Friday, 22nd November 2024

ಕರೋನಾ ಪ್ರಕರಣಗಳ ಇಳಿಕೆ: ’ಮಹಾ’ ರಾಜ್ಯದಾದ್ಯಂತ ನಿರ್ಬಂಧಗಳ ತೆರವು

ಮುಂಬೈ: ಕರೋನಾ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಮಹಾರಾಷ್ಟ್ರ ಕ್ಯಾಬಿನೆಟ್ ರಾಜ್ಯದಾದ್ಯಂತ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲು ನಿರ್ಧರಿಸಿದೆ.

ಏ.2 ರಿಂದ ಈ ಆದೇಶ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳು ಕಡಿಮೆ ಯಾಗಿವೆ. ಕೇಂದ್ರವು ವಿಪತ್ತು ನಿರ್ವಹಣಾ ಕಾಯಿದೆಯ ನಿಬಂಧನೆಗಳನ್ನು ಹಿಂತೆಗೆದು ಕೊಳ್ಳುವ ಸೂಚನೆ ಹಿನ್ನೆಲೆಯಲ್ಲಿ ಈ ಸಡಿಲಿಕೆ ಮಾಡಲಾಗಿದೆ. ಕರೋನಾ ಕ್ಷೀಣಿಸು ತ್ತಲೇ ಇರುವುದರಿಂದ ಮುಂದಿನ ಶನಿವಾರದಿಂದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಸಾರ್ವಜನಿಕ ಸ್ಥಳ ಗಳಲ್ಲಿ ಮಾಸ್ಕ್ ಬಳಸಲು ಜನರಿಗೆ ಸೂಚಿಸಲಾಗಿದ್ದರೂ ಅದನ್ನು ಕಡ್ಡಾಯ ಮಾಡುವು ದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಕರೋನಾ ಹರಡುವಿಕೆಯಿಂದಾಗಿ ಸಾರ್ವಜನಿಕ ಸ್ಥಳಗಳಿಗೆ ತೆರಳಲು ಮಾಸ್ಕ್ ಸೇರಿದಂತೆ 2 ಡೋಸ್ ಲಸಿಕೆ ಕಡ್ಡಾಯ ಎಂದು ಘೋಷಿಸ ಲಾಗಿತ್ತು. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳಿಗೆ ತೆರಳಲು ಮಾಸ್ಕ್ ಕಡ್ಡಾಯ ಎಂಬ ನಿಯಮವಿತ್ತು. ಆದರೆ ಈ ನಿರ್ಬಂಧವನ್ನು ಮಹಾರಾಷ್ಟ್ರದಲ್ಲಿ ತೆಗೆದು ಹಾಕಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಕೋವಿಡ್ ಕಾರ್ಯಪಡೆ ಯೊಂದಿಗೆ ಸಮಾಲೋಚನೆ ನಂತರ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದು ಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಮುಂಬೈ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಎರಡು ಬಾರಿ ಲಸಿಕೆ ಹಾಕಿರುವುದು ಕಡ್ಡಾಯ ಎನ್ನುವ ನಿಯಮವನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಓಮಿಕ್ರಾನ್ ಕೊರೊನಾ ಪ್ರಕರಣಗಳು ದೇಶದಲ್ಲಿ ಕ್ಷೀಣಿಸುತ್ತಿವೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 183 ಮಂದಿಗೆ ಸೋಂಕು ದೃಢಪಟ್ಟಿದೆ. ಚೇತರಿಸಿಕೊಂಡ 219 ಜನರಲ್ಲಿ ಒಬ್ಬರು ಮಾತ್ರ ವೈರಸ್‌ನಿಂದ ಮೃತಪಟ್ಟಿದ್ದಾರೆ.