ಅಭಿಮತ
ಗಣೇಶ್ ಭಟ್,ವಾರಣಾಸಿ
ganeshbhatv@gmail.com
ಆತ್ಮನಿರ್ಭರತೆ ದೇಶವನ್ನು ಸ್ವಾವಲಂಬಿಯಾಗಿಸುವುದು ಮಾತ್ರವಲ್ಲ, ಅದು ದೇಶದ ಆರ್ಥಿಕತೆಯನ್ನೂ ಸದೃಢ ಗೊಳಿಸುತ್ತದೆ. ಆತ್ಮನಿರ್ಭರತೆಯಿಂದಾಗಿ ದೇಶದ ತಂತ್ರಜ್ಞಾನ ಬೆಳೆಯುತ್ತದೆ, ದೇಶದ ಆದಾಯ ಹೆಚ್ಚುತ್ತದೆ, ಹೊಸ ಉದ್ಯಮಗಳಿಗೆ ಅವಕಾಶ ಸಿಗುತ್ತದೆ, ಹೂಡಿಕೆ ಹೆಚ್ಚುತ್ತದೆ, ದೇಶದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ ಹಾಗೂ ದೇಶದ ಹಣ ದೇಶದ ಉಳಿಯುತ್ತದೆ.
ರಾಷ್ಟವೊಂದು ತನ್ನ ಸಾರ್ವಭೌಮತ್ವ ಉಳಿಸಿಕೊಳ್ಳಲು ಸ್ವಾವಲಂಬಿಯಾಗಿರುವುದು ಅತ್ಯಗತ್ಯ. ಈಗ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನಿನ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇದು ಮತ್ತೊಮ್ಮೆ ಸಾಬೀತಾಗುತ್ತಿದೆ. ಯಾರದ್ದೇ ದಾಕ್ಷಿಣ್ಯಕ್ಕೆ ಸಿಲುಕಿ ತನ್ನ ಅಣ್ವಸ್ತ್ರಗಳನ್ನೆಲ್ಲ ತ್ಯಜಿಸಿ ಇಂದು ಉಕ್ರೇನ್ ರಷ್ಯಾ ದಾಳಿಗೆ ತನ್ನ ಪ್ರಜೆಗಳ ಮಾರಣ ಹೋಮವಾಗುತ್ತಿರುವುದನ್ನು ನೋಡುತ್ತ ಅಸಹಾಯಕವಾಗಿ ನಿಲ್ಲಬೇಕಾಗಿದೆ.
ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾದುದು ಮಾಜೀ ಪ್ರಧಾನಿ ಅಟಲ್ ಬಿಹಾರೀ ವಾಜಪೇಯಿ ಹಾಗೂ ಭಾರತದ ಮಾಜೀ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು. ಭಾರತವು ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ವಿರೋಧ ವನ್ನು ಎದುರಿಸಿಯೂ 1998ರಲ್ಲಿ ಪೋಖ್ರಾ ನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು ಹಾಗೂ ತಾನು ಅಣ್ವಸ್ತ್ರ ಹೊಂದಿದ ದೇಶವೆಂದು ಘೋಷಿಸಿಕೊಂಡಿತು. 1974 ರಲ್ಲಿ ಇಂದಿರಾ ಗಾಂಧಿ ಯವರ ಸರಕಾರ ದೇಶದ ಮೊದಲ ಅಣು ಬಾಂಬ್‌ನ ಪ್ರಯೋಗವನ್ನು ನಡೆಸಿತ್ತಾದರೂ ಜಗತ್ತು, ಭಾರತದ ಈ ಪರೀಕ್ಷೆಯನ್ನು ನಂಬಿರಲಿಲ್ಲ ಹಾಗೂ ಭಾರತವನ್ನು ಅಣ್ವಸ್ತ್ರ ದೇಶವೆಂದು ಒಪ್ಪಿಕೊಂಡಿರ ಲಿಲ್ಲ.
