ಚಿಂಚೋಳಿ: ಪಟ್ಟಣದ ಚಂದಪೂರದ ಹೋಟಲ್ ಒಂದರಲ್ಲಿ ಬಿಸಿಲಿಗೆ ಬಸವಳಿದು ಬಾಯಾರಿಕೆಯಿಂದ ನೀಗಿಸಿಕೊಳ್ಳಲು ಲಸ್ಸಿ ಕುಡಿದ ಸುಮಾರು10 ರಿಂದ 12 ಜನ ಅಸ್ವಸ್ಥರಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಸೋಮವಾರ ಎಸ್.ಎಸ್.ಎಲ್.ಸಿ ಪರೀಕ್ಷೆ ಹಿನ್ನೆಲೆ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಅನೇಕರು ಲಸ್ಸಿ ಸೇವಿಸಿ ವಾಂತಿ ಭೇದಿ ಮಾಡಿಕೊಂಡಿದ್ದಾರೆ.
ಘಟನೆಯಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆ ಮುಗಿಸಿಕೊಂಡು ಬಂದ ಪಟ್ಟಣದ ವಿದ್ಯಾರ್ಥಿಗಳಾದ ದರ್ಶನಿ, ನಾರಾಯಣ ಗಾರಂಪಳ್ಳಿ, ವಿಷ್ಣುವರ್ಧನ್ ಚಿಮ್ಮನಕಟ್ಟಿ, ವಿಲ್ಲಾಸ್ ದೇಗಲ್ಮಡಿ ಹಾಗೂ ತಾಲೂಕು ಪಂಚಾಯಿತಿ ಇಒ ಅನೀಲ್ ರಾಠೋಡ್ ಅವರ ಆಪ್ತ ಸಹಾಯಕ ಸೇರಿದಂತೆ ಸುಮಾರು ಜನರು ಆಸ್ಪತ್ರೆ ಸೇರಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೂಡಲೇ ಸೂಕ್ತ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾರುತಿ ಗಂಜಗಿರಿ ಒತ್ತಾಯಿಸಿದ್ದಾರೆ.
ಈಗಾಗಲೇ ಸ್ಯಾಂಪಲ್ ಪಡೆದು ಲ್ಯಾಬಿಗೆ ಕಳುಹಿಸಿಕೊಡಲಾಗಿದೆ. ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಸಂತೋಷ ಪಾಟೀಲ್ ಅವರು “ವಿಶ್ವವಾಣಿ”ಗೆ ತಿಳಿಸಿದ್ದಾರೆ.