ಬದಲಾವಣೆ ಅಂಡಿಗೆ ಮೆಣಸಿನಕಾಯಿಯನ್ನು ಇಟ್ಟಂತಾಗಿದೆ.ಲಾಲ್ ಚೌಕ್‌ದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬಿಡುವುದಿಲ್ಲವೆಂದ ವರಿಗೆ ಹಾರಿದ ತ್ರಿವರ್ಣ ಧ್ವಜವನ್ನು ಕಂಡು ಮೈ ಪರಚಿಕೊಳ್ಳುವಂತಾಗಿದೆ. ಕಾಶ್ಮೀರದ ಜನರನ್ನು ಕೋಮು ಗಲಭೆಗಳ ಮೂಲಕ ಪ್ರಚೋದಿಸಿ ತರುಣರ ಕೈಗಳಿಗೆ ಕಲ್ಲನ್ನು ನೀಡಿ ಸೈನಿಕರೆಡೆಗೆ ತೂರುವ ಮನಃಸ್ಥಿತಿಯನ್ನು ನಿರ್ಮಾಣ ಮಾಡಲು ಹೊರಟಿದ್ದಂತ ಹವರಿಗೆ, ಪರಿಚ್ಚೇದ 370ರ ರದ್ದತಿಯ ನಂತರ ನಡೆಯುತ್ತಿರುವ ಅಭಿವೃದ್ಧಿ ಪೂರಕ ಬೆಳವಣಿಗೆಗಳು ಚಿಂತೆಗೀಡು ಮಾಡಿದೆ.

ಮುಂದಿನ 25 ವರ್ಷಗಳು ಕಣಿವೆ ರಾಜ್ಯಕ್ಕೆ ನಿರ್ಣಾಯಕ ಘಟ್ಟ, ಸಾವಿರಾರು ವರ್ಷಗಳ ಹಿಂದಿನ ಸಾಂಸ್ಕೃತಿಕ ವೈಭವ ಮರುಕಳಿಸ ಬೇಕಿದೆ. ಇತರ ರಾಜ್ಯಗಳ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಪಥದಲ್ಲಿ ಮುಂದುವರಿಯಬೇಕಿದೆ. ಕಲ್ಲು ಹೊಡೆಯು ತ್ತಿದ್ದಂತಹ ತರುಣರ ಕೈಗಳಲ್ಲಿ ರಾಜ್ಯ ಕಟ್ಟುವ ಕೆಲಸ ಆರಂಭವಾಗಿದೆ.