Sunday, 15th December 2024

ಪರೀಕ್ಷೆ ಸುಸೂತ್ರವಾಗಿ ನಡೆಸಲು ಪೂರ್ವಭಾವಿ ಸಭೆ

ಸೇಡಂ: ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಆವರಣದಲ್ಲಿ ಇದೇ ಮಾರ್ಚ್ 28 ರಿಂದ ನಡೆಯಲಿರುವ ಎಸ್.ಎಸ್. ಎಲ್. ಸಿ ಪರೀಕ್ಷೆಗಳ ಪೂರ್ವ ಸಿದ್ಧತಾ ಸಭೆಯನ್ನು ತಹಸೀಲ್ದಾರ್ ಬಸವರಾಜ ಬೆಣ್ಣಿಶೀರೂರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆ ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಬೆಣ್ಣೆಶೀರೂರು, ತಾಲೂಕಿನಲ್ಲಿರುವ ಎಲ್ಲ 13 ಕೇಂದ್ರಗಳ ಪರೀಕ್ಷಾ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಸಮಯಪಾಲನೆ ಮಾಡಲು ಮಾಡ ಬೇಕು ಹಾಗೂ ಯಾವುದೇ ಪರೀಕ್ಷಾ ಅಕ್ರಮಗಳು ಹತ್ತಿರದ ಸಂಬಂಧಿಗಳು ಹಾಗೂ ಪರೀಕ್ಷೆ ಬರೆಯುತ್ತಿದ್ದರೆ. ಪರೀಕ್ಷಾ ಅಕ್ರಮಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದು ಹಾಗೂ ಮಕ್ಕಳು ಭಯ ಮುಕ್ತವಾಗಿ ಪರೀಕ್ಷೆ ಬರೆಯು ವಂತೆ ಸಲಹೆ ನೀಡಿದರು.

ಹಿಜಾಬ್ ವಿಷಯವಾಗಿ ಇರುವಂಥ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ತಿಳಿಸಿದರು. ತಾಲ್ಲೂಕಿನಲ್ಲಿ ಇದುವರೆಗೆ ಯಾವುದೇ ಇದುವರೆಗೆ ಕಪ್ಪುಚುಕ್ಕೆ ಇರೋದಿಲ್ಲ ಕೋವಿಡ ನಂಥ ಮಹಾಮಾರಿ   ಸಮಯದಲ್ಲಿ ತಾಲ್ಲೂಕು ಅತ್ಯಂತ ಯಶಸ್ಸಿಗಾಗಿ  ಪರೀಕ್ಷೆ ನಡೆಸಿದೆ. ಈ ಬಾರಿಯೂ ಕೂಡ ಯಾವುದೇ ತೊಂದರೆಗಳು ಉಂಟಾಗದಂತೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಮುಂದಾಗ ಬೇಕೆಂದು ಕರೆ ನೀಡಿದರು.

ತಾಲ್ಲೂಕಿನ ಆರೋಗ್ಯಾಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ತಾಲ್ಲೂಕಿನ 13 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ  ಕಸ್ಟೋಡಿಯನ್ ಮಾರ್ಗಾಧಿಕಾರಿಗಳು ಮೊಬೈಲ್ ಸ್ವಾಧೀನಾಧಿಕಾರಿಗಳು ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

***

ತಾಲೂಕಿನಲ್ಲಿ ಮಾರ್ಚ್ 28 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಪಟ್ಟಣ ಸೇರಿದಂತೆ ಗ್ರಾಮಾಂತರಗಳಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡಿದ್ದು ಸುಮಾರು 3615 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಕಸ್ಟೋಡಿಯನ್ 13, ಮಾರ್ಗಾಧಿಕಾರಿಗಳು 26 ಮೊಬೈಲ್ ಸ್ವಾಧೀನಾಧಿಕಾರಿಗಳು 13 ಸ್ಥಾನಿಕ ಜಾಗೃತ ದಳದ26 ಅಧಿಕಾರಿಗಳು, ಹಾಗೂ ಮಳಖೇಡ, ಮುಧೋಳ ಎರಡು ಸೂಕ್ಷ್ಮ ಕೆಂದ್ರಗಳಾದ ಮಾಡಿದ್ದೇವೆ.