1998ರ ಪರಮಾಣು ಅಸ್ತ್ರದ ಪರೀಕ್ಷೆಯ ನಂತರ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಯುರೋಪ್, ದಕ್ಷಿಣ ಕೊರಿಯಾ, ಅಸ್ಟ್ರೇಲಿಯಾ, ಜಪಾನ್ ಮೊದಲಾದ ದೇಶಗಳು ಭಾರತದ ಮೇಲೆ ಭಾರೀ ಆರ್ಥಿಕ ಹಾಗೂ ತಂತ್ರಜ್ಞಾನದ ನಿರ್ಬಂಧವನ್ನು ಹೇರಿದ್ದರೂ ಭಾರತವು ಅಣ್ವಸ ನಿಶ್ಶಸೀಕರಣದ ಒಡಂಬಡಿಕೆಗೆ ಸಹಿ ಹಾಕಲಿಲ್ಲ. ಇಂದು ತನಗೆ ಸಹಾಯ ಮಾಡಿ ಎಂದು ಎಲ್ಲ ರಾಷ್ಟ್ರಗಳನ್ನು ಅಂಗಲಾಚುತ್ತಿರುವ ಉಕ್ರೇನ್ ರಾಷ್ಟ್ರವೂ ಭಾರತವು 1998 ರಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿದಾಗ ಭಾರತವನ್ನು ಖಂಡಿಸಿತ್ತು.
ಭಾರತವಿಂದು ಅಣ್ವಸ್ತ್ರವನ್ನು ಹೊಂದಿರುವ ಬಲಾಢ್ಯ ಮಿಲಿಟರಿ ಶಕ್ತಿಯ ದೇಶವಾಗಿರುವುದರಿಂದ ಪಾಕಿಸ್ತಾನಕ್ಕೆ ಬಿಡಿ, ಚೀನಾ ಗೂ ಭಾರತದೊಂದಿಗೆ ಯುದ್ಧ ಮಾಡುವ ಧೈರ್ಯವಿಲ್ಲ. ರಕ್ಷಣೆಯ ಉದ್ದೇಶಕ್ಕಾಗಿ ಇತರ ದೇಶಗಳನ್ನು ಅವಲಂಬಿಸಿದರೆ ಏನಾಗುತ್ತದೆ ಎಂಬುದಕ್ಕೆ ಉಕ್ರೇನಿನ ದುಃಸ್ಥಿತಿಯೇ ಸಾಕ್ಷಿ.
ಉಕ್ರೇನಿನ ಮೇಲೆ ಮಿಲಿಟರಿ ದಾಳಿ ಮಾಡಿದುದಕ್ಕೆ ಪ್ರತಿಯಾಗಿ ಜಗತ್ತಿನ ಪ್ರಮುಖ ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ವನ್ನು ಹೇರಿವೆ. ಅಮೆರಿಕ ಮೂಲದ ವೀಸಾ, ಮಾಸ್ಟರ್ ಕಾರ್ಡ್, ಅಮೇರಿಕನ್ ಎಕ್ಸ್‌ಪ್ರೆಸ್ ಕಾರ್ಡ್, ಪೇ ಪಾಲ್ ಮೊದಲಾದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಸೇವೆ ನಿಲ್ಲಿಸಿವೆ. ರಷ್ಯಾದಲ್ಲಿ ಅದರದ್ದೇ ಆದ ಮೀರ್ರ‍್ ಹೆಸರಿನ ಕಾರ್ಡ್ ಇದ್ದರೂ ಅಲ್ಲಿ ವೀಸಾ ಮಾಸ್ಟರ್ ಕಾರ್ಡ್‌ಗಳದ್ದೇ ಪಾರಮ್ಯ. ನಗದು ವರ್ಗಾವಣೆಯ ಗೂಗಲ್ ಪೇ ವ್ಯವಸ್ಥೆಯೂ ರಷ್ಯಾದಲ್ಲಿ ತನ್ನ ಸೇವೆಯನ್ನು ನಿಲ್ಲಿಸಿದೆ.
