Saturday, 23rd November 2024

ಏಪ್ರಿಲ್‌ 1ರಿಂದ 800 ಅಗತ್ಯ ಔಷಧಿಗಳ ಬೆಲೆ ಏರಿಕೆ

ನವದೆಹಲಿ: ಏಪ್ರಿಲ್‌ 1ರಿಂದ ಸೋಂಕು ಹಾಗೂ ನೋವು ನಿವಾರಕಗಳು ಸೇರಿ ದಂತೆ ಸುಮಾರು 800 ಅಗತ್ಯ ಔಷಧಿಗಳ ಬೆಲೆ ಏರಿಕೆ ಆಗಲಿದೆ. ಅಗತ್ಯ ಔಷಧಿ ಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

2021ರ ಕ್ಯಾಲೆಂಡರ್ ವರ್ಷಕ್ಕೆ ಸಗಟು ಬೆಲೆ ಸೂಚ್ಯಂಕದಲ್ಲಿ ಶೇ 10.7ರಷ್ಟು ಬೆಲೆ ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ ನಿರ್ಧರಿಸಿದೆ. ಈ ನಿರ್ಧಾರದ ಹಿನ್ನೆಲೆಯಲ್ಲಿ, ಸುಮಾರು 800 ಔಷಧಿಗಳ ಬೆಲೆಗಳು ಏಪ್ರಿಲ್ 1 ರಿಂದ ಶೇ 10.7 ರಷ್ಟು ಹೆಚ್ಚಾಗಲಿದೆ.

ಸೋಂಕು, ಜ್ವರ, ಚರ್ಮ ರೋಗ, ಹೃದ್ರೋಗ, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆ ಗಳು ಹೆಚ್ಚಾಗಲಿವೆ.

ಬೆಲೆ ಏರಿಕೆಯಾಗುವ ಔಷಧಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್, ಫೆನೊಬಾರ್ಬಿಟೊನ್‌ ಮತ್ತು ಫೆನಿಟೊಯಿನ್ ಸೋಡಿಯಂ ನಂತಹ ಔಷಧಗಳೂ ಸೇರಿವೆ.