Monday, 16th September 2024

ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ವಿಶೇಷ ಆಹ್ವಾನ

ಮುಂಬೈ : ಕಾಶ್ಮೀರ್ ಪಂಡಿತರು 1990 ರಲ್ಲಿ ಮುಸ್ಲಿಮರಿಂದ ಅನುಭವಿಸಿದ ನರಕವನ್ನು ತೋರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಹೆಸರು ಇಡೀ ದೇಶಕ್ಕೆ ಚಿರಪರಿಚಿತವಾಗಿದೆ.

ಸದ್ಯ ವಿವೇಕ್ ಅಗ್ನಿಹೋತ್ರಿ ಅವರ ಸಿನಿಮಾಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು , ಬ್ರಿಟನ್ ಸಂಸತ್ತಿನಿಂದ ಅವರಿಗೆ ವಿಶೇಷ ಆಹ್ವಾನ ಬಂದಿದೆಯಂತೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು , ‘ ಪತ್ನಿ ಪಲ್ಲವಿ ಮತ್ತು ನನ್ನನ್ನು ಬ್ರಿಟನ್ ಸಂಸತ್​ನವರು ಆಹ್ವಾನಿ ಸಿದ್ದಾರೆ. ಮುಂದಿನ ತಿಂಗಳು ನಾವು ಅಲ್ಲಿಗೆ ಹೋಗುತ್ತೇವೆ. ಕಾಶ್ಮೀರಿ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುವ ಉದ್ದೇಶ ದಿಂದ ಕಾಶ್ಮೀರಿ ಫೈಲ್ಸ್ ಸಿನಿಮಾ ಮಾಡಲಾಗಿದೆ ಎಂದಿದ್ದಾರೆ.

ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ಹಿಂದಿ ಮಾತನಾಡು ವವರ ಹಾಗೂ ಅರ್ಥೈಸಿಕೊಳ್ಳುವವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಂಪೂರ್ಣವಾಗಿ ಹಿಂದಿಯಲ್ಲೇ ಇದೆ. ಈ ಕಾರಣಕ್ಕೆ ಸಿನಿಮಾವನ್ನು ಕನ್ನಡ ಮೊದಲಾದ ದಕ್ಷಿಣದ ಭಾಷೆಗಳಿಗೆ ಡಬ್ ಮಾಡಲು ಚಿಂತನೆ ನಡೆಯುತ್ತಿದೆ.

ಇಡೀ ದೇಶಕ್ಕೆ ಈ ಸಿನಿಮಾ ಅರ್ಥವಾಗಬೇಕು ಎಂದು ತಪಿಸುತ್ತಿರುವ ವಿವೇಕ್ ಅವರು ವಿದೇಶಿಗರಿಗೂ ಕಾಶ್ಮೀರ್ ಪಂಡಿತರ ಕಷ್ಟವನ್ನು ತಿಳಿಸಲು ನಿರ್ಧರಿಸಿದ್ದಾರೆ ಎಂದರೆ ಆಶ್ಚರ್ಯ ಇಲ್ಲ .