ಭಾರತ ಸರಕಾರ, ವಿದೇಶೀ ಕಂಪನಿಗಳಾದ ವೀಸಾ, ಮಾಸ್ಟರ್ ಕಾರ್ಡ್‌ಗಳ ಪಾರಮ್ಯ ತಡೆಗಟ್ಟುವ ಉದ್ದೇಶದಿಂದ ದೇಶೀಯವಾದ
‘ರೂಪೇ’ ಅನ್ನು ರೂಪಿಸಿತು. ರೂಪೇ ಕಾರ್ಡ್ ಅನ್ನು 2012ರ ಭಾರತದಲ್ಲಿ ಪರಿಚಯಿಸಲಾಗಿತ್ತಾದರೂ 2014ನೇ ಇಸವಿಯ ವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. 2014ನೇ ಇಸವಿಯಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳು ಗ್ರಾಹಕರಿಗೆ ನ್ಯಾಷನಲ್ ಪೇಯ್‌ಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ರೂಪೇ ಕಾರ್ಡ್ ಅನ್ನೇ ಕೊಡಬೇಕೆಂದು ಸೂಚನೆಯನ್ನು ನೀಡಿತು.
ಹೊಸದಾಗಿ ಬ್ಯಾಂಕ್ ಅಕೌಂಟ್ ಗಳನ್ನು ತೆರೆದ ‘ಜನಧನ್ ಅಕೌಂಟ್’ದಾರರಿಗೆಲ್ಲ ರೂಪೇ ಕಾರ್ಡ್ ಅನ್ನೇ ವಿತರಿಸಲಾಯಿತು. ಸುಮಾರು 32 ಕೋಟಿ ಜನಧನ್ ಖಾತೆ ಹೊಂದಿರುವ ಭಾರತೀಯರಲ್ಲಿಂದು ರೂಪೇ ಕಾರ್ಡ್ ಇದೆ. ದೇಶದಲ್ಲಿಂದು ಸುಮಾರು 63
ಕೋಟಿ ಜನರು ರೂಪೇ ಕಾರ್ಡ್ ಅನ್ನು ಬಳಸುತ್ತಿದ್ದಾರೆ. ದೇಶದಲ್ಲಿ ಬಳಕೆಯಲ್ಲಿರುವ ಶೇ.60 ಕ್ಕಿಂತಲೂ ಹೆಚ್ಚಿನ ಕಾಡ್ ಗಳು ರೂಪೇ ಆಗಿವೆ. ಭಾರತ ಸರಕಾರವು ತನ್ನ ದೇಶದ ಜನರಿಗೆ ರೂಪೇ ಕಾರ್ಡನ್ನೇ ಬಳಸಲು ಪ್ರೋತ್ಸಾಹಿಸುತ್ತಿದೆ ಎಂದು ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸಂಸ್ಥೆಗಳು ಅಮೆರಿಕ ಸರಕಾರಕ್ಕೆ 2021ರಲ್ಲಿ ದೂರನ್ನೂ ಕೊಟ್ಟಿದ್ದವು!
ಆದರೆ ಭಾರತ ಸರಕಾರ ಇಂತಹ ಒತ್ತಡ ತಂತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಟ್ಟಿಲ್ಲ. ಇಂದು ಅವು ಭಾರತದಲ್ಲಿ ತಮ್ಮ
ಸೇವೆಯನ್ನು ನಿಲ್ಲಿಸಿದರೂ ಯಾವುದೇ ಹಾನಿಯಾಗದು. ನಗದು ವರ್ಗಾವಣೆಗಾಗಿ ಭಾರತದಲ್ಲಿ ಭೀಮ( ಭಾರತ್ ಇಂಟರ್ ಫೇಸ್ ಫಾರ್ ಮನಿ) ಹೆಸರಿನ ಯುನಿಫೈಡ್ ಪೇಯ್ಮೆಂಟ್ಸ್ ಇಂಟರ್ ಫೇಸ್ (ಯುಪಿಐ) ವ್ಯವಸ್ಥೆಯನ್ನು ರೂಪಿಸಲಾಗಿದ್ದು ಇದು ಸ್ವತಂತ್ರವಾಗಿ ನಿರ್ವಹಿಸುವ ಹಣ ವರ್ಗಾವಣಾ ವ್ಯವಸ್ಥೆಯಾಗಿದೆ.
