Monday, 16th September 2024

15 ನೇ ಆವೃತ್ತಿಯ ಐಪಿಎಲ್ ಇಂದಿನಿಂದ: ಚೆನ್ನೈ-ಕೋಲ್ಕತ್ತಾ ಮುಖಾಮುಖಿ

ಬೆಂಗಳೂರು : ಇಂದಿನಿಂದ ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ ಆರಂಭವಾಗ ಲಿದೆ. ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

ಮುಂಬೈನ್ ವಾಂಖೇಡೆ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದೆ.

ಎರಡನೇ ದಿನ ಕಳೆದ ಋತುವಿನ ರನ್ನರ್ಸ್ ಅಪ್ ದೆಹಲಿ ಕ್ಯಾಪಿಟಲ್ಸ್ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಮುಖಾಮುಖಿಯಾಗಲಿದೆ. ಮಾ27ರ ಭಾನುವಾರದ ಎರಡನೇ ಪಂದ್ಯವು ಪಂಜಾಬ್ ಕಿಂಗ್ಸ್ ರಾಯಲ್ ಮತ್ತು ಚಾಲೆಂಜರ್ಸ್ ಬೆಂಗಳೂರು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಇಬ್ಬರು ಹೊಸಬರು ಮಾ.28 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪರಸ್ಪರ ಆಡುವ ಮೂಲಕ ತಮ್ಮ ಪ್ರಯಾಣ ಪ್ರಾರಂಭಿಸಲಿದ್ದಾರೆ.