ಇದರಿಂದಾಗಿ ಗೂಗುಲ್ ಪೇ ಮೊದಲಾದ ಸಂಸ್ಥೆಗಳು ತಮ್ಮ ಸೇವೆಯನ್ನು ಭಾರತದಲ್ಲಿ ನಿಲ್ಲಿಸಿದರೂ ಭಾರತೀಯರಿಗೆ ಸಮಸ್ಯೆ ಯಾಗದು. ಇದು ಡಿಜಿಟಲ್ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಽಸಿದ ಭಾರತದ ಯಶೋಗಾಥೆ. ಭಾರತವಿಂದು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿ ಇಟ್ಟುಕೊಂಡಿದೆ. ಯುದ್ಧೋಪಕರಣಗಳ ಉತ್ಪಾದನೆಯಲ್ಲಿ ಮೇಕ್ ಇನ್ ಇಂಡಿಯಾಗೆ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಮೊದಲು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ರಕ್ಷಣಾ ಸಂಬಂಧಿತ ಉಪಕರಣ ಹಾಗೂ ವಸ್ತುಗಳಲ್ಲಿ 2500 ಉಪಕರಣ ಹಾಗೂ ವಸ್ತುಗಳು ಈಗ ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಉತ್ಪಾದನೆ ಗೊಳ್ಳುತ್ತಿವೆ.
ಇದೀಗ ಸರಕಾರ, 351 ಪ್ರಮುಖ ರಕ್ಷಣಾ ವಸ್ತುಗಳ ಆಯಾತವನ್ನು ಹಂತಹಂತವಾಗಿ ನಿರ್ಬಂಧಿಸಲು ನಿರ್ಧರಿಸಿದ್ದು 2024 ರ ಒಳಗೆ ಈ ಎಲ್ಲ ವಸ್ತುಗಳನ್ನು ಭಾರತದ ಉತ್ಪಾದಿಸಲಾಗುವುದು. ಆಮದು ನಿರ್ಬಂಧಕ್ಕೆ ಒಳಪಡುವ ಯುದ್ಧೋಪಕರಣಗಳ
ಪಟ್ಟಿಯಲ್ಲಿ ಸೇನಾ ಸಿಬ್ಬಂದಿ ಹಾಗೂ ಸರಕು ಸಾಗಣೆಯ ವಿಮಾನ, ಲಘು ಯುದ್ಧ ಹೆಲಿಕಾಪ್ಟರ್, ಸಾಂಪ್ರ ದಾಯಿಕ ಜಲಾಂತ ರ್ಗಾಮಿಗಳು, ಕ್ರೂಯಿಸ್ ಮಿಸೈಲ್‌ಗಳು ಹಾಗೂ ಶಬ್ದಗ್ರಾಹೀ ಉಪಕರಣಗಳು ಸೇರಿವೆ.
ವಿದೇಶೀ ಕಂಪನಿಗಳಿಗೆ ಭಾರತದಲ್ಲಿ ಯುದ್ಧೋಪಕರಣಗಳ ಉತ್ಪಾದನೆಯನ್ನು ಮಾಡಲು ಪ್ರೋತ್ಸಾಹ ಕೊಡಲು ಇದೀಗ ರಕ್ಷಣಾ ಕ್ಷೇತ್ರದ ನೇರ ವಿದೇಶೀ ಹೂಡಿಕೆಯ ಪ್ರಮಾಣವನ್ನು ಶೇ.49ರಿಂದ ಶೇ.74ಕ್ಕೆ ಏರಿಸಲಾಗಿದೆ. ಆರೇಳು ವರ್ಷಗಳ ಹಿಂದಿನವರೆಗೆ ಭಾರತವು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.70 ವಸ್ತುಗಳು ಹಾಗೂ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಮೇಕ್ ಇನ್ ಇಂಡಿಯಾ ಯೋಜನೆಯ ಪರಿಣಾಮವಾಗಿ ಭಾರತದ ರಕ್ಷಣಾ ಉಪಕರಣಗಳ ಆಯಾತವು ಶೇ.35ಕ್ಕೆ ಇಳಿದಿದೆ. 2024-25 ರೊಳಗಾಗಿ ದೇಶಕ್ಕೆ ಬೇಕಾದ ಶೇ.90ಮಿಲಿಟರಿ ಉಪಕರಣಗಳು ಭಾರತದ ತಯಾರಾಗಲಿವೆ.
ಮೊದಲು ಶೂ, ಕನ್ನಡಕದಂತಹ ವಸ್ತುಗಳನ್ನೂ ಆಮದುಮಾಡಿಕೊಳ್ಳಲಾಗುತ್ತಿತ್ತು. ಇದೀಗ ಭಾರತದ ತೇಜಸ್ ಯುದ್ಧ ವಿಮಾನದ ಶೇ.65 ಭಾಗಗಳು ಭಾರತದ ತಯಾರಾಗುತ್ತಿದೆ. ಭಾರತದಲ್ಲಿ ತಯಾರಾಗಲಿರುವ 5-6 ನೇ ತಲೆಮಾರಿನ ಯುದ್ಧವಿಮಾನ (ಆಡ್ವಾನ್ಸ್ಡ್ ಮೀಡಿಯಮ್ ಕಾಂಬ್ಯಾಟ್ ಏರ್ ಕ್ರಾಫ್ಟ್ -ಎಎಂಸಿಎ/ಆಮ್ಕಾ)ದ ಬಹುತೇಕ ಭಾಗಗಳು ಭಾರತದ ತಯಾರಾಗಲಿವೆ. ಆಮ್ಕಾ ೨2 ರ ಎಂಜಿನ್ ಕೂಡ ಸಂಪೂರ್ಣ ಸ್ವದೇಶೀಯಾಗಲಿದ್ದು ಭಾರತದ ಡಿಆರ್‌ಡಿಒ ಹಾಗೂ ಸಾಫ್ರಾನ್(ಸ್ಪೈನ್ ಹಾಗೂ ಜರ್ಮನಿ ದೇಶಗಳ ಸಂಸ್ಥೆ) ಕಂಪನಿಗಳ ಸಹಭಾಗಿತ್ವದಲ್ಲಿ ಯುದ್ಧ ವಿಮಾನದ ಎಂಜಿನ್ ತಯಾರಾಗಲಿದೆ. ಇದೀಗ ಯುದ್ಧ ನೌಕೆ, ಯುದ್ಧ ವಿಮಾನ ವಾಹಕ ನೌಕೆ, ಜಲಾಂತರ್ಗಾಮಿ, ಅರ್ಜುನ್ ಟ್ಯಾಂಕ್, ಶಬ್ದಾತೀತ ವೇಗದ ಬ್ರಹ್ಮೋಸ್ ಕ್ಷಿಪಣಿ ಮೊದಲಾದವು ಗಳನ್ನು ದೇಶೀಯವಾಗಿಯೇ ತಯಾರು ಮಾಡಲಾಗುತ್ತಿದೆ.
ಭಾರತವಿಂದು 70 ದೇಶಗಳಿಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳನ್ನು ನಿರ್ಯಾತ ಮಾಡಿದ್ದು 2020-21ರಲ್ಲಿ ಈ ನಿರ್ಯಾತದಿಂದಾಗಿ ಭಾರತಕ್ಕೆ 8434 ಕೋಟಿ ರುಪಾಯಿಗಳು ಹಾಗೂ ಹಾಗೂ 2021-22 ರಲ್ಲಿ 11607 ಕೋಟಿ ರುಪಾಯಿ ಗಳ ಆದಾಯ ಲಭಿಸಿದೆ. 2014-15 ರಲ್ಲಿ ರಕ್ಷಣಾ ಉಪಕರಣಗಳ ನಿರ್ಯಾತದಿಂದ ಭಾರತಕ್ಕೆ ಲಭಿಸಿದ ಆದಾಯ 1940 ಕೋಟಿ ರುಪಾಯಿಗಳು.
ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗುವಂತೆ ಕಂಪನಿಗಳು ಭಾರತದ ವಸ್ತುಗಳನ್ನು ತಯಾರಿಸುವಂತೆ ಪ್ರೋತ್ಸಾಹಿ ಸಲು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಉತ್ಪಾದನಾಧಾರಿತ ಪ್ರೊತ್ಸಾಹಕ ಧನ/ಪಿಎಲ್‌ಐ) ಅನ್ನು ಭಾರತ ಸರಕಾರವು ಕೊಡಮಾಡುತ್ತಿದೆ. ಆತ್ಮ ನಿರ್ಭರ ಭಾರತ್ ಯೋಜನೆಯ ಸಾಕಾರಕ್ಕೆ ದೇಶೀಯವಾಗಿಯೇ ಉತ್ಪಾದನೆ ಮಾಡಲು ಪ್ರೋತ್ಸಾಹಕ ವಾಗಿ 1.97ಲಕ್ಷ ಕೋಟಿ ರುಪಾಯಿಗಳ ಪಿಎಲ್‌ಐ ಅನ್ನು 2020 ನೇ ಇಸವಿಯ ಸರಕಾರವು ಘೋಷಣೆ ಮಾಡಿತ್ತು. ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯಲ್ಲಿ ಹಾಗೂ ನಿರ್ಯಾತದಲ್ಲಿ ಭಾರತವು ಭಾರೀ ಸುಧಾರಣೆ ಕಂಡಿದೆ.
2013-14 ರಲ್ಲಿ ಭಾರತದಲ್ಲಿ ಮೊಬೈಲ್ ಫೋನ್‌ಗಳನ್ನುಉತ್ಪಾದನೆ ಮಾಡುವ 2 ಕಂಪನಿಗಳಿದ್ದರೆ, ಈಗ ದೇಶದಲ್ಲಿ 200 ಕ್ಕಿಂತಲೂ ಹೆಚ್ಚು ಕಂಪನಿಗಳಿವೆ. 2014ರಲ್ಲಿ ದೇಶದಲ್ಲಿ ವಾರ್ಷಿಕ 60 ಲಕ್ಷ ಮೊಬೈಲ್ ಫೋನ್ ಗಳು ತಯಾರಾಗುತ್ತಿತ್ತು. ಈಗ 30 ಕೋಟಿ ಮೊಬೈಲ್ ಫೋನ್‌ಗಳ ಉತ್ಪಾದನೆ ಆಗುತ್ತಿವೆ. ಈ ವರ್ಷ 42000 ಕೋಟಿ ರುಪಾಯಿ ಮೌಲ್ಯದ ಮೊಬೈಲ್ -ನ್‌ಗಳು
ಭಾರತದಲ್ಲಿ ನಿರ್ಮಾಣಗೊಂಡು ವಿದೇಶಗಳಿಗೆ ರಫ್ತುಗೊಂಡಿವೆ. ಭಾರತದಲ್ಲಿ ಉತ್ಪಾದನೆಗೊಂಡ 10000 ಕೋಟಿ ರುಪಾಯಿ ಮೌಲ್ಯದ ಆಪಲ್ ಐಫೋನ್‌ಗಳು ರಫ್ತಾಗಿವೆ. ಜಾಗತಿಕವಾಗಿ ಎರಡನೇ ಅತೀ ಹೆಚ್ಚು ಮೊಬೈಲ್ ಫೋನ್ ಉತ್ಪಾದನೆ ಭಾರತದ. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕಾಗಿದ್ದರೆ ಸೆಮಿಕಂಡಕ್ಟರ್‌ಗಳು ಚಿಪ್, ಫ್ಯಾಬ್, ಫ್ಯಾಬ್ ಡಿಸ್ಪ್ಲೇ ಗಳನ್ನು ದೇಶೀಯವಾಗಿ ಉತ್ಪಾದಿಸುವುದು ಬಹಳ ಅಗತ್ಯವಾದ ವಿಚಾರ.
ಇದಕ್ಕಾಗಿ ಭಾರತ ಸರಕಾರವು 10 ಬಿಲಿಯನ್ ಡಾಲರ್ ಗಳನ್ನು(75000 ಕೋಟಿ ರುಪಾಯಿಗಳು) ಉತ್ಪಾದನಾಧಾರಿತ ಧನ ಸಹಾಯವಾಗಿ ಮೀಸಲಿಟ್ಟಿದೆ. ವೇದಾಂತ -ಕ್ಸಾನ್ ಜೆವಿ, ಐಜಿಎಸ್‌ಎಸ್ ವೆಂಚರ್ಸ್, ಐಎಸ್ ಎಂಸಿ, ಎಲೆಸ್ಟ್ ಮೊದಲಾದ ಕಂಪನಿ ಗಳು ಭಾರತದಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದ್ದು ಮುಂದಿನ 5 ವರ್ಷಗಳಲ್ಲಿ ಭಾರತವು ಸೆಮಿಕಂಡಕ್ಟರ್‌ಗಳನ್ನು ಉತ್ಪಾದಿ ಸುವ ಪ್ರಮುಖ ಜಾಗತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ.
ಆತ್ಮನಿರ್ಭರತೆ ದೇಶವನ್ನು ಸ್ವಾವಲಂಬಿಯಾಗಿಸುವುದು ಮಾತ್ರವಲ್ಲ, ಅದು ದೇಶದ ಆರ್ಥಿಕತೆಯನ್ನೂ ಸದೃಢಗೊಳಿಸುತ್ತದೆ. ಆತ್ಮನಿರ್ಭರತೆಯಿಂದಾಗಿ ದೇಶದ ತಂತ್ರeನ ಬೆಳೆಯುತ್ತದೆ, ದೇಶದ ಆದಾಯ ಹೆಚ್ಚುತ್ತದೆ, ಹೊಸ ಉದ್ಯಮಗಳಿಗೆ ಅವಕಾಶ ಸಿಗುತ್ತದೆ, ಹೂಡಿಕೆ ಹೆಚ್ಚುತ್ತದೆ, ದೇಶದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ ಹಾಗೂ ದೇಶದ ಹಣ ದೇಶದ ಉಳಿಯುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಯ ಪರಿಣಾಮವಾಗಿ ದೇಶದ ರಫ್ತಿನ ಪ್ರಮಾಣದಲ್ಲಿ ಭಾರೀ ಹೆಚ್ಚಾಗಿದೆ. ಈ ವರ್ಷ ಭಾರತದ
ಸರಕು ನಿರ್ಯಾತದ ಮೌಲ್ಯ 400 ಬಿಲಿಯನ್ (ಶತಕೋಟಿ) ಡಾಲರ್‌ಗಳನ್ನು ಈಗಾಗಲೇ ದಾಟಿದೆ!
2014ರಲ್ಲಿ ಸುಮಾರು 300 ಬಿಲಿಯನ್ ಡಾಲರ್ ಗಳಷ್ಟು ಇದ್ದ ಭಾರತದ ವಿದೇಶೀ ವಿನಿಮಯ ಸಂಗ್ರಹವು ದ್ವಿಗುಣಗೊಂಡಿದ್ದು ಇದೀಗ 622 ಬಿಲಿಯನ್ ಡಾಲರ್ ಗಳಿಗೆ ಏರಿದೆ. 2014 ರಲ್ಲಿ ಬೃಹತ್ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದ
ಭಾರತವಿಂದು 5 ಸ್ಥಾನಕ್ಕೇರಿದೆ. ಈ ಎಲ್ಲ ಬೆಳವಣಿಗೆಗಳು ಭಾರತದ ಆತ್ಮನಿರ್ಭರತೆಯ ಯಶಸ್ಸನ್ನು ಸಾರಿ ಹೇಳುತ್ತವೆ.